ಪ್ರಾಯೋಗಿಕ (ಪೈಲಟ್) ವಿಸ್ತರಣಾಯೋಜನೆಯ ಯಶಸ್ವಿಯ ಆಧಾರದ ಮೇರೆಗೆ ೧೯೭೦ರ ದಶಕದಲ್ಲಿ ವಿಸ್ತರಣಾ ಶಿಕ್ಷಣ ಘಟಕಗಳನ್ನು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಪ್ರಾರಂಭಿಸಲಾಯಿತು. ವಿಸ್ತರಣಾ ಶಿಕ್ಷಣ ಘಟಕವುಕ್ಷೇತ್ರ ವಿಸ್ತರಣಾ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿ ಮುನ್ನಡೆಸುತ್ತದೆ.ಪ್ರತಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ವಿಷಯತಜ್ಞರತಂಡವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ಅನುವು ಮಾಡಿಕೊಡುತ್ತದೆ.
ವಿಸ್ತರಣಾ ಶಿಕ್ಷಣ ಘಟಕವು ರೈತಾಪಿ ವರ್ಗದವರಿಗೆ ನೂತನ ತಂತ್ರಜ್ಞಾನಗಳನ್ನು ಒದಗಿಸಿ ಅವರ ನಿವ್ವಳ ಆದಾಯವನ್ನು ಹೆಚ್ಚುವಂತೆ ಮಾಡಲು ಸಹಕರಿಸುತ್ತದೆ. ಕೃಷಿ ವಿಶ್ವ ವಿದ್ಯಾನಿಲಯದಡಿಯಲ್ಲಿ ಎರಡು ವಿಸ್ತರಣಾ ಶಿಕ್ಷಣ ಘಟಕಗಳಿದ್ದು ಅವು ನಾಗೇನಹಳ್ಳಿ, ಮೈಸೂರು ಮತ್ತು ಕೋಲಾರ (ಆಡಳಿತ ಕಛೇರಿ ಹೆಬ್ಬಾಳ, ಬೆಂಗಳೂರು) ದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಧ್ಯೇಯೊದ್ದೇಶಗಳು
- ನೂತನ ತಂತ್ರಜ್ಞಾನಗಳ ಮೌಲ್ಯ ಮಾಪನಕಾರ್ಯ ನಿರ್ವಹಿಸುವುದು
- ಕ್ಷೇತ್ರ ಪ್ರಾತ್ಯಕ್ಷಿಕೆಗಳ ಮುಖಾಂತರ ನೂತನ ತಂತ್ರಜ್ಞಾನಗಳನ್ನು ಪರಿಚಯ ಮಾಡಿಸುವುದು
- ಅಭಿವೃದ್ಧಿ ಇಲಾಖೆಗಳ, ಸರ್ಕಾರೇತರ ಸಂಸ್ಥೆಗಳ ಹಾಗೂ ಕೃಷಿ ಪರಿಕರ ಮಾರಾಟಗಾರರರಿಗೆ ಕೃಷಿ ಶಿಕ್ಷಣ ನೀಡುವುದು.
- ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಯೋಜಿಸಿ ಅನುಷ್ಠಾನಗೊಳಿಸುವುದು.
ಚಟುವಟಿಕೆಗಳು
- ಕ್ಷೇತ್ರ ಪ್ರಯೋಗಗಳನ್ನು ಆಯೋಜಿಸುವುದು
- ಮೂಂಚೂಣಿ ಪ್ರಾತ್ಯಕ್ಷಿಕೆಗಳು, ಪ್ರಾಥಮಿಕ ಹಂತದ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು
- ಕಿರುಜಲಾನಯನ ಪದ್ದತಿಗಳು ಹಾಗೂ ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸುವುದು
- ಪಶು ಸಂಗೋಪನೆಯಲ್ಲಿ ಹಸು, ಕೋಳಿ, ಕುರಿ ಮತ್ತು ಮೀನು ಉತ್ಪಾದನೆ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು.
- ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗೃಹ ವಿಜ್ಞಾನ, ಮೌಲ್ಯವರ್ಧನೆ ಹಾಗೂ ಪಶು ಚಿಕಿತ್ಸಾ ಶಿಭಿರಗಳನ್ನು ಏರ್ಪಡಿಸುವುದು
- ವಿಚಾರ ಸಂಕೀರಣ, ತರಬೇತಿ ಕಾರ್ಯಕ್ರಮಗಳು ಮತ್ತು ಕ್ಷೇತ್ರೋತ್ಸವಗಳನ್ನು ಏರ್ಪಡಿಸುವುದು
- ಕ್ಷೇತ್ರ ಬೇಟಿ ಹಾಗೂ ಸಲಹಾ ಸೇವೆ.
ಸಿಬ್ಬಂದಿ
Kolar Albums
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು
© ಈ ವೆಬ್ಸೈಟ್ ಯುಎಎಸ್, ಬೆಂಗಳೂರು, ಸರ್ಕಾರಕ್ಕೆ ಸೇರಿದೆ. ಕರ್ನಾಟಕ, ಭಾರತ – 560 065