ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಕೋಶ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾನಿಲಯದ ಪ.ಜಾ. – ಪ.ಪಂ. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸುಧಾರಣೆ ಮತ್ತು ಕಲ್ಯಾಣಕ್ಕಾಗಿ ಸೇವೆಸಲ್ಲಿಸುತ್ತಿರುವ ಅಧಿಕೃತ ಅಂಗವಾಗಿದೆ ಮತ್ತು ಯುಜಿಸಿ/ರಾಜ್ಯ ಸರ್ಕಾರದ ಸಹಾಯದಿಂದ ಇವರ ನಡುವೆ ಸಮನ್ವಯ ಸ್ಥಾಪಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪ್ರವೇಶಾತಿ, ಶಿಷ್ಯವೇತನ, ವಿದ್ಯಾರ್ಥಿವೇತನ ಮತ್ತು ನೇಮಕಾತಿಯಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ವಿಶ್ವವಿದ್ಯಾನಿಲಯದಲ್ಲಿ ಆದೇಶಗಳನ್ನು ಹೊರಡಿಸುವ ದ್ಯೇಯೋದ್ದೇಶದಿಂದ ಕೃಷಿ ವಿಶ್ವವಿದ್ಯಾನಿಲಯವು ಪೂರ್ಣ ಪ್ರಮಾಣದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಕೋಶವನ್ನು ಸ್ಥಾಪಿಸಿದೆ. ವಿಶ್ವವಿದ್ಯಾನಿಲಯದಲ್ಲಿ ಮೀಸಲಾತಿ ನೀತಿಯನ್ನು ನಿರಂತರವಾಗಿ ಕಾರ್ಯಗತಗೊಳಿಸಿ ಅದರ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನೆ ಮಾಡಲು ಮತ್ತು ಕಾಲ-ಕಾಲಕ್ಕೆ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಕೊಡಲಾಗುವ ಭಾರತ ಸರ್ಕಾರದ ನೀತಿ ಹಾಗೂ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಯೋಜನಾಕ್ರಮಗಳನ್ನು ಖಾತರಿ ಪಡಿಸುವುದಾಗಿರುತ್ತದೆ.
Functions
- ನಿಗದಿಪಡಿಸಿದ ನಮೂನೆ ಹಾಗೂ ದಿನಾಂಕದೊಳಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ವಾರ್ಷಿಕವಾಗಿ ವಿಷಯವಾರು ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿಯ ಬಗ್ಗೆ ಭಾರತ ಸರ್ಕಾರ ಮತ್ತು ಆಯೋಗದ ನಿರ್ಧಾರಗಳನ್ನು ನಿರಂತರವಾಗಿ ಸಂಗ್ರಹಿಸಿ ಅದನ್ನು ಪ್ರಸರಣೆ ಮಾಡುವುದು ಹಾಗೂ ಅಗತ್ಯವಿದ್ದಲ್ಲಿ ಮುಂದಿನ ಕ್ರಮಕೈಗೊಳ್ಳುವುದು.
- ನಿಗದಿ ಪಡಿಸಿದ ನಮೂನೆ ಹಾಗೂ ದಿನಾಂಕದೊಳಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಭೋಧಕ-ಭೋಧಕೇತರ ಹುದ್ದೆಗಳ ನೇಮಕಾತಿ ಮತ್ತು ತರಬೇತಿಗಳ ಬಗ್ಗೆ ಭಾರತ ಸರ್ಕಾರದ ಆದೇಶಗಳು ಮತ್ತು ಆಯೋಗದ ನಿರ್ಧಾರಗಳ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಪ್ರಸರಣೆ ಮಾಡುವುದು ಹಾಗೂ ಅಗತ್ಯವಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದು.
- ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳ ಶಿಕ್ಷಣ,ತರಬೇತಿ ಮತ್ತು ಉದ್ಯೋಗಕ್ಕೆ ಸಂಬಂದಿಸಿದಂತೆ ಆಯೋಗದಿಂದ ಹೊಸ ನೀತಿಗಳನ್ನು ರೂಪಿಸಲು ಅಥವಾ ಅಸ್ತಿತ್ವದಲ್ಲಿರುವ ನೀತಿಯನ್ನು ಮಾರ್ಪಡಿಸುವುದಕ್ಕೆ ವಿವಿಧ ಅಂಶಗಳ ಕುರಿತು ಭಾರತ ಸರ್ಕಾರದ ಆದೇಶಗಳ ವರದಿಗಳನ್ನು ಮತ್ತು ಮಾಹಿತಿಯನ್ನು ಸಂಗ್ರಹಿಸುವುದು.
- ಮೇಲೆ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಲು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ/ವಿಶ್ವವಿದ್ಯಾನಿಲಯ ಧನಸಹಾಯ ಆಯೋಗಕ್ಕೆ ಮತ್ತು ಅಗತ್ಯವಿರುವ ಇತರ ಪ್ರಾಧಿಕಾರಗಳಿಗೆ ಮುಂದಿನ ಪ್ರಸರಣಕ್ಕಾಗಿ ವರದಿಗಳು ಮತ್ತು ಡೈಜೆಸ್ಟ್‌ಗಳನ್ನು ಸಿದ್ಧಪಡಿಸುವುದು.
- ವಿಶ್ವವಿದ್ಯಾನಿಲಯಗಳು/ಕಾಲೇಜುಗಳಲ್ಲಿ ಪ್ರವೇಶಾತಿ, ನೇಮಕಾತಿ, ಬಡ್ತಿ ಮತ್ತು ಇತರ ರೀತಿಯ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಪಡೆದ ಪ್ರಾತಿನಿಧ್ಯಗಳನ್ನು ನಿಭಾಯಿಸುವುದು.
- ಮಹಾವಿದ್ಯಾಲಯಗಳು ಮತ್ತು ವಿಶ್ವವಿದ್ಯಾನಿಲಯ ಅನುಮತಿ ನೀಡಿದಲ್ಲಿ, ಪರಿಹಾರ ತರಬೇತಿ ಯೋಜನೆಯ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುವುದು.
- ವಿಶ್ವವಿದ್ಯಾನಿಲಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಕುಂದುಕೊರತೆಗಳಿಗಾಗಿ ಕುಂದುಕೊರತೆಗಳ ಪರಿಹಾರ ಕೋಶವಾಗಿ ಕಾರ್ಯನಿರ್ವಹಿಸಲು ಮತ್ತು ಅವರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರಿಗೆ ಅಗತ್ಯವಾದ ಸಹಾಯವನ್ನು ಒದಗಿಸುವುದು.
- ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವಿಶ್ವವಿದ್ಯಾನಿಲಯದ ವಿವಿಧ ಹುದ್ದೆಗಳಿಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಉದ್ಯೋಗಕ್ಕಾಗಿ ರಿಜಿಸ್ಟರ್ ಅನ್ನು ನಿರ್ವಹಿಸುವುದು.
- ಆರ್ಥಿಕ, ಸಾಮಾಜಿಕ ಮತ್ತು ಶಿಕ್ಷಣದ ಅಭಾವದಿಂದ ಬಳಲುತ್ತಿರುವ ಈ ಎರಡು ಸಮುದಾಯಗಳ ನಡುವೆ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಕಾಲಕಾಲಕ್ಕೆ ನಿಯೋಜಿಸಲಾದ ಯಾವುದೇ ಇತರ ಕೆಲಸ.
Faculty
chandrusomanna@gmail.vom
Album
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು