Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಬೀಜ ತಂತ್ರಜ್ಞಾನ ಸಂಶೋಧನೆ, ಜಿಕೆವಿಕೆ, ಬೆಂಗಳೂರು

 

ಪ್ರಾಯೋಜನೆ: ಬೀಜತಂತ್ರಜ್ಞಾನ ಸಂಶೋಧನಾಕೇAದ್ರ,
ಕಾರ್ಯ ಸ್ಥಾನ : ಬೀಜ (ಬೆಳೆಗಳು) ಜಿ.ಕೆ.ವಿ.ಕೆ ಬೆಂಗಳೂರು-೫೬೦ ೦೬೫
ಪ್ರಾಯೋಜನೆ ಆರಂಭವಾದ ವರ್ಷ: ೧೯೮೦-೮೧
ಧ್ಯೇಯೋದ್ದೇಶಗಳು:  

 

Ø  ವಿವಿಧ ಬೆಳೆಯ ತಳಿಗಳ ಮತ್ತು ಸಂಕರಗಳ ಬೀಜೋತ್ಪಾದನೆ ಮತ್ತು ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ತಂತ್ರಜ್ಞಾನಗಳನ್ನು ಅಭವೃದ್ಧಿ ಗೊಳಿಸುವುದು.

Ø  ಬೀಜ ಪ್ರಮಾಣೀಕರಣಕ್ಕಾಗಿ ಬೀಜ ಪರೀಕ್ಷಾ ವಿಧಿಗಳನ್ನು ಮಾನಕಗೊಳಿಸುವುದು. ಬೀಜದಲ್ಲಿ ವಿಶಿಷ್ಠತೆ ಏಕರೂಪತೆ ಮತ್ತು ಸ್ಥಿರತೆ (DUS) ಲಕ್ಷಣಗಳನ್ನು ಗುರುತಿಸುವುದು, ಇತ್ಯಾದಿ.

Ø  ಬೀಜ ಅನುವಂಶಿಕ ಶುದ್ಧತೆ ಪರೀಕ್ಷೆಗಾಗಿ ಬೆಳೆಯ ತಳಿಗಳ/ ಸಂಕರಗಳ ಲಕ್ಷಣಗಳನ್ನು ಜೀವ ರಾಸಾಯನಿಕ (Biochemical) ಮತ್ತು ಅಣ್ವಿಕ (Molecular) ಮಾರ್ಕರ್ ಮುಖಾಂತರ ಗುರುತಿಸುವುದು.

Ø  ದೀರ್ಘಕಾಲ ಬೀಜ ಶೇಖರಣೆಗಾಗಿ ಸೂಕ್ತವಾದ ವಿಧಾನಗಳು/ ಬೀಜ ಉಪಚರಣೆಗಳನ್ನು ಗುರುತಿಸುವುದು.

Ø  ಗುಣಮಟ್ಟ ಬೀಜೋತ್ಪಾದನೆಗಾಗಿ ಸೂಕ್ತವಾದ ಸ್ಥಳಗಳನ್ನು ಗುರುತಿಸುವುದು.

Ø  ಶೇಖರಣೆಯಲ್ಲಿ ಕೀಟ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಸೂಕ್ತವಾದ ವಿಧಾನಗಳು/ ತಂತ್ರಜ್ಞಾನಗಳು/ಉಪಚರಣಗಳನ್ನು ಅಭಿವೃದ್ಧಿಗೊಳಿಸುವುದು.

Ø  ಬೀಜೋತ್ಪಾದನೆಯನ್ನು ಗರಿಷ್ಠಗೊಳಿಸಲು ಪರಾಗಸ್ಪರ್ಶಕಗಳನ್ನು ಪರಿಶೋಧಿಸುವುದು.

Ø  ವಿವಿಧ ಬೆಳೆಗಳು/ ತಳಿಗಳ ಸಂಸ್ಕರಣೆಗಾಗಿ ಸೂಕ್ತವಾದ ಜರಡಿಯನ್ನು ಮಾನಕಗೊಳಿಸುವುದು, ಬೀಜ ಒಣಗಿಸಲು ಮತ್ತು ಶೇಖರಣೆಗೊಳಿಸಲು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು.

Ø  ಬೀಜದಗುಣ ಮಟ್ಟ ವರ್ಧನೆಗಾಗಿ ಮತ್ತು ಶೇಖರಣಾ ಅವಧಿಯನ್ನು ಹೆಚ್ಚಿಸಲು ಬೀಜಕವಚೀಕರಣ/ ಬಣ್ಣಲೇ ಪನತಂತ್ರಜ್ಞಾನ/ ಬೀಜಲೇಪನ/ ನ್ಯಾನೋ ಬೀಜೋಪಚಾರಣೆ ಇತ್ಯಾದಿಗಳಂತಹ ನವೀನ ಬೀಜೋಪಚಾರಗಳನ್ನು ಅಭಿವೃದ್ಧಿ ಪಡಿಸುವುದು.

 

 

ಸಂಶೋಧನಾ ಕಾರ್ಯಕ್ರಮಗಳು :ನಡೆಸಿದ ಪ್ರಯೋಗಗಳು

ಪ್ರಯೋಗಗಳ ಪಟ್ಟಿ
. ಬೀಜೋತ್ಪಾದನೆ ಮತ್ತು  ಪ್ರಮಾಣಿಕರಣ (06)
1 ರಾಗಿ ಬೇಳೆಯಲ್ಲಿ ಸಾವಯುವ ಬೀಜೋತ್ಪಾದನಾ ತಂತ್ರಜ್ಞಾನವನ್ನು ವೃದ್ದಿಗೊಳಿಸುವುದು
2 ಭತ್ತದ ಬೇಳೆಯಲ್ಲಿ ಸಾವಯುವ ಬೀಜೋತ್ಪಾದನಾ ತಂತ್ರಜ್ಞಾನವನ್ನು  ವೃದ್ದಿಗೊಳಿಸುವುದು
3 ಕಡಲೆಯಲ್ಲಿ ಇಳುವರಿ ಮತು ತಗುಣಮಟ್ಟ ಉತ್ತೇಜಿಸಲು ಬೀಜದ ಪ್ರಮಾಣವನ್ನು ನಿಗದಿಪಡಿಸುವುದು
4 ಸೋಯಾ ಅವರೆಗುಣ ಮಟ್ಟ ಬೀಜೋತ್ಪಾನೆಯಲ್ಲಿ ಬೀಜದ ಇಳುವರಿ ಮತು ತಗುಣಮಟ್ಟ ಉತ್ತೇಜಿಸುವ ರೈಜೋಬ್ಯಾಕ್ರ್ಗಳ ಬೀಜ ಲೇಪನ ಪರಿಣಾಮದ ಮೌಲ್ಯಮಾಪನ.
5 ಸೋಯಾ ಅವರೆಯಲ್ಲಿ ಬೀಜದ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ದ್ರವಜೈವಿಕ ಗೊಬ್ಬರಗಳ ಮೌಲ್ಯಮಾಪ£À
6 ಸಸ್ಯ ಬೆಳವಣಿಗೆಯ ಪ್ರವರ್ತಕಗಳನ್ನು (ಪಿ.ಜಿ.ಪಿ.ಆರ್) ಬಳಸಿ ಅನ್ಯ ಹಂಗಾಮಿನಲ್ಲಿ / ಹಿಂಗಾರಿನಲ್ಲಿ ಸೋಯಾಅವರೆಯ ಬೀಜದ ಇಳುವರಿ ಮತ್ತು ಗುಣಮಟ್ಟವನ್ನು ಉತ್ತೇಜಿಸುವುದು.
ಬಿ.ಬೀಜ ಶರೀರಶಾಸ್ತç, ಸಂಗ್ರಹಣೆ ಮತ್ತು ಪರೀಕ್ಷ (07)
7 ಕ್ಷೇತ್ರ ಬೆಳೆಗಳ ಪ್ರಮಾಣೀಕೃತ ಬೀಜಗಳ ಸಿಂಧುತ್ವದ ಅವಧಿಗಳನ್ನು  ಪುನರುಚ್ಚರಿಸಲು ಮೌಲ್ಯಮಾಪನ (ನಿಯಮಗಳ ಪ್ರಕಾರ) ಬೆಳೆ: ಸೂರ್ಯಕಾಂತಿ ಮತ್ತು ಈರುಳ್ಳಿ
8 ಮಾಲಿಕ್ಯುಲಾರ್ ಮಾರ್ಕರ್ ಬಳಿಸಿಕೊಂಡು ಕ್ಷೇತ್ರ ಬೆಳೆಗಳ ಸಂಕರಣ ತಳಿಗಳ ಶುದ್ಧತೆ ಪರೀಕ್ಷೆ
9 ಸೂಕ್ತವಾದ ಮತ್ತು ಉಪ ಸೂಕ್ತ ಪರಿಸ್ಥಿತಿಗಳಲ್ಲಿ  ಕ್ಷೇತ್ರ ಬೆಳೆಗಳ ಬೀಜದ ಸಸ್ಯ ಮೌಲ್ಯವನ್ನು ಹೆಚ್ಚಿಸಲು ಪ್ರೆöÊಮಿಂಗ್ ತಂತ್ರಜ್ಞಾನಗಳ ಅಭಿವೃದ್ಧಿ
10 ಉಪ-ಉತ್ತಮ / ಒತ್ತಡದ  ಪರಿಸ್ಥಿತಿಗಳಿಗಾಗಿ ವಿವಿಧಕ್ಷೇತ್ರ ಬೆಳೆಗಳಲ್ಲಿ ಗುರುತಿಸಲಾದ ಪ್ರೆöÊಮಿಂಗ್ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು
11 ಬೀಜ ಕಾಳುಕಟ್ಟುವಿಕೆ, ಇಳುವರಿ ಮತ್ತು ಗುಣಮಟ್ಟದ ಮೇಲೆ ಉಷ್ಣ ತಾಪಮಾನ ಒತ್ತಡದ ಪರಿಣಾಮ ಬೆಳೆ: ರಾಗಿ
12 ಡಿಜಿಟಲ್‌ಕಳೆ ಬೀಜ ಅಟ್ಲಾಸ್‌ನ ಅಭಿವೃದ್ಧಿ: ಕಳೆ ಬೀಜಗುರುತಿಸುವಿಕೆಗೆ ಸಿದ್ದ ಅಟ್ಲಾಸ್ಬೆಳೆಗಳು: ಮೆಕ್ಕೆ ಜೋಳ, ಜೋಳ, ಕಡಲೆ, ತೊಗರಿ, ಕಡಲೆಕಾಯಿ, ಸೂರ್ಯಕಾಂತಿ ಮತ್ತು ಕುಸುಬೆ.
13 ಪ್ರಮುಖಕ್ಷೇತ್ರ ಬೆಳೆಗಳಲ್ಲಿ ಜೈವಿಕ-ಬಲವರ್ಧಿತ ಪ್ರಭೇದಗಳ ಬೀಜದ ಗುಣಮಟ್ಟದ ಗುಣಲಕ್ಷಣಗಳು ಮತ್ತು ಶೇಖರಣಾ ಸಾಮರ್ಥ್ಯದ ಮೌಲ್ಯಮಾಪನ ಬೆಳೆ: ಮೆಕ್ಕೆ ಜೋಳ

 

 

ಸಿ.ಬೀಜ ಕೀಟಶಾಸ್ತç (05)
14 ರೈತರು ಶೇಖರಿಸಿದ ಬೀಜದ ಆರೋಗ್ಯ ಸ್ಥಿತಿ ಹಾಗೂ ಕೀಟಗಳು ಸಂಭAದಿಸಿದAತೆ ಸಮೀಕ್ಷೆ ಮತ್ತು   ಮೌಲ್ಯಮಾಪನ

ಬೆಳೆಗಳು : ಅಲಸಂದೆ, ಅವರೆ, ಕಡಲೆತೊಗರಿ, ಮತ್ತು ಹುರುಳಿ.

15 ಬೀಜ ಸಂಗ್ರಹಣೆಯಲ್ಲಿ ಕೀಟನಾಶಕಗಳ ಬೀಜ ಲೇಪನದಿಂದ ಬೀಜದ ಕರ್ಯಸಾಧ್ಯತೆ ಮೇಲಾಗುವ ಪರಿಣಾಮಗಳ ಕುರಿತು ಪ್ರಾತ್ಯಕ್ಷಿಕೆ ಅಧ್ಯಯನ.

ಬೆಳೆ: ಅಲಸಂದೆ

16 ಬೀಜ ಸಂಗ್ರಹಣೆಯಲ್ಲಿ ಎಂಟೊಮೊಪಾಥೋಜೆನ್ ಸಶಿಲೀಂದ್ರಗಳ ಮತ್ತು ಜಡ ಧೂಳುಗಳ ಬೀಜ ಲೇಪನದಿಂದ ಬೀಜ ಜೀವಂತಿಕೆ ಸಾಮರ್ಥ್ಯ ಮೇಲಾಗುವ ಪರಿಣಾಮಗಳು.

ಬೆಳೆ : ಅಲಸಂದೆ ಮತ್ತು ಉದ್ದು

17 ಶೇಖರಣಾ ಕೀಟಗಳ ಮೇಲೆ ಸಸ್ಯ ಆಧಾರಿತ ತಟಸ್ಥ ಸಿಲಿಕಾದ ಪರಿಣಾಮಕಾರಿತ್ವ ಮತ್ತು ಬೀಜ ಲೇಪನದಿಂದ ಬೀಜ ಸತ್ವದ ಮೇಲಾಗುವ ಪರಿಣಾಮಗಳು.

ಬೆಳೆ: ಹೆಸರುಕಾಳು ಮತ್ತು ಉದ್ದು

18 ಬೀಜ ಸಂಗ್ರಹಣೆಯಲ್ಲಿ ಕೀಟನಾಶಕಗಳ ಬೀಜ ಲೇಪನದಿಂದ ಬೀಜಜೀವಂತಿಕೆ ಸಾಮರ್ಥ್ಯಮೇಲಾಗುವ ಪರಿಣಾಮಗಳು.

ಬೆಳೆ:  ಅಲಸಂದೆ ಮತ್ತು ಉದು Ý

ಡಿ. ಬೀಜ ಸಂಸ್ಕರಣೆ (01)
19 ಹೊಸ ತಳಿಗಳ ಬೀಜ ಸಂಸ್ಕರಣೆಗೆ ಸೂಕ್ತ ಜರಡಿಆಯ್ಕೆ

ಬೆಳೆಗಳು : ತೊಗರಿ, ರಾಗಿ ಮೆಕ್ಕೆ ಜೋಳ, ಸೂರ್ಯಕಾಂತಿ ಮತ್ತು ಅವರೆ

 

ಸಂಶೋಧನಾ ಸಾಧನೆಗಳು : ಬೀಜ ತಂತ್ರಜ್ಞಾನಗಳು (22)

ಕ್ರ.ಸಂ ಬೀಜ ತಂತ್ರಜ್ಞಾನಗಳು ಅಭಿವೃದಿಗೊಳಿಸಿದ ವರ್ಷ
1. ಸ್ಟ್ಮೆಲೋಸಾಂಥಸ್ ಹಮಾಟಾ ಬೀಜದ ಸುವ್ಯಸ್ಥಿತಿಯನ್ನು ಮರಳು ಕಾಗದವನ್ನು ಬಳಸಿ ೧೦ ನಿಮಿಷಗಳ ಕಾಲ ಯಾಂತ್ರಿಕ ಸ್ಕಾರಿಪೈಯರ್‌ನಿಂದ ನಿವಾರಿಸಬಹುದು. 2006-07
2. ನೆಲಗಡಲೆ ಬೀಜವನ್ನು ೧:೧ ಅನುಪಾತದೊಂದಿಗೆ (wt/ volume ) ೧೬ ಗಂಟೆಗಳ ಕಾಲ ಜಲಸಂಚಲನ ಗೊಳಿಸಿ (ಊಥಿಜಡಿಚಿಣiಟಿ) ನಂತರ ನೆರಳಿನಲ್ಲಿ ಒಣಗಿಸಿ ೨.೫ ಏg ಥೈರಮ್ ಪೌಡರನಿಂದ ಬಿತ್ತನೆಗೆ ಪೂರ್ವಕವಾಗಿ ಬೀಜೋಪಚಾರಗೊಳಿಸುವುದು. 2006-07
3. ಮೆಕ್ಕೆಜೋಳದ ಪ್ರತಿಕೆ.ಜಿ.ಬೀಜವನ್ನು ನಿಂಬಿಸಿಡಿನ್  300ppm@5.0 ml/kg ನೊಂದಿಗೆ ಉಪಚರಿಸುವುದರಿಂದ ಜೋಳಕ್ಕೆ ಬೀಳುವ ಶೇಖರಣೆ ಕೀಟಗಳನ್ನು ನಿಯಂತ್ರಿಸ ಬಹುದಾಗಿದೆ . 2008
4. ಅಲಸಂದೆ ಪ್ರತಿಕೆ.ಜಿ. ಬೀಜವನ್ನು ವಾಕೋನೀಮ್ 10000ppm @5.0  ml/kg ನೊಂದಿಗೆ ಉಪಚರಿಸುವುದರಿಂದ ಜೋಳಕ್ಕೆ ಬೀಳುವ ಶೇಖರಣ ಕೀಟಗಳನ್ನು ನಿಯಂತ್ರಿಸಿ ಬಹುವಾಗಿದೆ 2008
5. ಆಗ ತಾನೆಕೊಯ್ಲ ಮಾಡಿದ ನೆಲಗಡೆಲೆ ಕಾಯಿಯನ್ನು ಕನ್ವೆಕ್ಟಿವ್‌ಡೈಯರ್ ಬಳಸಿ ಯಾಂತ್ರಿಕವಾಗಿ ಒಣಗಿಸಬಹುದು, ಗರಿಷ್ಠ ಒಣಗಿಸುವ ಗಾಳಿಯ ಉಷ್ಣತೆಯು 400C (5 ಸೆಂ.ಮೀ. ಪಾಡ್ ಬೆಡ್‌ದಪ್ಪಕ್ಕೆ) ಗಿಂತ ಹೆಚ್ಚಿರಬಾರದು ಮತ್ತು ಆರಂಭಿಕ ಬೀಜದತೇವಾಂಶವನ್ನು ಸುಮಾರು 45 ಪ್ರತಿಶತದಷ್ಟುಕಡಿಮೆ ಮಾಡಲು (ಅಗತ್ಯವಿರುವ ಸುರಕ್ಷತಾ ಶೇಖರಣಾತೇವಾಂಶ ಮಟ್ಟ ಶೇಕಡಾ 9  ರಷ್ಟು) 44  ಗಂಟೆಗಳ ಕಾಲ ಯಾಂತ್ರಿಕವಾಗಿ ಒಣಗಿಸುವುದರಿಂದ 12 ತಿಂಗಳಲು ಕಾಲ ನೆಲಗಡಲೆಯನ್ನು ಸಂಗ್ರಹಿಸಬಹುದಾಗಿದೆ. 2009
6. ಆಗತ್ತಾನೆಕೊಯ್ಲು ಮಾಡಿದ ಸೂರ್ಯಕಾಂತಿ ಬೀಜವನ್ನು ಕನ್ವೆಕ್ಟಿವ್‌ಡ್ರೆöÊಯರ್ ಬಳಸಿ ಯಾಂತ್ರಿಕವಾಗಿ ಒಣಗಿಸಬಹುದು, ಗರಿಷ್ಠ ಒಣಗಿಸುವ ಗಾಳಿಯ ಉಷ್ಣತೆಯು 400C  ಗಿಂತ ಹೆಚ್ಚಿರಬಾರದು ಮತ್ತು ಆರಂಭಿಕ ಬೀಜದತೇವಾಂಶವನ್ನು ಸುಮಾರು  40 ಪ್ರತಿಶತದಷ್ಟುಕಡಿಮೆ ಮಾಡಲು (ಅಗತ್ಯವಿರುವ ಸುರಕ್ಷತೆ ಶೇಖರಣಾತೇವಾಂಶ ಮಟ್ಟ ±ÉÃ.9)21  ಗಂಟೆಗಳ ಕಾಲ ಯಾಂತ್ರಿಕವಾಗಿ ಒಣಗಿಸುವುದರಿಂದ  12 ತಿಂಗಳ ಕಾಲ ಒಣಗಿಸಿದ ಸೂರ್ಯಕಾಂತಿ  ಬೀಜವನ್ನು ಸಂಗ್ರಹಿಸಿಬಹುದು. 2009
7. ಮೆಕ್ಕೆಜೋಳದ ಪ್ರತಿ ಕೆ.ಜಿ. ಬೀಜವನ್ನು ಸ್ಪೆನೋಸ್ಯಾಡ್  45 EC @2 ppm (0.04  ml / ಕೆ.ಜಿ.ಗೆ.) ಅನ್ನು ನೀರಿನೊಂದಿಗೆ ಬೆರೆಸಿ ಉಪಚರಿಸಿ ನೆರಳಿನಲ್ಲಿ ಒಣಗಿಸುವುದರಿಂದ ಒಂಬತ್ತು ತಿಂಗಳು ಕಾಲ ಕೀಟ ಭಾದೆಯಿಲ್ಲದೆ ಸುರಕ್ಷಿತವಾಗಿ ಶೇಕರಿಸಬಹುದಾಗಿದೆ. 2010-11
8. ಅಲಸಂದೆಯ ಪ್ರತಿಕೆ.ಜಿ ಬೀಜವನ್ನು ಸ್ಪೆನೋಸ್ಯಾಡ್ 45 EC @2 ppm (0.04 ml/ ಕೆ.ಜಿ.ಗೆ.) ಅಥವಾ ಎಮಾಮೆಕ್ಟಿನ್ ಬೆಂಜೋವೋಟ್  5 SG @ 40 mg/kg  ಅನ್ನು 5ml ನೀರಿನೊಂದಿಗೆಬೆರೆಸಿ ಉಪಚರಿಸಿ ನೆರಳಿನಲ್ಲಿ ಒಣಗಿಸಿ ಶೇಖರಿಸುವುದರಿಂದ  12  ತಿಂಗಳು ಕಾಲ ಕೀಟ ಭಾದೆಯಿಂದ ಸುರಕ್ಷಿಸಬಹುದಾಗಿದೆ. 2010-11
9. KRH-2 ಹೈಬ್ರಿಡ್‌ಭತ್ತದ ಬೀಜೋತ್ಪಾದನೆಯಲ್ಲಿ ಪರಕೀಕ ಪರಾಗ ಸ್ಪರ್ಷಕಾರಕಗಳನ್ನು ಗುರುತಿಸಲು RM206  ಮತ್ತು RM276 ¥ÉæöʪÀÄgïUÀ¼À£ÀÄß ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಇದು ಹೈಬ್ರಿಡ್‌ಹಾಗೂ ಅವುಗಳ ಪೋಷಕ ತಳಿಯಲ್ಲಿ ಕಲ್ಮಶಗಳನ್ನು ಪತ್ತೆಮಾಡುವಲ್ಲಿತ್ವರಿತ ಮತ್ತು ವಿಶ್ವಾಸರ್ಹವಾದ ಪರೀಕ್ಷಾ ವಿಧವಾಗಿದೆ ಮತ್ತು ಇದು ಸಾಂಪ್ರದಾಯಿಕ ಬೆಳವಣಿಗೆ (GOT)  ಪರೀಕ್ಷೆಗೆ ಪೂರಕವಾಗಿದೆ . 2010-11
10. ಎಂಟು ಸೂರ್ಯಕಾಂತಿ ಮಿಶ್ರಿತಳಿಗಳನ್ನು (KBSH-1, KBSH-41, KBSH-42, KBSH-44,KBSH-53, RSFH-1,RFSH-130, ªÀÄvÀÄÛ  DRSH-1) SSR  ಮತ್ತು  SST ಪೈರ‍್ಗಳ ಮೂಲಕ ಸುಲಭವಾಗಿ ಪ್ರತ್ಯೇಕಿಸಬಹುದು. 2012-13
11. ನೆಲಗಡಲೆಯನ್ನು ಡೆಲ್ಟಮೆಥ್ರಿನ್  2.8EC @ 1ppm (0.04ml) ಅಥವಾಥ ಯೋಡಿಕಾರ್ಬ್  75wp@ 2ppm (2.7mg) ಅಥವಾ ಸ್ಪೆನೋಸ್ಯಾಡ್  45 EC  @ 2ppm(0.04ml)  ಅನ್ನು  15 ml ನೀರಿನೊಂದಿಗೆ ಬೆರೆಸಿ ಉಪಚರಿಸಿ  ನೆರಳಿನಲ್ಲಿ ಒಣಗಿಸಿಗೋಣಿಚೀಲದಲ್ಲಿ ಶೇಖರಿಸುವು ಸುರಿಂದಶೇಖರಣೆಯಲ್ಲಿ ಬೀಳುವ ಕೀಟದಿಂದ ಒಂಬತ್ತು ತಿಂಗಳು ಸುರಕ್ಷಿಸಬಹುದಾಗಿದೆ. 2013
12. ನೆಲಗಡಲೆಯನ್ನು ಡೆಲ್ಟಮೆಥ್ರಿನ್ 2.8 EC @1ppm (3.5ml/lit) ಅಥವಾಸ್ಪೆನೋಸ್ಯಾಡ್  45sc @1ppm (2ml/lit)ನಿಂದಉಪಚರಿಸಿ HDPE  ಚೀಲದಲ್ಲಿ ಸಂಗ್ರಹಿಸುವುದರಿAದ ನೆಲಗಡಲೆಗೆ ಬೀಳುವ ಕಾಯಿಕೊರೆಯುವ ಕೀಟದಿಂದ 9  ತಿಂಗಳು ಕಾಲ ಸಂರಕ್ಷಿಸಬಹುದಾಗಿದೆ. 2013
13. ಭತ್ತದ ತಳಿಗಳು (೧೬) ಮತ್ತುಹೈಬ್ರಿಡ್  (KRH-4)  ತಳಿ-ಶುದ್ಧತೆಯನ್ನು ಕಡಿಮೆ ಅವಧಿಯಲ್ಲಿ SSಖ ಅಣ್ವಿಕ ಗುರುತುಗಳ ಮೂಲಕ ಪ್ರಯೋಗಾಲಯದಲ್ಲಿ ಪರೀಕ್ಷೆಸಬಹುದಾಗಿದೆ. ಇದುಕಡಿಮೆ ವಚ್ಚ ಮತ್ತುತ್ವರಿತ ವಿಧಾನವಾಗಿದೆ. ಬೀಜ ಉತ್ಪಾದಿಸಿದ ನಂತರ ಬೀಜ ಮಾದರಿಗಳನ್ನು ತಕ್ಷಣವೇ ಪರೀಕ್ಷೆಸಬಹುದಾಗಿದೆ ಮತ್ತು ರೈತರಿಗೆ ಬೀಜ ಪೂರೈಕೆಗೆ ಸಹಾಯವಾಗುತ್ತದೆ. ಇದನ್ನು ಈಗಾಗಲೇ ನಮ್ಮ ಪ್ರಯೋಗಾಲಯದಲ್ಲಿ ಪೂರಕತಂತ್ರಜ್ಞಾನ ವಾಗಿ ವ್ಯಾಪಕವಾಗಿ ಬಳಸಲಾಗುತ್ತಿವೆ. 2015-16
14. ನೆಲಗಡಲೆಯನ್ನು ೫೦% ಕಾರ್ಬನೆಡೈಆಕ್ಸೆöÊಡ್ (CO2)  ಮಾರ್ಪಡಿಸಿದ ಶೇಖರಣಾ ವಾತಾವರಣದಲ್ಲಿ ಸಂಗ್ರಹಿಸುವುದರಿAದ, ನೆಲಗಡಲೆಯಲ್ಲಿ ಬೀಳುವ ಸಾಮಾನ್ಯ ಕೀಟವಾದ ಕಡಲೆಕಾಯಿ ಚಿಪ್ಪುಹುಳುವಿನಿಂದ 12 ತಿಂಗಳ ಕಾಲ ಬೀಜದ ಗುಣಮಟ್ಟದಲ್ಲಿ ಯಾವುದೇತೊಂದರೆಯಿಲ್ಲದೆ ಸುರಕ್ಷಿಸಬಹುದಾಗಿದೆ.  2016-17
15. ಸೋಯಾಅವರೆಯನ್ನು ಸೂಪರ್‌ಗ್ರೇನ್ (super grain)  ಚೀಲದಲ್ಲಿ ಸಂಗ್ರಹಿಸವರಿAದ ೧೮ ತಿಂಗಳ ಕಾಲ ಯಾವುದೇಕೀಟ ಭಾದೆಯಿಲ್ಲದೆ ಗುಣಮಟ್ಟವನ್ನು ಕಾಯ್ದುಕೊಂಡು ಶೇಖರಿಸಬಹುದಾಗಿದೆ.   2016-17
16. ಅಲಸಂದೆಯ ಬೀಜವನ್ನು ಪ್ರತಿಕೆ.ಜಿ. ಬೀಜಕ್ಕೆ ೧೦ಮಿ.ಲೀ. ನಂತೆ ಬಜೆಎಣ್ಣೆಯಿಂದ ಬೀಜೋಪಚಾರ ಮಾಡಿಗೋಣಿಚೀಲದಲ್ಲಿ ಸಂಗ್ರಹಿಸುವದರಿAದ ೧೨ ತಿಂಗಳ ಕಾಲಸಂಗ್ರಹಣ ಕೀಟದಿಂದಾಗುವ ಹಾನಿಯನ್ನು ತಡೆಯುವುದಲ್ಲದೆ ಬೀಜದ ಗುಣಮಟ್ಟವು ಬೀಜ ಪ್ರಮಾಣಿತ ಪರಿಮಿತಿಗಿಂತ ಹೆಚ್ಚಿರುವುದು ಕಂಡುಬAದಿದೆ. ಈ ಬೀಜೋಪಚಾರವು ಕೀಟನಾಶಕ ಬೀಜೋಪಚಾರದಷ್ಟೇ ಪರ್ಯಾಯ ಬೀಜೋಪಚಾರವಾಗಿದ್ದು ಇದನ್ನು¸ Áವಯವ ಬೀಜೋಚಾರವಾಗಿ ಅಲಸಂದೆಯಲ್ಲಿ ಬಳಸಬಹುದು.   2018-19
17. ಅಲಸಂದೆಯ ಬೀಜವನ್ನು ಅಜಾಡಿರಕ್ಟಿನ್ (೧೦೦೦೦ಪಿಪಿಎಂ) (೭.೫೦ ಮಿ.ಲೀ.ಪ್ರತಿ ಕೆ.ಜಿ. ಬೀಜೊಪಚಾರ ಮಾಡಿಗೋಣಿಚೀಲದಲ್ಲಿ ಸಂಗ್ರಹಿಸುವದರಿAದ ಯಾವುದೆ ಕೀಟ ಬಾಧೆಯಿಲ್ಲದೆ ೧೨ ತಿಂಗಳ ಕಾಲ ಸುರಕ್ಷಿತವಾಗಿ ಸಂಗ್ರಹಿಸಬಹುದಾಗಿದೆ . 2019-20
18. ತೋಗರಿ (ಬಿ.ಆರ್.ಜಿ-೫) ಬೆಳೆಯನ್ನು ಪೂರ್ವಕೊಯ್ಲುನ ಮುಂಚೆ ಎಮಮೆಕ್ಟಿನ್ ಬೆಂಜೋಯೇಟ್ 5 SG @0.30 ಮಿ.ಗ್ರಾಂ ಪ್ರತಿ ಲೀ.ನೀರಿಗೆ ಬೆರಿಸಿ ಕಾಳು ಬಲಿಯುವಿಕೆ ಸಮಯದಲ್ಲಿ ಸಿಂಪಡಿಸುವುಸರಿAದ ಹತ್ತುವಾರಗಳ ಕಾಲ ಬೇಲೆಕಾಳು ದುಂಬಿಯ ಹಾನಿ ಇಲ್ಲದೇ ಸಂಗ್ರಹಿಸಬಹುದಾಗಿದೆ. ಲಾಭ ನಷ್ಟದ ಪ್ರಮಾಣವು 1:7.25  ಎಮಮೆಕ್ಟಿನ್ನ ಬೆಂಜೋಯೇಟ್  5 SG @0.30 ಮಿ.ಗ್ರಾಂ ಪ್ರತಿಲೀ. ನೀರಿಗೆ ಬೆರೆಸಿ ಸಿಂಪಡಿಸುವುದರಿAದ ದಾಖಲಿಗಿರುತ್ತದೆ. 2020-21
19. ಸೋಯಾ ಅವರೆಯನ್ನು ಸೂಪರ್‌ಗ್ರೇನ್ (super grain)ಚೀಲದಲ್ಲಿ ಜಿಮೋಲೈಟ್‌ಮಣಿಗಳೊಂದಿಗೆ ಶೇಖರಿಸುವುದರಿಂದ ೧೨ ತಿಂಗಳ ಕಾಲ ಶೇಖರಣೆಯಲ್ಲಿ ತೇವಾಂಶವನ್ನು ಹೀರಿಕೊಂಡು ಬೀಜದ ಗುಣಮಟ್ಟದಲ್ಲಿ ಯಾವುದೇತೊಂದರೆ ಇಲ್ಲದೆ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಸಿಲಿಕಾ ಜೆಲ್‌ಗೆ ಹೋಲಿಸಿದರೆ, ಜಿಯೋಲೈಟ್ ಬೀಡ್‌ಗಳು ಉತ್ತಮವಾಗಿ ನೀರನ್ನು ಹೀರಿಕೊಳ್ಳುವ ಸಾಮರ್ಥವನ್ನು ಹೊಂದಿವೆ, ಸಾಮರ್ಥ್ಯದ ನಷ್ಟವಿಲ್ಲದೆ 10000 ಬಾರಿ ಬೀಡ್‌ಗಳನ್ನು ಪುನರುತ್ಪಾದಿಸ ಬಹುದಾಗಿದೆ. ಇವು ವಿಷರಹಿತ ಮತ್ತು ಕಡಿಮೆ ವೆಚ್ಚದಾಗಿರುವುದರಿಂದ ಸೋಯಾಬೀನ್ ಬೀಜ ಒಂಗಿಸಲು ಮತ್ತು ಸಂಗ್ರಹಿಸಲು ರೈತರಿಗೆ ಶಿಫಾರಸು ಮಾಡಲಾಗುದೆ. 2020-21
20. ಬರಗು ಬೀಜವನ್ನು ಶೇ೨೦% ದ್ರವಸೂಡೋಮೋನಾಸ್  ಫ್ಲೋರೋಸೆನ್ಸ್ಯೊಂದಿಗೆ ೬ ಗಂಟೆಗಳ ಕಾಲ ಪ್ರೆöÊಮಿಂಗ್ (ಬೀಜದ್ರಾವಣ ಮತ್ತು ಬೀಜವನ್ನು ಕಾರ್ಬೆಂಡಜೈಮ್ (@ ೨.೫ ಗ್ರಾಂ. ಪ್ರತಿಕೆಜಿ ಯಿಂದ ಸಂಸ್ಕರಿಸಿ, ೧:೧ ಅನುಪಾತವನ್ನು ಅಳವಡಿಸಬೇಕು) ಮಾಡುವುದರಿಂದ ಕ್ಷೇತ್ರ ಹೊರಹೊಮ್ಮುವಿಕೆಯು ಶೇ.೮.೮೩ ರಷ್ಟು ಬೀಜದ ಇಳುವರಿಯು ಶೇ.೧೨.೧೫ ರಷ್ಟು ವೃದ್ಧಿಯಾಗಿರುವುದು ಕಂಡುಬAದಿದೆ.  ಆದ್ದರಿಂದ ಬರಗುವಿನಲ್ಲಿ ಏಕರೂಪದ ಕ್ಷೇತ್ರ ಹೊರಹೊಮ್ಮುವಿಕೆ, ಹೆಚ್ಚು ಇಳುವರಿ ಮತ್ತು ಗುಣಮಟ್ಟವನ್ನು ಪಡೆಯಲು ಈ ಜೈವಿಕ ಬೀಜೋಪಚಾರಗಳನ್ನು ಅಲವಡಿಸಿಕೊಳ್ಳಬಹುದಾಗಿದೆ. 2020-21
21. ದ್ವಿದಳ ಬೀಜವನ್ನು ಪ್ರತಿ.ಕೆ.ಜಿ ಗೆ ಸ್ಪಾಯಿನೊಟೋರಮ್  11.7% SC@2.5ml   ಅನ್ನು 5ml  ನೀರಿಗೆ ಬೆರೆಸಿ ಉಪಚರಿಸಿ  ನೆರಳಿನಲ್ಲಿ ೪ಗಂಟೆಗಳ ಕಾಲ ಒಣಗಿಸಿ ಗೋಣಿಚೀಲದಲ್ಲಿ ಸಂಗ್ರಹಿಸುವುದರಿAದ  ೯ ತಿಂಗಳಕಾಲ ಶೇಖರಣಯಲ್ಲಿ ದ್ವಿದಳ ಕೀಟ ಭಾದೆಯಿಂದ ಸಂರಕ್ಷಿಸಬಹುದಾಗಿದೆ. 2021-22
22. ದ್ವಿದಳ ಬೀಜವನ್ನು ಪ್ರತಿ. ೧೦ ಕೆಜಿ ಗೆ ಪ್ಲೊಪೈರಡಿ ಪೊರಾನ್ 200SL @0.04ml  ಅನ್ನು  50ml ನೀರಿನೊಂದಿಗೆ ಬೆರೆಸಿ ಉಪಚರಿಸಿ ನೆರಳಿನಲ್ಲಿ ೪ಗಂಟೆಗಳ ಕಾಲ ಒಣಗಿಸಿ ಗೋಣಿಚೀಲದಲ್ಲಿ ಸಂಗ್ರಹಿಸುವುದರಿAದ ೯ ತಿಂಗಳಕಾಲ ಶೇಖರಣಯಲ್ಲಿ ದ್ವಿದಳ ಕೀಟ ಭಾದೆಯಿಂದ ಸಂರಕ್ಷಿಸಬಹುದಾಗಿದೆ. 2022-23

 

 

 

ಪ್ರಶಸ್ತಿಗಳು :

  • 2015-16ನೇ ಸಾಲಿನ ಅ.ಭಾಸು.ಸಂ.ರಾ.ಬಿ.ಪ್ರಾ (ಬೆಳೆಗಳು) ವಾರ್ಷಿಕ ಸಭೆಯು ಕೇರಳದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಬೀಜತಂತ್ರಜ್ಞಾನ ಸಂಶೋಧನೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ನಮ್ಮ ಆ.ಭಾ.ಸು.ಸಂ.ಬೀಜ ಸಂಶೋಧನಾಕೇAದ್ರ ಕ್ಕೆಶ್ರೇಷ್ಠತೆಯ ಪ್ರಮಾಣ ಪ್ರಶಸ್ತಿಯನ್ನು ನೀಡಗೌರವಿಸಲಾಗಿದೆ.
  • ೨೦೧೯ ಮತ್ತು ೨೦೨೨ರ ಸಾಲಿನ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಆಯೋಜಿಸಲಾದ ಕೃಷಿ ಮೇಳದಲ್ಲಿ ಅ.ಭಾ.ಸು.ಸಂ.ಬೀಜ(ಬೆಳೆಗಳು) ಯೋಜನೆಗೆ ಅತ್ಯುತ್ತಮ ಮಳಿಗೆ ಪ್ರಶಸ್ತಿ ದೊರಕಿದೆ.
  • ಡಾ.ವಿಶ್ವನಾಥ (PI) ಮತ್ತು ಡಾ. ನೇತ್ರಾ. ಎನ್ (Co-PI) ಇವರಿಗೆ ೨೦೨೧-೨೨ನೇ ಸಾಲಿನಲ್ಲಿ ಬಾಹ್ಯಅನುದಾನಿತ ಯೋಜನೆಯಾದ“ ಮಣ್ಣುರಹಿತ ಕೃಷಿ ಉತ್ಪಾದನೆ ಪ್ರಾತ್ಯಕ್ಷಿಕೆ ಮತ್ತು ವಾಣಿಜ್ಯ ಬೀಜೋತ್ಪಾದನಾಘಟಕ” ಗೆರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಕೃಷಿ ಮತ್ತು ಸಹಕಾರ ಸಚಿವಾಲಯ ದೆಹಲಿಯ ಪ್ರಾಧಿಕಾರದಿಂದ ರೂ.೪೦೯ ಲಕ್ಷಗಳನ್ನು ಪಡೆದಿದ್ದಕ್ಕಾಗಿ ಅರ್ಹತಾ ಪ್ರಮಾಣಪತ್ರವನ್ನು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನದಂದು ನೀಡಿಗೌರವಿಸಲಾಗಿದೆ.
  • ಡಾ. ವಿಶ್ವನಾಥ. ಕೆ. ಅಸೋಸಿಯೆಟ್ ಲೀಡರ್ (ಪಲ್ಸ್ಂಹಬ್) ಇವರು ೨೦೨೨ರ ಪಲ್ಸ್ ಸೀಡ್ಸ್ ಹಬ್‌ಯೋಜನೆಯಡಿ ಲಾಭಗಳಿಸಿದ್ದಕ್ಕಾಗಿ ಅರ್ಹತಾ ಪ್ರಮಾಣಪತ್ರವನ್ನು ವಿಶ್ವವಿದ್ಯಾಲಯದಲ್ಲಿ ನಡೆದ ಸಂಸ್ಥಾತನಾ ದಿನದಂದು ನೀಡಿಗೌರವಿಸಲಾಗಿದೆ.
  • ಡಾ.ವಿಶ್ವನಾಥ. ಕೆ. ಇವರು ೨೦೨೨ರ ಸಾಲಿನ ಮೆಗಾ ಸೀಡ್ಸ್ ಪ್ರಾಜೇಕ್ಟ್ಯೋಜನೆಯಡಿ ಲಾಭಗಳಿಸಿಸಕ್ಕಾಗಿ ಇವರಿಗೆ ಅರ್ಹತಾ ಪ್ರಮಾಣಪತ್ರವನ್ನು ೨೦೨೨ರ ೧೧ನೇ ಅಕ್ಟೋಬರ್ ನಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನದಂದು ನೀಡಲಾಗಿದೆ.

 

ಲಭ್ಯವಿರುವ ಸೌಲಭ್ಯಗಳು :

  • ಕರ್ನಾಟಕ ಸರ್ಕಾರ ಅಧಿಸೂಚಿತ ಬೀಜ ಪ್ರಯೋಗಾಲಯ-ಬೀಜದ ಗುಣಮಟ್ಟ ಮತ್ತು ಬೀಜ ಅನುವಂಶಿಕ ಶುದ್ಧತೆ ಪರೀಕ್ಷೆ.
  • ಬೀಜ ಅನುವಂಶಿಕ ಶುದ್ಧತೆ ಪರೀಕ್ಷೆಗಾಗಿ ವಿವಿಧ ಬೆಳೆಯ ತಳಿಗಳು/ಸಂಕರಗಳ ಲಕ್ಷಗಳನ್ನು ಜೀವರಾಸಾಯನಿಕ (Bio-chemical) ಮತ್ತು ಅಣ್ವಿಕ (Molecular) ಮಾರ್ಕರ್ ಮುಖಾಂತರ ಗುರುತಿಸುವುದು.
  • ಯೋಜನೆಯಡಿಯಲ್ಲಿ, ಬೀಜಉತ್ಪಾದಕರು /ಬೀಜಉದ್ಯಮದಲ್ಲಿ ತೊಡಗಿಸಿಕೊಂಡಿರುವವರು /ರೈತರು, ಇವರಿಗೆ ಬೀಜೋತ್ಪಾದನಾ ತಂತ್ರಜ್ಞಾನಗಳು ಮುಂತಾದವು ದರಕುರಿತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

 

¨ÁºÀåC£ÀÄzsÁ¤vï AiÉÆÃd£ÉUÀ¼ÀÄ :

ಕ್ರ. ಸಂ. ಯೋಜನೆಯ ಶಿರ್ಷಿಕೆ ಪ್ರಧಾನತನಿಕಾಧಿಕಾರಿ ಅನುಧಾನಿತ ಸಂಸ್ಥೆ ಪ್ರಾರಂಭವಾದ ವರ್ಷ ಪೂರ್ಣವಾಗುವ ವರ್ಷ ಒಟ್ಟು ಬಜೆಟ್ (ಲಕ್ಷಗಳಲ್ಲಿ) ಮಹತ್ವದ ಫಲಿತಾಂಶ
1. ಮಣ್ಣುರಹಿತ ಕೃಷಿ ಉತ್ಪಾದನೆ ಮತ್ತು ವಾಣಿಜ್ಯ ಬೀಜೋತ್ಪಾದನಾಘಟಕ ಡಾ. ಕೆ. ವಿಶ್ವನಾಥ್ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಕೃಷಿ ಮತ್ತು ಸಹಕಾರ ಸಚಿವಾಲಯದೆಹಲಿ 2021-2022 2023-2024 409.0 ಈ ಅಧ್ಯಯನದಿಂದ ಕೃಷಿ ಉತ್ಪಾದನಾ ವ್ಯವಸ್ಥೆಗೆ ನೀರು, ಸ್ಥಳ ಮತ್ತು ಪೊಶಕಾಂಶಗಳ ಉಳಿಸುವ ತಂತ್ರಜ್ಞಾನ ಹೊರಬರುತ್ತದೆ. ಆಧುನಿಕ ಕೃಷಿ ವಿಧಾನಗಳತ್ತ ಆಕರ್ಷಿಸಲು ಗ್ರಾಮೀಣ ಯುವಕರಿಗೆ ಈ ತಂತ್ರಜ್ಞಾನವನ್ನು ಒದಗಿಸುವುದು ಮತ್ತು ನಿರುದ್ಯೋಗಿಗಳನ್ನು ಕೃಷಿಯತ್ತ ಸೆಳೆಯುವುದು. ವರ್ಷವಿಡಿ ಎಲ್ಲಾ ಹೈಡ್ರೊಪಾನಿಕ್ಸ್/ ಮಣ್ಣುರಹಿತ ಕೃಷಿ ಮಾದರಿಗಳ ಪ್ರಾತ್ಯಕ್ಷಿಕೆಯನ್ನು ರೈತ ಸಮುದಾಯಕ್ಕೆ ಒದಗಿಸುವುದು.
2. ಬೀಜ ಸಂಯೋಜನೆಗಾಗಿ, ಜೈವಿಕ ವಿಘಟನೀಯ ಮಂಬರೇನ್ ನ್ನು ಅಭಿವೃದ್ಧಿಪಡಿಸಲು ವಿವಿಧ ಬೆಳೆಗಳ ಬೀಜದ ಪೊರೆಯಜೈವಿಕ-ರಾಸಾಯನಿಕ್ ಸಂಯೋಜನೆಯನ್ನುಅರ್ಥಮಾಡಿಕೊಳ್ಳುವುದು (ABAC 5371)  ಡಾ. ನೇತ್ರಾ. ಎನ್.

 

 

 

 

M/s TRuCapsol LLC 2020-21 2023-24 12.56 ಸೋಯಾಅವರೆಯ ಬೀಜದ ಪೊರೆಯ ಬಣ್ಣ ವಿನ್ಯಾಸದ ಅಧ್ಯಯನದಲ್ಲಿ, ಶೆಖರಣೇಯಲ್ಲಿ ಕಪ್ಪು ಬಣ್ಣದ ಸೋಯಾ ಅವರೆಯ ತಳಿಗಳು ಬಿಳಿ ತಳಿಗಳಿಗಿಂತ ಉತ್ತಮ ಕಾರ್ಯನಿರ್ವಹಿಸುವುದು ಕಂಡುಬAದಿದೆ.

ಭೇದಾತ್ಮಕ ನೀರಿನ ಪ್ರವೇಶಸಾಧ್ಯತೆಯೊಂದಿಗೆ ಬಿಳಿ (ಜೆ.ಎಸ್-೩೩೫) ಮತ್ತು ಕಪ್ಪು (ಭಟ್) ಸೋಯಾಬೀನ್‌ನ ಬೀಜದ ಸಂಯೋಜನೆಯು ಅವುಗಳ ರಾಸಾಯನಶಾಸ್ತç ಮತ್ತು ಮೆಟಾಬೊಲೈಟ್ ವೈವಿಧ್ಯತೆಯಲ್ಲಿ ವ್ಯತ್ಯಾಸಗಳನ್ನು ತೋರಿರುವುದು ಕಂಡುಬAದಿದೆ.

ಸಿಬ್ಬಂದಿವಿವರ :

ವೈಜ್ಞಾನಿಕ ಸಿಬ್ಬಂದಿ:

ಡಾ. ಕೆ. ವಿಶ್ವನಾಥ್
ಹುದ್ದೆ ಬೀಜ ಸಂಶೋಧನಾ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ .ಎಸಿ. (ಅಗ್ರಿ), ಪಿಎಚ್ಡಿ (ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ)
ವಿಷಯ ಪರಿಣತೆ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 22.07.2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 01-06-2022
srostrc@gmail.com
vishwakoti@gmail.com

080-23620494
+91 9481245045
ಡಾ. ಸಿ. ಮಂಜ ನಾಯ್ಕ
ಹುದ್ದೆ ಸಹಾಯಕ ಬೀಜ ಸಂಶೋಧನಾ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಅಗ್ರಿ), ಪಿಎಚ್ಡಿ (ಕೃಷಿ ಕೀಟಶಾಸ್ತ್ರ)
ವಿಷಯ ಪರಿಣತೆ ಕೃಷಿ ಕೀಟಶಾಸ್ತ್ರ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 24.01.1996
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 02-04-2018

naik196710@yahoo.com

080-23620494
+91 9480773978
ಡಾ.ನೇತ್ರಾ.ಎನ್
ಹುದ್ದೆ ಸಹಾಯಕ ಬೀಜ ಸಂಶೋಧನಾ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಅಗ್ರಿ), ಪಿಎಚ್ಡಿ (ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ) Post-Doc (USA)
ವಿಷಯ ಪರಿಣತೆ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 24-10-2011
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 24-10-2011
nnethra@uasbangalore.edu.in
nethraharsha@gmail.com

080-23620494
+91 9900244735

B. ವೈಜ್ಞಾನಿಕ ಸಿಬ್ಬಂದಿ:

ಶ್ರೀಮತಿ. ಬಿ.ಎಲ್.ಜ್ಯೋತಿ
ಹುದ್ದೆ ಹಿರಿಯ ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ರೇಷ್ಮೆ ಕೃಷಿ)
ವಿಷಯ ಪರಿಣತೆ ರೇಷ್ಮೆ ಕೃಷಿ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 21-10-2010
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 21-10-2010

jyothibl@yahoo.co.in

080-23620494
+91 9481245045
ಡಾ. ಜೆ.ಲಕ್ಷ್ಮಿ
ಹುದ್ದೆ ಹಿರಿಯ ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ (ಅಗ್ರಿ), ಪಿಎಚ್ಡಿ (ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ)
ವಿಷಯ ಪರಿಣತೆ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 01-12-2010
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 17.02.2018

lakshmi_jagannatha@rediffmail.com

080-23620494
+91 9880992523
ಶ್ರೀಮತಿ . ಸುಮಲತಾ. ಬ್ಯಾಡಗಿ
ಹುದ್ದೆ ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್ಸಿ. (ಗೃಹ ವಿಜ್ಞಾನ)
ವಿಷಯ ಪರಿಣತೆ ಗೃಹ ವಿಜ್ಞಾನ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 28.02.2014
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 28.02.2014

suma.b549@gmail.com

080-23620494
+91 8792953645

C. ಸಹಾಯಕ ಸಿಬ್ಬಂದಿ:

ಶ್ರೀ. ಚಿಕೇಗೌಡ
ಹುದ್ದೆ ಕ್ಷೇತ್ರ ಸಹಾಯಕ
ಶೈಕ್ಷಣಿಕ ವಿದ್ಯಾಭ್ಯಾಸ ಪಿ.ಯುಸಿ
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 01-01-1990
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 01-04-2013
+91 9844423901
ಶ್ರೀ. ಎಚ್. ಸಿ.ರಾಮಚಂದ್ರ
ಹುದ್ದೆ ಕ್ಷೇತ್ರ ಸಹಾಯಕ
ಶೈಕ್ಷಣಿಕ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ.
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 01.02.1992
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 01-04-2013
+91 9964797692
ಶ್ರೀ. ಜಿ.ಎಸ್. ಸುಬ್ರಹ್ಮಣ್ಯ
ಹುದ್ದೆ ಕ್ಷೇತ್ರ ಸಹಾಯಕ
ಶೈಕ್ಷಣಿಕ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ.
ಯು.ಎ.ಎಸ್ ಬೆಂಗಳೂರ ನಲ್ಲಿ ವರದಿ ಮಾಡಿಕೊಂಡ ದಿನ 10.10.1993
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ 01-12-2010
+91 8147323543
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು