Agricultural Technology Information Centre (ATIC) - Kn

ಬೆAಗಳೂರು ಕೃಷಿ ವಿಶ್ವವಿದ್ಯಾನಿಲಯವುರಾಷ್ಟಿçÃಯ ಕೃಷಿ ತಂತ್ರಜ್ಞಾನಯೋಜನೆಯಡಿಯಲ್ಲಿ ೧೯೯೯ರ ನವೆಂಬರ್ನಲ್ಲಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಯೋಗದೊಂದಿಗೆಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರವನ್ನುಸ್ಥಾಪಿಸಲಾಯಿತು. ಕೃಷಿತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ‘ಏಕಗವಾಕ್ಷಿ’ ಮುಖಾಂತರ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ದಿಪಡಿಸಿದ ಕೃಷಿ ತಂತ್ರಜ್ಞಾನಗಳು ಹಾಗೂ ತಾಂತ್ರಿಕಉತ್ಪನ್ನಗಳಾದ ಸುಧಾರಿತ ತಳಿಗಳ ಬಿತ್ತನೆ ಬೀಜಗಳು, ನರ್ಸರಿ ಸಸಿಗಳು, ಪೋಷಕಾಂಶಗಳ ಮಿಶ್ರಣ, ಜೈವಿಕ ಗೊಬ್ಬರಗಳು, ಎರೆಹುಳು ಗೊಬ್ಬರ, ಜೈವಿಕ ಕೀಟನಾಶಕಗಳು, ಮೌಲ್ಯವರ್ಧಿತ ಉತ್ಪನ್ನಗಳುಮತ್ತು ಸಣ್ಣ ಕೃಷಿ ಉಪಕರಣಗಳನ್ನು ಮಾರಾಟಕ್ಕೆಒದಗಿಸಲಾಗುತ್ತಿದೆ.ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನು ಸಾಕಣೆ, ರೇಷ್ಮೆಕೃಷಿ ಮುಂತಾದ ವಿಷಯಗಳಲ್ಲಿ ವಿವಿಧ ವಿಸ್ತರಣಾ ಪದ್ಧತಿಗಳ ಮೂಲಕ ತಾಂತ್ರಿಕ ಸಲಹಾ ಸೇವೆಗಳನ್ನು ರೈತರಿಗೆಉಚಿತವಾಗಿಒದಗಿಸಲಾಗುತ್ತಿದೆ.ಇದರಜೊತೆಗೆ,ರೈತರು ಮತ್ತುಇತರ ಸಾರ್ವಜನಿಕರ ಬೇಡಿಕೆಪೂರೈಸಲುಕರ್ನಾಟಕರಾಜ್ಯತೋಟಗಾರಿಕೆ ಇಲಾಖೆ, ನರ್ಸರಿಮೆನ್ ಸಹಕಾರ ಸಂಘ, ಲಾಲ್ಬಾಗ್, ಬೆಂಗಳೂರು ಇವರ ಸಹಯೋಗದೊಂದಿಗೆತೋಟಗಾರಿಕಾ ಸಸಿಗಳ ನರ್ಸರಿಯನ್ನು ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ ಸ್ಥಾಪಿಸಲಾಯಿತು.ಇದಲ್ಲದೆ, ಮಾಹಿತಿ ಸಂವಹನಾ ತಂತ್ರಜ್ಞಾನ(Iಅಖಿ) ಉಪಕರಣಗಳ ಮೂಲಕ ಹೆಚ್ಚು ನಿಖರತೆಯಿಂದ ಕೃಷಿ ತಂತ್ರಜ್ಞಾನಗಳನ್ನು ರಾಜ್ಯದರೈತ ಸಮುದಾಯಕ್ಕೆತಲುಪಿಸುವ ಸಲುವಾಗಿ ಇ-ಕೃಷಿ ಯುಎಎಸ್ಬಿ ಪೋರ್ಟಲ್ನ್ನುರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ ಸಿದ್ಧಪಡಿಸಲಾಯಿತು, ಈ ಪೋರ್ಟಲ್ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನು ಸಾಕಣೆ, ರೇಷ್ಮೆಕೃಷಿ, ಕೃಷಿ ಯಾಂತ್ರಿಕರಣ, ಮತ್ತು ಕೃಷಿಗೆ ಸಂಬAಧಿಸಿದ ಇತರ ಪೂರಕ ತಾಂತ್ರಿಕತೆಗಳ ಬಗ್ಗೆ ತಾಂತ್ರಿಕ ಮಾಹಿತಿಯು ಲಭ್ಯವಿರುತ್ತದೆ.ಈ ಪೋರ್ಟಲ್ನ್ನುಇತರೆ ಕೃಷಿ ಸಂಬAಧಿತ ಅಂತರ್ಜಾಲಗಳೊAದಿಗೆ ಮತ್ತುಕರ್ನಾಟಕರಾಜ್ಯದಇತರೆ ಕೃಷಿ ವಿಶ್ವವಿದ್ಯಾನಿಲಯಗಳಿಗೂ ಸಹ ಸಂಪರ್ಕಕಲ್ಪಿಸಲಾಗಿದೆ.ಇಷ್ಟೇ ಅಲ್ಲದೆ, ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಪ್ರಶ್ನೋತ್ತರಗಳಿಗಾಗಿ ಹಾಗೂ ತರಬೇತಿ ಕಾರ್ಯಕ್ರಗಳು ಹಾಗೂ ಸಭೆಗಳನ್ನು ಆಯೋಜಿಸಲುಉಪಯುಕ್ತವಾಗುವಂತೆ ಕೃಷಿತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ ವೀಡಿಯೊಕಾನ್ಫರೆನ್ಸಿಂಗ್ ಪರಿಣಿತಕೇಂದ್ರವನ್ನು ಮತ್ತುಅದರ ಸಹ ಕೇಂದ್ರಗಳನ್ನು ೭ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಪ್ರಾರಂಭಿಸಿ ಬೇಡಿಕೆಗೆಅನುಗುಣವಾಗಿ ಕಾರ್ಯಕ್ರಮಗಳನ್ನು ನಿಯೋಜಿಸಲಾಗುತ್ತಿದೆ. ಹೀಗಾಗಿ ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರವುಒAದು ಕೃಷಿ ಭಂಡಾರವಾಗಿಕಾರ್ಯನಿರ್ವಹಿಸುತ್ತಿದೆ. ಇ-ಕೃಷಿ ಪೋರ್ಟಲ್ನ್ನಅಂತರರ್ಜಾಲದ ವಿಳಾಸ http://e.krishiuasb.karnataka.gov.in

ಧ್ಯೇಯೋದ್ದೇಶಗಳು:
  • ವಿವಿಧ ವಿಷಯ ತಜ್ಞರುಗಳಿಂದ ರೈತರ ಸಮಸ್ಯೆಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡುವುದು.
  • ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಪ್ರಕಟಣೆಗಳು ಮತ್ತು ಮಾಧ್ಯಮಗಳ ಮೂಲಕ ರೈತರಿಗೆತಲುಪಿಸುವುದು
  • ಬಳಕೆದಾರರ ಅನಿಸಿಕೆ, ಅನುಭವಗಳನ್ನು ದಾಖಲಿಸಿ ಕೃಷಿ ವಿಶ್ವವಿದ್ಯಾನಿಲಯಕ್ಕೆಒದಗಿಸುವ ವ್ಯವಸ್ಥೆಯನ್ನುಕಲ್ಪಿಸುವುದು.
  • ಮಾಹಿತಿ ಸಂವಹನಾ ತಂತ್ರಜ್ಞಾನಗಳ ಮೂಲಕ ತಾಂತ್ರಿಕ ಮಾಹಿತಿಯನ್ನುಒದಗಿಸುವುದು.
ಚಟುವಟಿಕೆಗಳು:
  • ಏಕಗವಾಕ್ಷಿ ವ್ಯವಸ್ಥೆಯಡಿ ಸಾಂಸ್ಥಿಕ ಮಟ್ಟದಲ್ಲಿರೈತರಿಗೆ ಹಾಗೂ ಇತರೆಆಸಕ್ತರಿಗೆಅಗತ್ಯವಿರುವ ಬಿತ್ತನೆ ಬೀಜ, ನರ್ಸರಿ ಸಸಿಗಳು, ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಪೋಷಕಾಂಶಗಳ ಮಿಶ್ರಣ, ಕೃಷಿ ತಂತ್ರಜ್ಞಾನಆಧಾರಿತ ಪ್ರಕಟಣೆಗಳು ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವುದು.
  • ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನು ಸಾಕಣೆ, ರೇಷ್ಮೆಕೃಷಿ ಮುಂತಾದ ವಿಷಯಗಳಲ್ಲಿ ವಿವಿಧ ವಿಸ್ತರಣಾ ಪದ್ಧತಿಗಳ ಮೂಲಕ ತಾಂತ್ರಿಕ ಸಲಹಾ ಸೇವೆಗಳನ್ನು ಉಚಿತವಾಗಿರೈತರಿಗೆಒದಗಿಸುವುದು.
  • ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರವು ನಿರ್ವಹಣಾ ವೆಚ್ಚದಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಂಡು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನು ಸಾಕಣೆಹಾಗೂ ರೇಷ್ಮೆಕೃಷಿಯಲ್ಲಿಆಧುನಿಕ ಬೇಸಾಯ ಪದ್ಧತಿಗಳ ಪುಸ್ತಕಗಳು, ಹಸ್ತ ಪ್ರತಿಗಳು ಹಾಗೂ ಕಿರು ಹೊತ್ತಿಗೆಗಳನ್ನು ಪ್ರಕಟಿಸಿ ಮಾರಾಟ ಮಾಡುವುದು.
  • ಇತರೆ ಸಂಸ್ಥೆಗಳು ಆಯೋಜಿಸುವ ಕೃಷಿ ಮೇಳಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯದತಂತ್ರಜ್ಞಾನ ಪ್ರದರ್ಶನ ಮತ್ತು ಸುಧಾರಿತ ಬೇಸಾಯ ಪದ್ಧತಿಗಳ ಪುಸ್ತಕಗಳು, ಹಸ್ತಪ್ರತಿಗಳು, ಮಲ್ಟಿಮೀಡಿಯ ಡಿ.ವಿ.ಡಿ.ಗಳು ಮತ್ತುಇತರೆ ಪ್ರಕಟಣೆಗಳನ್ನು ಮಾರಾಟ ಮಾಡುವುದು.
  • ತಂತ್ರಜ್ಞಾನದ ಅಳವಡಿಕೆಯ ಬಗ್ಗೆ ರೈತರಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ದಾಖಲಿಸಿ ಮುಂದಿನ ಕ್ರಮಕ್ಕಾಗಿವಿಶ್ವವಿದ್ಯಾನಿಲಯದಸಂಶೋಧನೆಗೆಒದಗಿಸುವುದು.
  • ವಿಶ್ವವಿದ್ಯಾನಿಲಯ ಮತ್ತುರೈತರ ನಡುವಿನ ಸಂಪರ್ಕವನ್ನು ಸದೃಡಗೊಳಿಸುವುದು.
  • ರೈತರ ಸಮಸ್ಯಾತ್ಮಕ ತಾಕುಗಳಿಗೆ ಭೇಟಿ ಹಾಗೂ ಸಲಹಾ ಸೇವೆಯನ್ನುಒದಗಿಸುವುದು.
  • ಅಗ್ರಿ-ಪೋರ್ಟಲ್ ನಿರ್ವಹಣೆ ಮತ್ತುಡಿಜಿಟೈಸ್ಡ್ ಮಾಹಿತಿಯನ್ನುಎಲ್ಲಾ ಪಾಲುದಾರರಿಗೆಒದಗಿಸುವುದು.
  • ವೀಡಿಯೋಕಾನ್ಫ್ರೆನ್ಸ್ ಮುಖಾಂತರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ರೈತರು ನಿರಂತರವಾಗಿ ಕೇಳುವ ಪ್ರಶ್ನೆಗಳಿಗೆ ದಿನ ಪತ್ರಿಕೆಯವಿಶೇಷ ಅಂಕಣ (ರೈತ ಮಿತ್ರ) ಮೂಲಕ ಸಮಂಜಸಉತ್ತರಗಳನ್ನು ನೀಡುವುದು.
 
E-Krishi Seve:
Staff
Dr.N.Rajanna
 
ಡಾ|| ಕೆ. ಪಿ. ರಘುಪ್ರಸಾದ್ 
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-9448220172
Dr. Sowmya
ಡಾ|| ಎಂ.ಶಾಲಿನಿ
ಸಹಾಯಕ ಪ್ರಾಧ್ಯಾಪಕರು (ತೋಟಗಾರಿಕೆ)

This email address is being protected from spambots. You need JavaScript enabled to view it.
+91-9481735592

Additional information