Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳು, ಮಂಡ್ಯ

ಪ್ರಾಯೋಜನೆ / ಘಟಕ: ಅಖಿಲ ಭಾರತ ಸುಸಂಘಟಿತ ಕೃಷಿ ಯಂತ್ರೋಪಕರಣಗಳ ಸಂಶೋಧನಾ ಪ್ರಾಯೋಜನೆ

ಕಾರ್ಯ ಸ್ಥಾನ: ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ. ಫಾರಂ, ಮಂಡ್ಯ

ಘಟಕ/ ಪ್ರಾಯೋಜನೆ ಆರಂಭವಾದ ವರ್ಷ: ನವೆಂಬರ್-೨೦೧೫

ಧ್ಯೇಯೋದ್ದೇಶಗಳು:
1. ದಕ್ಷಿಣ ಒಣ ವಲಯ-೬ ರಲ್ಲಿನ ಕೃಷಿ ಯಾಂತ್ರೀಕರಣದ ಕುಂದು ಕೊರತೆಗಳನ್ನು ಕಂಡುಹಿಡಿದು ಸೂಕ್ತವಾದ ಕೃಷಿ ಯಂತ್ರೋಪಕರಣಗಳನ್ನು ಪರಿಚಯಿಸುವುದು
2. ಅಖಿಲ ಭಾರತ ಸುಸಂಘಟಿತ ಕೃಷಿ ಯಂತ್ರೋಪಕರಣಗಳ ಸಂಶೋಧನಾ ಪ್ರಾಯೋಜನೆಯಡಿಯಲ್ಲಿರುವ ಇತರೆ ಕೇಂದ್ರಗಳಲ್ಲಿ ಅಭಿವೃದ್ಧಿಗೊಳಿಸಿದ ಸುಧಾರಿತ ಕೃಷಿ ಯಂತ್ರೋಪಕರಣಗಳ ಕಾರ್ಯದಕ್ಷತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸುವುದು.
3. ಪರೀಕ್ಷಿಸಿದ ಸುಧಾರಿತ ಕೃಷಿ ಯಂತ್ರೋಪಕರಣಗಳನ್ನು ದಕ್ಷಿಣ ಒಣ ವಲಯ-೬ಕ್ಕೆ ಅನುಗುಣವಾಗಿ ಮಾರ್ಪಾಡುಗೊಳಿಸಿ ಉಪಯೋಗಿಸುವುದು.
4. ಮಾರ್ಪಾಡುಗೊಳಿಸಿದ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲೆಯ ರೈತರಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯ ಮುಖೇನ ಪರಿಚಯಿಸುವುದು.

ಸಂಶೋಧನಾ ಕಾರ್ಯಕ್ರಮಗಳು:

1. ಅಖಿಲ ಭಾರತ ಸುಸಂಘಟಿತ ಕೃಷಿ ಯಂತ್ರೋಪಕರಣಗಳ ಸಂಶೋಧನಾ ಪ್ರಾಯೋಜನೆಯ ಅಡಿಯಲ್ಲಿರುವ ಬರುವ ವಿವಿಧ ಕೇಂದ್ರಗಳಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಸುಧಾರಿತ ಕೃಷಿ ಯಂತ್ರೋಪಕರಣಗಳಾದ ಎರಡು ಸಾಲು ಪವರ್ ವೀಡರ್, ಡ್ರಂ ಸೀಡರ್, ಕೋನೋ ವೀಡರ್, ಸೈಕಲ್ ವೀಡರ್, ಬಹುಬೆಳೆ ಒಕ್ಕಣಾ ಯಂತ್ರ, ಬೇಲರ್, ಬಹುಬೆಳೆ ಸಂಯುಕ್ತ ಕೂರಿಗೆ, ಬ್ಯಾಕ್ ಪ್ಯಾಕ್ ಹಾರ್ವೆಸ್ಟರ್, ಶ್ರೆಡ್ಡರ್ಗಳು, ಕಬ್ಬು ಕತ್ತರಿಸಿ ನಾಟಿ ಮಾಡುವ ಸಾಧನ, ಕಬ್ಬಿನ ಸಸಿಗಳನ್ನು ನಾಟಿ ಮಾಡುವ ಸಾಧನ, ಲೇಸರ್ ಲ್ಯಾಂಡ್ ಲೆವೆಲರ್, ತೃಣಧಾನ್ಯ ಕೂರಿಗೆ, ರೀಪರ್, ಕಬ್ಬಿನ ಗರಿ ಪುಡಿಮಾಡುವ ಸಾಧನ ಹಾಗೂ ಕಬ್ಬು ಕಟಾವು ಮಾಡುವ ಯಂತ್ರಗಳ ಕಾರ್ಯದಕ್ಷತೆ ಮತ್ತು ಸಾಮರ್ಥ್ಯವನ್ನು ಕೇಂದ್ರದ ವಿವಿಧ ತಾಖುಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ಪರೀಕ್ಷಿಸಲಾಗುತ್ತಿದೆ.

2. ಕೇಂದ್ರದ ವಿವಿಧ ತಾಖುಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ಪರೀಕ್ಷಿಸಿದ ಸುಧಾರಿತ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲೆಯ ರೈತರಿಗೆ ಮುಂಚೂಣಿ / ಪದ್ಧತಿ ಪ್ರಾತ್ಯಕ್ಷಿಕೆಯ ಮುಖೇನ ಪರಿಚಯಿಸಲಾಗುತ್ತಿದೆ.

3. ರೈತರಿಗೆ ಸುಧಾರಿತ ಕೃಷಿ ಯಂತ್ರೋಪಕರಣಗಳ ಬಗ್ಗೆ ಅರಿವು ಮೂಡಿಸಲು ನಿಟ್ಟಿನಲ್ಲಿ ಕೇಂದ್ರದಲ್ಲಿ ಪ್ರತಿ ವರ್ಷವು ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಕೃಷಿ ಯಂತ್ರೋಪಕರಣಗಳ ಮೇಳವನ್ನು ಆಯೋಜಿಸಲಾಗುತ್ತಿದ್ದು, ಮಂಡ್ಯ ಮತ್ತು ಇತರೆ ಜಿಲ್ಲೆಯ ರೈತರು ಇದರ ಸದುಪಯೋಗವನ್ನು ಪಡೆಯಲಾಗುತ್ತಿದೆ.

4. ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸುಧಾರಿತ ಕೃಷಿ ಯಂತ್ರೋಪಕರಣಗಳ ಚಾಲನೆ, ದುರಸ್ಥಿ ಹಾಗೂ ನಿರ್ವಹಣೆಯ ಕುರಿತು ಅರಿವು ಮೂಡಿಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಲಭ್ಯವಿರುವ ಸೌಲಭ್ಯಗಳು :

ಎರಡು ಸಾಲು ಪವರ್ ವೀಡರ್, ಡ್ರಂ ಸೀಡರ್, ಕೋನೋ ವೀಡರ್, ಸೈಕಲ್ ವೀಡರ್, ಬಹುಬೆಳೆ ಒಕ್ಕಣಾ ಯಂತ್ರ, ಬೇಲರ್, ಬಹುಬೆಳೆ ಸಂಯುಕ್ತ ಕೂರಿಗೆ, ಬ್ಯಾಕ್ ಪ್ಯಾಕ್ ಹಾರ್ವೆಸ್ಟರ್, ಕಬ್ಬು ಕತ್ತರಿಸಿ ನಾಟಿ ಮಾಡುವ ಸಾಧನ, ಕಬ್ಬಿನ ಸಸಿಗಳನ್ನು ನಾಟಿ ಮಾಡುವ ಸಾಧನ, ಲೇಸರ್ ಲ್ಯಾಂಡ್ ಲೆವೆಲರ್, ತೃಣಧಾನ್ಯ ಕೂರಿಗೆ, ರೀಪರ್, ರೀಪರ್ ಬೈಂಡರ್, ಕೃಷಿ ತ್ಯಾಜ್ಯ ಪುಡಿಮಾಡುವ ಸಾಧನ, ಸಬ್ ಸಾಯ್ಲರ್ ಸಾಧನ, ಗುಂಡಿ ತೆಗೆಯುವ ಸಾಧನಗಳು, ಕಳೆ ತೆಗೆಯುವ ಸಾಧನಗಳು, ಕೂಳೆ ಕಬ್ಬಿನ ನಿರ್ವಹಣಾ ಸಾಧನ, ಸಿರಿಧಾನ್ಯಗಳ ಹಿಟ್ಟು ಮಾಡುವ ಸಾಧನ, ಸಿರಿಧಾನ್ಯಗಳ ಸಿಪ್ಪೆ ತೆಗೆಯುವ ಸಾಧನ, ಬೇಳೆ ಮಾಡುವ ಯಂತ್ರ ಹಾಗೂ ಕಬ್ಬಿನ ಗರಿ ಪುಡಿಮಾಡುವ ಸಾಧನ

Staff Profile:

ಹೆಸರು ಡಾ. ಶ್ರೀದೇವಿ. ಎಂ.ಎಸ್.
ಹುದ್ದೆ ಸಹಾಯಕ ಪ್ರಾಧ್ಯಾಪಕರು
ವಿದ್ಯಾಭ್ಯಾಸದ ವಿವರಗಳು ಪಿ.ಹೆಚ್ಡಿ.
ಪರಿಣಿತಿ ಹೊಂದಿದ ವಿಷಯ ಕೃಷಿ ಇಂಜಿನಿಯರಿಂಗ್
ಎಸ್.ಟಿ.ಡಿ. ಕೋಡ್ ನೊಂದಿಗೆ ದೂರವಾಣಿ ಸಂಖ್ಯೆ:
ಮೊಬೈಲ್ ಸಂಖ್ಯೆ
08232-277275
07829104070
ಇ-ಮೇಲ್
aicrpfmi@uasbangalore.edu.in

fim.uasb@gmail.com
ಹೆಸರು ಶ್ರೀ. ಸಿದ್ದರಾಜು, ಡಿ
ಹುದ್ದೆ ತಾಂತ್ರಿಕ ಸಹಾಯಕರು (ಟಿ೧)
ವಿದ್ಯಾಭ್ಯಾಸದ ವಿವರಗಳು ಎಸ್.ಎಸ್.ಎಲ್.ಸಿ,
ಮೊಬೈಲ್ ಸಂಖ್ಯೆ 09902269897
ಇ-ಮೇಲ್
rekhasiddaraju77@gmail.com
ಹೆಸರು ಶ್ರೀ. ಶಿವರಾಜು
ಹುದ್ದೆ ಹಿರಿಯ ಟ್ರಾಕ್ಟರ್ ಚಾಲಕರು
ವಿದ್ಯಾಭ್ಯಾಸದ ವಿವರಗಳು ೭ನೇ ತರಗತಿ
ಮೊಬೈಲ್ ಸಂಖ್ಯೆ 09449788096
ಇ-ಮೇಲ್
balarajums1998@gmail.com
ಹೆಸರು ಶ್ರೀ. ಸಂಜಯ್, ಪಿ.
ಹುದ್ದೆ ಜೂನಿಯರ್ ಕ್ಲರ್ಕ್ (ಸಹಾಯಕ)
ವಿದ್ಯಾಭ್ಯಾಸದ ವಿವರಗಳು ಬಿ.ಎ
ಮೊಬೈಲ್ ಸಂಖ್ಯೆ 07090836267
ಇ-ಮೇಲ್
sanjay.mys97@gmai.com

Inauguration of Farm Machinery and Technology Demonstration Mela on 28-02-2023 at Zonal Agricultural Research Station, V.C. Farm, Mandya by Dr. S.V. Suresha, Hon’ble Vice-Chancellor, UAS, GKVK, Bengaluru and Inauguration of Stalls by Dr. P.H. Ramanjinigowda, Honorable member of Board of Management, UAS, GKVK, Bengaluru

Glimpse of farm equipments displayed and demonstrated in the Mela

News coverage in local news papers

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು