Title Image

ನೋಡಲ್ ಕೃಷಿ ಶಿಕ್ಷಣ ಕೋಶ – ICAR

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಇವರ ಅಪೇಕ್ಷೆ ಮೇರೆಗೆ ನೋಡಲ್ ಕೃಷಿ ಕೋಶ- ಐಸಿಎಆರ್‌ ಅನ್ನು ದಿನಾಂಕ 28.07.2016. ರಂದು ಸ್ಥಾಪಿಸಿತು.

ಈ ಕೋಶವು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಹಾಗು ಐಸಿಎಆರ್‌ ನ ಕೃಷಿ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ಹೊಂದಿದ್ದು, ಈ ಕಾರ್ಯಗಳನ್ನು ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ನಿರ್ವಹಿಸುವುದು ಇದರ ಆದ್ಯ ಕೆಲಸವಾಗಿರುತ್ತದೆ.

ಈ ಕೋಶವು ವಿದ್ಯಾರ್ಥಿಗಳ ಫೆಲೋಶಿಪ್ ಮತ್ತು ಅಭಿವೃದ್ಧಿ ಅನುದಾನ, ಗ್ರಂಥಾಲಯ ಅಭಿವೃದ್ಧಿ ಅನುದಾನ – ಇವುಗಳ ವಾರ್ಷಿಕ ಬೇಡಿಕೆ ತಯಾರಿಸಿ ಸಲ್ಲಿಸುವುದು, ವಾರ್ಷಿಕ ವರದಿ ತಯಾರಿಸುವುದು, ಹಾಗೂ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳನ್ನು ಕ್ರೋಡೀಕರಿಸಿ, ಪರಿಶೀಲಿಸಿ, ವ್ಯವಸ್ಥಿತವಾಗಿ ಸುಧಾರಿಸಿ, ಏಕ ಗವಾಕ್ಷಿಯ ಅಡಿಯಲ್ಲಿ ಐಸಿಎಆರ್‌ಗೆ ಸಮಯಕ್ಕೆ ಸರಿಯಾಗಿ ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿದೆ.

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಫೆಬ್ರವರಿ 18, 2025
    • ಸೈಟ್ ಅಂಕಿಅಂಶಗಳು