Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ನೆಮಟೋಡ್ಸ್, ಸಸ್ಯ ರೋಗಶಾಸ್ತ್ರ ವಿಭಾಗ, ಜಿಕೆವಿಕೆ, ಬೆಂಗಳೂರು

.ಭಾ.ಸು.ಪ್ರಾಯೋಜನೆ/ ಘಟಕ : ಅಖಿಲ ಭಾರತ ಸುಸಂಘಟಿತ ಜಂತುಹುಳು ಪ್ರಾಯೋಜನೆ
ಸ್ಥಳ : ಬೆಂಗಳೂರು
ಉದ್ದೇಶಗಳು : ನೆಮಟೋಡ್ ಕೀಟಗಳಿಂದ ಉಂಟಾಗುವ  ಬೆಳೆ ನಷ್ಟವನ್ನು ಕಡಿಮೆ ಮಾಡಲು ಸಂಘಟಿತ ಪ್ರಯೋಗಗಳನ್ನು  ನಡಸಲು ನೆಮಟೋಡ್ ನಿರ್ವಹಣೆ ತಂತ್ರಜ್ಞಾನಗಳನ್ನು  ಕೃಷಿ ಪ್ರಯೋಗಗಳ ಮೂಲಕ  ಪ್ರದರ್ಶಿಸುವುದು.
ಸಂಶೋಧನಾ  ಕಾರ್ಯಕ್ರಮಗಳು :

1. ದೇಶದಲ್ಲಿ  ಆರ್ಥಿಕವಾಗಿ ಪ್ರಮುಖವಾದ ಜಂತುಹುಳುಗ¼ವೈವಿಧ್ಯತೆ  ಮತ್ತು ವಿತರಣೆ  ನಕ್ಷೆ ತಯಾರಿಸುವುದು

2. ದ್ವಿದಳಧಾನ್ಯಗಳ ಪ್ರಮುಖ ಜಂತುಹುಳುಗಳ ನಿರ್ವಹಣೆ

3. ತರಕಾರಿ ಬೆಳೆಗಳ ಪ್ರಮುಖ ಜಂತುಹುಳುಗಳ ಕೀಟಗಳ ನಿರ್ವಹಣೆ

4. ಬೇಳೆಕಾಳು ಮತ್ತು  ಮೇವಿನ ಬೆಳೆಗಳ ಪ್ರಮುಖ ಜಂತುಹುಳುಗಳ ನಿರ್ವಹಣೆ

5. ಹಣ್ಣಿನ ಬೆಳೆಗಳಲ್ಲಿ ಬರುವ ಪ್ರಮುಖ ಜಂತುಹುಳುಗಳ ನಿರ್ವಹಣೆ

6. ಹಸಿರುಮನೆಯಲ್ಲಿ ಬೆಳೆಯುವ ಬೆಳೆಗಳ ಪ್ರಮುಖ ಜಂತುಹುಳುಗಳ ನಿರ್ವಹಣೆ

7. ಪ್ರತೆಯಕತೆಯ ಮೌಲ್ಯಮಾಪನ ಮತ್ತು ನೆಮಟೋಡ್ ವಿರೋಧಿ ಸೂಕ್ಷಮ ಜೀವಿಗಳ ಸಾಮೂಹಿಕ ಗುಣಾಕಾರ

ಸಂಶೋಧನಾ ಸಾಧನೆಗಳು :

v  ಸಾವಯುವ ಕೃಷಿ ಪಧ್ದತಿಯಲ್ಲಿ  ಭತ್ತದ ಬೆಳೆಯಲ್ಲಿ ಬರುವ ಬೇರು ಗಂಟು ಜಂತುಹುಳು ಮೆಲೈಡೋಗೈನ್ ಗ್ರಾಮಿನಿಕೋಲಾ ನಿರ್ವಹಣೆಗಾಗಿ ೧.೨೦ ಗ್ರಾಂ ಪ್ರತೀ ಚದರ ಮೀ. ಗೆ ಸ್ಯೂಡೋಮೊನಾಸ್ ಪ್ಲೋರೊಸೆನ್ಸ ಮತ್ತು ಬೇವಿನ ಹಿಂಡಿ ೧೦೦ ಗ್ರಾಂ /ಚದರ ಮೀ ಬಳಸುವುದು

v  ಟೊಮ್ಯಾಟೊ ಸಸಿ ಮಡಿಗಳಲ್ಲಿ ಮೆ. ಇನ್ಕಾಗ್ನಿಟಾ ಜಂತುಹುಳುವಿನ ನಿರ್ವಹಣೆಗೆ ಬಿತ್ತನೆಗೆ ಮುಂಚಿತವಾಗಿ ಪಾಶ್ಚುರಿಯಾ ಪೆನೆಟ್ರೆನ್ಸ್  ೧೦ ಗ್ರಾಂ ಜೀವಾಣು (೧ x ೧೦೮ ಬೀಜಕಗಳು ಪ್ರತೀ ಗ್ರಾಂ ಗೆ)ಚದರ  ಮೀ. ಗೆ ಉಪಚರಿಸುವುದು.

v  ಬದನೆಕಾಯಿ ಸಸಿ ಮಡಿಗಳಲ್ಲಿ ಮೆ. ಇನ್ಕಾಗ್ನಿಟಾ ಬೇರು ಗಂಟು ಜಂತುಹುಳುವಿನ ನಿರ್ವಹಣೆಗೆ ಬಿತ್ತೆನೆ ಮಾಡುವ ಮೊದಲು ಪಾಶ್ಚುರಿಯಾ ಪೆನೆಟ್ರೆನ್ಸ್ ೧೦ಗ್ರಾಂ ಜೀವಾಣು (೧ x ೧೦೮ ಬೀಜಕಗಳು /ಗ್ರಾಂ )ಚದರ  ಮೀ. ಗೆ ಉಪಚರಿಸುವುದು.

v  ಬದನೆಕಾಯಿ ಸಸಿ ಮಡಿಗಳಲ್ಲಿ ಮೆ. ಇನ್ಕಾಗ್ನಿಟಾ ಜಂತುಹುಳುವಿನ ನಿರ್ವಹಣೆಗೆ ಗ್ಲೋಮಸ್ ಫ್ಯಾಸಿಕ್ಯುಲೇಟಮ್ ೫೦ ಗ್ರಾಂ ಜೀವಾಣು (೨೦೦ ಬೀಜಕಗಳು /ಗ್ರಾಂ ) ಚದರ ಮೀ. ಉಪಚರಿಸುವುದು.

v  ಟೊಮ್ಯಾಟೊ ಸಸಿ ಮಡಿಗಳಲ್ಲಿ ಮೆ. ಇನ್ಕಾಗ್ನಿಟಾ ಬೇರು ಗಂಟು ಜಂತುಹುಳುವಿನ ನಿರ್ವಹಣೆಗೆ ಬಿತ್ತನೆಗೆ ಮುಂಚಿತವಾಗಿ ಗ್ಲೋಮಸ್ ಫ್ಯಾಸಿಕ್ಯುಲೇಟಮ್ ೫೦ ಗ್ರಾಂ ಜೀವಾಣು (೨೦೦ ಬೀಜಕಗಳು /ಗ್ರಾಂ) ಚದರ ಮೀ. ಗೆ ಉಪಚರಿಸುವುದು.

v  ಬಾಳೆ ಬೆಳೆಯಲ್ಲಿ ಮೆ. ಇನ್ಕಾಗ್ನಿಟಾ ಬೇರು ಗಂಟು ಜಂತುಹುಳುವಿನ ನಿರ್ವಹಣೆಗೆ ಪಾಶ್ಚುರಿಯಾ ಪೆನೆಟ್ರೆನ್ಸ್  ೫ x ೧೦೭ ಬೀಜಕಗಳು ಪ್ರತೀ ಗ್ರಾಂ ಬೇರಿನ ಪುಡಿಯನ್ನು ೨೦೦ ಸಿಸಿ ಮರಳಿನೊಂದಿಗೆ ಮತ್ತು  ನಾಟಿ ಮಾಡುವಾಗ ಮತ್ತು ನೆಟ್ಟ ೪೫ ದಿನಗಳ ನಂತರ ಉಪಚರಿಸುವುದು.

v  ಬಾಳೆ ಬೆಳೆಯಲ್ಲಿ ರಾಡೋಪೋಲಸ್ ಸಿಮಿಲಿಸ್ ನಿರ್ವಹಣೆಗೆ ಪೇರಿಂಗ್ ಮತ್ತು ಪ್ರಾಲಿನೇಜ್ ಕಾರ್ಯಾಚರಣೆ ಮಾಡುವುದು.

v ಗೆಣಸಿನೊಂದಿಗೆ (ತಳಿ. ಶ್ರೀ ಭದ್ರ)   ಟೊಮ್ಯಾಟೊ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ   ಮೆ. ಇನ್ಕಾಗ್ನಿಟಾ ಬೇರು ಗಂಟು ಜಂತುಹುಳುವಿನ ನಿರ್ವಹಣೆ ಮಾಡಬಹುದು.

 

ಪ್ರಶಸ್ತಿಗಳು/ ಗುರುತಿಸುವಿಕೆ :

ಡಾ. ಎನ್. ಜಿ. ರವಿಚಂದ್ರ: ಸಸ್ಯ ರೋಗ ಶಾಸ್ತ್ರ ವಿಭಾಗದಲ್ಲಿ ಅತ್ಯುತ್ತಮ ಕೊಡುಗೆಗಾಗಿ ರಾಷ್ಟ್ರೀಯ ಪರಿಸರ ವಿಜ್ಞಾನ ಅಕಾಡೆಮಿ, ನವದೆಹಲಿ ಅವರಿಂದ NESA ಪ್ರಖ್ಯಾತ ವಿಜ್ಞಾನಿ ಪ್ರಶಸ್ತಿ ಉಭಿಸಿರುತ್ತದೆ.

ಲಭ್ಯವಿರುವ ಸೌಲಭ್ಯಗಳು :

v  ಜಂತುಹುಳು ಪ್ರಯೋಗಾಲಯವು ಸಸ್ಯ ಪರಾವಲಂಬಿ ಜಂತುಹುಳುಗಳು, ಬೇರು-ಗಂಟು  ಜಂತುಹುಳುಗಳು,  ಸಿಕ್ ಪ್ಲಾಟ್, ನೆಟಹೌಸ್, ಪಾಲಿಹೌಸ್ ವಿವಿಧ ಅಂಶಗಳ ಕುರಿತು ಸಂಶೋಧನೆ ನಡೆಸಲು ಸುಸಜ್ಜಿತವಾಗಿದೆ.

v ಬೆಳೆಗಳಲ್ಲಿ ಕಂಡುಬರುವ ವಿವಿಧ ಜಂತು ರೋಗಗಳನ್ನು ಗುರುತಿಸುವಿಕೆ, ನಿರ್ವಹಣಾ ಕ್ರಮಗಳು ಮಣ್ಣು ಹಾಗೂ ಬೇರಿನ ಮಾದರಿಗಳಲ್ಲಿ ಜಂತುಹುಳುಗಳ ಸಂಖ್ಯೆಯನ್ನು ಖಚಿತ ಪಡಿಸುವುದು ಮತ್ತು ಜಂತು ರೋಗಗಳ ಬಗ್ಗೆ ವಿವರವಾದ ಮಾಹಿತಿ.

ಇತರೆ ಚಟುವಟಿಕೆಗಳು  :

v ರೈತ ಸಂಪರ್ಕ ಕೇಂದ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದು.

v ಸಸ್ಯ ಜಂತುಹುಳುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುವುದು.

v ಗಿರಿಜನ ಉಪಯೋಜನೆಯಡಿಯಲ್ಲಿ ಫಲಾನಭವಿ ರೈತರುಗಳಿಗೆ ಕೃಷಿ ಪರಿಕರಗಳ ವಿತರಣೆ ಮತ್ತು ಸಸ್ಯ ಜಂತುಹುಳುಗಳ ಬಗ್ಗೆ ಮಾಹಿತಿ ನೀಡುವುದು.

ಕಾರ್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು :
ಕ್ರ. ಸಂ. ಯೋಜನೆಯ ಶೀರ್ಷಿಕೆ ಮುಖ್ಯ ವಿಜ್ಞಾನಿಗಳು ಹಣಕಾಸು

ಸಂಸ್ಥೆ

ಪ್ರಾರಂಭದ ವರ್ಷ ಕೊನೆಗೊಳ್ಳುವ ವರ್ಷ ಗಮನಾರ್ಹ ಫಲಿತಾಂಶ
               

ಸಿಬ್ಬಂದಿ ವಿವರ :

Dr. T R Kavitha

ಡಾ.ಟಿ.ಅರ್ ಕವಿತ
ಹುದ್ದೆ : ಸಹಾಯಕ ಜಂತುಹುಳು ತಜ್ಞರು ಮತ್ತು ಪ್ರಾಯೋಜನೆಯ ಮುಖ್ಯಸ್ಥರು (ಪ್ರಭಾರ)

ಶೈಕ್ಷಣಿಕ ವಿದ್ಯಾಭ್ಯಾಸ : ಪಿಹೆ.ಚ್ಡಿ

ವಿಷಯ ಪರಿಣತೆ : ಸಸ್ಯ ರೋಗ ಶಾಸ್ತ್ರ (ಜಂತುಹುಳು ಶಾಸ್ತ್ರ)

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 26-09-2013

ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 09-09-2019

kavitharnaik @gmail,com
7829185966

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು