Title Image

ಸಿಬ್ಬಂದಿ ತರಬೇತಿ ಘಟಕ (STU)

ಸಿಬ್ಬಂದಿ ತರಬೇತಿ ಘಟಕವು ಕರ್ನಾಟಕ ರಾಜ್ಯದ ಒಳಗೆ ಮತ್ತು ಹೊರಗಿರುವ ವಿವಿಧ ಸಂಸ್ಥೆಗಳ ಸಿಬ್ಬಂದಿಗೆ ವೃತ್ತಿಪರ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ೧೯೭೪ರಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಘಟಕದಲ್ಲಿ ಸರ್ಕಾರಿ, ಖಾಸಗಿ, ಸ್ವಯಂ ಸೇವಾ ಸಂಸ್ಥೆಗಳು ಇನ್ನಿತರೆ ಸಿಬ್ಬಂದಿಗೆ ಸಾಂಸ್ಥಿಕ ತರಬೇತಿ ಕಾರ್ಯಕ್ರಮಗಳು, ಕ್ಷೇತ್ರ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ,

 

ಧೇಯೋದ್ದೇಶಗಳು :

  • ವಿಶ್ವವಿದ್ಯಾನಿಲಯ, ಅಭಿವೃದ್ಧಿ ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳ ಸಿಬ್ಬಂದಿಗೆ ಅಗತ್ಯತೆಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
  • ಸೂಕ್ತವಾದ ವಿಷಯಾಧಾರಿತ ಮತ್ತು ವಿಧಾನಗಳ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು
  • ವಿಶ್ವವಿದ್ಯಾನಿಲಯ ಮತ್ತು ಪ್ರಯೋಜಕತ್ವ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು

ಸಿಬ್ಬಂದಿ ತರಬೇತಿ ಘಟಕವು ರಾಜ್ಯ ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (ಸಮೇತಿ-ದಕ್ಷಿಣ), ಕೃಷಿ ಕ್ಲಿನಿಕ್ಸ್ ಮತು ಕೃಷಿ ವ್ಯವಹಾರ ಕೇಂದ್ರ ಯೋಜನೆ (ಎಸಿಎಬಿಸಿ), ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ (ದೇಸಿ) ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫೀಕೇಟ್ ಕೋರ್ಸ್ಗಳನ್ನು ಸಹ ಆಯೋಜಿಸುತ್ತಿದೆ.

ರಾಜ್ಯ ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (ಸಮೇತಿ – ದಕ್ಷಿಣ)

ರಾಜ್ಯ ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆಯು (ಸಮೇತಿ-ದಕ್ಷಿಣ) ರಾಜ್ಯ ಮಟ್ಟದಲ್ಲಿ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ಆತ್ಮ ಭಾಗಿದಾರರ ಸಾಮರ್ಥ್ಯ ಬಲವರ್ಧನೆಗೊಳಿಸುವುದು ಸಮೇತಿಯ ಮುಖ್ಯ ಉದ್ದೇಶ.

ಧೇಯೋದ್ದೇಶಗಳು :

ಸರ್ಕಾರಿ, ಖಾಸಗಿ ಮತ್ತು ಸ್ವಯಂ ಸೇವಾ ಸಂಸ್ಥೆ ಸಿಬ್ಬಂದಿಯ ಸಾಮರ್ಥ್ಯ ಬಲವರ್ಧನೆಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

  • ಗುಣಮಟ್ಟದ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು.
  • ಯೋಜನೆ ತಯಾರಿಕೆ, ಅನುಷ್ಠಾನ, ಮೌಲ್ಯಮಾಪನ ಮುಂತಾದ ವಿಷಯಗಳಲ್ಲಿ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
  • ಸ್ತರಣಾ ಕಾರ್ಯಕರ್ತರು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರಿಗೆ ಪ್ರಗತಿಪರ ರಾಜ್ಯಗಳಿಗೆ ಪ್ರವಾಸ ಏರ್ಪಡಿಸುವುದು.

ಕೃಷಿ ಕ್ಲಿನಿಕ್ಸ್ ಮತು ಕೃಷಿ ವ್ಯವಹಾರ ಕೇಂದ್ರ ಯೋಜನೆ (ಎಸಿಎಬಿಸಿ)

ಮ್ಯಾನೇಜ್, ಹೈದರಾಬಾದ್ ರವರ ಸಹಯೋಗದೊಂದಿಗೆ ಕೃಷಿ ಕ್ಲಿನಿಕ್ಸ್ ಮತು ಕೃಷಿ ವ್ಯವಹಾರ ಕೇಂದ್ರ ಯೋಜನೆಯ ತರಬೇತಿಯನ್ನು ೨೦೦೨ ರಿಂದ ಆಯೋಜಿಸಲಾಗುತ್ತಿದೆ.

ಧೇಯೋದ್ದೇಶಗಳು :

  • ಕೃಷಿ ವಿಶ್ವವಿದ್ಯಾನಿಲಯದ ಪದವಿದರರಿಗೆ ೪೫ ದಿನಗಳ ಅವಧಿಯ ಎಸಿಎಬಿಸಿ ತರಬೇತಿ ಆಯೋಜಿಸುವುದು.
  • ಎಸಿಎಬಿಸಿ ತರಬೇತಿ ಪಡೆದ ಶಿಕ್ಷಣಾರ್ಥಿಗಳಿಗೆ ಉದ್ಯಮಶೀಲರಾಗಲು ಅನುವು ಮಾಡುವುದು

ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ(ದೇಸಿ)

ಮಾನೇಜ್, ಹೈದರಾಬಾದ್ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಒಂದು ವರ್ಷದ ಅವಧಿಯ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ (ದೇಸಿ) ಕೋರ್ಸ್ ಆಯೋಜಿಸಲಾಗುತ್ತಿದೆ.

ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫೀಕೇಟ್ ಕೋರ್ಸ್

ಮಾನೇಜ್, ಹೈದರಾಬಾದ್, ಕೃಷಿ ಇಲಾಖೆ ಮತ್ತು ಇತರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ೧೫ ದಿನಗಳ ಅವಧಿಯ ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫೀಕೇಟ್ ಕೋರ್ಸ್ ಆಯೋಜಿಸಲಾಗುತ್ತಿದೆ.

ಸಿಬ್ಬಂದಿ

ಡಾ|| ಕೆ.ಶಿವರಾಮು
ಪ್ರಾಧ್ಯಾಪಕರು(ಕೃಷಿ ವಿಸ್ತರಣೆ)
ತರಬೇತಿ ಸಂಯೋಜಕರು
ಸಂಯೋಜಕರು (ಸಮೇತಿ-ದಕ್ಷಿಣ)
ಮತ್ತು ನೋಡಲ್‌ಅಧಿಕಾರಿ(ಎಸಿಎಬಿಸಿ)
sisuasbgkvk@gmail.com
+ 9972035456
ಶ್ರೀ ಸಿ.ವಿ. ವೆಂಕಟೇಶಮೂರ್ತಿ
ಸಹ ಪ್ರಾಧ್ಯಾಪಕರು
(ಕೃಷಿ ಇಂಜಿನಿಯರಿಂಗ್)
+91-98456 42122

Albums

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು