ಕಾರ್ಯ ಸ್ಥಾನ : ಜಿ.ಕೆ.ವಿ.ಕೆ., ಬೆಂಗಳೂರು
ಪ್ರಾಯೋಜನೆ ಆರಂಭವಾದ ವರ್ಷ: ೧೯೭೦
ಧ್ಯೇಯೋದ್ದೇಶಗಳು:
- ಕರ್ನಾಟಕ ರಾಜ್ಯದ ವಿವಿಧ ಕೃಷಿ ವಲಯಗಳಲ್ಲಿ ಮಣ್ಣು ಪರೀಕ್ಷೆ ಮತ್ತು ರಸಾಯನಿಕ ಗೊಬ್ಬರಗಳಿಗೆ ಬೆಳೆಗಳ ಗಣನೀಯ ಸ್ಪಂದನೆಯನ್ನು ತಿಳಿಯುವುದು ಮತ್ತು ವಿವಿಧ ಬೆಳೆಗಳಿಗೆ ಇಳುವರಿ ಗುರಿ ಸೂತ್ರಗಳನ್ನು ಅಭಿವೃದ್ಧಿಪಡಿಸುವುದು.
- ವಿವಿಧ ಮಣ್ಣು ಪರೀಕ್ಷಾ ವಿಧಾನಗಳನ್ನು ತುಲನಾತ್ಮಕವಾಗಿ ಪರೀಕ್ಷಿಸುವುದು ಮತ್ತು ರೈತರ ಹೊಲಗಳಲ್ಲಿ ಅವುಗಳ ಬಳಕೆ ತಿಳಿಯುವುದು.
- ಪೋಷಕಾಂಶಗಳ ಬಳಕೆ ಹೆಚ್ಚಿಸಲು ಸಾವಯವ ಮತ್ತು ರಸಾಯನಿಕ ಗೊಬ್ಬರಗಳನ್ನು ಜೊತೆಗೆಕೊಟ್ಟು ಪರೀಕ್ಷಿಸುವುದು
- ಅಭಿವೃದ್ಧಿಪಡಿಸಿದ ಇಳುವರಿ ಗುರಿ ಸೂತ್ರಗಳನ್ನು ರೈತರ ಹೊಲಗಳಲ್ಲಿ ಕ್ಷೇತ್ರ ಪ್ರಯೋಗಗಳ ಮೂಲಕ ಪರೀಕ್ಷಿಸುವುದು
ಸಂಶೋಧನಾ ಕಾರ್ಯಕ್ರಮಗಳು:
- ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆಯ ಉದ್ದೇಶಿತ ಇಳುವರಿ ಗುರಿ ಸಮೀಕರಣವನ್ನು ಅಭಿವೃದ್ಧಿ ಪಡಿಸಲು, ಮಣ್ಣಿನಲ್ಲಿ ಫಲವತ್ತತೆ ವ್ಯತ್ಯಾಸ ಮಾಡುವ ಪ್ರಯೋಗ ಮತ್ತು ಎಸ್.ಟಿ.ಸಿ.ಆರ್ ಮುಖ್ಯ ಪ್ರಯೋಗವನ್ನು ಕೈಗೊಳ್ಳಲಾಗುತ್ತದೆ ಹಾಗೂ ಅಭಿವೃದ್ಧಿ ಪಡಿಸಲಾದ ಉದ್ದೇಶಿತ ಇಳುವರಿ ಗುರಿ ಸಮೀಕರಣವನ್ನು ಮೌಲ್ಯಮಾಪನ ಮಾಡುವ ಪ್ರಯೋಗವನ್ನು ಕೈಗೊಳ್ಳಲಾಗುತ್ತದೆ.
- ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ವಿವಿಧ ಪ್ರಮಾಣದ ಬೋರಾನ್ ಪೋಷಕಾಂಶದ ಪರಿಣಾಮವನ್ನು ಅಧ್ಯಯನ ಮಾಡಲು ದೀರ್ಘಾವಧಿಯ ಅಧ್ಯಯನವನ್ನು ನಡೆಸಲಾಗುತ್ತಿದೆ.
ಪ್ರಮುಖ ಸಂಶೋಧನೆಗಳು:
ಈ ಪ್ರಾಯೋಜನೆಯು ೨೦೨೦-೨೦೨೧ ರವರೆಗೆ ಕರ್ನಾಟಕರಾಜ್ಯದ ವಿವಿಧ ಕೃಷಿ ವಲಯಗಳಲ್ಲಿ ವಿವಿಧ ಬೆಳೆಗಳಿಗೆ ಒಟ್ಟು ೬೧ ಇಳುವರಿ ಗುರಿಸಮೀಕರಣಗಳನ್ನು ಅಭಿವೃದ್ಧಿಪಡಿಸಿ ರೈತ ಸ್ನೇಹಿ ಸಿದ್ಧಗಣಕಗಳನ್ನು ಕೊಡಲಾಗಿದೆ. ಹಾಗೆಯೇ ೩೭೩ ಭಾರಿ ವಿವಿಧಗುರಿ ಸಮೀಕರಣಗಳನ್ನು ಮೌಲ್ಯಮಾಪನ ಮಾಡಲಾಗಿದೆ.
ಎ) ಸಮುದ್ರ ಕಳೆಯ ದ್ರವ್ಯವನ್ನು(೧೫% ಜೀ-ಸ್ಯಾಪ್) ಬೇರುಅದ್ದುವಿಕೆ ಮತ್ತು ನಾಟಿ ಮಾಡಿದ ೨೫ ಮತ್ತು ೬೦ ದಿನದಲ್ಲಿ ಸಮುದ್ರ ಕಳೆಯ ದ್ರವ್ಯವನ್ನು(ಜೀ/ಕೆ-ಸ್ಯಾಪ್) ೧೦% ಸಾಂದ್ರತೆಯೊಂದಿಗೆ ಬಿತ್ತನೆ ಮಾಡಿದ ೨೦,೪೦ ಮತ್ತು ೭೦ ದಿನದಲ್ಲಿ ಸಿಂಪಡಿಸುವುದರಿಂದ ಹೈಬ್ರಿಡ್ ಜೋಳದ ಇಳುವರಿಯನ್ನು ಹೆಚ್ಚಿಸಬಹುದು.
ಈ ಮೇಲಿನ ಎರಡು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಆಧುನಿಕ ಬೇಸಾಯ ಪದ್ಧತಿಗಳು ಎಂಬ ಪುಸ್ತಕದಲ್ಲಿ ಸೇರಿಸಲಾಗಿದೆ.
- ಮುಸುಕಿನ ಜೋಳಕ್ಕೆ ಶಿಫಾರಸ್ಸು ಮಾಡಿದ ಪ್ರತಿ ಎಕರೆಗೆ ೧೬ ಕೆ. ಜಿ. ಪೋಟ್ಯಾಷ್ಗೊಬ್ಬರದ ಬದಲಾಗಿ ೧೪೦ ಕೆ. ಜಿ. ಬಯೋ-ಕೆ ಗೊಬ್ಬರವನ್ನು ಉಪಯೋಗಿಸಬಹುದು.
- ಒಳಮೈ ಬಸಿಗಾಲುವೆಗಳ ಮೂಲಕ ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ ಪ್ರಯೋಗದಡಿಯಲ್ಲಿ ಸುಮಾರು ೩೦೦ ಎಕರೆಜಾಗದಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿದೆ ಹಾಗೂ ಈ ತಂತ್ರಾಜ್ಞಾನವನ್ನು ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು ಪುಸ್ತಕದಲ್ಲಿ ಸೇರಿಸಲಾಗಿದೆ
- ಕರ್ನಾಟಕದ ದಕ್ಷಿಣ ಭಾಗದ ಖ್ಕುಷಿ ಭೂಮಿಯ ಒಳಮೈ ಮಣ್ಣಿನಲ್ಲಿ ಗೊಬ್ಬರ ಬಳಸಿ ಬೆಳೆ ಇಳುವರಿ ಹೆಚ್ಚಿಸುವಿಕೆ ಪ್ರಾಯೋಜನೆಯಲ್ಲಿ ಚಾಮರಾಜನಗರದ ೧೫ ಎಕರೆ ಹಾಗೂ ಮಂಡ್ಯಜಿಲ್ಲೆಯ ೧೦ ಎಕರೆ ಜಮೀನಿನಲ್ಲಿ ಪ್ರಯೋಗವನ್ನು ಕೈಗೊಂಡು ಒಳಮೈ ಮಣ್ಣಿನಲ್ಲಿ ವಿವಿಧ ರಸಗೊಬ್ಬರದ ಜೊತೆಗೆ ಸುಧಾರಕಗಳ ಬಳಕೆಯಿಂದ ಮಣ್ಣಿನ ಗುಣಲಕ್ಷಣಗಳು ಮತ್ತು ಶೇಕಡ ೧೮ ರಿಂದ ೩೦ ರಷ್ಟು ಇಳುವರಿಯನ್ನು ಹೆಚ್ಚಿಸಬಹುದೆಂದು ದಾಖಲಿಸಲಾಗಿದೆ.
- ಭಾರತದಲ್ಲಿ ಮೊಟ್ಟ ಮೊದಲನೇ ಬಾರಿಗೆ “ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆ ಮತ್ತು ಬೆಳೆ ಇಳುವರಿಗುರಿ ಆಧಾರದ ಮೇಲೆಆನ್ಲೆನ್ ತಂತ್ರಾಂಶದ ಮುಖಾಂತರ ರಸಗೊಬ್ಬರಗಳ ಶಿಫಾರಸ್ಸು” ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಗೆ ಮಣ್ಣು ಪರೀಕ್ಷೆ ಮತ್ತು ಇಳುವರಿಗುರಿ ಆಧಾರದ ಮೇಲೆ ಆನ್ಲೆನ್ ತಂತ್ರಾಂಶದ ಮುಖಾಂತರ ರಸಗೊಬ್ಬರಗಳ ಶಿಫಾರಸ್ಸಿನ ವೆಬ್/ಮೊಬೈಲ್ ಆಧಾರಿತ “ಕೃಷಿಗಣಕ” ತಂತ್ರಾಂಶ ವನ್ನು ಅಭಿವೃದ್ಧಿಪಡಿಸಲಾಗಿದೆ.
- ಭೌಗೋಳಿಕ ನಿರ್ದೇಶಾಂಕಗಳು (ಅಕ್ಷಾಂಶ ಮತ್ತು ರೇಖಾಂಶ) ಅಥವಾ ಸರ್ವೆ ನಂಬರ್ ಆಧಾರದ ಮೇಲೆ ಎಸ್ಟಿಸಿಆರ್ ವಿಧಾನದಲ್ಲಿ ರಸಗೊಬ್ಬರಗಳ ಶಿಫಾರಸ್ಸಿನ ವೆಬ್ ಆಧಾರಿತ ಮತ್ತು ಮೊಬೈಲ್ ಅಪ್ಲಿಕೇಶನ್ “ಧರ್ತಿಮಿತ್ರ” ತಂತ್ರಾಂಶವನ್ನು ಕರ್ನಾಟಕದ ಹತ್ತು ಜಿಲ್ಲೆಗಳಿಗೆ (ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು) ಅಭಿವೃದ್ಧಿಪಡಿಸಲಾಗಿದೆ.
ಗಳಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು:
- ಅಖಿಲ ಭಾರತ ಸುಸಂಘಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಪ್ರಾಯೋಜನೆ, ಭೋಪಾಲ ಕೇಂದ್ರಕ್ಕೆ ೨೦೧೦ ರಲ್ಲಿ ಎಲ್ಲಾ ಎಸ್.ಟಿ.ಸಿ.ಆರ್. ಕೇಂದ್ರಗಳ ಸಂಯೋಜಿತ ಪ್ರಯತ್ನಗಳಿಗಾಗಿ ಚೌಧರಿದೇವಿ ಲಾಲ್ ಐ.ಸಿ.ಎ.ಆರ್. ಪ್ರಶಸ್ತಿಯು ಲಭಿಸಿದೆ.
- ಅಖಿಲ ಭಾರತ ಸುಸಂಘಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಪ್ರಾಯೋಜನೆ, ಬೆಂಗಳೂರು ಕೇಂದ್ರವು ಅತ್ಯುತ್ತಮ ಎಸ್.ಟಿ.ಸಿ.ಆರ್. ಕೇಂದ್ರವೆಂದು ಗುರುತಿಸಲ್ಪಟ್ಟಿದೆ ಮತ್ತು ಕರ್ನಾಟಕದ ಬಹುತೇಕ ರೈತರ ಎಸ್.ಟಿ.ಸಿ.ಆರ್. ಮಾದರಿಯ ರಸಗೊಬ್ಬರದ ಶಿಫಾರಸ್ಸನ್ನು ಅಳವಡಿಸಿಕೊಂಡಿರುವುದರಿಂದ ೧ ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗಿದೆ
- ವಿವಿಧರೂಪದ ಗೊಬ್ಬರಗಳನ್ನು ವಿವಿಧ ಮಾದರಿಯಲ್ಲಿ ಹಾಕುವುದರಿಂದ ಮೆಕ್ಕೆಜೋಳದ ಇಳುವರಿ ಮತ್ತು ಪೋಷಕಾಂಶಗಳ ಹೀರುವಿಕೆಯ ಮೇಲಾಗುವ ಪರಿಣಾಮ” ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧವೆಂದು ಪ್ರಶಸ್ತಿ ದೊರಕಿದೆ
- “ರಾಗಿ ಬೆಳೆಯ ಇಳುವರಿ, ಪೋಷಕಾಂಶಗಳ ಅವಶ್ಯಕತೆ ಮತ್ತು ಆರ್ಥಿಕತೆ ಮೇಲೆ ವಿವಿಧ ಪೋಷಕಾಂಶಗಳ ಶಿಫಾರಸ್ಸು ಮಾದರಿಗಳ ಮೌಲ್ಯಮಾಪನ” ಪ್ರಬಂಧಕ್ಕೆಡಾ. ಬನ್ಯಾಲ್ ಸ್ಮಾರಕ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯು ದೊರಕಿದ್ದು ೧೫೦೦ ರೂ. ನಗದು ಬಹುಮಾನ, ಫಲಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಗಿದೆ.
- “ಕೃಷಿಗಣಕ ತಂತ್ರಾಂಶದ ಮೂಲಕ ಎಸ್.ಟಿ.ಸಿ.ಆರ್. ಆಧಾರದ ಮೇಲೆ ರಸಗೊಬ್ಬರಗಳ ಶಿಫಾರಸ್ಸು” ಎಂಬ ಲೇಖನಕ್ಕೆ ಅತ್ಯುತ್ತಮ ಮೌಖಿಕ ಲೇಖನ ಪ್ರಶಸ್ತಿ ದೊರಕಿದೆ.
ಲಭ್ಯವಿರುವ ಸೌಲಭ್ಯಗಳು:
- ಪ್ರಯೋಗಾಲಯವು ಮಣ್ಣು, ನೀರು ಮತ್ತು ಗೊಬ್ಬರಗಳ ಪೋಷಕಾಂಶಗಳ ಪರಿಕ್ಷೆಗೆ ಆಧುನಿಕ ಉಪಕರಣಗಳೊಂದಿಗೆ ಸುಸಜ್ಜಿತವಾಗಿದೆ.
- ಮೊಬೈಲ್/ವೆಬ್ಆಧಾರಿತ ಆನ್ಲೈನ್ ಮುಖಾಂತರ ರಸಗೊಬ್ಬರವನ್ನು ಶಿಫಾರಸ್ಸು ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಡೇಟಾಕೇಂದ್ರವನ್ನು ಸ್ಥಾಪಿಸಲಾಗಿದೆ
ಇತರೆ ಚಟುವಟಿಕೆಗಳು:
- ಎಸ್.ಟಿ.ಸಿ.ಆರ್. ವಿಧಾನದ ಮೂಲಕ ನಿರ್ದಿಷ್ಟ ಇಳುವರಿ ಗುರಿಗಾಗಿ ರಸಗೊಬ್ಬರದ ಶಿಫಾರಸ್ಸಿನ ಪರಿಣಾಮವನ್ನು ತಿಳಿಯಲು ೧೦ ಮುಂಚೂಣಿ ಪ್ರಾತ್ಯೇಕ್ಷಿಕೆಗಳನ್ನು ಸೂರ್ಯಕಾಂತಿ, ಕುಸುಬೆ, ಕಡಲೆಕಾಯಿ ಮತ್ತು ಜೋಳದ ಬೆಳೆಯ ಇಳುವರಿಯ ಮೇಲೆ ಕೈಗೊಳ್ಳಲಾಗಿದೆ.
- ಚಾಮರಾಜನಗರ, ಮೈಸೂರು ಮತು ತುಮಕೂರು ಜಿಲ್ಲೆಗಳಲ್ಲಿ ೨೦೧೩-೨೦೧೭ನೇ ಸಾಲಿನಲ್ಲಿ ಬುಡಕಟ್ಟು ಉಪಯೋಜನೆ ಪ್ರಾಯೋಜನೆಯಡಿಯಲ್ಲಿ ೧೩೦ ಎಕರೆ ಪ್ರದೇಶದಲ್ಲಿ ಸುಮಾರು ೨೪೩ ಮುಂಚೂಣಿ ಪ್ರಾತ್ಯೇಕ್ಷಿಕೆಗಳನ್ನು ನಡೆಸಲಾಗಿದ್ದು ಮೆಕ್ಕೆಜೋಳ ಮತ್ತು ರಾಗಿ ಬೆಳೆಗೆ ಎಸ್.ಟಿ.ಸಿ.ಆರ್. ವಿಧಾನದ ಮೂಲಕ ರಸಗೊಬ್ಬರಗಳ ಶಿಫಾರಸ್ಸು ಮಾಡಿದ್ದು ಅದರಲ್ಲಿ ರೈತರ ಪದ್ಧತಿಗೆ ಹೋಲಿಸಿದಾಗ ಮೆಕ್ಕೆಜೋಳದಲ್ಲಿ ಶೇಕಡ ೧೫ ರಿಂದ ೧೭ ರಷ್ಟು ಮತ್ತು ರಾಗಿಯಲ್ಲಿ ಶೇಕಡ ೩೦ ರಷ್ಟು ಹೆಚ್ಚಿನ ಇಳುವರಿಯನ್ನು ಸಾಧಿಸಲಾಗಿದೆ.
- ಪ್ರತಿ ವರ್ಷವು ಕೆ.ಎಸ್.ಡಿ.ಎ. ಮಣ್ಣು ಪರೀಕ್ಷಾ ಪ್ರಯೋಗಾಲಯದ ಸಿಬ್ಬಂಧಿಗೆ ಎಸ್.ಟಿ.ಸಿ.ಆರ್. ವಿಧಾನದ ಆಧಾರದ ಮೇಲೆ ನಿರ್ದಿಷ್ಟ ಇಳುವರಿ ಗುರಿಗಾಗಿ ರಸಗೊಬ್ಬರಗಳ ಶಿಫಾರಸ್ಸಿನ ಲೆಕ್ಕಚಾರದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ
- ೨೦೧೦-೨೦೧೩ರ “ಜಿ.ಪಿ.ಎಸ್-ಜಿ.ಐ.ಎಸ್ ಆಧಾರಿತ ದೇಶದ ಆಯ್ದ ಜಿಲ್ಲೆಗಳ ಮಣ್ಣಿನ ಫಲವತ್ತತೆಯ ನಕ್ಷೆ (ಮ್ಯಾಪಿಂಗ್)” ಪ್ರಾಯೋಜನೆಯಡಿಯಲಿ ಲಆರ್ಕ್ ಇನ್ಫೋ-೯ ಜಿ.ಐ.ಎಸ್. ಮತ್ತು ಜಿ.ಪಿ.ಎಸ್. ತಂತ್ರಾಜ್ಞಾನವನ್ನು ಬಳಸಿಕೊಂಡು ಕ್ರಿಗಿಂಗ್ ವಿಧಾನದ ಮೂಲಕ ಮಣ್ಣಿನ ಫಲವತ್ತತೆಯ ನಕ್ಷೆಗಳನ್ನು ರಚಿಸಲಾಗಿದೆ
ಕಾರ್ಯಾಚರಣೆಯಲ್ಲಿರುವ ಬಾಹ್ಯ ಅನುದಾನಿತ ಪ್ರಾಯೋಜನೆಗಳು: | ||||||
---|---|---|---|---|---|---|
ಕ್ರ.ಸಂ. | ಪ್ರಾಯೋಜನೆಯ ಶೀರ್ಷಿಕೆ | ಪ್ರಧಾನಸಂಶೋಧಕರು | ಅನುದಾನ ನೀಡಿದ ಸಂಸ್ಥೆ | ಪ್ರಾರಂಭವಾದ ವರ್ಷ | ಮುಕ್ತಾಯವಾಗುವ ವರ್ಷ | ಮಹತ್ವದ ಫಲಿತಾಂಶ |
1 | ಕರ್ನಾಟಕದ ಆಯ್ದ ಜಿಲ್ಲೆಗಳಿಗೆ ವೆಬ್ಆಧಾರಿತ ಆನ್ಲೈನ್ ಮೂಲಕ ಎಸ್.ಟಿ.ಸಿ.ಆರ್. ವಿಧಾನದಲ್ಲಿ ರಸಗೊಬ್ಬರದ ಶಿಫಾರಸ್ಸು | ಡಾ. ಆರ್. ಕೃಷ್ಣಮೂರ್ತಿ | ಆರ್.ಕೆ.ವಿ.ವೈ., ಕರ್ನಾಟಕ ಸರ್ಕಾರ | 2020 | ಪ್ರಗತಿಯಲ್ಲಿದೆ | ಈ ತಂತ್ರಾಜ್ಞಾನದ ಮೂಲಕ ವಿವಿಧ ಬೆಳೆಗಳಿಗೆ ಎಸ್.ಟಿ.ಸಿ.ಆರ್. ವಿಧಾನದಲ್ಲಿ ರಸಗೊಬ್ಬರದ ಶಿಫಾರಸ್ಸು ಮಾಡುವುದರ ಜೊತೆಗೆ ಭೌಗೋಳಿಕ ನಿರ್ದೇಶನಗಳು ಅಥವಾ ಸರ್ವೆ ನಂಬರ್ನಮೂದಿಸುವ ಮೂಲಕ ರೈತರ ಭೂಮಿಯ ಫಲವತ್ತತೆಯ ಸ್ಥಿತಿಯನ್ನು ತಿಳಿಯಬಹುದು. |
2 | ಕೃಷಿ ಪರಿಸರ ವ್ಯವಸ್ಥೆಗಳಲ್ಲಿ ನಗರೀಕರಣ ಪ್ರಾಚೋದಿತ ಮತ್ತು ಬೆಂಗಳೂರಿನ ಗ್ರಾಮೀಣ-ನಗರ ಪರಿವರ್ತನಾ ವಲಯಗಳಲ್ಲಿ ಜಲಮೂಲಗಳಿಗೆ ಪೋಷಕಾಂಶಗಳ ಮತ್ತು ಮಾಲಿನ್ಯಕಾರಕಗಳ ಬಿಡುಗಡೆ (ಹಂತ-೨ | ಡಾ. ಆರ್. ಕೃಷ್ಣಮೂರ್ತಿ | ಜೈವಿಕ ತಂತ್ರಜ್ಞಾನ ಇಲಾಕೆ, ಭಾರತಸರ್ಕಾರ | 2021 | ಪ್ರಗತಿಯಲ್ಲಿದೆ | ಪ್ರಸ್ತುತ ಅಧ್ಯಯನವವು ನಗರೀಕರಣದಿಂದಾಗಿ ಕೃಷಿಯ ಮೇಲಿನ ತೀವ್ರತೆಯ ಪಾತ್ರ ಮತ್ತು ನೀರು ಮತ್ತು ಮಣ್ಣಿನ ಗುಣಮಟ್ಟದ ಮೇಲೆ ನಗರೀಕರಣದ ಪ್ರಭಾವವನ್ನು ಅರ್ಥಮಾಡಿಕೊಳ್ಳವ ಪ್ರಯತ್ನವಾಗಿದೆ. |
ಸಿಬ್ಬಂದಿ ವಿವರ
ಹೆಸರು | ಡಾ. ಆರ್. ಕೃಷ್ಣಮೂರ್ತಿ |
ಹುದ್ದೆ | ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವಿದ್ಯಾಭ್ಯಾಸದ ವಿವರಗಳು | ಪಿಹೆಚ್. ಡಿ |
ಪರಿಣಿತಿ ಹೊಂದಿದವಿಷಯ | ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ |
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ: : ಇತರೆ ಮಿಂಚಂಚೆ: |
tcruadbangalore@gmail.com
srkmurthyssac@gmail.com |
ಎಸ್ ಟಿ ಡಿ ಕೋಡ್ನೊಂದಿಗೆದೂರವಾಣಿ ಸಂಖ್ಯೆ: ಮೊಬೈಲ್ ಸಂಖ್ಯೆ |
080 – 23622647 9632202521 |
ಹೆಸರು | ಡಿ. ದಯಾನಂದ |
ಹುದ್ದೆ | ಹಿರಿಯಕ್ಷೇತ್ರ ಸಹಾಯಕರು |
ವಿದ್ಯಾಭ್ಯಾಸದ ವಿವರಗಳು | ಎಸ್.ಎಸ್.ಎಲ್.ಸಿ. |
ಎಸ್ ಟಿ ಡಿ ಕೋಡ್ನೊಂದಿಗೆದೂರವಾಣಿ ಸಂಖ್ಯೆ: ಮೊಬೈಲ್ ಸಂಖ್ಯೆ |
9449804203 |
ಹೆಸರು | ಜೆ. ಮಂಜುನಾಥ |
ಹುದ್ದೆ | ಕ್ಷೇತ್ರ ಸಹಾಯಕರು |
ವಿದ್ಯಾಭ್ಯಾಸದ ವಿವರಗಳು | ಕೃಷಿ ಡಿಪ್ಲೋಮಾ |
ಎಸ್ ಟಿ ಡಿ ಕೋಡ್ನೊಂದಿಗೆದೂರವಾಣಿ ಸಂಖ್ಯೆ: ಮೊಬೈಲ್ ಸಂಖ್ಯೆ |
7892192971 |
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು