ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಸಮಗ್ರ ಕೃಷಿ ಪದ್ಧತಿ, ಜಿಕೆವಿಕೆ, ಬೆಂಗಳೂರು

ಅಭಾಸುಪ್ರಾಯೋಜನೆ/ಘಟಕ :ಅಭಾಸುಸಪ್ರಾ – ಸಮಗ್ರ ಕೃಷಿ ಪದ್ಧತಿಗಳು
ಸ್ಥಳ : ಗಾಕೃವಿಕೇ, ಬೆಂಗಳೂರು –೫೬೦ ೦೬೫
ಪ್ರಾರಂಭವಾದರ‍್ಷ : ೧೯೮೯
ಉದ್ದೇಶಗಳು :

1. ಉತ್ಪಾದಕತೆ ಮತ್ತು ಸಂಪನ್ಮೂಲ ಬಳಕೆಯ ದಕ್ಷತೆಯನ್ನು ಸುಧಾರಿಸಲು ಉತ್ಪಾದನಾ ತಂತ್ರಜ್ಞಾನಗಳ ಮೇಲೆ ಸಮಗ್ರ ಕೃಷಿ ಪದ್ಧತಿಗಳಲ್ಲಿ ಸಂಶೋಧನೆ.

2. ವಿಭಿನ್ನ ಕೃಷಿ ಸಂದರ್ಭಗಳಿಗಾಗಿ ಸಮರ್ಥ, ಆರ್ಥಿಕವಾಗಿ ಕಾರ್ಯಸಾಧ್ಯ ಮತ್ತು ಪರಿಸರ ಸಮರ್ಥನೀಯ ಸಮಗ್ರ ಕೃಷಿ ವ್ಯವಸ್ಥೆಯ ಮಾದರಿಗಳನ್ನು ಅಭಿವೃದ್ಧಿಪಡಿಸುವುದು.

3.  ಕ್ಷೇತ್ರ ಪ್ರಯೋಗಗಳ ಪರೀಕ್ಷೆ, ಪರಿಶೀಲನೆ ಮತ್ತು ಪದ್ಧತಿಗಳ ಆಧಾರಿತ ಕೃಷಿ ಉತ್ಪಾದನಾ ತಂತ್ರಜ್ಞಾನಗಳ ಪರಿಷ್ಕರಣೆ.

4. ದೇಶದಲ್ಲಿ ಸಮಗ್ರ ಕೃಷಿ ವ್ಯವಸ್ಥೆಯ ಸಂಶೋಧನೆಯನ್ನು ಸಂಘಟಿಸಿ ಮತ್ತು ಮೇಲ್ವಿಚಾರಣೆ ಮಾಡುವುದು.

5. ಕೃಷಿ ವ್ಯವಸ್ಥೆಯಕ್ರಮದಲ್ಲಿ ಮಾದರಿ ಮೌಲ್ಯ ಸರಪಳಿಯ ಅಭಿವೃದ್ಧಿ.

ಸಂಶೋಧನಾ ಕಾರ್ಯಕ್ರಮಗಳು :

v  ಒಎಫ್‌ಆರ್ -1: ಪ್ರಧಾನ ಬೆಳೆ ಪದ್ಧತಿಗಳಲ್ಲಿ ಸಸ್ಯ ಪೋಷಕಾಂಶಗಳಿಗೆ ಕೃಷಿ-ಬೆಳೆ ಪ್ರತಿಕ್ರಿಯೆ ಬಗ್ಗೆ ಸಂಶೋಧನೆ

v  ಒಎಫ್‌ಆರ್ -2: ರೈತರ ತಾಕುಗಳಲ್ಲಿ ಅತಿ ಸಣ್ಣ ಹಿಡುವಳಿ ವ್ಯವಸ್ಥೆಗೆ ಸೂಕ್ತ ಸಮಗ್ರ ಕೃಷಿ ಪದ್ಧತಿಗಳ ಶಿಫಾರಸ್ಸು   ಮಾಡುವುದು.

v  ಒಎಫ್‌ಆರ್ -3: ರೈತರ ತಾಕುಗಳಲ್ಲಿ ಸಣ್ಣ ಮತ್ತುಅತಿ ಸಣ್ಣರೈತರು ಹೆಚ್ಚಿನ ಲಾಭಾಂಶ ಮತ್ತು ಜೀವನ ಮಟ್ಟ ಸುಧಾರಣೆಗೆ ಸೂಕ್ತ  ಬೇಸಾಯ ಪದ್ಧತಿ ಮಾದರಿಗಳ ಮೌಲ್ಯಮಾಪನ ಮಾಡಿ ಸೂಕ್ತ ಶಿಫಾರಸ್ಸು ಕೊಡುವುದು.

 

II.  ಮಾದರಿ ಮೌಲ್ಯವರ್ಧನೆ ಸರಪಳಿ ಅಭಿವೃದ್ಧಿ  (MVCD)

v  ಸಮಗ್ರ ಕೃಷಿ ಪದ್ಧತಿಯಲ್ಲಿಮೌಲ್ಯ ಸರಪಳಿ ಅಭಿವೃದ್ಧಿಗಾಗಿ ಪ್ರಾಯೋಗಿಕಆಧಾರದ ಮೇಲೆ ಮಾದರಿಯನ್ನು ರಚಿಸುವುದು ಮತ್ತು ಪ್ರದರ್ಶಿಸುವುದು.

v  ಮೌಲ್ಯ ಸರಪಳಿ ಅಭಿವೃದ್ಧಿಗಾಗಿ ಯೋಜನೆಗಳ ಒಮ್ಮುಖದಲ್ಲಿ ಅನುಕೂಲಗಳು ಮತ್ತು ಸಮಸ್ಯೆಗಳನ್ನು ನಿರ್ಣಯಿಸುವುದು.

v  ಕೇಂದ್ರ ಮತ್ತುರಾಜ್ಯ ಮಟ್ಟದಲ್ಲಿ ಸಮಗ್ರ ಕೃಷಿ ಪದ್ಧತಿಗಾಗಿ ಮೌಲ್ಯ ಸರಪಳಿ ಅಭಿವೃದ್ಧಿಗಾಗಿ ನೀತಿ ಸಂಕ್ಷಿಪ್ತತೆಗಳನ್ನು ಮಾಡುವುದು

 

III.  ಪರಿಶಿಷ್ಟ ಜಾತಿಉಪಯೋಜನೆ  (SCSP)

v  ಸೂಕ್ತವಾದ ಘಟಕಗಳ ಆಯ್ಕೆಯ ಬಗ್ಗೆ ಜ್ಞಾನವನ್ನು ನೀಡಲು ಮತ್ತು ಸಮಗ್ರ ಕೃಷಿ ಪದ್ಧತಿಅಡಿಯಲ್ಲಿ ಲಾಭವನ್ನು ಗರಿಷ್ಠಗೊಳಿಸುವುದು.

v  ಘಟಕಗಳ ನಿರ್ವಹಣೆ, ಕೃಷಿ ಸಂಪನ್ಮೂಲಗಳು, ಕೃಷಿ ತ್ಯಾಜ್ಯಗಳ ಮರುಬಳಕೆ ಮತ್ತು ಕೃಷಿ ಆದಾಯ, ಜೀವನೋಪಾಯ ಭದ್ರತೆ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸಲು ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು.

v  ವಿವಿಧ ಕೃಷಿ ಉದ್ಯಮಗಳ ಕೊಡುಗೆ ಮತ್ತು ಆದಾಯದ ಮಾಸಿಕ ಹರಿವು ಮತ್ತುಒಟ್ಟಾರೆ ಉಳಿತಾಯವನ್ನು ತಿಳಿದುಕೊಳ್ಳುವುದು.

v  ಸಮಗ್ರ ಕೃಷಿ ಪದ್ಧತಿ ವಿಧಾನದ ಮೂಲಕ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದು.

 

IV. ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳುವುದು (FLD)

v  ಚಿಕ್ಕಬಳ್ಳಾಪುರ ಜಿಲ್ಲೆಯ ಇಪ್ಪತ್ತು ರೈತರ ತಾಕುಗಳಲ್ಲಿ ಮುಸುಕಿನ ಜೋಳ – ಶೇಂಗಾ ಬೆಳೆ ಪದ್ಧತಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳುವುದು.

ಸಂಶೋಧನಾಸಾಧನೆಗಳು :

v  ಹತ್ತು ಜಿಲ್ಲೆಗಳಿಗೆ (ಬೆಂಗಳೂರು ಗ್ರಾಮಾಂತರ ಮತ್ತು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ) ಒಂದುಎಕರೆ ಮತ್ತು ಒಂದು ಹೆಕ್ಟೇರ್‌ ವಿಸ್ತೀರ್ಣದ ಮಳೆಯಾಶ್ರಿತ, ನೀರಾವರಿ ಮತ್ತು ಅರೆ ನೀರಾವರಿ ಸನ್ನಿವೇಶಗಳಿಗೆ ೬೦ ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

v  ಬುಡಕಟ್ಟು ಉಪ ಯೋಜನೆಯಡಿ ಐದು ಗ್ರಾಮಗಳಲ್ಲಿ (ಚಾಮರಾಜನಗರ ಜಿಲ್ಲೆಯಕೆ. ದೇವರಹಳ್ಳಿ, ಶನಿವಾರ ಮುಂಟಿ, ಕುಂಟಗುಡಿ ಕಾಲೋನಿ ಮತ್ತು ಮೇಲು ಕಾಮನಹಳ್ಳಿ, ಮೈಸೂರು ಜಿಲ್ಲೆಯ ಸೊಳ್ಳೆಪುರ) ಸಮಗ್ರ ಕೃಷಿ ಪದ್ಧತಿ ಯೋಜನೆಯಲಿ ಒಟು ೨೭೫ ಬುಡಕಟ್ಟು ಕುಟುಂಬಗಳೊಂದಿಗೆ ಕೆಲಸ ಮಾಡಿ, ಅವರ ಕುಟುಂಬದ ಆದಾಯ ಸರಾ ಸರಿ ೧:೨ಕ್ಕೆ ಸುಧಾರಿಸಿದೆ.

v  ೨೦೧೨-೧೭ರ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಮತ್ತು ೨೦೧೭-೨೨ರ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ೬೦ ಮಾದರಿ ರೈತರೊಂದಿಗೆ ಸಾಮಗ್ರಿಗಳು ಮತ್ತು ತಂತ್ರಜ್ಞಾನದ ಬೆಂಬಲದೊಂದಿಗೆ ಕಾರ್ಯಸಾಧ್ಯ ಮತ್ತು ಸುಸ್ಥಿರವಾದ ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಒದಗಿಸಿ ಸ್ಥಳೀಯ ಪರಿಸ್ಥಿತಿಗಳಿಗೆ ಸೂಕ್ತವಾದ, ಕೃಷಿ – ಹವಾಮಾನ ಪರಿಸ್ಥಿತಿಗಳು ಮತ್ತು ಸಂಪನ್ಮೂಲಗಳ ಲಭ್ಯತೆಯನ್ನು ಪರಿಶೀಲಿಸಲಾಗಿದೆ. ಸೂಕ್ತ ಸಮಗ್ರ ಕೃಷಿ ಪದ್ಧತಿಗಳನ್ನು ರೈತರಿಗೆ ಶಿಫಾರಸ್ಸು ಮಾಡಲಾಗಿದೆ.

v  ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲಿ ೬೦ ಪರಿಶಿಷ್ಟ ಜಾತಿ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಿದ್ದು, ಉತ್ಪಾದಕತೆಯ ಸುಧಾರಣೆ, ಸುಸ್ಥಿರ ಇಳುವರಿ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ರೈತರ ಜೀವನ ಮಟ್ಟ ಸುಧಾರಣೆಗೆ ಅಗತ್ಯ ಆಧಾರಿತ ಸಾಮಗ್ರಿಗಳ ಬೆಂಬಲವನ್ನು ಒದಗಿಸಲಾಗುತ್ತಿದೆ.

ಪ್ರಶಸ್ತಿಗಳು / ಗುರುತಿಸುವಿಕೆ : ಇಲ್ಲ
ಲಭ್ಯವಿರುವಸೌಲಭ್ಯಗಳು :

Ø ರೈತರು ತಮ್ಮ ತಾಕುಗಳಲ್ಲಿ ಸಮಗ್ರ ಕೃಷಿಯನ್ನು ಅಭಿವೃದ್ಧಿಪಡಿಸಲು ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡುವುದು.

Ø ಸಮಗ್ರ ಕೃಷಿ ಪದ್ಧತಿಗಳು ಯೋಜನೆಯ ಫಲಾನುಭವಿ ರೈತರ ಯಶೋಗಾಥೆಗಳನ್ನು ಹತ್ತ ಪತ್ರಿಕೆ ಮತ್ತು ಕರಪತ್ರಗಳು ಮೂಲಕ ಇತರ ಅಗತ್ಯವಿರುವ ರೈತರಿಗೆ ಮಾಹಿತಿಯನ್ನು ಒಗದಿಸುವುದು.

Ø ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು ಬಿಡುಗಡೆ ಮಾಡಿರುವ ತಂತ್ರಜ್ಞಾನಗಳು ಮತ್ತು ವಿವಿಧ ತಳಿಗಳ ಬಗ್ಗೆ ಅಗತ್ಯವಿರುವ ರೈತರಿಗೆ ಮಾಹಿತಿಯನ್ನು ಒದಗಿಸುವುದು.

ಇತರೆಚಟುವಟಿಕೆಗಳು :

Ø  ಯೋಜನೆಯ ಸಂಪರ್ಕರೈತರಿಗೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆಯೋಜಿಸುವುದು.

Ø  ಸಮಗ್ರ ಕೃಷಿ ಪದ್ಧತಿಗಳ ಮತ್ತು ನೈಸರ್ಗಿಕ ಕೃಷಿ ಬಗ್ಗೆ ರೈತರ ತಾಕುಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

Ø  ರೈತರ ತಾಕುಗಳಲ್ಲಿ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆಗಳನ್ನು ನಿಯಮಿತಕ್ರಮದಲ್ಲಿ ನಡೆಸುವುದು.

Ø  ಸಮಗ್ರ ಕೃಷಿ ಪದ್ಧತಿಗಳ ಫಲಾನುಭವಿ ರೈತರ ಯಶೋಗಾಥೆಗಳ ದಾಖಲೀಕರಣ.

Ø  ರೈತರ ತಾಕುಗಳಲ್ಲಿ ಸಮಗ್ರ ಕೃಷಿ ಪದ್ಧತಿಗಳ ಕುರಿತು ಸಭೆ, ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರವನ್ನು ನಡೆಸುವುದು.

Ø  ರೈತರನ್ನು ತಮ್ಮ ತಾಕುಗಳಲ್ಲಿ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಕೊಳ್ಳುವಂತೆ ಪ್ರೇರೇಪಿಸುವುದು.

 

ಕರ‍್ಯಾಚರಣೆಯಲ್ಲಿ ಬಾಹ್ಯ ಅನುದಾನಿತಯೋಜನೆಗಳು :
ಕ್ರ. ಸಂ. ಯೋಜನೆಯ ಶೀರ್ಷಿಕೆ ಮುಖ್ಯವಿಜ್ಞಾನಿಗಳು ಹಣಕಾಸು

ಸಂಸ್ಥೆ

ಪ್ರಾರಂಭದವರ್ಷ ಕೊನೆಗೊಳ್ಳುವವರ್ಷ ಗಮನಾರ್ಹಫಲಿತಾಂಶ
1 ನೈಸರ್ಗಿಕ ಕೃಷಿ ಯೋಜನೆ ಕೃಷಿ ವಲಯ–೫ ಮತ್ತು ೬ ಡಾ. ಸಂಜಯ್ ಎಂ. ಟಿ. ಕರ್ನಾಟಕ ಸರ್ಕಾರ 2018-19 ಮುಂದುವರೆಯುತ್ತಿದೆ Ø ವಿವಿಧ ಕೃಷಿ ಪದ್ಧತಿಗಳಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣ ಲಕ್ಷಣಗಳ ಮೇಲೆ ಹಾಗೂ ವಿವಿಧ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆ ಯಮೇಲಾಗುವ ಪರಿಣಾಮಗಳ ಅಧ್ಯಯನ ಮಾಡಲು ಪ್ರಾಯೋಗಿ ವಿನ್ಯಾಸವನ್ನು ಹಾಗೆ ಯೇಇರಿಸಲಾಗಿದೆ.

Ø ಮೂರು ವರ್ಷಗಳ ಪ್ರಯೋಗದ ಫಲಿತಾಂಶಗಳು ಸಾವಯವ ಉತ್ಪಾದನಾ ವ್ಯವಸ್ಥೆ ಮತ್ತು ನೈಸರ್ಗಿಕ ಕೃಷಿ ಅನುಸರಿಸಿದ ಅಭ್ಯಾಸಗಳಿಗಿಂತ ಕೃವಿವಿ, ಬೆಂಗಳೂರು ಸುಧಾರಿತ ಬೇಸಾಯ ಪದ್ಧತಿಗಳು ಪ್ಯಾಕೇಜಿನಲ್ಲಿ ಅವರೆ, ರಾಗಿ, ನೇರ ಬಿತ್ತನೆ ಭತ್ತ, ಹೆಸರು ಕಾಳು, ಅಲಸಂಧೆ, ಸೋಯಾ ಅವರೆ ಮತ್ತು ತೊಗರಿ ಇಳುವರಿ ಮಟ್ಟವು (೩೦ – ೪೫ %)ಉತ್ತಮ ವಾಗಿದೆ ಎಂದು ಸೂಚಿಸಿದೆ.

Øಸಾವಯವ ಉತ್ಪಾದನಾ ವ್ಯವಸ್ಥೆಯಲ್ಲಿ ಮಣ್ಣಿನ ಸಾವಯವ ಇಂಗಾಲ ಮತ್ತು ಲಭ್ಯವಿರುವ ಸೂಕ್ಷöಮ ಪೋಷಕಾಂಶಗಳ ಸ್ಥಿತಿಯು ಉತ್ತಮ ಪ್ರತಿಕ್ರಿಯೆಯನ್ನು ತೋರಿಸಿದೆ ನಂತರ ಕೃವಿವಿ, ಬೆಂಗಳೂರು ಸುಧಾರಿತ ಬೇಸಾಯ ಪದ್ಧತಿಗಳು ಮತ್ತು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ತೋರಿಸಿದೆ.

Øವಿವಿಧ ಬೆಳೆಗಳಿಗೆ ಬೀಜಾಮೃತದೊಂದಿಗೆ ಬೀಜ ಸಂಸ್ಕರಣೆಯು ವಿವಿಧ ಅವಧಿಯ ನೆನೆಸುವಿಕೆಯ ಆಧಾರದ ಮೇಲೆ ದ್ವಿದಳ ಧಾನ್ಯಗಳಾದ ಕಾಳುಗಳಿಗೆ ಬೀಜಾಮೃತದೊಂದಿಗೆ ಐದು ನಿಮಿಷಗಳ ಕಾಲ ನೆನೆಸಿದ ನಂತರ ಹೆಚ್ಚಿನ ಮೊಳಕೆಯೊಡೆಯುವಿಕೆ ಮತ್ತು ಬೀಜದ ಶಕ್ತಿಯನ್ನು ಹೆಚ್ಚಿಸಬಹುದೆಂದು ಸೂಚಿಸುತ್ತದೆ.

Øಬಿಳಿ ರಾಗಿಯಲ್ಲಿ ಸುಪ್ತಾವಸ್ಥೆಯನ್ನು ಮುರಿಯುವಲ್ಲಿ ಬೀಜಾಮೃತವು ಪ್ರಯೋಜನಕಾರಿಯಾಗಿದೆ. ಅಲ್ಲಿ ಸುಪ್ತಾವಸ್ಥೆಯು ಅದರ ಬೇಸಾಯ / ಕೃಷಿಗೆ ಪ್ರಮುಖ ಸಮಸ್ಯೆಯಾಗಿದೆ.

 

Øವಿವಿಧ ಬೆಳೆ ಪದ್ಧತಿಗಳಲ್ಲಿ ಮಣ್ಣಿನ ಮೆಸೊಫೌನಾಗೆ ಸಂಬಧಿಸಿದoತೆ ಸಾವಯವ ಕೃಷಿ ಪದ್ಧತಿಯಲ್ಲಿ ಮಣ್ಣಿನ ಮೆಸೊಫೌನಾ ಹೆಚ್ಚಿನ ಸಂಖ್ಯೆಗಳಲ್ಲಿ ದಾಖಲಾಗಿದೆ. ತದನಂತರದಲ್ಲಿ ನೈಸರ್ಗಿಕ ಕೃಷಿ ಮತ್ತು ಸಂಪೂರ್ಣ ನಿಯಂತ್ರಣ ಪದ್ಧತಿಗಳು ಅನುಕ್ರಮವಾಗಿರುತ್ತದೆ. ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ಶಿಫಾರಸ್ಸು ಮಾಡಿರುವ ಸುಧಾರಿತ ಪದ್ಧತಿಗಳು ಮತ್ತುರೈತರ ಪದ್ಧತಿಗಳಲ್ಲಿ ಕಡಿಮೆ ಸಂಖ್ಯೆಯ ಮಣ್ಣಿನ ಮೆಸೊಫೌನಾದಾಖಲಾ

Øರೈಜೋಸ್ಪಿಯರ್ ಪ್ರಯೋಜನಕಾರಿ ಸೂಕ್ಷಾöಮಣು ಜೀವಿಗಳು ಸಸ್ಯಗಳ ಬೆಳವಣಿಗೆ ಮತ್ತು ಅಭಿವೃಧ್ಧಿ ಮತ್ತು ಲಭ್ಯವಿರುವ ರೂಪದಲ್ಲಿ ಪೋಷಕಾಂಶಗಳ ಪೂರೈಕೆಯನ್ನು ಉತ್ತೇಜಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ವಿಭಿನ್ನ ಕೃಷಿ ಪದ್ಧತಿಗಳಲ್ಲಿ ಸಾವಯವ ಕೃಷಿ ಪದ್ಧತಿ ಮತ್ತು ನೈಸರ್ಗಿಕ ಕೃಷಿ ಪದ್ಧತಿಯು ರೈಜೋಸ್ಪಿಯರ್ ಮಣ್ಣಿನಲ್ಲಿ ತುಲನಾತ್ಮಾಕವಾಗಿ ಹೆಚ್ಚಿನ ಸೂಕ್ಷಮ ಜೀವಿಯ ಚಟುವಟಿಕೆಯನ್ನು ತೋರಿಸಿದೆ.

Øಆರಂಭಿಕ ಮಣ್ಣಿನ ಸೂಕ್ಷöಮಜೀವಿಯ ವಿಶ್ಲೇಷಣೆಗೆಹೋಲಿಸಿದರೆ, ಪ್ರಯೋಜನಕಾರಿ ಸೂಕ್ಷಾöಮಣು ಜೀವಿಗಳಲ್ಲಿಶೇ೬೧.೨೫%, ಹೆಸರುಕಾಳಿನಲ್ಲಿ ಶೇ.೬೪.೨೦%, ಅಲ ಸಂದೆಯಲ್ಲಿ, ಶೇ೫೨.೦೯% ಭತ್ತದಲ್ಲಿ  ಹೆಚ್ಚಳವಾಕಂಡು ಬಂದಿರುತ್ತದೆ

Ø ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೀಜಾಮೃತದೊಂದಿಗೆ ಬೀಜ ಸಂಸ್ಕರಣೆ ಮತ್ತು ಜೀವಾಮೃತವನ್ನು೧೫ ದಿನಗಳ ಮಧ್ಯಂತರದಲ್ಲಿ ಬಳಕೆಮಾಡುವುದರಿಂದ ಪ್ರಯೋಜನಾಕಾರಿ ಸೂಕ್ಷಾöಮಣು ಜೀವಿಗಳು ಸಂಖ್ಯೆಯು ಹೆಚ್ಚಿದೆ. ಅದಲ್ಲದೇ ಹೆಚ್ಚಿನ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಉತ್ತಮ ಸಸ್ಯ ಬೆಳವಣೆಗೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

Ø    ಮೂರು ವರ್ಷಗಳ (೨೦೧೯, ೨೦೨೦ ಮತ್ತು ೨೦೨೧ಹಿಂಗಾರುಋತುವಿನ) ವಿವಿಧ ಬೆಳೆಗಳ ಮೇಲೆ ವಿವಿಧರೈತರ ಹೊಲಗಳಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆಗಳ ಸಂದರ್ಭದಲ್ಲಿ ರೈತರ ಪದ್ಧತಿ ಇಳುವರಿಯು ನೈಸರ್ಗಿಕ ಕೃಷಿ ಪದ್ಧತಿ ಇಳುವರಿಗಿಂತ ಉತ್ತಮವಾಗಿದೆಂದು (೨೪–೩೬%) ಸೂಚಿಸುತ್ತದೆ. ವೈಜ್ಞಾನಿಕವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲು ದೀರ್ಘಾವಧಿ ಅಧ್ಯಯನದ ಅಗತ್ಯವಿದೆ.

Ø    ಅಂತಿಮ ಉತ್ಪನ್ನಗಳ ಮಾದರಿಗಳ ಗುಣಮಟ್ಟದ ವಿಶ್ಲೇಷಣೆಯು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ ಪದ್ಧತಿಗಳಿಂದ ಪಡೆದ ಉತ್ಪನ್ನವು ಕೀಟ ಮತ್ತು ರೋಗನಾಶಕಗಳ ಅವಶೇಷಗಳಿಂದ ಮುಕ್ತವಾಗಿದೆ ಎಂದು ಸೂಚಿಸಿದೆ.

2  ಮಾನ್ಯ ಮುಖ್ಯ ಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಡಾ. ಸಂಜಯ್

ಎಂ. ಟಿ.

ಕರ್ನಾಟಕ ಸರ್ಕಾರ 2022-23  ಮುಂದುವರೆಯುತ್ತಿದೆ 2000 ಎಕರೆ ಪ್ರದೇಶದಲ್ಲಿ ರೈತರ ತಾಕುಗಳಲ್ಲಿ ನೈಸರ್ಗಿಕ ಕೃಷಿ ಮತ್ತು ಸಾಮಯವ ಕೃಷಿಯ ಉತ್ತಮ ಅಭ್ಯಾಸಗಳನ್ನು ಮಾಡುವ ಮೂಲಕ ಪ್ರಾತ್ಯಕ್ಷಿಕೆ ಪ್ರಗತಿಯಲ್ಲಿದೆ.

ಸಿಬ್ಬಂದಿವಿವರ

Dr. Sanjay M.T.

ಹೆಸರು : ಡಾ. ಸಂಜಯ್ ಎಂ. ಟಿ.
ಹುದ್ದೆ : ಪ್ರಾಧ್ಯಾಪಕರು ಹಾಗೂ ಯೋಜನಾ ಮುಖ್ಯಸ್ಥರು
ಶೈಕ್ಷಣಿಕವಿದ್ಯಾಭ್ಯಾಸ : ಎಂ.ಎಸ್ಸಿ. (ಕೃಷಿ), ಪಿಹೆಚ್.ಡಿ.
ವಿಷಯಪರಿಣತೆ : ಬೇಸಾಯ ಶಾಸ್ತ್ರ

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 14-03-2007

ಪ್ರಾಯೋಜನೆಗೆ ವರ ದಿಮಾಡಿಕೊಂಡದಿನ : 01-06-2016

chikkaballapura.ofr@gmail.com
mt.sanjay@gmail.com

080-23518848
92430 75082; 94493 93273

Dr. Anjan Kumar M.J.

ಹೆಸರು : ಡಾ. ಅಂಜನ್ಕುಮಾರ್ . ಎ.ಜೆ.
ಹುದ್ದೆ: ಕಿರಿಯ ಅರ್ಥಶಾಸ್ತ್ರಜ್ಞರು
ಶೈಕ್ಷಣಿಕವಿದ್ಯಾಭ್ಯಾಸ : ಎಂ.ಎ. (ಅರ್ಥಶಾಸ್ತ್ರ), ಎಂ.ಫಿಲ್., ಪಿಹೆಚ್.ಡಿ.
ವಿಷಯಪರಿಣತೆ : ಅರ್ಥಶಾಸ್ತ್ರ

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 29-01-2018

ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 17-03-2020
chikkaballapura.ofr@gmail.com
anju.economics2007@gmail.com
 080-23518848
91080 03799 / 9844508354

Basavaraj

ಹೆಸರು : ಬಸವರಾಜ್
ಹುದ್ದೆ :  ಹಿರಿಯಕ್ಷೇತ್ರ ಸಹಾಯಕರು
ಶೈಕ್ಷಣಿಕವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ.
ವಿಷಯಪರಿಣತೆ :  ಕ್ಷೇತ್ರ

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 03-07-2013

ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 03-07-2013

basavarajmookappa@gmail.com
90089 84612

Venkatesh. M

ಹೆಸರು : ವೆಂಕಟೇಶ್ ಎಂ
ಹುದ್ದೆ : ಕ್ಷೇತ್ರ ಸಹಾಯಕರು
ವಿಷಯಪರಿಣತೆ : ಎಸ್.ಎಸ್.ಎಲ್.ಸಿ.
ವಿಷಯಪರಿಣತೆ : ಕ್ಷೇತ್ರ

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 09-10-2019

ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 04-07-2022

kusumayesh@gmail.com
80954 29542

Shivakumar B.S.

ಹೆಸರು : ಶಿವಕುಮಾರ್ ಬಿ.ಎಸ್.
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ.
ವಿಷಯಪರಿಣತೆ: ಕ್ಷೇತ್ರ

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 01-12-1999

ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 29-05-2023

shiva.jathin@gmail.com
98456 31503

Chethan Kumar K. J.

ಹೆಸರು : ಚೇತನಕುಮಾರ್ಕೆ.ಜೆ.
ಹುದ್ದೆ ಕ್ಷೇತ್ರ : ಸಹಾಯಕರು
ಶೈಕ್ಷಣಿಕವಿದ್ಯಾಭ್ಯಾಸ :  (ಗುತ್ತಿಗೆಆಧಾರದ ಮೇಲೆ)
ವಿಷಯಪರಿಣತೆ : ಪಿ.ಯು.ಸಿ.

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 08-09-2023

ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 08-09-2023

chethankumar.cheth@gmail.com

98458 49978

Vasanthi. N

ಹೆಸರು : ವಾಸಂತಿ. ಎನ್
ಹುದ್ದೆ :  ಕಿರಿಯ ಸ್ಟೆನೋ/ ಎಲ್.ಡಿ.ಸಿ.
ಶೈಕ್ಷಣಿಕವಿದ್ಯಾಭ್ಯಾಸ : (ಗುತ್ತಿಗೆಆಧಾರದ ಮೇಲೆ)
ವಿಷಯಪರಿಣತೆ :  ಬಿ.ಎಸ್ಸಿ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 18.07.2023

ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 18.07.2023
nvasanthi2004@gmail.com
97396 66468

Jagadeesh M.K

ಹೆಸರು : ಜಗದೀಶ ಎಂ.ಕೆ.
ಹುದ್ದೆ : ಲಘು ವಾಹನ ಚಾಲಕರು
ಶೈಕ್ಷಣಿಕವಿದ್ಯಾಭ್ಯಾಸ : (ಗುತ್ತಿಗೆಆಧಾರದ ಮೇಲೆ)
ವಿಷಯಪರಿಣತೆ : ವಾಹನ ಚಾಲನೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 18-04-2023

ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 18-04-2023
jagadeesha1735@gmail.com
78298 78323

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು