ಬೆಂಗಳೂರು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ೨೦೦೮ರಲ್ಲಿ ಗಾಂಧಿ ಕೃಷಿ ವಿಜ್ಞಾನಕೇಂದ್ರ (ಜಿ.ಕೆ.ವಿಕೆ.), ಬೆಂಗಳೂರಿನಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಕೃಷಿ ವಿಶ್ವವಿದ್ಯಾನಿಲಯ
ಉದ್ದೇಶಗಳು
- ಪ್ರಚಲಿತದಲ್ಲಿರುವ ಸಾವಯವ ಕೃಷಿ ಅಭ್ಯಾಸಗಳು ಮತ್ತು ರೂಢಿಯಲ್ಲಿರುವ ಕೃಷಿ ಜ್ಞಾನವನ್ನು ವೈಜ್ಞಾನಿಕ ತಳಹದಿಯಲ್ಲಿ ಪರಿಶೀಲಿಸಿ ಆಚರಣೆಗೆ ತರುವುದು.
- ಸಾವಯವ ಕೃಷಿ ತ್ಯಾಜ್ಯಗಳನ್ನು ಸಮರ್ಥವಾಗಿ ಮರುಬಳಸಿಕೊಂಡು ದ್ರವರೂಪದ ಸಾವಯವ ಗೊಬ್ಬರ, ಕೊಟ್ಟಿಗೆಗೊಬ್ಬರ, ಮಿಶ್ರಗೊಬ್ಬರ, ಉತ್ಕೃಷ್ಟಗೊಬ್ಬರ ಇತ್ಯಾದಿಗಳನ್ನು ತಯಾರಿಸುವ ವಿವಿಧ ಉತ್ಪಾದನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು.
- ವಿವಿಧ ಕೃಷಿ ವಲಯಗಳಿಗೆ ಸೂಕ್ತವಾದ ಸಮಗ್ರಸಾವಯವ ಕೃಷಿ ಪದ್ದತಿಯನ್ನು ಗುರುತಿಸುವುದು ಮತ್ತು ಅವುಗಳನ್ನು ಉತ್ತೇಜಿಸುವುದು.
- ವಿವಿಧ ಬೆಳೆಗಳಿಗೆ ಸುಧಾರಿತ ಸಾವಯವ ಕೃಷಿ ಕೈಪಿಡಿಯನ್ನು ಅಭಿವೃದ್ಧಿಪಡಿಸುವುದು.
- ಸಾವಯವ ಕೃಷಿಕರಿಗೆ ಸೂಕ್ತವಾದ ಜೈವಿಕಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತೇಜಿಸುವುದು.
- ಆಸಕ್ತಿಯುಳ್ಳ ಕೃಷಿಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ವಿವಿಧ ಚಟುವಟಿಕೆಗಳು ಮತ್ತು ಸೇವೆಗಳು
ಸಾವಯವ ಕೃಷಿ ಸಂಶೋಧನಾ ಸಂಸ್ಥೆಯು ಸಾವಯವ ಕೃಷಿಕರನ್ನು ಉತ್ತೇಜಿಸಿ, ಸಾವಯವ ಬೆಳೆಗಾರರು ಕೃಷಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿದೆ.ಈ ಸಂಶೋಧನಾ ಕೇAದ್ರವು ಸಂಶೋಧನೆ, ಪ್ರಾತ್ಯಕ್ಷಿಕೆ ಮತ್ತು ವಿಸ್ತರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅವುಗಳನ್ನು ಕೆಳಗಿನಂತೆ ವಿವರಿಸಲಾಗಿದೆ.
- ರೈತರು, ಸ್ವಯಂ ಸೇವಾ ಸಂಸ್ಥೆಗಳು, ಸಾವಯವ ಬೆಳೆಗಾರರು ಮತ್ತು ಇತರೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು.
- ಜೈವಿಕಗೊಬ್ಬರ ಮತು ್ತಜೈವಿಕ ನಿಯಂತ್ರಣಗಳ ಸಾಮೂಹಿಕ ಉತ್ಪಾದನೆ ಮತ್ತು ಪೂರೈಕೆ.
- ಸಾವಯವ ಗೊಬ್ಬರ, ಜೈವಿಕಗೊಬ್ಬರ, ದ್ರವರೂಪÀಗೊಬ್ಬರಗಳ ಪರೀಕ್ಷೆ.
ಉದ್ದೇಶಗಳನ್ನು ಪೂರೈಸಲುತೆಗೆದುಕೊಂಡ ಕ್ರಮಗಳು
- ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಅಂಗ ಸಂಸ್ಥೆಯಾದ ಸಾವಯವ ಕೃಷಿ ಸಂಶೋದನೆಯ ಅಡಿಯಲ್ಲಿ ದಕ್ಷಿಣ ಕರ್ನಾಟಕದ ಎರಡು ವಿಭಿನ್ನ ಕೃಷಿ ವಲಯಗಳಲ್ಲಿ ೯ ಸಂಶೋಧನಾ ಕೆಂದ್ರಗಳನ್ನು ಸ್ಥಾಪಿಸಿದೆ.
- ಕ್ಷೇತ್ರ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆ ನಡೆಸಲು ಪ್ರತ್ಯೇಕ ಸಾವಯವ ತಾಕುಗಳನ್ನು ರಚಿಸಲಾಗಿದೆ.
- ಸಾವಯವ ಕೃಷಿ ಸಂಶೋಧನಾಕೇAದ್ರ, ನಾಗನಹಳ್ಳಿ, ಮೈಸೂರು ಇದು ೨೦೦೮ರಿಂದ ಸಂಪೂರ್ಣವಾಗಿ ಸಾವಯವ ಕೃಷಿಗೆ (೨೪ ಹೆಕ್ಟೇರ್) ಪರಿವರ್ತನೆಯಾಗಿದೆ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಸಾವಯವ ಕೃಷಿ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆಗಾಗಿ ಒಟ್ಟು ವಿಸ್ತೀರ್ಣ ೩೪ ಹೆಕ್ಟೇರ್ ಪ್ರದೇಶವನ್ನು ಮೀಸಲಿಡಲಾಗಿದೆ.
ವಿವಿಧ ಕೃಷಿ ಸಂಶೋಧನಾ ಕೇಂದ್ರಗಳ ವಿವರ ಮತ್ತುಕೈಗೊಂಡಿರುವ ಸಂಶೋಧನೆ, ಪ್ರಾತ್ಯಕ್ಷಿಕೆ ಹಾಗೂ ವಿಸ್ತರಣೆ ವಿವರವನ್ನುಕೆಳಕಂಡAತೆ ನೀಡಲಾಗಿದೆ
ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ನಾಗನಹಳ್ಳಿ, ಮೈಸೂರು, ವಲಯ ಕೃಷಿ ಸಂಶೋಧನಾಕೇAದ್ರ, ವಿ.ಸಿ.ಫಾರಂ.ಮAಡ್ಯ, ಕೃಷಿ ಸಂಶೋಧನಾಕೇAದ್ರ, ಚಿಂತಾಮಣಿ, ಕೃಷಿ ಸಂಶೋಧನಾಕೇAದ್ರ, ಬಲಜಿಗಪಡೆ, ಕೃಷಿ ಸಂಶೋಧನಾಕೇAದ್ರ-ಮಡೆನೂರು, ಕೃಷಿ ಸಂಶೋಧನಾಕೇAದ್ರ, ಪಾವಗಡ, ಕೃಷಿ ಸಂಶೋಧನಾಕೇAದ್ರ, ತಿಪಟೂರು, ಕೃಷಿ ಸಂಶೋಧನಾಕೇAದ್ರ, ಗುಂಜೇವು, ಕೃಷಿ ಸಂಶೋಧನಾಕೇAದ್ರ, ಅರಸೀಕೆರೆ. ಇವುಗಳನ್ನು ನಿರ್ವಹಣೆಹಾಗೂ ಸಂಶೋಧನೆಮಾಡುವ ಸಲುವಾಗಿ
- ಸಾವಯವ ಕೃಷಿ ಸಂಶೋಧನಾ ಸಂಸ್ಥೆ.,ಜಿ.ಕೆ.ವಿ.ಕೆ. ಇಲ್ಲಿನ ‘ಜೆ’ ತಾಕಿನಲ್ಲಿ ಸಂಶೋಧನೆ ಮತ್ತು ಸಾವಯವ ಕೃಷಿಗೆ ಸಂಬAಧಿಸಿದ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಾವಯವ ಉತ್ಪನ್ನಗಳ ಕ್ಷೇತ್ರ ಮತ್ತು ಪ್ರಯೋಗಾಲಯದ ಪರೀಕ್ಷೆಯೂ ಈ ಕೇಂದ್ರದಿAದ ನಡೆಯುತ್ತಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಸಾವಯವ ಪ್ರಯೋಗ ನಡೆಸಲು ಪ್ರತ್ಯೇಕ ಸಂಶೋಧನಾ ತಾಕುಗಳನ್ನು ನಿರ್ವಹಿಸಲಾಗುತ್ತಿದೆ. ಒಂದುಎಕರೆ ಮಾದರಿ ಸಾವಯವ ತರಕಾರಿ ಪ್ರಾತ್ಯಕ್ಷಿಕೆ ತಾಕುಗಳನ್ನು ೬ ವರ್ಷಗಳಿಂದ ನಿರ್ವಹಿಸಲಾಗುತ್ತಿದೆ.
- ಈ ಸಂಸ್ಥೆಯುಜೈವಿಕ ಗೊಬ್ಬರಗಳು ಮತ್ತು ಜೈವಿಕ ನಿಯಂತ್ರಣ, ಸಮೂಹ ಉತ್ಪಾದನಾ ಪ್ರಯೋಗಾಲಯವನ್ನು ಸ್ಥಾಪಿಸಿದೆ. ಜೈವಿಕ ಗೊಬ್ಬರಗಳ ಘನ, ದ್ರವರೂಪ ಮತ್ತು ಜೈವಿಕ ನಿಯಂತ್ರಣಗಳನ್ನು ಈಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿದೆ ಮತ್ತು ಉತ್ಪಾದನೆಯಾದ ಸಾವಯವ ಗೊಬ್ಬರಗಳನ್ನು ರೈತರು, ಸಾವಯವ ಬೆಳೆಗಾರರು ಮತ್ತು ಕೃಷಿ ಸಂಶೋಧನಾ ಕೇಂದ್ರಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ.
- ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಕ್ಷೇತ್ರಘಟಕದಲ್ಲಿ ಕಾAಪೋಸ್ಟ್, ಎರೆಹುಳು ಗೊಬ್ಬರ, ದ್ರವರೂಪದ ಸಾವಯವ ಗೊಬ್ಬರಗಳು, ಅಜೋ಼ಲಾ ಉತ್ಪಾದನಾ ಘಟಕಗಳಂತಹ ಸಾವಯವ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ.
- ಸಾವಯವ ಕೃಷಿಯಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ತರಬೇತಿಕೊಠಡಿಯನ್ನು ಈ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ
ಸಂಶೋಧನೆ
ಸಂಶೋಧನೆಯಿAದ ದೃಢಪಟ್ಟ ಸಂಕ್ಷಿಪ್ತ ವಿವರವನ್ನು ಕೆಳಕಂಡAತೆ ನೀಡಲಾಗಿದೆ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು