Title Image

ರೈತರ ತರಬೇತಿ ಸಂಸ್ಥೆ


ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಜ್ಞಾನವರ್ಧನೆ ಮತ್ತು ಗುಣಮಟ್ಟದ ತರಬೇತಿ ನೀಡುವ ಸಂಸ್ಥೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತ ತರಬೇತಿ ಸಂಸ್ಥೆಯು ೧೯೬೭ರಲ್ಲಿ ಸ್ಥಾಪನೆಗೊಂಡಿತು ಇದರ ಮುಖ್ಯ ಧ್ಯೇಯೋದ್ದೇಶ ರೈತರಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡುವಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿ ನೀಡುವಿಕೆ ಇದಕ್ಕಾಗಿ ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಹಾಗೂ ಕೆಲವು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ಪ್ರಾಯೋಜಕತ್ವ ಹಾಗೂ ಸಹಭಾಗಿತ್ವದಲ್ಲಿ ಸಂಸ್ಥೆಯು ಕೃಷಿ ಸಂಬಂಧಿತ ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತಿದೆ.

ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ವಿಸ್ತರಣಾ ಸೇವೆಯ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಸಹಭಾಗಿತ್ವದಲ್ಲಿ ಸಾಮಾನ್ಯ ವಿಸ್ತರಣಾ ಸೇವೆಯ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ರೈತರಿಗಾಗಿ ಕೃಷಿಯ ನೂತನ ತಾಂತ್ರಿಕತೆಗಳು, ಸಮಗ್ರ ಕೃಷಿ, ತೋಟಗಾರಿಕಾ ಬೆಳೆಗಳ ತಾಂತ್ರಿಕತೆ, ಸಾವಯುವ ಕೃಷಿ ಮುಂತಾದ ವಿಷಯಗಳ ಬಗ್ಗೆ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಮಣ್ಣು ಆರೋಗ್ಯ ಅಭಿಯಾನ, ಭೂಚೇತನ, ಕಿರುಧಾನ್ಯ ಉತ್ತೇಜನ ಮುಂತಾದ ವಿಶೇಷ ಕಾರ್ಯಕ್ರಮಗಳ ಕುರಿತು ಸಾಂಸ್ಥಿಕ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.

ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಮೈಸೂರು) ಇವರ ಪ್ರಾಯೋಜಕತ್ವದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಅಳವಡಿಸಬಹುದಾದ ಬೇಸಾಯ ತಾಂತ್ರಿಕತೆಗಳು ಹಾಗೂ ನೀರಿನ ಸೂಕ್ತ ಸದ್ಬಳಕೆಯ ಕುರಿತು ನೀರಿನ ಬಳಕೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಅಸ್ಸಾಂ. ಓರಿಸ್ಸಾ, ಮಹಾರಾಷ್ಟ್ರ , ತಮಿಳುನಾಡು ಹಾಗೂ ಕೇರಳ ಮುಂತಾದ ಇತರ ರಾಜ್ಯದ ಕೃಷಿ ಇಲಾಖೆಗಳ ಸಹಭಾಗಿತ್ವದಲ್ಲಿ ಅಗತ್ಯ ಆಧಾರಿತ ತರಬೇತಿಗಳನ್ನು ಆಯೋಜನೆ ಮಾಡಲಾಗುತ್ತದೆ.

ಸಂಸ್ಥೆಯ ಮುಖ್ಯ ಧ್ಯೇಯ:

  • ನೂತನ ಕೃಷಿ ತಾಂತ್ರಿಕತೆ ಹಾಗೂ ಕೌಶಲ್ಯದ ವರ್ಗಾವಣೆಯಿಂದ ರೈತ / ರೈತಮಹಿಳೆಯರ ತಾಂತ್ರಿಕ ಸಶಕ್ತೀಕರಣ.

ಉದ್ದೇಶಗಳು:

  • ಕೃಷಿ ಮತ್ತು ಕೃಷಿ ಸಂಬAಧಿತ ಇತರ ವಿಷಯಗಳ ಕುರಿತು ತರಬೇತಿ ನೀಡುವಿಕೆ.
  • ಬೆಂಗಳೂರು ಜಿಲ್ಲೆಯ ರೈತರಿಗೆ ಬೇಸಾಯ ತಾಂತ್ರಿಕತೆಯ ಸೂಕ್ತ ಸಲಹೆ ನೀಡುವಿಕೆ.

ಚಟುವಟಿಕೆಗಳು:

  • ಸಂಸ್ಥೆಯಲ್ಲಿ ಅಗತ್ಯ ಆಧಾರಿತ ವಿಷಯಗಳ ಬಗ್ಗೆ ಒಂದರಿAದ ಹತ್ತು ದಿನಗಳ ಅವಧಿಯ ತರಬೇತಿಗಳನ್ನು ಆಯೋಜಿಸುವುದು.
  • .ಗ್ರಾಮೀಣ ಪ್ರದೇಶದಲ್ಲಿ ಒಂದರಿAದ ಎರಡು ದಿನಗಳ ತರಬೇತಿಯನ್ನು ಕೈಗೊಳ್ಳುವುದು.
  • ವಿಸ್ತರಣಾ ಕಾರ್ಯಕರ್ತರು, ರೈತರು, ಅನುಗಾರರು ಹಾಗೂ ರೈತ ಸಂಪರ್ಕ ವ್ಯಕ್ತಿಗಳಿಗೆ ಸಾಂಸ್ಥಿಕ ಹಾಗೂ ಸಾಂಸ್ಥಿಕೇತರ ತರಬೇತಿಗಳನ್ನು ಆಯೋಜಿಸುವುದು.
  • ವಿವಿಧ ಇಲಾಖೆಗಳ ಧ್ಯೇಯಗಳಿಗೆ ತಕ್ಕಂತೆ ರೈತರಿಗೆ ಅಗತ್ಯವಾದ ವಿಷಯಗಳಲ್ಲಿ ವಿಶೇಷ ತರಬೇತಿಗಳನ್ನು ಆಯೋಜಿಸುವಿಕೆ
  • ಕ್ಷೇತ್ರ ಭೇಟಿ, ಪ್ರಾತ್ಯಾಕ್ಷಿಕೆಗಳು, ರೈತ ವಿಜ್ಞಾನಿಗಳ ಸಂವಾದ, ವಿಚಾರ ಸಂಕಿರಣ, ಕಾರ್ಯಾಗಾರ, ಗುಂಪು ಚರ್ಚೆಗಳ ಆಯೋಜನೆ ಹಾಗೂ ಕೃಷಿ ಸಂಬಂಧಿತ ವಿಶೇಷ ದಿನಗಳನ್ನು ಸಂಸ್ಥೆಯಲ್ಲಿ ಹಾಗೂ ಹಳ್ಳಿಗಳಲ್ಲಿ ಆಚರಿಸುವುದು.
  • ವಿವಿಧ ಸಂಶೋಧನಾ ಯೋಜನೆಗಳಲ್ಲಿ ಸಹಯೋಗ ನೀಡುವಿಕೆ.

ಸಂಸ್ಥೆಯ ವೈಶಿಷ್ಟತೆಗಳು

  • ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿದೆ
  • ಸುಲಭ ಪ್ರವೇಶಿಸುವಿಕೆ
  • ಸುಸಜ್ಜಿತ ತರಬೇತಿ ಸೌಲಭ್ಯಗಳು
  • ಅರ್ಹ, ಅನುಭವಿ ಮತ್ತು ವಿಶೇಷ ಅಧ್ಯಾಪಕರು
  • ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಘಟಕಗಳು
  • ಬೋರ್ಡಿಂಗ್ ಮತ್ತು ವಸತಿ ಸೌಕರ್ಯಗಳು
  • ಉತ್ತಮ ಪ್ರಾಯೋಗಿಕ ಕಲಿಕೆಗೆ ಅವಕಾಶ
  • ಇ-ಕಲಿಕೆಗಾಗಿ ಗ್ರಂಥಾಲಯ ಮತ್ತು ಇಂಟರ್ನೆಟ್
  • ಎಕ್ಸ್‌ಪೋಸರ್ ಭೇಟಿಗಳು / ಪ್ರಾತ್ಯಕ್ಷಿಕೆ ಪ್ಲಾಟ್‌ಗಳಿಗೆ ಸಾರಿಗೆ ಸೌಲಭ್ಯಗಳು

ತರಬೇತಿ ವಿಧಾನ


  • ವೈಯಕ್ತಿಕ ಸಾಮರ್ಥ್ಯಗಳನ್ನು ವರ್ಧಿಸಲು ವಿಶೇಷ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ
  • ತರಬೇತಿ ಅವಧಿಗಳು
  • ಐಸ್ ಬ್ರೇಕಿಂಗ್
  • ನೋಂದಣಿ
  • ದೃಷ್ಟಿಕೋನ ಅಗತ್ಯ ಮೌಲ್ಯಮಾಪನ ಮತ್ತು ಪೂರ್ವ ಮೌಲ್ಯಮಾಪನ
  • ಪಠ್ಯಕ್ರಮ ಅಭಿವೃದ್ಧಿ
  • ತರಬೇತಿ ಮಾಡ್ಯೂಲ್ ಅಭಿವೃದ್ಧಿ
  • ಭಾಗವಹಿಸುವ ಪ್ರಸ್ತುತಿಗಳು
  • ಪ್ರಗತಿಪರ ರೈತರಿಂದ ಅನುಭವ ಹಂಚಿಕೆ
  • ಪ್ರಕರಣದ ಅಧ್ಯಯನ
  • ಕ್ಷೇತ್ರ ಭೇಟಿ ಸಂಶೋಧನಾ ಪ್ರದರ್ಶನಗಳು
  • ಸಂಸ್ಥೆಗಳು
  • ಇನ್‌ಪುಟ್ ಸಂಸ್ಥೆಗಳು
  • ಪ್ರಗತಿಪರ ರೈತರ ಕ್ಷೇತ್ರಗಳು
  • ಗುಂಪು ಕಾರ್ಯಗಳು
  • ಚರ್ಚೆ ಮತ್ತು ಪ್ರಸ್ತುತಿ; ಪೋಸ್ಟ್ – ಮೌಲ್ಯಮಾಪನ
  • ಫೀಡ್ ಬ್ಯಾಕ್
  • ಅನುಸರಿಸು
ತರಬೇತಿಯ ನಿರ್ವಹಣೆಯ ಸಾಮಾನ್ಯ ವಿಧಾನ
  • ಶಿಕ್ಷಣಾರ್ಥಿಗಳ ಪರಿಚಯಕ್ಕಾಗಿ ಸಂವಹನ ಹಾಗೂ ಆಟಗಳ ಆಯೋಜನೆ
  • ನೋಂದಣಿ
  • ಶಿಕ್ಷಣಾರ್ಥಿಗಳ ಅಗತ್ಯಗಳ ಪರಿಶೀಲನೆ ಹಾಗೂ ಪೂರ್ವಮೌಲ್ಯ ಮಾಪನ
  • ತರಬೇತಿ ವೇಳಾಪಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿಗಳ ಯೋಜನೆ
  • ಸಹಭಾಗಿತ್ವ ತರಬೇತಿ ಮೂಲಕ ಕಲಿಕೆ
  • ಅನುಭವಕ್ಕಾಗಿ ಕ್ಷೇತ್ರ ಭೇಟಿ
  • ಗುಂಪುಚರ್ಚೆ, ಉಪನ್ಯಾಸ, ಪ್ರಾತ್ಯಾಕ್ಷಿಕೆ, ಸಂವಾದ, ಆಟೋಟಗಳ ಮೂಲಕ ತರಬೇತಿ ನಿರ್ವಹಣೆ
  • ಸಂಶೋಧನಾ ತಾಕು, ರೈತರ ಹೊಲ, ಕೃಷಿ ಸಂಬಂಧಿತ ಸಂಸ್ಥೆಗಳಿಗೆ ಕ್ಷೇತ್ರ ಭೇಟಿ, ಚರ್ಚೆಯೊಂದಿಗೆ ಮಾಹಿತಿ ವಿನಿಮಯ, ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಇತ್ಯಾದಿ
  • ತರಬೇತಿ ನಂತರ ಜ್ಞಾನದ ಮಾಲ್ಯಮಾಪನ, ಪರಿಣಾಮ ಅಧ್ಯಯನ
  • ಹಿಮ್ಮಾಹಿತಿ ಸಂಗ್ರಹಣೆ, ಮುಕ್ತಾಯ ಸಮಾರಂಭ ತರಬೇತಿಯಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣ ಪತ್ರ ವಿತರಣೆ.

Staff

ಡಾ.ಸಿ.ನಾರಾಯಣಸ್ವಾಮಿ
ಮುಖ್ಯಬೋಧಕರು ಮತ್ತು ಮುಖ್ಯಸ್ಥರು
ಪ್ರಾಧ್ಯಾಪಕರು(ಕೃಷಿ ವಿಸ್ತರಣೆ)
ftiuasb@gmail.com
+91-9448308678

Albums

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು