Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಭತ್ತ, ಮಂಡ್ಯ

.ಭಾ.ಸು.ಪ್ರಾಯೋಜನೆ/ಘಟಕ : ಅಖಿಲ ಭಾರತ ಸುಸಂಘಟಿತ ಜಂತುಹುಳು ಪ್ರಾಯೋಜನೆ
ಸ್ಥಳ : ವಿ.ಸಿ.ಫಾರಂ, ಮಂಡ್ಯ.
ಪ್ರಾರಂಭವಾದ ವರ್ಷ: 1969
 ಆದೇಶಗಳು:

ü  ದಕ್ಷಿಣ ಕರ್ನಾಟಕದಲ್ಲಿ ಭತ್ತ ಬೆಳೆಯುವ ಪ್ರದೇಶಗಳನ್ನು ಗುರುತಿಸುವುದು, ರೂಪಿಸುವುದು ಹಾಗೂ ಗುಣಲಕ್ಷಣಗಳನ್ನು ವಿಶ್ಲೇಷಿಸುವುದು.

ü  ಅಧಿಕ ಇಳುವರಿ ಕೊಡುವ ಭತ್ತದ ತಳಿ / ಹೈಬ್ರಿಡ್ ಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸುವುದು.

ü  ಸುಸ್ಥಿರ ಭತ್ತದ ಉತ್ಪಾದನೆಗೆ ಬೇಸಾಯ ತಾಂತ್ರಿಕತೆಗಳು, ಕೀಟ ಹಾಗೂ ರೋಗ ನಿರ್ವಹಣೆ ಪದ್ಧತಿಗಳನ್ನು ರೂಪಿಸುವುದು.

ü  ಭತ್ತದಲ್ಲಿ ಕೀಟ, ರೋಗ ಹಾಗೂ ವಿವಿಧ ರಸಸಾರದ ಮಣ್ಣಿನಲ್ಲಿ ಬೆಳೆಯುವ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರ ಉಪಯೋಗಕ್ಕೆ ತಲುಪಿಸುವುದು.

ü  ರಾಜ್ಯ ಮತ್ತು ರಾಷ್ಟçದ ಅವಶ್ಯಕತೆಗೆ ಅನುಗುಣವಾಗಿ ಮುಖ್ಯವಾದ ತಳಿ / ಹೈಬ್ರಿಡ್‌ಗಳ ಕೋಷ ಹಾಗೂ ತಳಿವರ್ಧಕ ಬೀಜೋತ್ಪಾದನೆಗಳನ್ನು ಕೈಗೊಳ್ಳುವುದು.

ü  ಕೀಟ ಮತ್ತು ರೋಗಗಳ ಮೇಲ್ವಿಚಾರಣೆ ಮತ್ತು ಮುಂಚೋಣಿ ಸಮೀಕ್ಷೆ ಕೈಗೊಂಡು ರೈತರಿಗೆ ಸಲಹಾ ಸೇವೆ ನೀಡುವುದು.

ü  ಸ್ಥಳೀಯ / ಸಂಪ್ರಾದಾಯಕ ಭತ್ತದ ತಳಿUಳನ್ನು ಸಂಗ್ರಹಿಸಿ, ಗುಣಲಕ್ಷಣಗಳ ವಿಶ್ಲೇಷಣೆ ಮಾಡಿ sಸಂರಕ್ಷಣೆ ಮಾಡುವುದು.

ಸಂಶೋಧನಾ ಕಾರ್ಯಕ್ರಮಗಳು

ಬೆಳೆ ಸುಧಾರಣೆ :

1. ಜೈವಿಕ ಮತ್ತು ಅಜೈವಿಕ ಒತ್ತಡಗಳಿಗೆ ಪ್ರತಿರೋಧಕತೆ ಅಥವಾ ಸಹಿಷ್ಣುತೆಯನ್ನು ಹೊಂದಿರುವ ಭತ್ತದ ತಳಿಗಳನ್ನು ಮಾರ್ಕರ್ ಅಸಿಸ್ಟೆಡ್ ಬ್ಯಾಕ್‌ಕ್ರಾಸ್ ಬ್ರೀಡಿಂಗ್ ಮುಖಾಂತರ ಅಭಿವೃದ್ಧಿಪಡಿಸುವುದು.

2. ಅಖಿಲ ಭಾರತ ಸುಸಂಘಟಿತ ಭತ್ತದ ಸಂಶೋಧನೆಯ ಪ್ರಯೋಗಗಳಲ್ಲಿ ನಾಮನಿರ್ದೇಶನೆಗೊಂಡ ಭತ್ತದ ತಳಿಗಳನ್ನು ವಿಶ್ಲೇಷಣೆ ಮಾಡುವುದು.

3. ಕರ್ನಾಟಕದ ಸಾಂಪ್ರದಾಯಿಕ ಭತ್ತದ ತಳಿಯಾದ “ರಾಜಮುಡಿ” ತಳಿಯ ಗುಣಲಕ್ಷಣ, ಶುದ್ಧೀಕರಣ ಹಾಗೂ ಸುಧಾರಣೆ ಮಾಡುವುದು.

4. ಎಲೈಟ್ ಬ್ರೀಡಿಂಗ್ ಪ್ಯಾನೆಲ್‌ನ ರಚನೆಗಾಗಿ ಅವಶ್ಯಕವಿರುವ ಭತ್ತದ ಜೀನೋಟೈಪ್‌ಗಳನ್ನು ಗುರುತಿಸುವುದು

5. ಭತ್ತದ ೩ಕೆ ಪ್ಯಾನೆಲ್‌ನಿಂದ (Oryza sativa L.) ಆಯ್ಕೆ ಮಾಡಿಕೊಂಡ ಇಂಡಿಕಾ ಪ್ರವೇಶಗಳು/ನಮೂದುಗಳನ್ನು ಬಳಸಿಕೊಂಡು ಜೀನೋಮಿಕ್ ಸಹಾಯದಿಂದ ಭತ್ತದ ಜೀನೋಟೈಪ್‌ಗಳ ಹೆಟೆರೋಸಿಸ್ ಅನ್ನು ಕಂಡುಹಿಡಿಯುವುದು.

6. ಭತ್ತದ ೩ಕೆ ಪ್ಯಾನೆಲ್‌ನಲ್ಲಿನ ಕಳೆಗಳ ಸ್ಪರ್ಧಾತ್ಮಕ ಗುಣಲಕ್ಷಣಗಳ ವಿಶ್ಲೇಷಣೆಗಾಗಿ ಹ್ಯಾಪ್ಲೋಟೈಪ್ ಆಧಾರಿತ ಜಿ.ಡಬ್ಲೂ.ಎ.ಎಸ್.ಅನ್ನು ಬಳಸುವುದು.

 

ಬೆಳೆ ಉತ್ಪಾದನೆ:

1. ಹೆಚ್ಚಿನ ಉತ್ಪಾದಕತೆಗಾಗಿ ಆಯ್ದ ಬಿಡುಗಡೆಗೊಳಿಸುವ ಭತ್ತದ ತಳಿಗಳಲ್ಲಿ ಪೋಷಕಾಂಶಗಳ ಪ್ರತಿಕ್ರಿಯೆಯ ಅಧ್ಯಯನಗಳು

2. ಭತ್ತದ ಉತ್ಪಾದನೆಯಲ್ಲಿ ಸಂಪನ್ಮೂಲ ಸಂರಕ್ಷಣೆಗಾಗಿ – ಬೀಜ, ಪೋಷಕಾಂಶಗಳು, ಮಣ್ಣು, ನೀರು ಮತ್ತು ಕೃಷಿ ಕಾರ್ಮಿಕರ ಸಮರ್ಥ ಬಳಕೆಗಾಗಿ ತಂತ್ರಜ್ಞಾನಗಳ ಅಭಿವೃದ್ಧಿ

3. ಭತ್ತದ ಬೇಸಾಯ ಪದ್ಧತಿಯಲ್ಲಿನ ಉತ್ಪಾದಕತೆ ಹಾಗೂ ಗುಣಮಟ್ಟವನ್ನು ವಿವಿಧ ಭತ್ತ ಬೆಳೆಯುವ ಪದ್ಧತಿಯಲ್ಲಿ ವೃದ್ದಿಸಲು ನಿರ್ದಿಷ್ಟ ಸ್ಥಳ ಸಮಗ್ರ ಸಸ್ಯ ಪೋಷಕಾಂಶ ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿ

4. ಭತ್ತ ಆಧಾರಿತ ನೇರ ಬಿತ್ತನೆ ಬೆಳೆ ಪದ್ಧತಿಯಲ್ಲಿ ಸಮಗ್ರ ಕಳೆ ಮತ್ತು ಪೋಷಕಾಂಶಗಳ ನಿರ್ವಹಣೆ

5. ರೈತರ ಜಮೀನಿನ ಭತ್ತದ ಬೆಳೆಗಳಲ್ಲಿ ಸಮಗ್ರ ಪೀಡೆ (ಕಳೆಗಳು) ನಿರ್ವಹಣೆ ಪ್ರದರ್ಶಿಸುವುದು

6. ಭತ್ತದ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಅಧ್ಯಯನ

7. ಭತ್ತ ಆಧಾರಿತ ಬೆಳೆ ಪದ್ಧತಿಯ ಸುಸ್ಥಿರತೆಗಾಗಿ ವೈವಿಧ್ಯ ಬೆಳೆಗಳ ಅಧ್ಯಯನ

8. ಭತ್ತದ ಇಳುವರಿ ಕುಂಠಿತವಾಗುವ ಕಾರಣಕ್ಕೆ ದೀರ್ಘಾವಧಿಯ ಭತ್ತದ ಬೆಳೆಯ ಅವಧಿಯ ಸರಾಸರಿ ಕನಿಷ್ಟ ಮತ್ತು ಗರಿಷ್ಟ ಉಷ್ಣಾಂಶ ಹಾಗೂ ಮಳೆಯ ಹವಾಮಾನ ಮಾಹಿತಿಯ ವಿಶ್ಲೇಷಣೆ

 

ಕೀಟಶಾಸ್ತ್ರ  :

1. ಗಾಜಿನ ಮನೆಯ ವಾತಾವರಣದಲ್ಲಿ ಕಂದು ಜಿಗಿ ಹುಳು ಹಾಗೂ ಕ್ಷೇತ್ರದ ವಾತಾವರಣದಲ್ಲಿ ಹಳದಿ ಕಾಂಡ ಕೊರೆಯುವ ಹುಳುವಿನ ಸಹಿಷ್ಣುತೆಗಾಗಿ ಭತ್ತದ ಜರ್ಮಾಪ್ಲಾಸಮ್ ಮತ್ತು ನಮೂದುಗಳನ್ನು ಸ್ಕೀನಿಂಗ್ ಮಾಡುವುದು

2.ಭತ್ತದ ತೆನೆ ತಿಗಣೆ ಹುಳುವಿನ (Leptocorisa acuta) ವಿರುದ್ಧವಾಗಿ ಎಂಟೊಮೊಪಾಥೋಜೆನ್‌ಗಳ ಮೌಲ್ಯಮಾಪನ ಮಾಡುವುದು.

3.ರೈತರ ಜಮೀನಿನ ಭತ್ತದ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಮಾಡುವುದು

4.ಕೀಟ ಮತ್ತು ಉತ್ಪಾದನಾ ಸಮೀಕ್ಷೆಯ ವರದಿ ಆಧಾರದ ಮೇಲೆ ಭತ್ತದ ಕೀಟಗಳ ನಿರ್ವಹಣೆಗಾಗಿ ಅಭಿವೃದ್ಧಿಪಡಿಸುವುದು

5.ಹೊಸ ಕೀಟನಾಶಕಗಳ ಜೈವಿಕ ಸಮೂಹಗಳ ಪರಿಣಾಮದ ಬಗ್ಗೆ ಮೌಲ್ಯಮಾಪನ ಮಾಡುವುದು.

ರೋಗಶಾಸ್ತ್ರ  :

1.ಏಕರೂಪ ನರ್ಸರಿಯ ಅಡಿಯಲ್ಲಿ ಎನ್.ಎಸ್.ಎನ್.-೧, ಎನ್.ಎಸ್.ಎನ್.-೨, ಎನ್.ಹೆಚ್.ಎಸ್.ಎನ್., ಬಿ.ಎಲ್., ಡಿಬಿಟಿ-೧, ಡಿಬಿಟಿ-೨ ಮತ್ತು ಹೈಬ್ರೀಡ್ ಭತ್ತದ ತಳಿಗಳನ್ನು ಎಲೆ ಬೆಂಕಿರೋಗದ ನಿರೋಧಕತೆಗಾಗಿ ಸ್ಕೀನಿಂಗ್ ಮಾಡುವುದು.

2.ಎನ್.ಎಸ್.ಎನ್.-೧, ಎನ್.ಎಸ್.ಎನ್.-೨, ಎನ್.ಹೆಚ್.ಎಸ್.ಎನ್., ಬಿ.ಎಲ್., ಡಿಬಿಟಿ-೧, ಡಿಬಿಟಿ-೨ ಮತ್ತು ಹೈಬ್ರೀಡ್ ಭತ್ತದ ತಳಿಗಳನ್ನು ಕುತ್ತಿಗೆ ಬೆಂಕಿರೋಗದ ನಿರೋಧಕತೆಗಾಗಿ ಸ್ಕೀನಿಂಗ್ ಮಾಡುವುದು.

3.ಎನ್.ಎಸ್.ಎನ್.-೧, ಎನ್.ಎಸ್.ಎನ್.-೨, ಎನ್.ಹೆಚ್.ಎಸ್.ಎನ್., ಬಿ.ಎಲ್., ಡಿಬಿಟಿ-೧, ಡಿಬಿಟಿ-೨ ಮತ್ತು ಹೈಬ್ರೀಡ್ ಭತ್ತದ ತಳಿಗಳನ್ನು ಎಲೆಕವಚ ಕೊಳೆರೋಗದ ನಿರೋಧಕತೆಗಾಗಿ ಸ್ಕೀನಿಂಗ್ ಮಾಡುವುದು.

4.Pyricularia oryzae ಯ ವಿರುಲೆನ್ಸ್ ಬಗ್ಗೆ ಕ್ಷೇತ್ರ ಭೇಟಿ ಮಾಡುವುದು.

5.ಆಕರ್ಷಕ ಬಲೆ ಬೆಳೆಗಳ ನರ್ಸರಿಯಲ್ಲಿ ಬರುವ ರೋಗಗಳ ವೀಕ್ಷಣೆ ಮಾಡುವುದು.

6. ನಿರ್ದಿಷ್ಟ ಸ್ಥಳಗಳಲ್ಲಿ ಬರುವ ರೋಗಗಳಿಗೆ ಶೀಲಿಂಧ್ರನಾಶಕಗಳ ಮೌಲ್ಯಮಾಪನ ಮಾಡುವುದು.

7. ಸಮಗ್ರ ರೋಗ ನಿರ್ವಹಣೆ ಮಾಡುವುದು

8. ಭತ್ತದ ಮುಖ್ಯ ರೋಗಗಳಿಂದಾಗುವ ಇಳುವರಿ ನಷ್ಟದ ಪರಿಣಾಮವನ್ನು ತಿಳಿಯಲು ವಿಶೇಷ ಪ್ರಯೋಗಗಳವನ್ನು ಕೈಗೊಳ್ಳುವುದು.

9. ಉತ್ಪಾದನಾ ಆಧಾರಿತ ಸಮೀಕ್ಷೆಯನ್ನು ಮಾಡುವುದು

ಮಣ್ಣು ವಿಜ್ಞಾನ:

1. ಭತ್ತ ಆಧಾರಿತ ಬೆಳೆ ಪದ್ಧತಿಯಲ್ಲಿ ದೀರ್ಘಾಕಾಲಿಕ ಮಣ್ಣಿನ ಫಲವತ್ತತೆಯ ನಿರ್ವಹಣೆ (ಭತ್ತ – ಅಲಸಂದೆ)

2. ನ್ಯಾನೊ ಸತುವಿನ ಸೂತ್ರೀಕರಣದಿಂದ ಸೋಡಿಕ್ ಮಣ್ಣುಗಳ ನಿರ್ವಹಣೆ ಮಾಡುವುದು

3. ಭತ್ತದ ಉತ್ಪಾದಕತೆ ಮತ್ತು ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಸಾವಯವ ಗೊಬ್ಬರಗಳು ಹಾಗೂ ನೈಸರ್ಗಿಕ ಕೃಷಿ ಪದ್ದತಿಗಳ ಮೌಲ್ಯಮಾಪನ ಮಾಡುವುದು

ಸಂಶೋಧನಾ ಸಾಧನೆಗಳು :

(ಅಭಿವೃದ್ಧಿ ಪಡಿಸಿ ಬಿಡುಗಡೆಗೊಂಡಿರುವ ಭತ್ತದ ತಳಿಗಳು)

ಬೆಳೆ ಸುಧಾರಣೆ :

1. ಕೆ.ಎಂ.ಪಿ.-೧೭೫ (ದಕ್ಷ)

ಈ ತಳಿಯು ೧೧೫-೧೨೦ ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿಯಾಗಿರುತ್ತದೆ. ಸುಮಾರು ೧೦೦-೧೧೦ ಸೆಂ.ಮೀ. ಎತ್ತರ ಬೆಳೆಯುವ ಈ ತಳಿಯು ಎಕರೆಗೆ ಸುಮಾರು ೧೬-೧೮ ಕ್ವಿ. ಧಾನ್ಯ ಹಾಗೂ ೧೮-೨೦ ಕ್ವಿ. ಹುಲ್ಲಿನ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದೆ. ಮುಂಗಾರಿನಲ್ಲಿ ಜುಲೈ ಅಂತ್ಯದವರೆಗೂ ಹಾಗೂ ಬೇಸಿಗೆಯಲ್ಲಿ ಜನವರಿ ಕೊನೆಯವರೆಗೂ ಈ ತಳಿಯನ್ನು ನೇರವಾಗಿ ಬಿತ್ತನೆ ಮಾಡಿ ಏರೋಬಿಕ್ ಪದ್ಧತಿಯಲ್ಲಿ ಬೆಳೆಯ ಬಹುದಾಗಿದೆ.

2. ಕೆ.ಎಂ.ಪಿ.-೧೦೧ (ತನು)

ಈ ತಳಿಯನ್ನು ಮಂಡ್ಯ ವಿಜಯ ಮತ್ತು ಬಿಳಿಮುಕ್ತಿ ತಳಿಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.  ಮಸ್ಸೂರಿ ಭತ್ತದಂತೆ ಉತ್ಕöÈಷ್ಟ ಅಕ್ಕಿಯ ಗುಣ ಹೊಂದಿರುವ ಈ ತಳಿ ೧೩೦ ರಿಂದ ೧೩೫ ದಿನಗಳಲ್ಲಿ ಕಟಾವಿಗೆ ಬರುತ್ತದೆ.  ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು.  ಆಕರ್ಷಕ ಬಣ್ಣ ಹೊಂದಿರುವ ಇದು ಮಧ್ಯಮ ಎತ್ತರದಿಂದ ಕೂಡಿದ್ದು ಅಧಿಕ ಧಾನ್ಯ ಮತ್ತು ಹುಲ್ಲಿನ ಇಳುವರಿ ನೀಡುತ್ತದೆ.  ಉತ್ತಮ ಬೆಳೆಯೊಂದರಿAದ ಎಕರೆಗೆ ೧೮ ರಿಂದ ೨೦ ಕ್ವಿಂಟಾಲ್ ಇಳುವರಿ ಪಡೆಯಬಹುದು.

 3. ಕೆ.ಎಂ.ಪಿ೨೨೦

ಈ ತಳಿಯು ಮಧ್ಯಮಾವಧಿ ತಳಿಯಗಿದ್ದು, ಬಿತ್ತನೆಯಾದ ೧೨೫ ರಿಂದ ೧೩೦ ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-೬) ಜುಲೈ ೧ನೇ ವಾರದಿಂದ ೨ನೇ ವಾರದೊಳಗೆ ಬಿತ್ತಿ, ಆಗಸ್ಟ್ ಮೊದಲನೇ ವಾರದೊಳಗೆ ನಾಟಿ ಮಾಡಲು ಸೂಕ್ತವಾಗಿರುತ್ತದೆ. ಈ ತಳಿಯ ಅಕ್ಕಿಯು ಕೆಂಪು ಬಣ್ಣದಾಗಿದ್ದು, ಕಾಳುಗಳು ಉದ್ದ ಮತ್ತು ದಪ್ಪವಾಗಿದ್ದು, ಜ್ಯೋತಿ ಭತ್ತದ ಕಾಳುಗಳಿಗೆ ಹೆಚ್ಚಾಗಿ ಹೋಲುತ್ತವೆ. ಜ್ಯೋತಿ ಭತ್ತದ ತಳಿಗೆ ಹೋಲಿಸಿದಾಗ ಕೆ.ಎಂ.ಪಿ.-೨೨೦ ತಳಿಯು ಬೆಂಕಿರೋಗಕ್ಕೆ ಸಾಧಾರಣ ನಿರೋಧಕತೆಯನ್ನು ಹೊಂದಿದ್ದು, ಸ್ವಲ್ಪ ಎತ್ತರಕ್ಕೆ ಬೆಳೆಯುವ ಕಾರಣ ಹೆಚ್ಚಿನ ಮೇವಿನ ಹಾಗೂ ಧಾನ್ಯದ ಇಳುವರಿಯನ್ನು ನೀಡುತ್ತದೆ. ಆದ ಕಾರಣ ಬೆಂಕಿರೋಗಕ್ಕೆ ತುತ್ತಾಗುವ ಜ್ಯೋತಿ ತಳಿಯ ಬದಲು ಕೆ.ಎಂ.ಪಿ.-೨೨೦ ತಳಿಯನ್ನು ಬೆಳೆಯಬಹುದಾಗಿದೆ.  ಈ ತಳಿಯು ಪ್ರತಿ ಎಕರೆಗೆ ೨೪-೨೬ ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

4. ಕೆ.ಎಂ.ಪಿ೨೨೫

ಈ ತಳಿಯು ಅಲ್ಪಾವಧಿ ತಳಿಯÁಗಿದ್ದು, ಬಿತ್ತನೆಯಾದ ೧೨೦ ರಿಂದ ೧೨೫ ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-೬) ಜುಲೈ ೩ನೇ ವಾರದಿಂದ ೪ನೇ ವಾರದೊಳಗೆ ಬಿತ್ತಿ, ಆಗಸ್ಟ್ ಕೊನೆಯವರೆಗೆ ನಾಟಿ ಮಾಡಲು ಸೂಕ್ತವಾಗಿರುತ್ತದೆ. ಈ ತಳಿಯ ಕಾಳುಗಳು ಉದ್ದ ಮತ್ತು ದಪ್ಪವಾಗಿದ್ದು, ಐ.ಆರ್.-೬೪ ಭತ್ತದ ಕಾಳುಗಳಿಗೆ ಹೆಚ್ಚಾಗಿ ಹೋಲುತ್ತವೆ. ಐ.ಆರ್.-೬೪ ಭತ್ತದ ತಳಿಗೆ ಹೋಲಿಸಿದಾಗ ಕೆ.ಎಂ.ಪಿ.-೨೨೫ ತಳಿಯು ಎಲೆ ಮತ್ತು ಕುತ್ತಿಗೆ ಬೆಂಕಿರೋಗಕ್ಕೆ ಸಹಿಷ್ಣುತೆೆಯನ್ನು ಹೊಂದಿರುತ್ತದೆ. ಆದ ಕಾರಣ ಬೆಂಕಿರೋಗಕ್ಕೆ ತುತ್ತಾಗುವ ಐ.ಆರ್.-೬೪  ತಳಿಯ ಬದಲು ಕೆ.ಎಂ.ಪಿ.-೨೨೫ ತಳಿಯನ್ನು ಬೆಳೆಯಬಹುದಾಗಿದೆ.  ಈ ತಳಿಯು ಪ್ರತಿ ಎಕರೆಗೆ ೨೪-೨೬ ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.     

5.  ರಕ್ಷಾ (ಕೆ.ಎಂ.ಪಿ-೧೦೫) 

ಮಧ್ಯಮ ಎತ್ತರ ಬೆಳೆಯುವ ಈ ತಳಿಯು ೧೧೦-೧೧೫ ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಇದನ್ನು ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೂ ಮತ್ತು ಬೇಸಿಗೆಯಲ್ಲಿ ಫೆಬ್ರವರಿ ಮೊದಲ ವಾರದವರೆಗೂ ಬಿತ್ತನೆ ಮಾಡಬಹುದು. ಬೆಂಕಿ ರೋಗಕ್ಕೆ ಸಹಿಷ್ಣುತೆ ಹೊಂದಿರುವ ಈ ತಳಿಯ ಕಾಳುಗಳು ಸಣ್ಣದಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ನೀರಾವರಿ ಲಭ್ಯತೆ ಕಡಿಮೆ ಇರುವ ಕಾಲುವೆ ಕೊನೆಭಾಗಗಳು, ಬಾವಿ ನೀರಾವರಿ ಪ್ರದೇಶಗಳು ಹಾಗೂ ಕೆರೆ ಅಚ್ಚು ಕಟ್ಟು ಪ್ರದೇಶಗಳಿಗೆ ಈ ತಳಿಯು ಹೆಚ್ಚು ಅನುಕೂಲ. ಉತ್ತಮ ಬೆಳೆಯೊಂದರಿಂದ ಎಕರೆಗೆ ೧೬-೧೮ ಕ್ವಿಂಟಾಲ್ ಇಳುವರಿ ಪಡೆಯಬಹುದು.

6. ಮುಕ್ತಿ (ಸಿ.ಟಿ.ಹೆಚ್)

ಈ ತಳಿಯ ಕಾಳು ದಪ್ಪವಾಗಿದ್ದು ಅಕ್ಕಿಯು ಕೆಂಪಾಗಿರುತ್ತದೆ.  ೧೨೫ ರಿಂದ ೧೩೦ ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಆಗಸ್ಟ್ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೂ ನಾಟಿ ಮಾಡಬಹುದು.  ಇದು ಎಕರೆಗೆ ೧೨ ರಿಂದ ೧೪ ಕ್ವಿಂಟಾಲ್ ಇಳುವರಿ ನೀಡುತ್ತದೆ.

7. ಬಿಳಿಮುಕ್ತಿ (ಸಿ.ಟಿ.ಹೆಚ್)

ಮುಕ್ತಿ ತಳಿಯಿಂದ ಪುನರಾಯ್ಕೆ ಮಾಡಲ್ಪಟ್ಟಿರುವ ಈ ತಳಿಯು ೧೨೦ ರಿಂದ ೧೨೫ ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ.  ಇದು ಮುಕ್ತಿ ತಳಿಗಿಂತ ಸ್ವಲ್ಪ ಕಡಿಮೆ ಎತ್ತರ ಬೆಳೆಯುತ್ತದೆ.  ಕಾಳು ಮುಕ್ತಿ ಭತ್ತದಂತೆ ದಪ್ಪವಾಗಿರುತ್ತದೆಯಾದರೂ ಅಕ್ಕಿ ಬೆಳ್ಳಗಿರುತ್ತದೆ.  ಆಗಸ್ಟ್ ತಿಂಗಳ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೆ ನಾಟಿ ಮಾಡಬಹುದು.  ಎಕರೆಗೆ ೧೪-೧೬ ಕ್ವಿಂಟಾಲ್ ಗಳವರೆಗೂ ಇಳುವರಿ ಸಾಮರ್ಥ್ಯ ಹೊಂದಿರುವ ಈ ತಳಿಯನ್ನು ತಡವಾದ ಮುಂಗಾರಿನಲ್ಲಿ ಮುಕ್ತಿ ತಳಿಯ ಬದಲಿಗೆ ಉಪಯೋಗಿಸಬಹುದು.

8. ರಾಶಿ :

ರಾಷ್ಟ್ರ ಮಟ್ಟದಲ್ಲಿ ಐ.ಇ.ಟಿ-೧೪೪೪ ಮತ್ತು ಪ್ರಾದೇಶಿಕವಾಗಿ ಭರಣಿ ಎಂಬ ಹೆಸರುಗಳಿಂದ ಪ್ರಸಿದ್ಧಿಯಾಗಿರುವ ಈ ತಳಿಯನ್ನು ಟಿ.ಎನ್-೧ ಮತ್ತು ಸಿಓ-೨೯ ಎಂಬ ತಳಿಗಳ 

ಸಂಕರಣದಿಂದ ಅಭಿವೃದ್ಧಿ ಪಡಿಸಲಾಗಿದೆ.  ೧೨೦ ರಿಂದ ೧೨೫ ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯು ಬರ ನಿರೋಧಕ ಶಕ್ತಿಯನ್ನು ಹೊಂದಿದೆ.  ಆದುದರಿಂದ ನೀರಿನ ತೊಂದರೆ ಇರುವ ಕಾಲುವೆಯ ಕೊನೇ ಪ್ರದೇಶಗಳಿಗೆ ಹಾಗೂ ಪುಣಜಿ ಬೇಸಾಯಕ್ಕೆ ಇದು ಅತ್ಯಂತ ಸೂಕ್ತ ತಳಿ.  ಕಾಳು ಮಧ್ಯಮ ದಪ್ಪವಾಗಿದ್ದು ಎಕರೆಗೆ ೧೬ ರಿಂದ ೧೮ ಕ್ವಿಂಟಾಲ್ ಇಳುವರಿ ಸಾಮರ್ಥ್ಯ ಪಡೆದಿದೆ.

 

ಗುರುತಿಸಿ ಅನುಮೋದನೆಗೊಂಡಿರುವ ಭತ್ತದ ತಳಿಗಳು :

 1. ಬಿ.ಆರ್೨೬೫೫

ಈ ತಳಿಯನ್ನು ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಬಿ.ಆರ್.೨೬೫೫-೯-೧-೨ ಎಂಬ ತಳಿಯೊಂದರಿಂದ ಪುನರಾಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗಿದೆ.  ೧೪೦ ರಿಂದ ೧೪೫ ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುವ ಈ ತಳಿಯ ಸಸಿಮಡಿ ತಯಾರು ಮಾಡಲು ಜೂನ್ ತಿಂಗಳ ಕೊನೆಯ ವಾರ ಅತ್ಯಂತ ಸೂಕ್ತ ಕಾಲ.  ಜಯ ತಳಿಗಿಂತ ಎತ್ತರವಾಗಿ ಬೆಳೆಯುವ ಈ ತಳಿಯು ಗೊನೆ ಬಾಗಿದ ನಂತರವೂ ಕೆಳಗೆ ಬೀಳುವುದಿಲ್ಲ (ಓoಟಿ-ಟoಜಟಿ). ಭತ್ತವು ಮಧ್ಯಮ ವರ್ಗಕ್ಕೆ ಸೇರಿದ್ದು ಗಿರಣಿಯಲ್ಲಿ ಹೆಚ್ಚಿನ ಅಕ್ಕಿಯ ಇಳುವರಿ ನೀಡುತ್ತದೆ.  ಈ ತಳಿಯು ಬೆಂಕಿ ರೋಗಕ್ಕೆ ಸಹಿಷ್ಣುತಾ ಶಕ್ತಿ ಹೊಂದಿದೆ.  ಆದುದರಿಂದ ಪ್ರತಿ ವರ್ಷವೂ ಬೆಂಕಿ ರೋಗ ಕಂಡುಬರುವ ಪ್ರದೇಶಗಳಿಗೆ ಇದು ಅತ್ಯಂತ ಸೂಕ್ತವಾದುದು.  ಉತ್ತಮ ಬೆಳೆಯೊಂದರಿAದ ಎಕರೆಗೆ ೨೪ ರಿಂದ ೨೬ ಕ್ವಿಂಟಾಲ್ ಇಳುವರಿ ಪಡೆಯಬಹುದು.

2.  ಜಯ

ಈ ತಳಿಯು ೧೪೦-೧೪೫ ದಿನಗಳಲ್ಲಿ ಕಟಾವಿಗೆ ಬರುವ ಒಂದು ದೀರ್ಘಾವಧಿ ತಳಿಯಾಗಿರುತ್ತದೆ. ಈ ತಳಿಯು ವ್ಯಾಪಕ ಹೊಂದಾಣಿಕೆಯನ್ನು ಹೊಂದಿದ್ದು, ಒಡೆದ ಅಕ್ಕಿಯು ಉತ್ತಮವಾಗಿರುತ್ತದೆ. ಈ ತಳಿಯು ಎಕರೆಗೆ ಸುಮಾರು ೨೨-೨೪ಕ್ವಿ. ಧಾನ್ಯದ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದೆ.

 3. ಎಂ.ಟಿ.ಯು೧೦೦೧

ವಿಜೇತ ಎಂದು ಕರೆಯಲ್ಪಡುವ ಈ ತಳಿಯೂ ಸಹ ೧೩೦ ರಿಂದ ೧೩೫ ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ.  ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು.  ಮಧ್ಯಮ ಎತ್ತರದ ಈ ತಳಿಯು ಕಂದು ಜಿಗಿ ಹುಳುವಿಗೆ ಸಹಿಷ್ಣತೆ ಹೊಂದಿದೆ.  ಇದರ ಕಾಳು ದಪ್ಪವಾಗಿದ್ದು ಎಕರೆಗೆ ೧೮ ರಿಂದ ೨೦ ಕ್ವಿಂಟಾಲ್ ಇಳುವರಿ ಸಾಮರ್ಥ್ಯ ಹೊಂದಿದೆ.

 4.  ಎಂ.ಟಿ.ಯು೧೦೧೦

ಬಿತ್ತನೆಯಿಂದ ಕೊಯ್ಲಿಗೆ ೧೨೦ ರಿಂದ ೧೨೫ ದಿನಗಳನ್ನು ತೆಗೆದುಕೊಳ್ಳುವ ಈ ತಳಿಯ ಕಾಳುಗಳು ಸಣ್ಣದಾಗಿ ಉದ್ದವಾಗಿರುತ್ತದೆ.  ಸುಮಾರು ಎರಡರಿಂದ ಎರಡುವರೆ ಅಡಿ ಎತ್ತರ ಬೆಳೆಯುವ ಇದು ಕಡಿಮೆ ನೀರಿನ ಲಭ್ಯತೆಯಲ್ಲಿ ಬೆಳೆಯಲು ಹೆಚ್ಚು ಅನುಕೂಲ.  ಭತ್ತವು ಹೆಚ್ಚು ಮಾಗಿದರೆ ಕಾಳು ಉದುರುತ್ತದೆ. ಆದ್ದರಿಂದ ಪ್ರತಿ ಗೊನೆಯ ತಳಭಾಗದ ಕಾಳು ಇನ್ನೂ ಸ್ವಲ್ಪ ಹಸಿರಾಗಿರುವಾಗಲೆ ಕಟಾವು ಮಾಡಬೇಕು.  ಉತ್ತಮ ಬೆಳೆಯೊಂದರಿAದ ಎಕರೆಗೆ ೧೮ ರಿಂದ ೨೦ ಕ್ವಿಂಟಾಲ್ ಇಳುವರಿ ಪಡೆಯಬಹುದು.

5. ಆರ್.ಎನ್.ಆರ್.-೧೫೦೪೮

ಈ ತಳಿಯು ಅಲ್ಪಾವಧಿ ತಳಿಯಗಿದ್ದು, ಬಿತ್ತನೆಯಾದ ೧೨೦ ರಿಂದ ೧೨೫ ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-೬) ಜುಲೈ ೩ನೇ ವಾರದಿಂದ ೪ನೇ ವಾರದೊಳಗೆ ಬಿತ್ತಿ, ಆಗಸ್ಟ್ ಕೊನೆಯವರೆಗೆ ನಾಟಿ ಮಾಡಲು ಸೂಕ್ತವಾಗಿರುತ್ತದೆ. ಈ ತಳಿಯ ಕಾಳುಗಳು ಅತೀ ಸಣ್ಣವಾಗಿದ್ದು ಉತ್ತಮ ಅಡುಗೆಯ ಗುಣಮಟ್ಟವನ್ನು ಹೊಂದಿರುತ್ತದೆ. ವ್ಯಾಪಕ ಹೊಂದಾಣಿಕೆಯಿರುವ ಈ ತಳಿಯ ಧಾನ್ಯಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುತ್ತದೆ. ಈ ತಳಿಯು ಪ್ರತಿ ಎಕರೆಗೆ ೨೪-೨೬ ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

6.ಗಂಗಾವತಿ ಸೋನಾ (ಐಇಟಿ೨೦೫೯೪):

ಈ ತಳಿಯು ೧೩೦-೧೩೫ ದಿನಗಳಲ್ಲಿ ಕಟಾವಿಗೆ ಬರುವ ಒಂದು ಮಧ್ಯಮಾವಧಿ ತಳಿಯಾಗಿರುತ್ತದೆ. ಈ ತಳಿಯು ಅಕ್ಕಿಯು ಉತ್ತಮವಾಗಿರುತ್ತದೆ. ಈ ತಳಿಯು ಎಕರೆಗೆ ಸುಮಾರು ೧೮-೨೦ಕ್ವಿ. ಧಾನ್ಯದ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದೆ.

7. .ಆರ್೩೦೮೬೪

೧೩೦ ರಿಂದ ೧೩೫ ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು.  ಈ ತಳಿಯು ಚೌಳು ನಿರೋಧಕತೆ ಹೊಂದಿರುವುದರಿAದ ಚೌಳು ಭೂಮಿಯಲ್ಲಿ ಬೆಳೆಯಲು ಅತ್ಯಂತ ಸೂಕ್ತವಾಗಿದೆ.  ಇದರ ಕಾಳು ಮಧ್ಯಮ ಸಣ್ಣದಾಗಿದ್ದು ಗಿರಣಿಯಲ್ಲಿ ಉತ್ತಮ ಅಕ್ಕಿಯ ಅಧಿಕ ಇಳುವರಿ ಸಿಗುತ್ತದೆ ಹಾಗೂ ಈ ತಳಿಯ ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ.  ಉತ್ತಮ ಬೆಳೆಯೊಂದರಿಂದ ಎಕರೆಗೆ ೧೮ ರಿಂದ ೨೦ ಕ್ವಿಂಟಾಲ್ ಇಳುವರಿ ಪಡೆಯಬಹುದು.

8.ಜೆ.ಜಿ.ಎಲ್೧೭೯೮:

ಈ ತಳಿಯು ೧೩೦-೧೩೫ ದಿನಗಳಲ್ಲಿ ಕಟಾವಿಗೆ ಬರುವ ಒಂದು ಮಧ್ಯಮಾವಧಿ ತಳಿಯಾಗಿರುತ್ತದೆ. ಈ ತಳಿಯು ಅಕ್ಕಿಯು ಉತ್ತಮವಾಗಿರುತ್ತದೆ. ಈ ತಳಿಯು ಎಕರೆಗೆ ಸುಮಾರು ೨೦-೨೨ಕ್ವಿ. ಧಾನ್ಯದ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದೆ.

 9. .ಆರ್೬೪

ಫಿಲಿಫೈನ್ಸ್ ದೇಶದಲ್ಲಿರುವ ಅಂತಾರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಇದು ಒಂದು ಅಂತಾರಾಷ್ಟ್ರೀಯ ಭತ್ತದ ತಳಿ.  ೧೨೫-೧೩೦ ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯನ್ನು ಮುಂಗಾರು ಹಂಗಾಮಿನಲ್ಲಿ ಜುಲೈ ಎರಡನೇ ವಾರದವರೆಗೂ ಬಿತ್ತನೆ ಮಾಡಬಹುದು.  ಈ ತಳಿಯಕಾಳು ಮಧ್ಯಮ ಗಾತ್ರದಿಂದ ಕೂಡಿದ್ದು ಉದ್ದವಾಗಿರುತ್ತದೆ.  ಈ ತಳಿಗೆ ಬೆಂಕಿ ರೋಗದ ಬಾಧೆ ಕಂಡುಬರುವುದರಿಂದ ರೈತರು ಇದರ ಬಗೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.  ಉತ್ತಮಬೆಳೆಯೊಂದರಿಂದ ಎಕರೆಗೆ ೨೪ ರಿಂದ ೨೬ ಕ್ವಿಂಟಾಲ್‌ಗಳಷ್ಟು ಕಾಳಿನ ಇಳುವರಿ ಪಡೆಯಬಹುದು.

 

 ಅಭಿವೃದ್ಧಿಪಡಿಸಲಾದ ತಾಂತ್ರಿಕತೆಗಳು :

1. ಭತ್ತದ ತಳಿಗಳ ಬೀಜಗಳ ಅನುವಂಶೀಕ ಶುದ್ಧತೆಯನ್ನು ನಿರ್ಧರಿಸಲು ಎಸ್.ಎಸ್.ಎರ್. ಮಾರ್ಕರ್‌ಗಳ ಬಳಕೆ ಮಾಡುವುದು

2. ಮುಸುಕಿನ ಜೋಳದ ತಳಿಗಳ ಬೀಜಗಳ ಮತ್ತು ಅವುಗಳ ಪೋಷಕ ತಳಿಗಳ ಬೀಜಗಳ ಅನುವಂಶೀಕ ಶುದ್ಧತೆಯನ್ನು ನಿರ್ಧರಿಸಲು ಎಸ್.ಎಸ್.ಎರ್. ಮಾರ್ಕರ್‌ಗಳ ಬಳಕೆ ಮಾಡುವುದು

3. ಮುಸುಕಿನ ಜೋಳದ ತಳಿಗಳ ಬೀಜಗಳಲ್ಲಿ ಬೀಜದಿಂದ ಹರಡುವ ರೋಗಕಾರಗಳನ್ನು ಪಿ.ಸಿ.ಆರ್.ಆಧಾರಿತದಿಂದ ಪತ್ತೆ ಹಚ್ಚುವುದು

4.ನಾಟಿ ಭತ್ತದಲ್ಲಿ ಸಮರ್ಥ ಕಳೆಗಳ ನಿರ್ವಹಣೆಗಾಗಿ ಬೆನ್ಸಲ್ಫೂರಾನ್ ಮೀಥೈಲ್ (೦.೬%) + ಪ್ರಿಟಿಲಾಕ್ಲೋರ್ (೬.೬% ಜಿ.) ೧೦ ಕೆ.ಜಿ./ಹೆಕ್ಟೇರ್ ಅನ್ನು ಉದಯ ಪೂರ್ವ ಕಳೆನಾಶಕವಾಗಿ ಬಳಸಲು ಶಿಫಾರಸ್ಸು ಮಾಡಲಾಗಿದೆ

5.ಉದಯೋತ್ತರ ಕಳೆ ನಿರ್ವಹಣೆಗಾಗಿ ನಾಟಿ ಮಾಡಿದ ೧೨ ರಿಂದ ೧೫ ದಿನಗಳ ನಂತರ ಬಿಸ್ಪೆರಿಬಾಕ್ ಸೋಡಿಯಂ (೧೦% ಎಸ್.ಸಿ.) @ ೨೫೦ ಮಿ.ಲೀ./ಹೆಕ್ಟೇರ್‌ಗೆ ಕಳೆನಾಶಕವನ್ನು ಬಳಸಲು ಶಿಫಾರಸ್ಸು ಮಾಡಲಾಗಿದೆ

6. ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶ ಮತ್ತು ಇತರೆ ನೀರಾವರಿ ಮೈದಾನ ಪ್ರದೇಶದಲ್ಲಿ ಬೆಳೆಯುವ ಹೈಬ್ರೀಡ್ ಭತ್ತದ ತಳಿಗಳಲ್ಲಿ ಸುಸ್ಥಿರ ಉತ್ಪಾದನೆಯನ್ನು ಹೆಚ್ಚಿಸಲು ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಪ್ರಮಾಣವನ್ನು ೧೨೦:೬೦:೬೦ ಸಾ.ರಂ.ಪೊ. ಕೆ.ಜಿ./ ಹೆಕ್ಟೇರ್‌ಗೆ ಮಾರ್ಪಡಿಸಲಾಗಿದೆ

7. ಶ್ರೀ ಪದ್ದತಿಯಲ್ಲಿ ೮ ರಿಂದ ೧೨ ದಿನಗಳ ವಯಸ್ಸಿನ ಭತ್ತದ ಸಸಿಗಳನ್ನು ನಾಟಿ ಮಾಡುವುದರ ಜೊತೆಗೆ ಬೆಳವಣಿಗೆಯ ಹಂತದಲ್ಲಿ ನಾಲ್ಕು ಬಾರಿ ಕೋನೋವೀಡರ್‌ನಿಂದ ಅಂತರ ಬೇಸಾಯ ಮಾಡುವುದರಿಂದ ಅಧಿಕ ಭತ್ತದ ಧಾನ್ಯದ ಇಳುವರಿಯನ್ನು ಪಡೆಯಲು ಪರಿಣಾಮಕಾರಿಯಾಗಿದೆ

8. ಏರೋಬಿಕ್ ಭತ್ತದ ಪದ್ದತಿಗೆ ಸಾರಜನಕದ ಪ್ರಮಾಣ ೧೦೦ ಕೆ.ಜಿ ಮುಂಗಾರು ಹಾಗೂ ೧೨೫ ಕೆ.ಜಿ / ಹೆಕ್ಟೇರ್ ಬೇಸಿಗೆ ಬೆಳೆಗೆ ಶಿಫಾರಸ್ಸಿನೊಂದಿಗೆ ಉದಯ ಪೂರ್ವ ಕಳೆನಾಶಕ ಅಥವಾ ಭತ್ತ ಮತ್ತು ಚಂಬೆ (೧:೧) ಅಂತರ ಬೆಳೆ ಪದ್ದತಿ+ ಒಂದು ಬಾರಿ ಕೈ ಕಳೆ ಅಥವಾ ನಾಟಿ ಮಾಡಿದ ೩೫ ದಿನಗಳ ನಂತರ ಉದಯೋತ್ತರ ಕಳೆನಾಶಕವಾಗಿ ೨,೪-ಡಿ ಸೋಡಿಯಂ ಲವಣವನ್ನು ೧.೦ ಕೆ.ಜಿ./ಹೆ. ಗೆ ಬಳಸುವ ವಿಧಾನವು ಪರಿಣಾಮಕಾರಿಯಾಗಿದೆ

9.ನಾಟಿ ಭತ್ತದ ಪದ್ದತಿಗೆ ಬೇಕಾಗುವ ಬಿತ್ತನೆ ಬೀಜದ ಪ್ರಮಾಣವನ್ನು ಬೀಜದ ಗಾತ್ರದ ಆಧಾರದ ಮೇಲೆೆ ೬೫, ೫೬ ಮತ್ತು ೩೬ ಕೆ.ಜಿ/ಹೆ., ದಪ್ಪ, ಮಧ್ಯಮ ಮತ್ತು ಸಣ್ಣ ಬೀಜಗಳಿಗೆ ಅನುಕ್ರಮವಾಗಿ ಹಳೆಯ ೬೨ ಕೆ.ಜಿ./ಹೆ. ಬಿತ್ತನೆ ಬೀಜದ ಬದಲಾಗಿ ಮರುಮೌಲ್ಯಮಾಪನ ಮಾಡಲಾಗಿದೆ

10.ಕೆಸರು ಮತ್ತು ಒಣ ಸಸಿಮಡಿಗಳಲ್ಲಿ ಕಳೆಗಳನ್ನುನಿರ್ವಹಣೆ ಮಾಡಲು ಉದಯ ಪೂರ್ವ ಕಳೆನಾಶಕವಾಗಿ ಬುಟಾಕ್ಲೋರ್ ೫೦ ಇ.ಸಿ. @ ೨೫೦೦ ಮಿ.ಲೀ./ಹೆ. ಅಥವಾ ಪೈರಜೋಸಲ್ಫೂರಾನ್ ಈಥೈಲ್ ೧೦ ಡಬ್ಲೂ.ಪಿ.@ ೨೫೦ ಗ್ರಾಂ/ಹೆ. ಅಥವಾ ಬೆನ್ಸಲ್ಫೂಯರಾನ್ಮೀ ಥೈಲ್ (೬೦.ಗ್ರಾಂ) + ಪ್ರಿಟಿಲಾಕ್ಲೋರ್ ೬೦೦ ಗ್ರಾಂ ಎ.ಐ./ಹೆ (೬೬ ಜಿ.) @ ೧೦ ಕೆ.ಜಿ./ಹೆಕ್ಟೇರ್ ಅಥವಾ ಪ್ರಿಟಿಲಾಕ್ಲೋರ್ ೫೦ ಇ.ಸಿ. + ಸೇಫ್ನರ್ @ ೬೦೦ ಮಿ.ಲೀ. /ಹೆ. ಬಿತ್ತನೆ ಮಾಡಿದ ಮೂರು ದಿನಗಳ ಒಳಗೆ ಬಳಸುವುದರಿಂದ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಾ ಮಾಡುವುದಕ್ಕೆ ಶಿಫಾರಸ್ಸು ಮಾಡಲಾಗಿದೆ

11. ನಾಟಿ ಭತ್ತದ ಪದ್ಧತಿಯಲ್ಲಿ ಕೈಯಿಂದ ನಾಟಿ ಮಾಡುವ ಪದ್ದತಿಗೆ ಬದಲಿಗೆ ಯಾಂತ್ರೀಕೃತ ನಾಟಿ ಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ಭತ್ತದ ಧಾನ್ಯದ ಇಳುವರಿಯಲ್ಲಿ ಶೇಕಡ ೧೫ ರಿಂದ ೨೦ರಷ್ಟು ಏರಿಕೆಯಾಗುವುದರ ಜೊತೆಗೆ ನಾಟಿ ಮಾಡಲು ಬೇಕಾಗುವ ವೆಚ್ಚದಲ್ಲಿ ರೂ.೨೦೦೦/ಹೆ. ನಷ್ಟು ಉಳಿತಾಯವಾಗಿರುವುದು ಕಂಡುಬAದಿದೆ

12. ಶ್ರೀ ಪದ್ದತಿ, ಯಾಂತ್ರೀಕೃತ ಶ್ರೀ ಪದ್ದತಿ ಹಾಗೂ ಶ್ರೀ ಪದ್ದತಿಯಲ್ಲಿ ನರ್ಸರಿ ವಿಧಾನಗಳಿಗಾಗಿ ಕೃಷಿ ತಂತ್ರಜ್ಞಾನಗಳನ್ನು ಪ್ರಮಾಣೀಕರಿಸಲಾಗಿದೆ

13. ನಾಟಿ ಭತ್ತದ ಪದ್ದತಿಯಲ್ಲಿ, ನೀರು ಹಾಯಿಸುವ ಮತ್ತು ಒಣಗಿಸುವ ನೀರಾವರಿ ವಿಧಾನವನ್ನು (೫ ಸೆಂ.ಮೀ. ಎತ್ತರದವರೆಗೆ ಪ್ರತಿ ೪ ರಿಂದ ೫ ದಿನಕ್ಕೊಮ್ಮೆ) ಅಳವಡಿಸಿಕೊಳ್ಳುವುದರಿಂದ ಅಧಿಕ ಧಾನ್ಯದ ಇಳುವರಿ (೫.೭೪ ಟನ್/ಹೆ.) ಮತ್ತು ನೀರಿನ ಬಳಕೆ ದಕ್ಷತೆ (೪.೯೨ ಕೆ.ಜಿ./ಹೆ.ಮಿ.ಮೀ.)ಯನ್ನು ಬೆಳೆಯ ಬೆಳವಣಿಗೆಯ ಉದ್ದಕ್ಕೂ ೩ ± ೨ ಸೆಂ.ಮೀ. ನಷ್ಟು ನೀರು ನಿಲ್ಲಿಸುವ ವಿಧಾನಕ್ಕೆ ಹೋಲಿಸಿದರೆ ಕಂಡುಬAದಿರುತ್ತದೆ (೫.೩೭ ಟನ್/ಹೆ. ಮತ್ತು ೨.೯೦ ಕೆ.ಜಿ./ಹೆ. ಮಿ.ಮಿ., ಅನುಕ್ರಮವಾಗಿ)

14. ಡ್ರಮ್ ಸೀಡರ್‌ಭತ್ತದ ಪದ್ದತಿಯಲ್ಲಿ,ಉದಯ ಪೂರ್ವ ಕಳೆನಾಶಕವಾಗಿ ಬೆನ್ಸಲ್ಫೂö್ಯರಾನ್ ಮೀಥೈಲ್ (೦.೬% ಜಿ.) ೬೦.ಗ್ರಾಂ + ಪ್ರಿಟಿಲಾಕ್ಲೋರ್ (೬% ಜಿ.) @ ೬೦೦ ಗ್ರಾಂ ಎ.ಐ./ಹೆ ಸಂಯೋಜಿತ ಉತ್ಪನ್ನವನ್ನು (೧೦ ಕೆ.ಜಿ./ಹೆಕ್ಟೇರ್) ಬಿತ್ತನೆ ಮಾಡಿದ ೫ನೇ ದಿನದಲ್ಲಿ ಬಳಸುವುದರಿಂದ ಅಧಿಕ ಧಾನ್ಯದ ಇಳುವರಿಯನ್ನು ಪಡೆಯುವುದರ ಜೊತೆಗೆ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಬಹುದಾಗಿದೆ

15. ಕೆಸರು ಮತ್ತು ಒಣ ಸಸಿಮಡಿಗಳಲ್ಲಿ ಉದಯೋತ್ತರ ಕಳೆಗಳ ನಿರ್ವಹಣೆಗಾಗಿ ಬಿಸ್ಪೆರಿಬಾಕ್ ಸೋಡಿಯಂ (೧೦% ಎಸ್.ಸಿ.) @೮ ಮಿ.ಲೀ./೩ ಗುಂಟೆಗೆ ೧೫ ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಬಿತ್ತನೆ ಮಾಡಿದ ೧೦ ರಿಂದ ೧೨ನೇ ದಿನದಲ್ಲಿ ಸಿಂಪಡಿಸುವುದರಿಂದ ಹೆಚ್ಚಿನ ಕಳೆ ನಿಯಂತ್ರಣೆ ದಕ್ಷತೆ ಹಾಗೂ ಕಡಿಮೆ ಕಳೆನಿಯಂತ್ರಣೆ ಖರ್ಚು ರೈತರ ಪದ್ಧತಿಗೆ ಹೋಲಿಕೆ ಮಾಡಿದಾಗ ಕಂಡು ಬಂದಿರುತ್ತದೆ

16. ಜೈವಿಕ ಸೂಕ್ಷ÷್ಣ ಜೀವಾಣುಗಳ ಸಮೂಹ (ಅಜೋಸ್ಪೆರಿಲಮ್+ ಬ್ಯಾಸಿಲಸ್ + ಸ್ಯೂಡೋಮೊನಾಸ್ + ಟ್ರೆಕೋಡರ್ಮಾ) @ ೫.೦ ಕೆ.ಜಿ./ಹೆ. ನ್ನು ನಾಟಿ ಮಾಡಿದ ೮ ರಿಂದ ೧೦ ದಿನಗಳ ನಂತರ ಬಳಸುವುದರಿಂದ ಭತ್ತದ ಸಸ್ಯಗಳ ಬೆಳವಣಿಗೆಯನ್ನುಪ್ರಚೋದಿಸುವ ರೈಜೋ-ಬ್ಯಾಕ್ಟೀರಿಯಾವಾಗಿ ಕೆಲಸ ನಿರ್ವಹಿಸಿ ಅಧಿಕ ಧಾನ್ಯದ ಇಳುವರಿ ಪಡೆಯುವುದರ ಜೊತೆಗೆ ವಾತಾವರಣದ ಸಾರಜನಕವನ್ನು ಸಹಜೀವನವಿಲ್ಲದೆ ಮಣ್ಣಿನಲ್ಲಿ ಸ್ಥಿರಿಕರಿಸಲು ಶಿಫಾರಸ್ಸು ಮಾಡಲಾಗಿದೆ

17. ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಆಧಾರಿತ ಬೆಳೆ ಪದ್ದತಿಯ ಸುಸ್ಥಿರತೆಗಾಗಿ ಭತ್ತ-ಬೇಳೆಕಾಳು ಬೆಳೆ ಪದ್ದತಿಯಲ್ಲಿ ಮಳೆಗಾಲದ ಭತ್ತದ ನಂತರ – ಅಲಸಂದೆ/ ಅವರೆಕಾಯಿ ಬೆಳೆಗಳನ್ನು ಚಳಿಗಾಲ ಅಥವಾ ಬೇಸಿಗೆ ಹಂಗಾಮಿನಲ್ಲಿ ಅನುಸರಿಸಲು ಶಿಫಾರಸ್ಸು ಮಾಡಲಾಗಿದೆ

18. ಭತ್ತದ ಎಲೆ ಕವಚ ಕೊಳೆರೋಗದ ನಿರ್ವಹಣೆ:ರೋಗದ ಲಕ್ಷಣ ಕಂಡ ತಕ್ಷಣ ಥೈಫ್ಲೂಜಮೈಡ್ ೨೪ ಎಸ್‌ಸಿ(೧ಮೀಲಿ/ಲೀ) ಅನ್ನು ಸಿಂಪರಣೆ ಮಾಡುವುದು ಮತ್ತು ಅಗತ್ಯವಿದ್ದಲ್ಲಿ ೧೫ ದಿನದ ಅಂತರದಲ್ಲಿ ಸಿಂಪರಣೆ ಮಾಡುವುದು

19.ಭತ್ತದ ಎಲೆ ಕವಚ ಕೊಳೆರೋಗ ಮತ್ತು ಕುತ್ತಿಗೆ ಬೆಂಕಿರೋಗದ ನಿರ್ವಹಣೆ:  ಟ್ರೆಪ್ಲಾಕ್ಸಿಸ್ಟೊಬಿನ್ ೨೫% + ಟಬುಕೋನಜೊಲ್ ಶೇ೫೦ ರಷ್ಟು ( ನೇಟಿವೋ ಡಬ್ಲೂಯಪಿಶೇ ೭೫ ರಷ್ಟು) ( ೦.೪ಗ್ರಾ/ಲೀ)  ಅನ್ನು ರೋಗದ ಲಕ್ಷಣ ಕಂಡ ತಕ್ಷಣ  ಹಾಗೂ ತೆನೆ ಹೊರಹೊಮ್ಮುವಿಕೆಯ ಹಂತದಲ್ಲಿ ಸಿಂಪರಣೆ ಮಾಡುವುದು

20. ಭತ್ತದ ಎಲೆ ಕವಚ ಕೊಳೆರೋಗದ ನಿರ್ವಹಣೆ:ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಕಾರ್ಬೇಂಡಜಿಮ್ ಶೇ೨೫ + ಪ್ಲೂಸಿಲಾಜೋಲ್ ಶೇ೧೨.೫ ರಷ್ಟು ಎಸ್‌ಇ (ಎನ್ ಎಸ್) @ ೯೬೦ಮಿಲಿ/ಹೆ ಸಿಂಪರಣೆ ಮಾಡುವುದು.ಮತ್ತು ಅಗತ್ಯವಿದ್ದಲ್ಲಿ ೧೫ ದಿನದ ಅಂತರದಲ್ಲಿ ಸಿಂಪರಣೆ ಮಾಡುವುದು

21. ಭತ್ತದ ಎಲೆ ಕವಚ ಕೊಳೆರೋಗದ ನಿರ್ವಹಣೆ: ನಾಟಿ ಮಾಡುವ ಮೊದಲು ಪ್ರತಿ ಲೀಟರ್ ನೀರಿಗೆ ೧೦ ಮಿ.ಲಿ. ಸ್ಯೂಡೋಮೊನಾಸ್ ಫ್ಲೋರೋಸೆನ್ಸ್ ಅನ್ನು ಬೆರೆಸಿ ಪೈರನ್ನು ೩೦ ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು ಮತ್ತು ನಾಟಿ ಮಾಡಿದ ೪೫ ರಿಂದ ೫೫ ದಿನಗಳ ನಂತರ ಪ್ರತಿ ಹೆಕ್ಟೇರ್‌ಗೆ ೨.೫೦ ಲೀಟರ್‌ನಂತೆ ಸಿಂಪರಣೆ ಮಾಡುವುದು

22. ಬೀಜೋಪಚಾರದ ಮೂಲಕ ನರ್ಸರಿಯಲ್ಲಿ ಭತ್ತದ ಬೆಂಕಿರೋಗದ ನಿರ್ವಹಣೆ: ಭತ್ತದ ನರ್ಸರಿಯಲ್ಲಿ ಬೆಂಕಿರೋಗ ಮತ್ತು ಕಂದುಚುಕ್ಕೆರೋಗಗಳ ನಿರ್ವಹಣೆಗಾಗಿ ೨೫ಕೆಜಿ ಬಿತ್ತನೆ  ಬೀಜಗಳನ್ನು ೨೫ ಲೀಟರ್ ಶಿಲೀಂಧ್ರನಾಶಕ ದ್ರಾವಣದಲ್ಲಿ (ಕಾರ್ಬೇಂಡಜಿಮ್ ೫೦ ಡಬ್ಲೂಪಿ  ಅಥವಾ ಟ್ರೆಸೈಕ್ಲಾಜೊಲ್ ೭೫ ಡಬ್ಲೂಯಪಿ ೩ಗ್ರಾಂ/ಲೀ ಅಥವಾ ಕಾರ್ಬೇಂಡಜಿಮ್ ೨೫% ಮ್ಯಾಂಕೋಜೆಬ್ ೫೦ ಡಬ್ಲೂಯ ಪಿ೪ಗ್ರಾಂ/ಲಿ) ೧೨ ಗಂಟೆವರೆಗೆ ನೆನೆಸುವುದು ಮತ್ತು ಬೀಜಗಳು ಮೊಳಕೆಯೊಡೆಯುವವರೆಗೆ ೨೪ ರಿಂದ ೪೮ ಗಂಟೆಗಳವರೆಗೆ ಒದ್ದೆಯಾದ ಗೋಣಿ ಚೀಲದಲ್ಲಿ ಸುತ್ತಿಡುವುದು

23.. ಬೀಜೋಪಚಾರ : ಟೆಬುಕೋನಜೊಲ್  ಶೇ ೫೦ ಅಥವಾ ಟ್ರೆಫ್ಲೋಕ್ಸಿಸ್ಟೊಬಿನ್ ಶೇ ೨೫ ರಷ್ಟು ಡಬ್ಲೂಯ/ ಡಬ್ಲೂಯ ಡಬ್ಲೂಯಜಿ ( ೭೫ ಡಬ್ಲೂಯಜಿ) ೦.೫ ಗ್ರಾಂ/ಕೆಜಿ (೧ ಲೀಟರ್ ನೀರಿನಲ್ಲಿ ತಯಾರಿಸಿದ ಶಿಲೀಂಧ್ರನಾಶಕ ದ್ರಾವಣ) ಒಣ ಅಥವಾ ಆರ್ದ್ರ ವಿಧಾನವನ್ನು ಅನುಸರಿಸುವ ಮೂಲಕ ಬೀಜದಿಂದ ಹರಡುವ ರೋಗದ ನಿರ್ವಹಣೆ ಭತ್ತದ ನರ್ಸರಿಯಲ್ಲಿ  ಬೆಂಕಿರೋಗ ಮತ್ತು ಕಂದುಚುಕ್ಕೆರೋಗದ ಪರಿಣಾಮಕಾರೊಯಾಗಿ ನಿರ್ವಹ. ಮಾಡುವುದು

24. ನಾಟಿ ಮಾಡುವ ಮೊದಲುಪ್ರತಿ ಲೀಟರ್ ನೀರಿಗೆ ೧೦ ಮಿ.ಲಿ. ಜೈವಿಕ ಜೀವಾಣುವಾದ ಸ್ಯೂಡೋಮೊನಾಸ್ ಫ್ಲೋರೋಸೆನ್ಸ್ ಅನ್ನು ಬೆರೆಸಿ ಪೈರನ್ನು ೩೦ ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು ಮತ್ತು ನಾಟಿ ಮಾಡಿದ ೪೫ ರಿಂದ ೫೫ ದಿನಗಳ ನಂತರ ಪ್ರತಿ ಹೆಕ್ಟೇರ್‌ಗೆ ೨.೫೦ ಲೀಟರ್‌ನಂತೆ ಸಿಂಪರಣೆ ಮಾಡುವುದು

25. ಭತ್ತದ ಸಸಿಮಡಿಯಲ್ಲಿ ಬೆಂಕಿರೋಗ ಹಾಗೂ ಕಂದುಚುಕ್ಕೆರೋಗದ ನಿರ್ವಹಣೆ: ಟೆಬುಕೊನಜೋಲ್ ೫೦% + ಟ್ರೆಪ್ಲೋಕ್ಸಿಸ್ಟೊಬಿನ್ ೨೫% (೭೫ ಡಬ್ಲೂಯಜಿ) ೦.೫ ಗ್ರಾಂ/ ಕೆಜಿ (೧ ಲೀಟರ್ ಶಿಲೀಂಧ್ರನಾಶಕದ ದ್ರಾವಣ) ಆಥವಾ ೦.೫ಗ್ರಾಂ/ಲೀ. ನಿಂದ ಬೀಜೋಪಚಾರ ಮಾಡುವುದು ನಂತರ ಒಣ ಆಥವಾ ಅರ್ದ್ರ ವಿಧಾನವನ್ನು ಅನುಸರಿಸುವುದರಿಂದ ಭತ್ತದ ನರ್ಸರಿಯಲ್ಲಿ ಬೆಂಕಿರೋಗ ಹಾಗೂ ಕಂದುಚುಕ್ಕೆರೋಗಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದಾಗಿದೆ

26. ಭತ್ತದ ಎಲೆ ಕವಚ ಕೊಳೆರೋಗ ಮತ್ತು ಕುತ್ತಿಗೆ ಬೆಂಕಿರೋಗದ ನಿರ್ವಹಣೆ: ಟ್ರೆಸೈಕ್ಲೋಜೊಲ್  ೪೫% ಹೆಕ್ಸಾಕೋನಾಜೋಲ್ ಶೇ೫೦ ರಷ್ಟು (೦.೪ಗ್ರಾ/ಲೀ) ಅನ್ನು ರೋಗದ ಲಕ್ಷಣ ಕಂಡ ತಕ್ಷಣ ಹಾಗೂ ತೆನೆ ಹೊರಹೊಮ್ಮುವಿಕೆಯ ಹಂತದಲ್ಲಿ ಸಿಂಪರಣೆ ಮಾಡುವುದು

27. ಭತ್ತದಲ್ಲಿ ಕಂದುಚುಕ್ಕೆ ರೋಗದ ನಿರ್ವಹಣೆ: ಹೆಕ್ಸಾಕೋನಾಜೋಲ್ ೫% ಎಸ್ ಸಿ ( ೦.೪ಗ್ರಾ/ಲೀ)  ಅನ್ನು ರೋಗದ ಲಕ್ಷಣ ಕಂಡ ತಕ್ಷಣ ಸಿಂಪರಣೆ ಮಾಡುವುದು ಮತ್ತು ಅಗತ್ಯವಿದಲ್ಲಿ ೧೫ ದಿನದ ಅಂತರದಲ್ಲಿ ಸಿಂಪರಣೆ ಮಾಡುವುದು

26.  ಭತ್ತದಲ್ಲಿ ಎಲೆಬೆಂಕಿ ರೋಗದ ನಿರ್ವಹಣೆ: ಟ್ರೆಸೈಕ್ಲೋಜೊಲ್  ೭೫ ಡಬ್ಲೂಯಪಿ + ಸೀ ವೀಡ್ ರಸಸಾರವನ್ನು ಎಲ್‌ಬಿಡಿ (೦.೪ಗ್ರಾಂ+ ೨ಮಿಲೀ) ಎಲೆ ಸ್ಪೋಟದ ಲಕ್ಷಣಗಳು ಕಂಡಬಂದ ತಕ್ಷಣ ಮತ್ತು ಅಗತ್ಯವಿದ್ದರೆ ೧೫ ದಿನಗಳ ಅಂತರದಲ್ಲಿ ಸಿಂಪಡಿಸುವುದು

27. ಭತ್ತದಲ್ಲಿ ದುಂಡಾಣು ಅಂಗಮಾರಿ ರೋಗದ ನಿರ್ವಹಣೆ: ನಾಟಿ ಮಾಡುವ ಮೊದಲು ಪ್ರತಿ ಲೀಟರ್ ನೀರಿನಲ್ಲಿ೦.೫ ಗ್ರಾಂ ಸ್ಟೆಪ್ಟೊಸೈಕ್ಲಿನ್ + ೧ಗ್ರಾಂ ಕಾಪರ್ ಆಕ್ಸಿ ಕ್ಲೋರೆಡ್ ಅನ್ನು ಬೆರೆಸಿದ ದ್ರಾವಣದಲ್ಲಿ ಬಿತ್ತನೆ ಬೀಜವನ್ನು ರಾತ್ರಿಯಿಡಿ ನೆನೆಸಿ ಬೀಜೋಪಚಾರ ಮಾಡುವುದು. ಇದರ ಜೊತೆಗೆ ೦.೨ ಗ್ರಾಂ ಸ್ಟೆçಪ್ಟೊಸೈಕ್ಲಿನ್ + ೧ಗ್ರಾಂ ಕಾಪರ್ ಆಕ್ಸಿ ಕ್ಲೋರೆಡ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು

28. ಭತ್ತದ ಹಳದಿ ಕಾಂಡ ಕೊರಕ ಕೀಟದ {Scirpophaga incertulas (Walker)} ನಿರ್ವಹಣೆಗಾಗಿ ಕ್ಲೋರಂಟ್ರಾನಿಲಿಪ್ರೋಲ್ ೦.೪ % ಜಿ.ಆರ್. ಅನ್ನು ಬಳಸುವುದು

29.ಇಂಡಾ ಕ್ಸಕಾರ್ಬ್ ೧೪.೫% ಎಸ್.ಸಿ. @ ೦.೫ ಮಿಲಿ/ಲೀಟರ್ ಕೀಟನಾಶಕ ಸಿಂಪಡಣೆಯಿAದ ಭತ್ತದ ಗರಿ ಸುತ್ತುವ ಪೀಡೆಯ ನಿರ್ವಹಣೆ

30. ಪ್ಲೂಬೆಂಡಿಅಮೈಡ್ ೪೮೦ ಎಸ್.ಸಿ. @ ೦.೧ ಮಿಲಿ/ಲೀಟರ್ ಅಥವಾ ಪ್ಲೂಬೆಂಡಿಅಮೈಡ್ ೨೦% ಡಬ್ಲೂಯ.ಡಿ.ಜಿ. @ ೦.೨ ಗ್ರಾಂ/ಲೀಟರ್ ಕೀಟನಾಶಕದ ಸಿಂಪಡಣೆಯಿಂದ ಭತ್ತದ ಹಳದಿ ಕಾಂಡಕೊರಕ ಮತ್ತು ಗರಿ ಸುತ್ತುವ ಪೀಡೆಯ ನಿರ್ವಹಗೆ .

31. ಬಪ್ರೋಫೆಜಿನ್ ೨೫% ಎಸ್.ಸಿ. @ ೧.೪ ಮಿಲಿ/ಲೀಟರ್ ಕೀಟನಾಶಕದ ಸಿಂಪಡಣೆಯಿಂದ ಭತ್ತದ ಕಂದು ಜಿಗಿಹುಳುವಿನ ನಿರ್ವಹಣೆ

32. ಭತ್ತದ ಕಂದು ಜಿಗಿಹುಳುವಿನ ನಿರ್ವಹಣೆಗಾಗಿ ಟ್ರೆಫ್ಲೊಮೆಜೋಪೈರಿಮ್ ೧೦% ಎಸ್.ಸಿ. @ ೦.೪೦ ಮಿಲಿ/ಲೀಟರ್ ಕೀಟನಾಶಕವನ್ನು ಸಿಂಪಡಿಸುವುದು

33. ಭತ್ತದ ತೆನೆ ತಿಗಣೆಯ ನಿರ್ವಹಣೆಗಾಗಿ ಫಿಪ್ರೋನಿಲ್ ೫% ಎಸ್.ಸಿ. @ ೨.೦೦ ಮಿಲಿ/ಲೀಟರ್ ಅಥವಾ ಥಯಾಮೆಥಾಕ್ಸಾಂ ೨೫% ಡಬ್ಲೂ.ಜಿ. @ ೦.೩೦ ಗ್ರಾಂ/ಲೀಟರ್ ಕೀಟನಾಶಕವನ್ನು ಸಿಂಪಡಿಸುವುದು

34.ನಾಟಿ ಭತ್ತದಲ್ಲಿ ಅಧಿಕ ದಕ್ಷತೆಗಾಗಿ ಪೋಟಾಷ್ ಬಳಕೆಯನ್ನು ಶೇಕಡ ೫೦ ಭಾಗ ನಾಟಿ ಸಮಯದಲ್ಲಿ ಮತ್ತು ಉಳಿದ ಶೇ. ೫೦ ಭಾಗ  ತೆನೆ ಕಟ್ಟುವ ಹಂತದಲ್ಲಿ ಬಳಸಲು ಶಿಫಾರಸ್ಸು ಮಾಡಲಾಗಿದೆ

35. ನಾಟಿ ಭತ್ತಕ್ಕೆ ೨೦ ಕೆ.ಜಿ./ಹೆ. ಸಲ್ಫರ್‌ನ್ನು ನಾಟಿ ಸಮಯದಲ್ಲಿ ಬಳಸುವುದಕ್ಕೆ ಶಿಫಾರಸ್ಸು ಮಾಡಲಾಗಿದೆ

36. ಕ್ಷಾರ ಮಣ್ಣಿನ ಭತ್ತದ ಗದ್ದೆಗೆ ಜಿಂಕ್ ಸಲ್ಪೇಟ್ ೪೦ ಕೆ.ಜಿ./ಹೆ.ಗೆಬಳಸಲುಶಿಫಾರಸ್ಸು ಮಾಡಲಾಗಿದೆ

37. ಕ್ಷಾರ ಮಣ್ಣು ನಿರ್ವಹಣೆಗಾಗಿ ಕಲ್ಲು ಮತ್ತು ಕೊಳವೆಯಿಂದ ಮಾಡಿದ ಬಸಿಕಾಲುವೆಯನ್ನು ಶಿಫಾರಸ್ಸು ಮಾಡಲಾಗಿದೆ

38. ಭತ್ತದ ಗದ್ದೆಯಲ್ಲಿ ಶೇಕರಣೆಯಾದ ರಂಜಕವನ್ನುಬಳಸಿಕೊಳ್ಳಲು ರಂಜಕ ಕರಗಿಸುವ ಸೂಕ್ಷ ಜೀವಿಗಳ ಗೊಬ್ಬರ @೮೦೦ ಗ್ರಾಂ. ಪ್ರತಿ ಎಕರೆಗೆ ಬಳಕೆ ಮಾಡಲು ಶಿಫಾರಸ್ಸು ಮಾಡಲಾಗಿದೆ

39. ಭತ್ತದಲ್ಲಿನ ಕ್ಷಾರ ಮಣ್ಣಿನ ಸುಧಾರಕವಾಗಿ ಸಕ್ಕರೆ ಕಾರ್ಖಾನೆಯ ಗಂಕಯುಕ್ತ ಮಡ್ಡಿಗೊಬ್ಬರವನ್ನು೧೫ ಟ/ಹೆ.ಬಳಸಲು ಶಿಫಾರಸ್ಸು ಮಾಡಲಾಗಿದೆ

ಪ್ರಶಸ್ತಿಗಳು/ ಗುರುತಿಸುವಿಕೆ :

· ಅತ್ಯುತ್ತಮ AICRP – ಅಗ್ರೋನಮಿ ಸೆಂಟರ್ ಪ್ರಶಸ್ತಿಯನ್ನು ICAR -ಭಾರತೀಯ ಭತ್ತ ಸಂಶೋಧನಾ ಸಂಸ್ಥೆ, ಹೈದರಾಬಾದ್‌ನಿಂದ ೨೦೧೧-೧೨ನೇ ಸಾಲಿನಲ್ಲಿ ಪಡೆದುಕೊಂಡಿದೆ

· ಸುವರ್ಣ ಮಹೋತ್ಸವ ಅತ್ಯುತ್ತಮ ಪ್ರಶಸ್ತಿಯನ್ನು AICRIP ಮಣ್ಣು ವಿಜ್ಞಾನ ವಿಭಾಗಕ್ಕೆ ೨೦೧೪ನೇ ಸಾಲಿನಲಿè ICAR -ಭಾರತೀಯ ಭತ್ತ ಸಂಶೋಧನಾ ಸಂಸ್ಥೆ, ಹೈದರಾಬಾದ್‌ನಿಂದ ಪಡೆದುಕೊಂಡಿದೆ

· ಡಾ. ಆರ್. ಕೃಷ್ಣಮೂರ್ತಿ ರವರೆಗೆ ಅತ್ಯುತ್ತಮ ಭತ್ತದ ಮಣ್ಣು ವಿಜ್ಞಾನಿ ಪ್ರಶಸ್ತಿಯನ್ನು ೨೦೧೫ರಲ್ಲಿ ICAR -ಭಾರತೀಯ ಭತ್ತ ಸಂಶೋಧನಾ ಸಂಸ್ಥೆ, ಹೈದರಾಬಾದ್‌ನಿಂದ ಪಡೆದುಕೊಂಡಿದೆ

 ಲಭ್ಯವಿರುವ ಸೌಲಭ್ಯಗಳು :

 ಬೆಳೆ ಸುಧಾರಣೆ :

· ಮಾರ್ಕರ್ ಅಸಿಸ್ಟೆಡ್ ಆಯ್ಕೆಯ ಪ್ರಯೋಗಾಲಯ

· ಅನುವಂಶೀಕ ಶುದ್ದತೆ ಮತ್ತು ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ

· ವ್ಯಾಕ್ಯೂಮ್ ಇಮಾಸ್ಕುಲೇಟರ್

· ಪಾಲಿಹೌಸ್

 

ಬೆಳೆ ಉತ್ಪಾದನೆ:

ಬೇಸಾಯಶಾಸ್ತ್ರ

ಅಗತ್ಯವಿರುವ ರಕ್ಷಣಾತ್ಮಕ ನೀರಾವರಿಯ ನಾಟಿ ಭತ್ತದ ಪ್ರದೇಶ ಹಾಗೂ ಕ್ಷೇತ್ರ ಸೌಭ್ಯಗಳು ಬೆಳೆ ಉತ್ಪಾದನೆ ಪ್ರಯೋಗಗಳನ್ನು ತೆಗೆದುಕೊಳ್ಳಲು ಲಭ್ಯವಿರುತ್ತವೆ.

ರೋಗಶಾಸ್ತ್ರ :

ಭತ್ತದ ರೋಗಗಳ ತಪಾಸಣೆಗಾಗಿ ರಕ್ಷಣಾತ್ಮಕ ಕ್ಷೇತ್ರ ಸೌಲಭ್ಯವಿರುತ್ತದೆ

 ಕೀಟಶಾಸ್ತ್ರ:

·ಕಂದು ಜಿಗಿ ಹುಳುವಿನ ವಿರುದ್ದವಾಗಿ ಸ್ಕೀನಿಂಗ್ ಮಾಡಲು ಗಾಜಿನ ಮನೆಯ ಸೌಲಭ್ಯ

·ಮರದ ಪೆಟ್ಟಿಗೆಗಳಲ್ಲಿ ಕಂದು ಜಿಗಿ ಹುಳುಗಳನ್ನು (Nilaparvata lugens) ಸಾಕುವುದು

 ಮಣ್ಣು ವಿಜ್ಞಾನ:

· ಮಣ್ಣಿನ ಮಾದರಿಗಳು- ಮಣ್ಣಿನಲ್ಲಿರುವ pH, EC, OC, ರಂಜಕ ಮತ್ತು ಪೊಟ್ಯಾಸಿಯಮ್ ಅಂಶಗಳ ವಿಶ್ಲೇಷಣೆ  ಪ್ರಯೋಗಾಲಯ

·  ಸಸ್ಯ ಮಾದರಿಗಳು- ಸಸ್ಯದಲ್ಲಿರುವ ರಂಜಕ ಮತ್ತು ಪೊಟ್ಯಾಸಿಯಮ್ ಅಂಶಗಳ ವಿಶ್ಲೇಷಣೆ  ಪ್ರಯೋಗಾಲಯ

ಇತರೆ ಚಟುವಟಿಕೆಗಳು:

· ಕಛೇರಿಗೆ ಭೇಟಿ ನೀಡುವ ಹಾಗೂ ದೂರವಾಣಿ ಮುಖಾಂತರ ಬೆಳೆ ಸಮಸ್ಯೆಯನ್ನು ಕೋರುವ ರೈತರಿಗೆ ಸಲಹೆ ಸೂಚನೆಗಳನ್ನು ನೀಡುವುದು

· ಭತ್ತದ ಸುಧಾರಿತ ತಳಿಗಳು ಮತ್ತು ಉತ್ಪಾದನಾ ತಾಂತ್ರಿಕತೆಗಳನ್ನು ಕುರಿತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು

· ಭತ್ತದ ಸುಧಾರಿತ ತಳಿಗಳು ಮತ್ತು ಉತ್ಪಾದನಾ ತಾಂತ್ರಿಕತೆಗಳನ್ನು ಕುರಿತು ಕ್ಷೇತ್ರ ಹಾಗೂ ಮುಂಚೋಣಿ ಪ್ರಯೋಗಗಳನ್ನು ಕೈಗೊಳ್ಳುವುದು

· ಸಮಸ್ಯಾತ್ಮಕ ಮತ್ತು ರೋಗ ನಿರ್ಣಯದ ಭತ್ತದ ತಾಕುಗಳ ಭೇಟಿಗಳಲ್ಲಿ ಭಾಗವಹಿಸುವುದು.

 

Externally Funded Projects in Operation:

No. Project Title Principal Investigator Funding agency Year of Start Year of Completion Significant Outcome
1 Mainstreaming rice landraces diversity in varietal development through genome wide association studies: A model for large-scale utilization of gene bank collections of rice Dr. C. A. Deepak DBT, New Delhi 2020 2025 Identification of Blast resistant and BPH tolerant rice genotypes

 

2. Evaluation of Agronomic Bio- efficacy of RhizoMyx Eco Gr formulation in paddy Dr. G.R. Denesh Novozymes

Pvt. Ltd.

2023 2024
3. Testing of bio-efficacy of Topramezone 336 g/l SC against weed flora of maize and its residual effect on succeeding crop Dr. G.R. Denesh Rainbow Agrosciences Pvt. Ltd. 2023 2024
4 Evaluation of effect of trackon gold application on qualitative and quantitative parameters, nutrient uptake, soil physicochemical, growth yield of rice, maize an pigeon pea Dr. H. R.

Savitha

Sulphur Mill Private Limited, Bombay 2021 2023

Staff Profile

Scientific staff:

Dr. Denesh, G. R.

Name Dr. Denesh, G. R.
Designation Professor and Scheme Head
Academic Qualification M. Sc. (Agri.), Ph. D, PGDHRM
Area of Specialization Crop Growth Modeling, Weed Management, Irrigation & Fertilizer Management
e-mail: grdeneshrice@uasbangalore.edu.in
grdenesh@rediffmail.com

Mobile
08232-277923
+ 91-9448980134

Dr. C. A. Deepak

Name Dr. C. A. Deepak
Designation Junior Rice Breeder
Academic Qualification M. Sc. (Agri.), Ph. D.
Area of Specialization Genetics and Plant Breeding
e-mail: deepuca@googlemail.com
Mobile 08232 – 277923
9945757507

Dr. V. B. Sanath Kumar

Name Dr. V. B. Sanath Kumar
Designation Professor and Rice Pathologist
Academic Qualification M. Sc. (Agri), Ph. D
Area of Specialization Fungal Pathology
e-mail: sanath.kumar7@gmail.com
Mobile 9449113311

Dr. M.S. Kitturmath

Name Dr. M.S. Kitturmath
Designation Entomologist
Academic Qualification M.Sc. (Ag),
Ph.D. (Agricultural Entomology)
Area of Specialization Rice entomology, Insecticide toxicology
e-mail: kitturmathms@uasbangalore.edu.in
muttu78@rediffmail.com
Mobile No: +91-9740301274

Dr. Savitha, H.R

Name Dr. Savitha, H.R.
Designation Junior Soil Scientist
Academic Qualification Ph.D. in Soil Science
Area of Specialization Soil Science (Soil Fertility)
e-mail: Savitha2094@gmail.com
Mobile
9964072409

Supporting staff:

L. Manjunatha

Name L. Manjunatha
Designation Senior Field Assistant
Academic Qualification SSLC
Mobile 9900466192

Krishna, P.K

Name Krishna, P.K
Designation Field Assistant
Academic Qualification SSLC
Mobile 9900622196

Ramesh. A

Name Ramesh. A.
Designation Field Assistant
Academic Qualification PUC (Arts)
Mobile No: +91-9035599498

Jayarama C.N

Name Jayarama C.N
Designation Sr. Field Assistant
Academic Qualification SSLC
Mobile No. 9164570031

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು