ಅಭಾಸು ಪ್ರಾಯೋಜನೆ/ಘಟಕ | ಭಾ.ಕೃ.ಅ.ಪ.-ಅಖಿಲ ಭಾರತ ಮಣ್ಣು ಸಂಧಿಪದಿ ಪೀಡೆಗಳ ಸಂಯೋಜಿತ ಪ್ರಾಯೋಜನೆ, ಬೆಂಗಳೂರು | |||||||
ಸ್ಥಳ | ಕೃಷಿ ಕೀಟಶಾಸ್ತç ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರು -560 065 | |||||||
ಪ್ರಾರಂಭವಾದ ವರ್ಷ | ಅಖಿಲ ಭಾರತ ಬೇರುಹುಳುಗಳ ಬೆಳೆ ಸುಸಂಘಟಿತ ಪ್ರಾಯೋಜ£É (1980)
ಅಖಿಲ ಭಾರತ ಮಣ್ಣು ಸಂಧಿಪದಿ ಪೀಡೆಗಳ ಸಂಯೋಜಿತ ಪ್ರಾಯೋಜ£É (2000) |
|||||||
ಆದೇಶಗಳು: | · ವಿಭಿನ್ನ ಭೌಗೋಳಿಕಾ ಪರಿಸರಗಳಲ್ಲಿ ವಿವಿಧ ಬೆಳೆಗಳನ್ನು ಹಾನಿ ಮಾಡುವ ಬೇರುಹುಳು ಹಾಗೂ ಇತರೆ ಮಣ್ಣು ಸಂಧಿಪದಿ ಪೀಡೆಗಳ ವೈವಿಧ್ಯತೆಯನ್ನುದಾಖಲಿಸುವುದು
· ಬೇರುಹುಳುವಿನ ಬಾಧೆಯಿಂದ ಬೆಳೆಗೆ ಆಗುವ ಆರ್ಥಿಕ ನಷ್ಟವನ್ನು ವಿಶ್ಲೇಷಿಸುವುದು · ಬೇರುಹುಳು ಪ್ರಭೇದಗಳ ವರ್ಗೀಕರಣಅಧ್ಯಯನ · ಬೇರುಹುಳು ಹಾಗೂ ಗೆದ್ದಲುಕೀಟದ ಹಂಚಿಕೆ ಮತ್ತುಜೀವನಕ್ರಮದ ಬಗ್ಗೆ ಅಧ್ಯಯನ ನಡೆಸುವುದು · ಬೇರುಹುಳು, ಗೆದ್ದಲು ಹಾಗೂ ಇತರೆ ಮಣ್ಣು ಸಂಧಿಪದಿ ಪೀಡೆಗಳ ಸಮಗ್ರ ನಿರ್ವಹಣಾಕ್ರಮಗಳ ಬಗ್ಗೆ ಸಂಶೋಧನೆ ನಡೆಸುವುದು · ಬೆಳೆಗಳನ್ನು ಬಾಧಿಸುವ ಮೃದ್ವಸ್ಥಿಗಳನ್ನು ದಾಖಲಿಸುವುದು. |
|||||||
ಸಂಶೋಧನಾ ಕಾರ್ಯಕ್ರಮಗಳು | ವಿವಿಧ ಭೌಗೋಳಿಕಾ ಪರಿಸರಗಳಲ್ಲಿ ವಿವಿಧ ಬೆಳೆಗಳನ್ನು ಹಾನಿ ಮಾಡುವ ಬೇರುಹುಳು ಹಾಗೂ ಇತರೆ ಮಣ್ಣು ಸಂಧಿಪದಿ ಪೀಡೆಗಳ ವೈವಿಧ್ಯತೆಯನ್ನು ದಾಖಲಿಸುವುದು ರಾಜ್ಯ/ದೇಶದ ವಿಭಿನ್ನ ಪರಿಸರಗಳಲ್ಲಿ ೧೬೫ವ್ಯಾಟ್ ಪಾದರಸ-ಆವಿ ದೀಪಗಳ ಬೆಳಕಿಗೆ ಆಕರ್ಷಿತವಾಗುವ ಬೇರುಹುಳವಿನ ಪ್ರೌಢ ದುಂಬಿಗಳನ್ನು ಸಂಗ್ರಹಿಸಲಾಗುವುದು. ಇದರಜೊತೆಗೆ ಬಾಧೆಗೊಳಗಾದ ಬೆಳೆಗಳಿಂದ ಬೇರುಹುಳವಿನ ವಿವಿಧ ಹಂತಗಳಾದ ಮರಿಹುಳು/ಕೋಶಾವಸ್ಥೆಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯದಲ್ಲಿ ಪೋಷಿಸಿ ಪ್ರೌಢ ದುಂಬಿಗಳನ್ನು ಪಡೆಯುವುದು. ಬೇರುಹುಳುಗಳ ಕ್ರಿಯಾಶೀಲತೆ ಜೊತೆಗೆ ಸ್ಥಳೀಯ ಹವಾಮಾನ ದತ್ತಾಂಶಗಳಾದ ಉಷ್ಣತೆ, ಮಳೆ, ಆರ್ದ್ರತೆ ಇತ್ಯಾದಿಗಳನ್ನೂ ಕ್ರೋಢೀಕರಿಸಿ ಸೂಕ್ತವಾಗಿ ವಿಶ್ಲೇಷಿಸಿ ಬೇರುಹುಳವಿನ ಪ್ರಭೇದಗಳ ವಿಫುಲತೆ ಮತ್ತು ವೈವಿಧ್ಯತೆಯನ್ನು ಕಂಡುಹಿಡಿಯುವುದು.
ಬೇರುಹುಳುವಿನ ಬಾಧೆಯಿಂದ ಬೆಳೆಗೆ ಆಗುವ ಆರ್ಥಿಕ ನಷ್ಟವನ್ನು ವಿಶ್ಲೇಷಿಸುವುದು ವಿವಿಧ ಭೌಗೋಳಿಕಾ ಪರಿಸರಗಳಲ್ಲಿ ವರ್ಷದಾದ್ಯಂತ ಸಮೀಕ್ಷೆ ನಡೆಸಿ ಬೇರುಹುಳುಗಳಿಂದಾಗುವ ಬೆಳೆ ಆರ್ಥಿಕ ನಷ್ಟವನ್ನು ವಿಶ್ಲೇಷಿಸುವುದು. ಬೇರುಹುಳು ಪ್ರಭೇದಗಳ ವರ್ಗೀಕರಣಅಧ್ಯಯನ ಬೇರುಹುಳು ಪ್ರಭೇದಗಳ ದತ್ತಸಂಚಯ ಮಾಡುವುದು, ಹೊಸ ಪ್ರಭೇದಗಳ ವಿವರಣೆಯನ್ನು ನೀಡುವುದು, ಪ್ರಾದೇಶಿಕ ಹಂಚಿಕೆಯ ನಕ್ಷೆಗಳನ್ನು ತಯಾರಿಸುವುದು, ಬೇರುಹುಳು ಪ್ರಭೇದಗಳ ಗುರುತಿನ ಸೇವೆಯನ್ನು ಸಂಶೋಧನಾರ್ಥಿಗಳಿಗೆ ಒದಗಿಸುವುದು. ಬೇರುಹುಳು ಹಾಗೂ ಗೆದ್ದಲುಕೀಟದ ಹಂಚಿಕೆ ಮತ್ತುಜೀವನಕ್ರಮದ ಬಗ್ಗೆ ಅಧ್ಯಯನ ನಡೆಸುವುದು ಸ್ಥಳೀಯ ಮಣ್ಣಿನ ಮಾದರಿ, ಮಳೆ-ಹಂಚಿಕೆ ಮತ್ತು ಸಮುದ್ರ ಮಟ್ಟದಿಂದ ಇರುವ ಎತ್ತರಕ್ಕ ನುಗುಣವಾಗಿ ವಿವಿಧ ಭೌಗೋಳಿಕಾ ಪರಿಸರಗಳಲ್ಲಿ ಕಂಡುಬರುವ ಬೇರುಹುಳು ಹಾಗೂ ಗೆದ್ದಲು ಕೀಟಗಳ ಹಂಚಿಕೆಯನ್ನು ಹಾಗೂ ಜೀವ£ ಕ್ರಮವನ್ನು ಅಧ್ಯಯನ ಮಾಡುವುದು. ಬೇರುಹುಳು ಹಾಗೂ ಗೆದ್ದಲು ಹಾಗೂ ಇತರೆ ಮಣ್ಣು ಸಂಧಿಪದಿ ಪೀಡೆಗಳ ಸಮಗ್ರ ನಿರ್ವಹಣಾಕ್ರಮಗಳ ಬಗ್ಗೆ ಸಂಶೋಧನೆ ನಡೆಸುವುದು ಬಯಲುಸೀಮೆಯಲ್ಲಿ ಮಳೆಯಾಶ್ರಿತ ಬೆಳೆಗಳನ್ನು ಬಾಧಿಸುವ ಹೊಲೊಟ್ರೆöÊಕಿಯ ಸರ್ರಟ ಮತ್ತು ಹೆಚ್ಚು ಮಳೆಯಾಗುವ ಮಲೆನಾಡು ಹಾಗೂ ಕರಾವಳಿಯಲ್ಲಿ ಅಡಿಕೆ ಬೆಳೆಗೆ ಮಾರಕವಾಗಿರುವ ಲ್ಯೂಕೊಫೋಲಿಸ್ ಪ್ರಭೇದದ ಬೇರುಹುಳುಗಳನ್ನು ಸಮಗ್ರ ಹತೋಟಿ ಕ್ರಮಗಳನ್ನು ಬಳಸಿ ನಿರ್ವಹಿಸುವುದು. ಕಬ್ಬು ಮತ್ತುಇತರೆ ಬೆಳೆಗಳಲ್ಲಿ ಗೆದ್ದಲನ್ನುಸಮಗ್ರ ಹತೋಟಿ ಕ್ರಮಗಳನ್ನು ಬಳಸಿ ನಿರ್ವಹಿಸುವುದು. |
|||||||
ಸಂಶೋಧನಾ ಸಾಧನೆಗಳು | ಅ. ಬೇರುಹುಳು ಪ್ರಭೇದಗಳ ವರ್ಗೀಕರಣಅಧ್ಯಯನ
1. ಸುಮಾರು ೩೦,೦೦೦ ಸ್ಕಯರಾಬ್ ದುಂಬಿಗಳನ್ನು ವ್ಯವಸ್ಥಿತವಾಗಿ ಅಧ್ಯಯನಕ್ಕಾಗಿ ಅಣಿಗೊಳಿಸಲಾಗಿದೆ. 2. ಸ್ಕಯರಾಬ್ ದುಂಬಿಗಳನ್ನು ಗುರುತಿಸಲುಚಿತ್ರ-ಆಧಾರಿತ ವಿವರಣೆಗಳನ್ನು ಅಭಿವೃದ್ಧಿಗೊಳಿಸಿದೆ. 3. ಉಪಕುಟುಂಬ ಮೆಲಲಾಂತಿನೆಗೆ ಸೇರಿದ (ಭಾರತದಿಂದ ೫೩೨ ಮತ್ತು ಭಾರತ ಉಪಖಂಡದಿAದ ೯೯೨) ಪ್ರಭೇದಗಳ ಹೊಂದಿಕೆಪಟ್ಟಿಯನ್ನು ಸಿದ್ಧಪಡಿಸಿದೆ. 4. ಪ್ರಮುಖ ಬೇರುಹುಳು ಹಾಗೂ ಗೆದ್ದಲುಕೀಟದ ಪ್ರಾದೇಶಿಕ ಹಂಚಿಕೆ ನಕ್ಷೆಗಳನ್ನು ತಯಾರಿಸಿದೆ. ಬ. ಮಣ್ಣು ಸಂಧಿಪದಿ ಪೀಡೆಗಳ ಪರಿವೀಕ್ಷಣೆ · ಮಣ್ಣು ಸಂಧಿಪದಿ ಪೀಡೆಗಳಾದ ಬೇರುಹುಳು, ಗೆದ್ದಲು, ಕೊಂಡಲಿಹುಳು ಹಾಗೂ ತಂತಿಹುಳುಗಳು ವಿವಿಧ ಬೆಳೆಗಳಲ್ಲಿ ಆರ್ಥಿಕ ನಷ್ಟವನ್ನುಂಟು ಮಾಡುತ್ತವೆ. ಇವುಗಳಲ್ಲಿ ಬೇರುಹುಳುಗಳು ಪ್ರಮುಖವಾದುವು. · ಕರ್ನಾಟಕ ರಾಜ್ಯದಲ್ಲಿ ಹೋಲೊಟ್ರೆöÊಕಿಯ ಸರ‍್ರಟಪ್ರಭೇದವನ್ನು ಪ್ರಮುಖ ಬೇರುಹುಳು ಎಂದುಗುರುತಿಸಲಾಗಿದೆ. ಇದು ನೆಲಗಡಲೆ, ಜೋಳ, ಮೆಕ್ಕೆಜೋಳ, ಈರುಳ್ಳಿ, ಬೀಟ್‌ರೂಟ್, ಸೋಯಬೀನ್, ಅರಿಷಿನ, ಸೇವಂತಿಗೆ, ಮೇವಿನ ಹುಲ್ಲು, ನರ್ಸರಿ ಬೆಳೆಗಳು ಇತ್ಯಾದಿ ಅನೇಕ ಬಗೆಯ ಸಸ್ಯಗಳ ಬೇರನ್ನುತಿಂದು ಬೆಳೆ ನಷ್ಟವನ್ನುಂಟುಮಾಡುತ್ತದೆ. · ಲ್ಯೂಕೋಫೋಲಿಸ್ ಕೋನಿಯೋಫೋರ, ಲ್ಯೂಕೋಫೋಲಿಸ್ ಲೆಪಿಡೋಫೋರ ಮತ್ತು ಲ್ಯೂಕೋಫೋಲಿಸ್ ಬರ್ಮಿಸ್ಟಿç ಎನ್ನುವ ಮೂರು ಬೇರುಹುಳುವಿನ ಪ್ರಭೇದಗಳು ಅಡಿಕೆ ಬೆಳೆಯನ್ನು ಬಾಧಿಸುತ್ತವೆ. ಲ್ಯೂಕೋಫೋಲಿಸ್ ಕೋನಿಯೋಫೋರಪ್ರಭೇದವು ಕರಾವಳಿಯಲ್ಲಿ ಮಾತ್ರಕಂಡುಬರುತ್ತದೆ ಹಾಗೂಒಂದು ವರುಷದಲ್ಲಿ ಜೀವನಚಕ್ರವನ್ನು ಮುಗಿಸುತ್ತದೆ. ಮಲೆನಾಡಿನ ಕೆಲವು ತೋಟಗಳಲ್ಲಿ ಲ್ಯೂಕೋಫೋಲಿಸ್ ಬರ್ಮಿಸ್ಟಿç ಬೇರುಹುಳು ನೆಲೆಸಿದ್ದು ಎರಡು ವರುಷಗಳಲ್ಲಿ ಜೀವನಚಕ್ರವನ್ನು ಮುಗಿಸುತ್ತದೆ. ಲ್ಯೂಕೋಫೋಲಿಸ್ ಲೆಪಿಡೋಫೋರಪ್ರಭೇದವು ಮಲೆನಾಡಿನಲ್ಲಿಅತಿ ವಿಸ್ತಾರವಾಗಿ ಹರಡಿದ್ದು ಮುಖ್ಯಅಡಿಕೆ ಬೇರುಹುಳುವಾಗಿದೆವಿದು ಸಹಾ ಎರಡು ವರ್ಷಗಳಲ್ಲಿ ಜೀವನಚಕ್ರ ಮುಗಿಸುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿ ವಿನಃ ಇತರೆಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಬೇರುಹುಳುವಿನ ಸಮಸ್ಯೆಕಂಡು ಬರುವುದಿಲ್ಲ. · ಬೇರುಹುಳು ಸಮೀಕ್ಷೆ ಸಮಯದಲ್ಲಿ ಬೇರುಹುಳುವಿನ ವಿವಿಧ ಹಂತಗಳನ್ನು ಬಾಧಿಸುವ ಸ್ವಾಭಾವಿಕ ಶತೃಗಳನ್ನು ಗುರುತಿಸಲಾಗಿದೆ ಕ. ಬೇರುಹುಳು, ಗೆದ್ದಲು ಹಾಗೂ ಇತರೆ ಮಣ್ಣು ಸಂಧಿಪದಿ ಪೀಡೆಗಳ ಸಮಗ್ರ ನಿರ್ವಹಣೆÉ · ಹೊಲೊಟ್ರೆöÊಕಿಯ ಸರ್ರಟ ಮತ್ತು ಲ್ಯೂಕೊಫೋಲಿಸ್ ಪ್ರಭೇದದ ಬೇರುಹುಳುಗಳನ್ನು ನಿರ್ವಹಿಸಲು ಸಮಗ್ರ ಹತೋಟಿ ಕ್ರಮಗಳನ್ನು ಅಭಿವೃದ್ಧಿಗೊಳಿಸಿದೆ. · ಹೊಲೊಟ್ರೆöÊಕಿಯ ಸರ್ರಟಪ್ರೌಢ ದುಂಬಿಗಳು ಭೂಮಿಯಿಂದ ಹೊರಬರುವ ನಿಖರವಾದ ಸಮಯವನ್ನು ಹವಾಮಾನ ಆಧಾರಿತ ಮಾದರಿಯಿಂದ ಗುರುತಿಸಲಾಗಿದೆ.ಇದರಿಂದ ಪ್ರೌಢ ದುಂಬಿಗಳನ್ನು ರೈತರು ಸಕಾಲದಲ್ಲಿ ಹಿಡಿದು ನಾಶಪಡಿಸಲು ಸಹಕಾರಿಯಾಗಿದೆ. · ಬೇರುಹುಳುಗಳನ್ನು ಪರಿಸರ ಸ್ನೇಹಿಯಾಗಿ ನಿಯಂತ್ರಿಸಲು ಬ್ಯುವೇರಿಯ ಬ್ರಾಂಗ್ನಿಯಾರ್ಟಿ ಎಂಬ ಶಿಲೀಂದ್ರವನ್ನು ಅಭಿವೃದ್ಧಿಗೊಳಿಸಿದೆ. · ಆಫ್ರಿಕಾದೈತ್ಯ ಬಸವನಹುಳುವನ್ನು ನಿರ್ವಹಿಸಲು ಸಮಗ್ರ ಹತೋಟಿ ಕ್ರಮಗಳನ್ನು ಅಭಿವೃದ್ಧಿಗೊಳಿಸಿದೆ. |
|||||||
ಪ್ರಶಸ್ತಿಗಳು/ಗುರುತಿಸುವಿಕೆ | ಭಾ.ಕೃ.ಅ.ಪ.-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರ ಆಶ್ರಯದಲ್ಲಿ ದಿನಾಂಕ.೨೭-೨೯ ಡಿಸೆಂಬರ್, ೨೦೨೧ರಲ್ಲಿ ಜರುಗಿದ ೫ನೇ ರಾಷ್ಟಿçಯತೋಟಗಾರಿಕೆ ಬೆಳೆಗಳ ಸಸ್ಯ ಸಂರಕ್ಷಣೆ ಕಾರ್ಯಾಗಾರದಲ್ಲಿ ಮಂಡಿಸಿದ ‘ಅಡಿಕೆಯನ್ನು ಬಾಧಿಸುವ ಹೊಸ ಕೀಟದ’ ಪ್ರಬಂಧಕ್ಕೆ ‘ಉತ್ತಮ ಮೌಖಿಕ ಮಂಡನೆ’ ಪ್ರಶಸ್ತಿ ನೀಡಲಾಯಿತು. | |||||||
ಲಭ್ಯವಿರುವ ಸೌಲಭ್ಯಗಳು | ·ಆರು ಉಪಕುಟುಂಬಗಳನ್ನು ಪ್ರತಿನಿಧಿಸುವ, ೭೦ ಪಂಗಡಗಳಿಗೆ ಸೇರಿದ ೧೨೦ ಸ್ಕಯರಾಬ್ ಪ್ರಭೇದಗಳ ಪ್ರೌಢ ದುಂಬಿಗಳನ್ನು (ಸುಮಾರು ೩೦,೦೦೦ ಮಾದರಿಗಳು) ವ್ಯವಸ್ಥಿತವಾಗಿ ಅಣಿಗೊಳಿಸಲಾಗಿದೆ.
· ಬೇರುಹುಳುಗಳನ್ನು ಸಂಶೋಧನೆಗೆಗಾಗಿ ಬೆಳಸಲು ಪ್ರತ್ಯೇಕ ಹಸಿರುಮನೆ ಲಭ್ಯವಿದೆ. · ಬ್ಯುವೇರಿಯ ಬ್ರಾಂಗ್ನಿಯಾರ್ಟಿ ಶಿಲೀಂದ್ರವನ್ನು ಅಭಿವೃದ್ಧಿಗೊಳಿಸಲು ಪ್ರತ್ಯೇಕಘಟಕವನ್ನು ಸ್ಥಾಪಿಸಲಾಗಿದೆ. · ಮಾಲಿಕ್ಯುಲಾರ್ ಅಧ್ಯಯನ ಒಳಗೊಂಡAತೆ ಸುಸಜ್ಜಿತ ಪ್ರಯೋಗಶಾಲೆಯ ಲಭ್ಯವಿದೆ. |
|||||||
ಇತರೆ ಚಟುವಟಿಕೆಗಳು | ಬೇರುಹುಳುಗಳ ಜೀವನಚರಿತ್ರೆ ಮತ್ತು ನಿರ್ವಹಣೆಕುರಿತು ಪ್ರಾಯೋಜನೆಯಲ್ಲಿ ಅಭಿವೃದ್ಧಿಗೊಳಿಸುವ ತಂತ್ರಜ್ಞಾನಗಳ ವಿಸ್ತರಣೆಗೆ ಸಂಬಧಿಸಿದತೆ ರೈತ ತರಬೇತಿ ಕಾರ್ಯಕ್ರಮಗಳು, ಪ್ರಾತ್ಯಕ್ಷಿಕೆಗಳು, ಮೇಳಗಳು ಮತ್ತುಕ್ಷೇತ್ರ ಭೇಟಿಗಳನ್ನು ಆಯೋಜಿಸುವುದರ ಜೊತೆಗೆ ಪ್ರಾಯೋಜನೆಯ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುತ್ತಾರೆ. ಕಾಲಕಾಲಕ್ಕೆ ಮಾಧ್ಯಮಗಳಲ್ಲಿ ವಿವಿಧ ಬೆಳೆಗಲ್ಲಿ ಬೇರುಹುಳುಗಳ ನಿರ್ವಹಣೆಕುರಿತು ಸೂಕ್ತ ಮಾಹಿತಿಯನ್ನು ನೀಡಲಾಗುವುದು. | |||||||
ಬಾಹ್ಯಅನುದಾನಿತ ಯೋಜನೆಗಳು |
||||||||
ಕ್ರ.ಸಂ. | ಯೋಜನೆಯ ಶೀರ್ಷಿಕೆ | ಸಹ ಸಂಶೋಧಕರು | ಹಣಕಾಸು ಸಂಸ್ಥೆ | ಪ್ರಾರಂಭದ ವರ್ಷ | ಕೊನೆಗೊಳ್ಳುವ ವರ್ಷ | ಗಮನಾರ್ಹ ಫಲಿತಾಂಶ | ||
01 | ಕಬ್ಬಿನ ಬೇರುಹುಳುವನ್ನು ನಿರ್ವಹಿಸಲು ಕೀಟಾಹಾರಿ ಜಂತುಹುಳುಗಳನ್ನು ಅಭಿವೃದ್ಧಿಗೊಳಿಸುವುದು ಹಾಗೂ ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು | ಕೆ.ವಿ. ಪ್ರಕಾಶ್ | ಕರ್ನಾಟಕ ಸರ್ಕಾರ | 2015 | 2017 | ಸ್ಟೀನರ್‌ನೆಮಟಿಡೆ ಮತ್ತು ಹೆಟರೊರಾಬ್ಡಿಟಿಡೆ ಕುಟುಂಬಗಳಿಗೆ ಸೇರಿದಕೀಟಾಹಾರಿ ಜಂತುಹುಳುಗಳನ್ನು ಪ್ರತ್ಯೇಕಿಸಲಾಯಿತು. ನಾಲ್ಕು ಕೃತಕ ಮಾಧ್ಯಮಗಳ (ಕಡಲೆಕಾಳು, ಕೋಳಿ ಕರಳು, ಕೋಳಿ ಪುಡಿ ಮತ್ತು ನಾಯಿ ಬಿಸ್ಕಟ್) ಮೇಲೆ ಯಶಸ್ವಿಯಾಗಿ ಅಭಿವೃದ್ಧಿಗೊಳಿಸಲಾಯಿತು. ಕೀಟಾಹಾರಿ ಜಂತುಹುಳುಗಳು ಕಬ್ಬಿನ ಬೇರುಹುಳುವಿನ ಮೂರನೆ ಹಂತದ ಮರಿಹುಳುಗಳಿಗೆ ಪರಿಣಾಮಕಾರಿಯೆಂದು ತಿಳಿಯಿತು. | ||
2 | ಅಡಿಕೆ ಬೇರುಹುಳುಗಳ ಹತೋಟಿಗಾಗಿ ಪೀನಿಬ್ಯಾಸಿಲ್ಲಸ್ ಪೊಪಿಲ್ಲಿಯೆದಂಡಾಣುವಿನ ಸಮೀಕ್ಷೆ, ಗುರುತಿಸುವಿಕೆ, ಉತ್ಪಾದನೆ ಮತ್ತು ಬಳಸುವಿಕೆ | ಕೆ.ವಿ. ಪ್ರಕಾಶ್ | ಡಿಬಿಟಿ (ಭಾರತ ಸರ್ಕಾರ) | 2014-15 | 2017-18 | ಬೇರುಹುಳು ಬಾಧಿತ ತೋಟಗಳಿಂದ ೧೬ ಮಾದರಿಗಳನ್ನು ಸಂಗ್ರಹಿಸಲಾಯಿತು. ಪ್ರೊಲೀನ್, ಇದ್ದಲು ಮತ್ತು ಹಂದಿಕೊಬ್ಬುಗಳನ್ನು ಒಳಗೊಂಡ ಕೃತಕ ಮಾಧ್ಯಮದ ಮೇಲೆ ಯಶಸ್ವಿಯಾಗಿ ಅಭಿವೃದ್ಧಿಗೊಳಿಸಲಾಯಿತು. ಈ ಮಾದ್ಯಮದ ಮೇಲೆ ಪ್ರತಿ ಮಿಲಿ ಲೀಟರ್‌ನಲ್ಲಿ ಸರಾಸರಿ 2.9 ರಿಂದ 4.2 x 107 ಬೀಜಕಗಳನ್ನು ಉತ್ಪಾದಿಸಬಹುದು. ಬೀಜಕಗಳು ಅಡಿಕೆ ಬೇರುಹುಳುವಿನ ಮೂರನೆ ಹಂತದ ಮರಿಹುಳುಗಳಿಗೆ ಪರಿಣಾಮಕಾರಿಯೆಂದು ತಿಳಿಯಿತು. |
ಸಿಬ್ಬಂದಿ ವಿವರ:
ಎ. ವೈಜ್ಞಾನಿಕ ಸಿಬ್ಬಂದಿ:
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಕೃಷಿ), ಪಿಎಚ್ಡಿ
(ಕೃಷಿ ಕೀಟಶಾಸ್ತ್ರ)
ವಿಷಯ ಪರಿಣತೆ ಸಮಗ್ರಕೀಟ ಪೀಡೆ ನಿರ್ವಹಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ 17-11-1998
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 03-02-2018
rajannadent@gmail.com
9108562289
Technical staff
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಕೃಷಿ), ಪಿಎಚ್ಡಿ
(ಕೃಷಿ ಕೀಟಶಾಸ್ತ್ರ)
ವಿಷಯ ಪರಿಣತೆ ಕೀಟ ವರ್ಗೀಕರಣಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ 24-03-2006
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 16-07-2009
kvprakash@uasbangalore.edu.in
kvpento@gmail.com
9448997061
ಬಿ. ತಾಂತ್ರಿಕ ಸಿಬ್ಬಂದಿ (ಗುತ್ತಿಗೆ ಆಧಾರಿತ):
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಕೃಷಿ ಕೀಟಶಾಸ್ತ್ರ)
ವಿಷಯ ಪರಿಣತೆ ಕೃಷಿ ಕೀಟಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ 04-02-2008
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 08-06-2020
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಕೃಷಿ), ಪಿಎಚ್ಡಿ
(ಕೃಷಿ ಸೂಕ್ಷಮಜೀವಿಶಾಸ್ತ್ರ)
ವಿಷಯ ಪರಿಣತೆ ಕೃಷಿ ಸೂಕ್ಷಮಜೀವಿಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ 06-09-2022
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 06-09-2022
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು