ಅಭಾಸುಪ್ರಾಯೋಜನೆ/ಘಟಕ | ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ (ಮೇವು ಬೆಳೆ ಹಾಗೂ ಬಳಕೆ) | ||||||||||||||||||||||||||||||||||||||||||||||||||||||||||||||||||||||
ಸ್ಥಳ | ವಲಯ ಕೃಷಿ ಸಂಶೋಧನಾಕೇAದ್ರ, ವಿ.ಸಿ.ಫಾರಂ, ಮಂಡ್ಯ | ||||||||||||||||||||||||||||||||||||||||||||||||||||||||||||||||||||||
ಪ್ರಾರಂಭವಾದ ವರ್ಷ | (1987 ಪ್ರಾರಂಭದಲ್ಲಿ ಕೃಷಿ ಸಂಶೋಧನಾಕೇAದ್ರ ಕೊನೆಹಳ್ಳಿಯಲ್ಲಿ ತದನಂತರ ವಿ.ಸಿ.ಫಾರಂ, ಮಂಡ್ಯಕ್ಕೆ 2004 ರಲ್ಲಿ ವರ್ಗಾವಣೆಗೊಳಿಸಲಾಯಿತು) | ||||||||||||||||||||||||||||||||||||||||||||||||||||||||||||||||||||||
ಉದ್ದೇಶಗಳು | · ಅಧಿಕ ಇಳುವರಿ ಹಾಗೂ ಉತ್ತಮಗುಣಮಟ್ಟದ ಮೇವಿನ ಬೆಳೆಗಳ ತಳಿಗಳನ್ನು ಅಭಿವೃದ್ದಿಪಡಿಸುವುದು
· ಕೃಷಿ ವಲಯನುಸಾರಅಧಿಕ ಹಸಿರು ಮೇವಿನ ಇಳುವರಿಗಾಗಿ ಉತ್ಪಾದನಾ ತಾಂತ್ರಿಕತೆಗಳನ್ನು ಅಭಿವೃದ್ದಿಪಡಿಸುವುದು · ಕೃಷಿ ಅರಣ್ಯ ಹುಲ್ಲುಗಾವಲು ಅಭಿವೃದ್ದಿಗೆ ತಾಂತ್ರಿಕತೆಗಳನ್ನು ಅಭಿವೃದ್ದಿಪಡಿಸುವುದು · ಮೇವಿನ ಹಸಿರು ಗಿಡ ಮರಗಳ ಬಗ್ಗೆ ಹೆಚ್ಚಿನ ಸಂಶೋಧನಾ ಕೈಗೊಳ್ಳುವುದು · ಸಾವಯವಕೃಷಿಯಲ್ಲಿ ಮೇವು ಉತ್ಪಾನಾ ತಾಂತ್ರಿಕತೆಗಳನ್ನು ರೂಪಿಸುವುದು · ಬಯೋಪೋರ್ಟಿಫಿಕೇಷನ್ ಹಾಗೂ ನ್ಯಾನೊ ತಾಂತ್ರಿಕತೆಗಳ ಅಳವಡಿಕೆ ಅಧ್ಯಾಯನ · ಸಮಸ್ಯಾತ್ಮಕ ಮಣ್ಣುಗಳಲ್ಲಿ ಮೇವು ಉತ್ಪಾದನಾ ತಾಂತ್ರಿಕತೆಗಳನ್ನು ಅಭಿವೃದ್ದಿಪಡಿಸುವುದು · ಜಲಕೃಷಿ ಮೇವು ಉತ್ಪಾದನಾ ತಾಂತ್ರಿಕತೆಗಳನ್ನು ಅಭಿವೃದ್ದಿಪಡಿಸುವುದು · ರೈತರಿಗೆ ಮೇವು ಬೆಳೆಗಳ ತಳಿಗಳು ತಾಂತ್ರಿಕತೆಗಳು ಮತ್ತು ಶೇಖರಣೆ, ಸಂಸ್ಕರಣೆ ಬಗ್ಗೆ ತರಬೇತಿ ನೀಡುವುದು · ಕ್ಷೇತ್ರ ಪ್ರಯೋಗಗಳ ಮುಖಾಂತರ ರೈತರಿಗೆ ಮೇವು ಬೆಳಗೆಳ ಬಗ್ಗೆ ಅರಿವು ಮೂಡಿಸುವುದು |
||||||||||||||||||||||||||||||||||||||||||||||||||||||||||||||||||||||
ಸಂಶೋಧನಾ ಕಾರ್ಯಕ್ರಮಗಳು | · ಪ್ರಮುಖ ಮೇವಿನ ಬೆಳೆಗಳಾದ ಮೇವಿನ ಅಲಸಂದೆ ಮುಸುಕಿನ ಜೋಳ, ಸಜ್ಜೆ, ತೋಕೆಗೋಧಿ, ಕುದುರೆಮಸಾಲೆ ನೇಪಿಯರ್ ಹುಲ್ಲು ಹಾಗೂ ಗಿನಿಹುಲ್ಲಿನ ಬೆಳಗಳಲ್ಲಿ ಅಧಿಕ ಇಳುವರಿ ಹಾಗೂ ಉತ್ತಮ ಗುಣಮಟ್ಟದ ತಳಿಗಳನ್ನು ಅಭಿವೃದ್ದಿ ಪಡಿಸುವುದು.
· ಅಧಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕ್ರಮಗಳಾದ ಪೋಷಕಾಂಶಗಳ ನಿರ್ವಹಣೆ, ಮೇವು ಬೆಳೆ ಪದ್ದತಿಗಳನ್ನು ಗುರುತಿಸುವಿಕೆ. ನ್ಯಾನೋ ತಾಂತ್ರಿಕತೆಗಳ ಬಳಕೆ ನೀರು ನಿರ್ವಹನಾ ತಂತ್ರಜ್ಞಾನಗಳು, ಲಘು ಪೋಷಕಾಂಶಗಳ ಬಳಕೆ ಹಾಗೂ ಜಲ ಕೃಷಿಯಲ್ಲಿ ಮೇವು ಉತ್ಪಾದನೆ ತಾಂತ್ರಿಕತೆಗಳನ್ನು ಅಭಿವೃದ್ದಿಪಡಿಸುವ ಅಧ್ಯಾಯನ |
||||||||||||||||||||||||||||||||||||||||||||||||||||||||||||||||||||||
ಸಂಶೋದನಾ ಸಾಧನೆಗಳು | ಅ. ಮೇವು ತಳಿ ಅಭಿವೃದ್ದಿ
ಮೇವಿನ ಅಲಸಂದೆ ತಳಿ (ಎಂಎಫ್ಸಿ -08-14) ಈ ತಳಿಯನ್ನು ವಲಯ ಕೃಷಿ ಸಂಶೋಧನಾಕೇಂದ್ರ, ವಿ.ಸಿ.ಫಾರಂ, ಮಂಡ್ಯ ಕೃವಿವಿ ಬೆಂಗಳೂರಿನಿಂದ ೨೦೧೪ ನೇ ಇಸವಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ತಳಿಯು ಅಧಿಕ ಹಸಿರು ಸೊಪ್ಪಿನ ಇಳುವರಿ ಸಾಮರ್ಥ್ಯ ಹೊಂದಿರುವುದರ ಜೊತೆಗೆ (೨೦೦.೧ ಕ್ವಿ/ಹೆ) ಉತ್ತಮ ಕಾಳಿನ ಇಳುವರಿ (೭.೪ ಕ್ವಿ/ಹೆ) ಹೊಂದಿದೆ ಮೇವಿನ ಅಲಸಂದೆ ತಳಿ (ಎಂಎಫ್‌ಸಿ ೦೯-೦೧) ಈ ತಳಿಯನ್ನು ವಲಯ ಕೃಷಿ ಸಂಶೋಧನಾಕೇಂದ್ರ, ವಿ.ಸಿ.ಫಾರಂ, ಮಂಡ್ಯದಲ್ಲಿ ಅಭಿವೃದ್ದಿಪಡಿಸಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳೆಯಲು ಸೂಕ್ತ ಎಂದು ೨೦೧೬ ನೇ ಇಸವಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಡುಗಡೆಮಾಡಲಾಯಿತು. ಈ ತಳಿಯು ಅಧಿಕ ಹಸಿರು ಸೊಪ್ಪಿನ ಇಳುವರಿ (೩೦೧.೬ ಕ್ವಿ/ಹೆ) ಒಣ ಪದಾರ್ಥ (೪೩.೪ ಕ್ವಿ/ಹೆ) ಕಚ್ಚಾಸಸಾರಜನಕ(೭.೫ ಕ್ವಿ/ಹೆ) ಹಾಗೂ ಬೀಜದ ಇಳುವರಿ (೧೦.೫ ಕ್ವಿ/ಹೆ) ಕೊಡುವ ಸಾಮರ್ಥ್ಯತೆ ಹೊಂದಿದ್ದು ಜೊತೆಗೆ ತುಕ್ಕುರೋಗ ಸಹಿಷ್ಣುತೆಯನ್ನು ಹೊಂದಿದೆ.
ಮೇವಿನ ಅಲಸಂದೆ (ತಳಿ ಎಂ.ಎಫ್.ಸಿ 09-3) ಈ ತಳಿಯನ್ನು ವಲಯ ಕೃಷಿ ಸಂಶೋಧನಾಕೇಂದ್ರ, ವಿ.ಸಿ.ಫಾರಂ, ಮಂಡ್ಯದಲ್ಲಿ ಅಭಿವೃದ್ದಿ ಪಡಿಸಲಾಗಿದ್ದು ಕರ್ನಾಟಕ ರಾಜ್ಯದಎಲ್ಲಾ ಪ್ರದೇಶಗಳಲ್ಲಿ ಬೆಳೆಯಲು ೨೦೨೧ನೇ ಇಸವಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ತಳಿಯು ಹಸಿರು ಸೊಪ್ಪಿನ ಇಳುವರಿ (೩೦೯.೭ ಕ್ವಿ/ಹೆ) ಒಣ ಪದಾರ್ಥ (೮೩.೨ ಕ್ವಿ/ಹೆ) ಮತ್ತು ಕಚ್ಚಾಸ ಸಾರಜನಕದ ಇಳುವರಿ (೧೨.೪ ಕ್ವಿ/ಹೆ) ಕೊಡವ ಸಾಮರ್ಥ್ಯತೆ ಹೊಂದಿರುತ್ತದೆ.
ನೇಪಿಯರ್ ಹುಲ್ಲುತಳಿ (ಬಿಎನ್ಹೆಚ್ 10) ಈ ತಳಿಯನ್ನು ಭೈಫ್ ಸಂಸ್ಥೆ ಪುಣೆ ಮಹಾರಾಷ್ಟçದಲ್ಲಿ ಅಭಿವೃದ್ದಿಪಡಿಸಲಾಗಿದ್ದು ನಮ್ಮ ರಾಜ್ಯಕ್ಕೂ ಸಹ ಸೂಕ್ತವೆಂದು ಗುರುತಿಸಿ ೨೦೧೪ನೇ ಇಸವಿಯಲ್ಲಿ ಶಿಪಾರಸ್ಸು ಮಾಡಲಾಯಿತು. ಈ ತಳಿಯು ಪ್ರತಿ ಹೆಕ್ಟೇರಿಗೆ ಎ ೧೪೩೦ ಕ್ವಿಂಟಾಲ್ ಹಸಿರು ಮೇವಿನ ಇಳುವರಿ ಕೊಡುವ ಸಾಮರ್ಧ್ಯ ಹೊಂದಿದ್ದು ಜಾನುವಾರುಗಳು ತಿನ್ನಲು ಯೋಗ್ಯವಾಗಿದ್ದು ಸುಲಭವಾಗಿ ಜೀರ್ಣವಾಗುವಗುಣ ಹೊಂದಿರುತ್ತದೆ.
ಗಿನಿಹುಲ್ಲುತಳಿ (ಜೆ.ಹೆಚ್.ಜಿ.ಜಿ. 08-01) ಈ ತಳಿಯನ್ನು ಐಜಿಎಫ್‌ಆರ್‌ಎಸ್,ಜಾನ್ಸಿ ಸಂಸ್ಥೆಯಲ್ಲಿ ಅಭಿವೃದ್ದಿಪಡಿಸಿದ್ದು ನಮ್ಮ ರಾಜ್ಯಕ್ಕೂ ಸಹ ಸೂಕ್ತವೆಂದುಕಂಡು ಬಂದಿದ್ದರಿಂದ೨೦೧೪ನೇ ಇಸವಿಯಲ್ಲಿ ಈ ತಳಿಯನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಲಾಯಿತು. ಈ ತಳಿಯ ೧೦೦೭ ಕ್ವಿಂಟಾಲ್ ಪ್ರತಿ ಹೆಕ್ಟೇರಿಗೆ ಹಸಿರು ಮೇವಿನ ಇಳುವರಿ ಕೊಡವ ಸಾಮರ್ಥ್ಯತೆ ಹೊಂದಿರುತ್ತದೆ.
ಮೇವಿನ ತೋಕೆ ಗೋದಿ ತಳಿ (ಆರ್.ಓ 11-1) ಈ ತಳಿಯನ್ನು ಎಂಪಿಕೆವಿ ರಾಹುರಿ, ಮಹಾರಾಷ್ಟ್ರ ಸಂಸ್ಥೆಯಿಂದ ಅಭಿವೃದ್ದಿಪಡಿಸಲಾಗಿದ್ದು ನಮ್ಮರಾಜ್ಯಕ್ಕೆ ಸೂಕ್ತವೆಂದುಕಂಡು ಬಂದಿರುವುದರಿಂದ ೨೦೧೯ನೇ ಇಸವಿಯಲ್ಲಿ ಶಿಪಾರಸ್ಸುಗೊಳಿಸಲಾಯಿತು. ಈ ತಳಿಯ ಅವಧಿಯು ಸುಮಾರು ೫೫ ರಿಂದ ೬೦ ದಿವಸಗಳಾಗಿದ್ದು ಪ್ರತಿ ಹೆಕ್ಟೇರಿಗೆ ೩೮೩ ಕ್ವಿ. ಹಸಿರು ಮೇವು ೮೭.೩ ಕ್ವಿಂಟಾಲ್ ಒಣ ಪದಾರ್ಥ ಹಾಗೂ ೭.೮ಕ್ವಿಂಟಾಲ್‌ಕಚ್ಚಾ ಸಸಾರಜನಕ ಇಳುವರಿ ಕೊಡುವ ಸಾಮರ್ಥತೆ ಹೊಂದಿದೆ.
ಬ. ಮೇವು ಬೆಳೆ ಉತ್ಪಾದನಾ ತಾಂತ್ರಿಕತೆಗಳು
|
||||||||||||||||||||||||||||||||||||||||||||||||||||||||||||||||||||||
ಪ್ರಶಸ್ತಿಗಳು /ಗುರುತಿಸುವಿಕೆ |
|
||||||||||||||||||||||||||||||||||||||||||||||||||||||||||||||||||||||
ಲಭ್ಯವಿರುವ ಸೌಲಭ್ಯಗಳು | · ಮೇವಿನ ಬೆಳೆಗಳ ಗುಣಮಟ್ಟ ಪರಿಕ್ಷಿಸುವ ಪ್ರಯೋಗಶಾಲೆ
· ಸಂಶೋಧನೆ ಕೈಗೊಳ್ಳಲು ಸೌಕರ್ಯಗಳ ಲಭ್ಯತೆ · ವಿವಿಧ ಮೇವಿನ ಬೆಳೆಗಳ ತಳಿಗಳು |
||||||||||||||||||||||||||||||||||||||||||||||||||||||||||||||||||||||
ಇತರೆ ಚಟುವಟಿಕೆಗಳು | · ಪರಿಶಿಷ್ಟಜಾತಿ ಅಭಿವೃದ್ದಿಗಾಗಿ ವಿಶೇಷ ಪ್ರಯೋಜನೆ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಕಾರ್ಯಗತಗೊಳಿಸುವುದು.
· ಗಿರಿಜನ ಅಭಿವೃದ್ದಿಯೋಜನೆಯ ಕಾರ್ಯ ಕ್ರಮಗಳನ್ನು ಕಾರ್ಯಗತಗೊಳಿಸುವುದು · ಮೇವು ಬೆಳೆಗಳ ತಳಿಗಳು ಹಾಗೂ ಉತ್ಪಾದನಾ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು |
||||||||||||||||||||||||||||||||||||||||||||||||||||||||||||||||||||||
ಕಾರ್ಯಚರಣೆಯಲ್ಲಿ
ಬಾಹ್ಯಅನುದಾನಿತ ನಿಯೋಜನೆಗಳು |
|
ಸಿಬ್ಬಂಧಿ ವಿವರ :
ವೈಜ್ಞಾನಿಕ ಸಿಬ್ಬಂಧಿ :
ಶೈಕ್ಷಣಿಕ ವಿದ್ಯಾಬ್ಯಾಸ : ಪಿ.ಹೆಚ್.ಡಿ. (ಬೇಸಾಯಶಾಸ್ತ್ರ)
ವಿಷಯ ಪರಿಣತೆ : ವಿವಿಧ ಬೆಳೆಗಳಲ್ಲಿ ಕಳೆ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ನೀರು ನಿರ್ವಹಣೆ ಮತ್ತು ಬೆಳೆ ಪದ್ದತಿಗಳ ಅಧ್ಯಾಯನ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡಿರುವ : ದಿನ 08-03-1993
ಪ್ರಾಯೋಜನೆಗೆ ವರದಿ ಮಾಡಿಕೊಂಡ : ದಿನ 28-07-2005
bgshekar66@gmail.com
shekara_gundanaik@rediffmail.com
08232-244147
ಶೈಕ್ಷಣಿಕ ವಿದ್ಯಾಬ್ಯಾಸ : ಪಿ.ಹೆಚ್.ಡಿ. (ತಳಿ ಅಭಿವೃದ್ದಿ ಮತ್ತು ಅನುವಂಶೀಯತೆ)
ವಿಷಯ ಪರಿಣತೆ : ಏಕದಳ, ದ್ವಿದಳ, ಹಾಗೂ ಮೇವು ಬೆಳೆಗಳಲ್ಲಿ ತಳಿ ಅಭಿವೃದ್ದಿ ಹಾಗೂ ಅನುವಂಶೀಯತೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡಿರುವ ದಿನ : 11-04-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 29-05-2015
pmahadevu69@gmail.com
08232-244147
ತಾಂತ್ರಿಕ ಸಿಬ್ಬಂದಿ :
ಶೈಕ್ಷಣಿಕ ವಿದ್ಯಾಬ್ಯಾಸ : ಪಿ.ಹೆಚ್.ಡಿ. (ಕೃಷಿ ಕೀಟಶಾಸ್ತ್ರ)
ವಿಷಯ ಪರಿಣತೆ : ವಿವಿಧ ಬೆಳೆಗಳಲ್ಲಿ ಕೀಟಭಾದೆಗಳು ಹಾಗೂ ಅವುಗಳ ನಿರ್ವಹಣೆ, ತೆನೆ ಹುಳುಗಳು ಹಾಗೂ ಅವುಗಳ ನಿರ್ವಹಣೆ, ಮೇವಿನ ಬೆಳೆಗಳು
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡಿರುವ : ದಿನ 30-12-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 30-12-2013
nmchikkarugi@uasbangalore.edu.in
chikka68@gmail.com
08232-244147
ಸಹಾಯಕ ಸಿಬ್ಬಂದಿ :
ಶೈಕ್ಷಣಿಕ ವಿದ್ಯಾಬ್ಯಾಸ : ಎಸ್.ಎಸ್.ಎಲ್.ಸಿ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡಿರುವ ದಿನ : 25-05-1994
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 20-04-2012
ಶೈಕ್ಷಣಿಕ ವಿದ್ಯಾಬ್ಯಾಸ : ಎಸ್.ಎಸ್.ಎಲ್.ಸಿ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡಿರುವ ದಿನ : 11-08-2003
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 03-07-2019
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು