Title Image
UAS, GKVK, Bangalore

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಒಣಭೂಮಿ ಕೃಷಿ

ಕಾರ್ಯ ಸ್ಥಾನ : ಜಿ.ಕೆ.ವಿ.ಕೆ., ಬೆಂಗಳೂರು
ಪ್ರಾಯೋಜನೆ ಪ್ರರಂಭವಾದ ವರ್ಷ: ೧೯೭೦
ಧ್ಯೇಯೋದ್ದೇಶಗಳು:

· ಮಣ್ಣು ಮತ್ತು ನೀರಿನ ಕೊಚ್ಚಣೆಯಾಗಿ ಪರಿಸರದಲ್ಲಿ ವ್ಯತ್ಯಾಸವಾಗದಂತೆ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸದ್ಭಳಕೆ.

· ಅಧಿಕ ಇಳುವರಿ ಮತ್ತು ಆರ್ಥಿಕ ಸ್ಥಿರತೆ ಕಾಪಾಡಲು ಸೂಕ್ತ ತಂತ್ರವನ್ನು ಅಭಿವೃದ್ಧಿಪಡಿಸುವುದು

· ದೀರ್ಘಕಾಲದಲ್ಲಿ ನೈಸರ್ಗಿಕ ಸಂಪನ್ಮೂಲಗಳು, ಉತ್ತಮ ಬೇಸಾಯ ಕ್ರಮಗಳು ಹಾಗೂ ಪರ್ಯಾಯ ಬೆಳೆ ಪದ್ಧತಿಯ ತಂತ್ರವನ್ನು ವಿವಿಧ ಹವಾಗುಣಕ್ಕೆ ತಕ್ಕಂತೆ ಅಭಿವೃದ್ಧಿಗೊಳಿಸಿ ಬೆಳೆ ಇಳುವರಿಯನ್ನು ಹೆಚ್ಚಿಸುವುದು.

· ಪರ್ಯಾಯ ಹಾಗೂ ಸುಸ್ಥಿರ ಬೆಳೆಪದ್ಧತಿಗಳನ್ನು ಅಭಿವೃದ್ಧಿಪಡಿಸುವುದು

· ಉತ್ತಮ ಖುಷ್ಕಿ ಬೇಸಾಯ ತಂತ್ರವನ್ನು ರೈತರಿಗೆ ತಲುಪಿಸುವುದು

ಸಂಶೋಧನಾ ಕಾರ್ಯಕ್ರಮಗಳು :

· ಸುಸ್ಥಿರ ಒಣ ಬೇಸಾಯ ಪದ್ದತಿಗಳು, ಮಳೆ ನೀರು ನಿರ್ವಹಣೆ, ಬೆಳೆ ಪದ್ದತಿ, ಮಣ್ಣಿನ ಆರೋಗ್ಯ ಮತ್ತು ಬೆಳೆ ಪೋಷಣೆ, ಪರ್ಯಾಯ ಭೂ ಬಳಕೆ, ಕೃಷಿ ಯಾಂತ್ರೀಕರಣ

· ಬದಲಾಗುತ್ತಿರುವ ಹವಾಮಾನ ಸನ್ನಿವೇಶಕ್ಕಾಗಿ ಖುಷ್ಕಿ ಬೇಸಾಯ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ

· ರಾಷ್ಟ್ರೀಯ ಹವಾಮಾನ ಶೀಘ್ರ ಚೇತರಿಕಾ ಕೃಷಿ ಪ್ರಾಯೋಜನೆ(ನಿಕ್ರಾ ಪ್ರಯೋಜನೆ)

· ಸಂರಕ್ಷಣ ಬೇಸಾಯ ಪದ್ದತಿಗಳನ್ನು ಅಭಿವೃದ್ಧಿ ಮಾಡುವುದು

· ಮುಂದಿನ ಪಿಳಿಗೆಗೆ ಹೊಂದಿಕೊಳ್ಳುವಂತಹ ಆಧುನಿಕ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿ ಮಾಡುವುದು

· ಮಳೆಯಾಶ್ರಿತ ಸಮಗ್ರ ಕೃಷಿ ಪದ್ದತಿಗಳು

· ಸಂಪನ್ಮೂಲ ಸಂರಕ್ಷಣೆ ಮತ್ತು ಸಾಮರ್ಥ್ಯ ಅಭಿವೃದ್ಧಿಗಾಗಿ ಮಾದರಿ ಜಲಾನಯನ ಪ್ರದೇಶದ ಅಭಿವೃದ್ಧಿ

· ಬೆಳೆಗಳ ಎತ್ಪಾದಕತೆಯ ಮೇಲೆ ಉದಯೋನಮುಕ ಕಳೆನಾಶಕಗಳ ಪರಿಣಾಮಗಳ ಆಧ್ಯಾಯನ

ಕೇಂದ್ರದ ಮಹತ್ವದ ಸಾಧನೆಗಳು :

· ಖುಷ್ಕಿ ಬೇಸಾಯ ಪ್ರಾಯೋಜನೆ ಕೇಂದ್ರವು ಕರ್ನಾಟಕದ ದಕ್ಷಿಣ ಒಣ ಪ್ರದೇಶದ ಕೃಷಿ ವಲಯವಾದ ಮದ್ಯ ಒಣವಲಯ (ವಲಯ-೪) ಪೂರ್ವ ಒಣವಲಯ (ವಲಯ-೫) ಮತ್ತು ದಕ್ಷಿಣ ಒಣವಲಯ (ವಲಯ-೬) ಗಳ ಖುಷ್ಕಿ ವಿಷಯಗಳಾಧಾರಿತ ರೈತರುಗಳ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ನೆಡೆಸುತ್ತ ಮುನ್ನೆಡೆದಿದೆ.

·  ಈ ಕೇಂದ್ರವು ಕರ್ನಾಟಕದ ದಕ್ಷಿಣ ಒಣ ಪ್ರದೇಶದಗಳಲ್ಲಿ ಇರುವ ಬೆಳೆ ಉತ್ಪಾದನೆ ತೊಡುಕು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಸೈಗಳನ್ನು ಗಮನದಲ್ಲಿ ಇಟ್ಟುಕೊಂಡು ಮಳೆ ನೀರು ನಿರ್ವಹಣೆ, ಬೆಳೆ ಮತ್ತು ಬೆಳೆ ಪದ್ಧತಿಗಳು, ತಳಿ ಅಭಿವೃದ್ಧಿ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಕೃಷಿ ಯಂತ್ರೋಪಕರಣ, ಬರ ನಿರ್ವಹಣಾ ಕ್ರಮಗಳು, ಹವಮಾನ ವೈಪರೀತ್ಯಕನುಗುಣವಾಗಿ ಪರ್ಯಾಯ ಬೆಳೆ ಯೋಜನೆ ಮುಂತಾದ ವಿಷಯಗಳಾಧಾರಿತ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ನೆಡೆಸುತ್ತಿದೆ.

•  ಕೇಂದ್ರದಿಂದ ಹೊರತಂದ ಉತ್ತಷ್ಟ ತಂತ್ರಾಜ್ಞಾನಗಳನ್ನು ಕಾರ್ಯವಾಹಿ ಸಂಶೋಧನಾ ಪ್ರಾಯೋಜನೆ, ರಾಷ್ಟ್ರೀಯ ಹವಾಮಾನ ಶೀಘ್ರ ಚೇತರಿಕಾ ಕೃಷಿ ಪ್ರಾಯೋಜನೆ ಮತ್ತು ಮಳೆಯಾಶ್ರಿತ ಸಮಗ್ರ ಕೃಷಿ ಪದ್ದತಿ ಪ್ರಾಯೋಜನೆಗಳ ಮೂಲಕ  ರೈತರ ತಾಕುಗಳಲ್ಲಿ ಮೌಲ್ಯಮಾಪನ ಮಾಡಲಾಗುವುದು.

 

ಮಣ್ಣು ಮತ್ತು ನೀರಿನ ಸಂರಕ್ಷಣೆ :

. ಖುಷ್ಕಿ ಬೇಸಾಯದಲ್ಲಿ ಮಳೆ ನೀರು ಸಂರಕ್ಷಣೆಯ ಬಗ್ಗೆ ಕಡಿಮೆ ಅರಿವು ಇರುವುದರಿಂದ ಸುರಕ್ಷಿತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ, ಅವೈಜ್ಞಾನಿಕ ಪದ್ಧತಿಗಳ ಅಳವಡಿಕೆಯಿಂದ ಬೆಳೆಗಳ ಇಳುವರಿ ಕುಂಠಿತವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರದ ಹಲವು ಸಂಶೋಧನೆಗಳ ಮೂಲಕ ರೈತರಿಗೆ ಉಪಯುಕ್ತವಾಗುವ ಹಲವು ತಂತ್ರಾಜ್ಞಾನಗಳನ್ನು ಹೊರತಂದಿದ್ದು ಅವುಗಳ ಅಳವಡಿಕೆಯಿಂದ ಖುಷ್ಕಿ ಬೇಸಾಯದ ಮಣ್ಣು ಸಂರಕ್ಷಣೆ ಜೊತೆಗೆ ಬೆಳೆ ಉತ್ಪಾದನೆಯನ್ನು ಸುಧಾರಿಸುಬಹುದಲ್ಲದೆ, ಹೆಚ್ಚಿನ ಆದಾಯವನ್ನು ಸಹ ಪಡೆಯಬಹುದಾಗಿದೆ. ಅವುಗಳಲ್ಲಿ ಬಹು ಮಖ್ಯವಾದವು ಕೆಳಕಂಡಂತಿವೆ.

· ಖುಷ್ಕಿ ಬೇಸಾಯದ ಮಣ್ಣಿನ ಸವಕಳಿ ತಡೆಯಲು ಸಮಪಾತಳಿ ಬದುಗಳನ್ನು (ಇಳಿಜಾರಿಗೆ) ಅಡ್ಡಲಾಗಿ ಮಾಡುವುದು ಹಾಗೂ ಕೆಂಪು ಮಣ್ಣಿನಲ್ಲಿ ೦.೫೬ ಚ.ಮೀ. ಗಾತ್ರದ ಬದುಗಳಿಗೆ ಬದಲಾಗಿ ೦.೩೬ ಚ. ಮೀ. ವಿಸ್ತೀರ್ಣದ ಇಳಿಜಾರು ಬದುಗಳನ್ನು ಮಾಡುವುದರಿಂದ ಶೇ. ೧೭ ರಷ್ಟು ಮಳೆ ನೀರಿನ ಸವಕಳಿಯನ್ನು ಕಡಿಮೆ ಮಾಡುತ್ತದೆ.

· ಖಸ್ ಅಥವಾ ನಸೆ ಹುಲ್ಲನ್ನು ಇಳಿಜಾರು ಇರುವ ಪ್ರದೇಶದಲ್ಲಿ ಬಹಳ ಅಂತರವಿರುವ ಎರಡು ಬದುಗಳ ಮಧ್ಯದಲ್ಲಿ ಜೈವಿಕ ಬದುವಾಗಿ ಖಸ್ ಮತ್ತು ನಸೆ ಹುಲ್ಲುಗಳನ್ನು ಬೆಳೆಯುವುದರಿಂದ ಮಣ್ಣು, ನೀರು ಮತ್ತು ಪೋಷಕಾಂಶಗಳನ್ನು ಸಮರ್ಪಕವಾಗಿ ಸಂರಕ್ಷಿಸಬಹುದು.

· ಒಂದು ಹೆಕ್ಟೇರಿಗೆ ೨೫೦ ಘನ ಮೀ ಗಾತ್ರದ ಕೃಷಿ ಹೊಂಡವನ್ನು ನಿರ್ಮಿಸುವುದರಿಂದ ಮಳೆ ನೀರನ್ನು ಸಂರಕ್ಷಿಸಿ ಬೆಳೆಗಳಿಗೆ ಬರದ ಸಂದರ್ಭಗಳಲ್ಲಿ ರಕ್ಷಣಾತ್ಮಕ ನೀರಾವರಿಯಾಗಿ ಬಳಸಬಹುದು. ಅದರಲ್ಲಿಯು ೧:೮ ಸಿಮೆಂಟ್ ಮತ್ತು ಮಣ್ಣಿನ ೫ ಸೆಂ. ಮೀ. ದಪ್ಪದ ಲೇಪನ ಮಾಡುವುದರಿಂದ ಶೇಖರಿಸಿದ ನೀರನ್ನು ಇಂಗದAತೆ ಮಾಡಬಹುದು.

· ಎರಡು ಸಾಲುಗಳ ಮಧ್ಯ ಅಂತರ ಬೇಸಾಯ ಕ್ರಮದಿಂದ ದೂಳಿನ ಹೊದಿಕೆ ನಿರ್ಮಿಸುವುದು. ಸಾಲುಗಳಲ್ಲಿ ಜೈವಿಕ ಹೊದಿಕೆಯಾಗಿ ಹಾಕುವುದರಿಂದಲು ತೇವಂಶ ಕಾಪಾಡಿಕೊಳ್ಳಬಹುದು.

· ಡೀಪ್ಟ್ರಂಚರ್ ಬಳಸಿ ಆಳವಾಗಿ ಕಾಲುವೆ ತೆಗೆಯುವುದರಿಂದ ಮಣ್ಣಿನಲ್ಲಿ ಅಧಿಕ ತೇವಾಂಶವನ್ನು ಹೆಚ್ಚುಕಾಲ ಕಾಪಾಡಿಕೊಳ್ಳಲು ನೆರವು ಮಾಡಿಕೊಡ ಬಹುದು.

· ಅರ್ಧ ಚಂದ್ರಾಕಾರದ ಬದುಗಳನ್ನು ಖುಷ್ಕಿ ತೋಟಗಳಲ್ಲಿನ ಮರಗಳ ಸುತ್ತಾ ಮಾಡುವುದರಿಂದ ಹೆಚ್ಚಿನ ತೇವಾಂಶ ಸಂರಕ್ಷಣೆ ಜೊತೆಗೆ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುತ್ತದೆ.

· ಅಲಸಂದೆ, ಹುರುಳಿ ಮತ್ತು ಅಗಸೆ ಇತ್ಯಾದಿ ಬೆಳೆಗಳನ್ನು ಹೊದಿಕೆ ಬೆಳೆಗಳಾಗಿ ಬೆಳೆಯುವುದರಿಂದ ಹಾಗೂ ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬಹುದಾಗಿದೆ.

                                              ಖಸ್ ಮತ್ತು ನಸೆ ಜೈವಿಕ ಹುಲಿನ ಬದು ಡೀಪ್ ಟ್ರಂಚÀರ್
ಇಟ್ಟಿಗೆ ಲೇಪನದ ಕೃಷಿ ಹೊಂಡ  ದೋಣೆ ಸಾಲು ಅರ್ಧ ಚಂದ್ರಾಕಾರದ ಬದುಗಳು

 ಬೆಳೆ ಮತ್ತು ಬೆಳೆ ಪದ್ಧತಿಗಳು :

ದಕ್ಷಿಣ ಕರ್ನಾಟಕದ ಕೆಂಪು ಮಣ್ಣಿನ ಪ್ರದೇಶಗಳಲ್ಲಿ ರಾಗಿ, ಮುಸುಕಿನ ಜೋಳ ಮತ್ತು ನೆಲಗಡಲೆ ಪ್ರಮುಖ ಬೆಳೆಗಳಾಗಿದ್ದು, ಇವುಗಳಲ್ಲಿ ಪ್ರಮುಖ ಅಂತರ ಬೆಳೆಗಳೆಂದರೆ, ರಾಗಿ + ಅಲಸಂದಿ (೮:೧), ರಾಗಿ + ಸೋಯಾಅವರೆ (೮:೧), ರಾಗಿ + ತೊಗರಿ (೮:೨), ನೆಲಗಡಲೆ + ತೊಗರಿ (೮:೨), ನೆಲಗಡಲೆ + ಹರಳು  (೧:೮), ಮುಸುಕಿನ ಜೋಳ + ತೊಗರಿ (೧:೧) ಮುಂತಾದವುಗಳು.

· ಪೂರ್ವ ಮುಂಗಾರಿನಲ್ಲಿ (ಮೇ) ನೆಲಗಡಲೆ, ಅಲಸಂದೆ ಇತ್ಯಾದಿ ಬಿತ್ತನೆ ಮಾಡಿ ಎರಡನೆ ಬೆಳೆಯಾಗಿ ಮೆಣಸಿನಕಾಯಿಯನ್ನು ಸೆಪ್ಟೆಂಬರ್‌ನಲ್ಲಿ ನಾಟಿ ಮಾಡಿ ೧ ರಿಂದ ೩ ಬಾರಿ ರಕ್ಷಣಾತ್ಮಕ ನೀರನ್ನುಣಿಸಿ ಉತ್ತಮ ಬೆಳೆಯನ್ನು ತೆಗೆದುಬಹುದು.

· ಪೂರ್ವ ಮುಂಗಾರಿನಲ್ಲಿ ಮೇವಿನ ಬೆಳೆಗಳನ್ನು, ಹೆಸರು/ಉದ್ದು/ಅವರೆ ಬೆಳೆಗಳನ್ನು ಬೆಳೆದು ನಂತರ ಎರಡನೆ ಬೆಳೆಯಾಗಿ ಈರುಳ್ಳಿ/ಕಡಲೆ/ಗೋದಿ ಬೆಳೆಗಳನ್ನು ಬೆಳೆಯ ಬಹುದು.

· ಹಿಪ್ಪುನೇರಳೆಯು ಕೂಡ ದಕ್ಷಿಣ ಕರ್ನಾಟಕದ ಪ್ರಮುಕ ಬೆಳೆಯಾಗಿದ್ದು, ಅಂತರ ಬೆಳೆ ಪದ್ಧತಿಗಳನ್ನು ಪಾಲಿಸುವುದಲ್ಲದೆ, ಎರಡು ಅಂತರ ಬೆಳೆಗಳನ್ನು ಬೆಳೆಯ ಬಹುದು. ಉದಾಹರಣೆ: ಜೋಡಿಸಾಲ ಹಿಪ್ಪುನೇರಳೆ + ರಾಗಿ-ರಾಗಿ, ಜೋಡಿಸಾಲ ಹಿಪ್ಪುನೇರಳೆ + ರಾಗಿ-ಅಲಸಂದೆ, ಜೋಡಿಸಾಲ ಹಿಪ್ಪುನೇರಳೆ + ಅಲಸಂದೆ-ಅಲಸಂದೆ.

· ಬರ ನಿರ್ವಹಣೆಗಾಗಿ ಕೆಲವು ಬೆಳೆಗಳನ್ನು ಒಣಬಿತ್ತನೆ ಮಾಡಬಹುದು (ರಾಗಿ) ಮತ್ತು ನಾಟಿಗೆ ಸಾದ್ಯವಿರುವ ಬೆಳೆಗಳದ ರಾಗಿ, ತೊಗರಿ, ಮೆಣಸಿನಕಾಯಿಯನ್ನು ಸಸಿಮಡಿಗಳಲ್ಲಿ ಬಿತ್ತಿ ಮಳೆ ಅನುಗುಣಕ್ಕೆ ನಾಟಿ ಕೈಗೊಳ್ಳಬಹುದು.

ತೋಗರಿ + ಅಲಸಂದೆ (:) ತೋಗರಿ + ಅವರೆ (:) ರಾಗಿ+ ತೋಗರಿ (:)
ಶೇಂಗಾ + ಅರಳು (:) ಬೆಟ್ಟದ ನೆಲ್ಲಿ + ರಾಗಿ ಸೀತಾಫಲಾ + ಮೇವಿನ ಜೋಳ

 ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ತಳಿಗಳು : 

· ದಕ್ಷಿಣ ಕರ್ನಾಟಕದ ಪ್ರಮುಖ ಬೆಳೆಯಾದ ರಾಗಿಯ ವಿವಿಧ ತಳಿಗಳು ಲಭ್ಯವಿರುವುದರಿಂದ ಬಿತ್ತನೆ ಕಾಲಮಾನಕ್ಕೆ ತಕ್ಕಂತೆ ಪರ್ಯಾಯ ಬೆಳೆ ಯೋಜನೆಯಲ್ಲಿ ಪರಿಷ್ಕರಿಸಿ ಅಧಿಕ ಇಳುವರಿ ಕೊಡುವ ರಾಗಿ ತಳಿಗಳ ಪ್ರಭೇದಗಳನ್ನು ರೈತರಿಗೆ ಶಿಫಾರಸ್ಸು ಮಾಡಲಾಗಿದೆ. ದೀರ್ಘಾವಧಿ ತಳಿಯಾದ ಎಂ.ಆರ್-೧, ಎಂ.ಆರ್-೬, ಎಲ್-೫ ಜೂಲೈ ಅರಂಭಿಕ ಬಿತ್ತನೆಗೆ, ಅಧಿಕ ಇಳುವರಿಗೆ ಹಾಗೂ ಉತ್ತಮ ಮೇವಿಗಾಗಿ ರೈತರಲ್ಲಿ ಪ್ರಚಲಿತವಾಗಿದೆ, ಮಾಧ್ಯಮಾವಧಿ ತಳಿಗಳಿಲ್ಲ ಜಿಪಿಯು-೨೮, ಜಿಪಿಯು-೬೬, ಜಿಪಿಯು-೭೫, ಎಂ.ಎಲ್-೧೮, ಕೆ.ಎಮ್.ಅರ್-೩೦೧ ಮತ್ತು ಎಂ.ಎಲ್-೩೬೫ ಹಾಗೂ ಇಂಡಪ್-೫, ಅಲ್ಪಾವಧಿ ತಳಿಗಳಲ್ಲಿ ಕೆ.ಎಮ್.ಅರ್-೩೧೬, ಜಿಪಿಯು-೪೫, ಜಿಪಿಯು-೪೮, ಜಿಪಿಯು-೨೬, ಇಂಡಪ್-೯, ಕೆ.ಎಮ್.ಅರ್-೨೦೪ ರಾಗಿ ತಳಿಗಳು ಮಳೆಯಾಶ್ರಯದಲ್ಲಿ ಅಧಿಕ ಇಳುವರಿಯನ್ನು ಕೊಡುವಂತಹ ಭರವಸೆಯ ತಳಿಗಳಾಗಿವೆ.

· ಮೆಣಸಿನಕಾಯಿಯಲ್ಲಿ ತಳಿಗಳ ಪರಿಶೀಲನೆ ನಡೆಸಿದ್ದು ಸಮೃದ್ಧಿ ಎಂಬ ತಳಿಯನ್ನು ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಿದ್ದು, ಉತ್ತಮ ಇಳುವರಿ ಕೊಡುವ ತಳಿಯಗಿದೆ.

· ಅಲಸಂದೆ ದ್ವಿದಳ ಧಾನ್ಯ ಬೆಳೆಯಾಗಿದ್ದು ಖುಷ್ಕಿ ಪ್ರದೇಶಕ್ಕೆ ಸೂಕ್ತವಾದ ತಳಿಯಾದ ಐಟಿ ೩೮೯೫೬-೧ (ಬಿಳಿ ಅಲಸಂದೆ) ಅಭಿವೃದ್ಧಿ ಪಡಿಸಲಾಗಿದ್ದು ಹೆಚ್ಚು ಇಳುವರಿ ಕೊಡುತ್ತಿದೆ.

ದೀರ್ಘಾವಧಿ ರಾಗಿ ತಳಿ ಎಂ.ಆರ್ ಹರಳು ಡಿಸಿಸ್ ತೋಗರಿ ಬಿ.ಅರ್.ಜಿ
ಹುರುಳಿ ಪಿ.ಎಚ್.ಜಿ.- ಸಮೃದ್ಧಿ ಮೆಣಸಿನಕಾಯಿ ಅಲಸಂದೆ (Pಏಃ)

ಮಣ್ಣಿನ ಆರೋಗ್ಯ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ

· ದಕ್ಷಿಣ ಕರ್ನಾಟಕದ ಭಾಗದ ಮಣ್ಣುಗಳು ಲ್ಯಾಟರೈಟಿಕ್ ಹಾಗೂ ಹಳದಿ ಕೆಂಪು ಬಣ್ಣ ಹೊಂದಿದ್ದು ಉಪ ಉಷ್ಣವಲಯದ ಅರೆ ಶುಷ್ಕ ಹವಾಗುಣದಲ್ಲಿ ಗ್ರಾನೈಟ್ ನೀಸ್ ನಿಂದ ಜನ್ಯವಾಗಿದೆ. ಇವುಗಳು ಅತ್ಯಂತ ಆಳವಾಗಿದ್ದು ನೀರನ್ನು ಬಸಿಯುವ ಮರುಳು ಮಿಶ್ರಿತ ಗೋಡು ಅಥವಾ ಮರಳು ಮಿಶ್ರಿತ ಜೇಡಿಮಣ್ಣುಗಳಾಗಿದ್ದು, ಸ್ವಲ್ಪ ಇಳಿಜಾರಿನಿಂದ ಕೂಡಿರುತ್ತದೆ. ಪೋಷಕಾಂಶಗಳ ಕೊರತೆ, ದುರ್ಬಲ ಸಾವಯವ ಅಂಶ, ಕಡಿಮೆ ನೀರು ಹಿಡಿದಿಡುವ ಸಾಮರ್ಥ್ಯ, ಕಡಿಮೆ ಭೌತಿಕ ಗುಣಗಳು, ಅಮ್ಲೀಯತೆ, ಮಣ್ಣು ಹೆಪ್ಪುಗಟ್ಟುವಿಕೆ, ಸವಕಳಿಗೆ ಒಳಗಾಗುವುದು ಈ ಮಣ್ಣಿನ ಪ್ರಮುಖ ಗುಣಗಳು.

· ಮೊಳಕೆ ಹುಟ್ಟುವ ಸಮಯದಲ್ಲಿ, ಮೇಲೈ ಮಣ್ಣು ಗಡಸಾಗುವುದರಿಂದ ಮೊಳಕೆ ಮೇಲೆ ಬರಲು ತೊಂದರೆ ಆಗುತ್ತದೆ, ಅದುದರಿಂದ ಪ್ರತಿಶತ ೧೦ ರಿಂದ ೪೦ ರಷ್ಟು ಇಳುವರಿ ಕುಂಠಿತವಾಗುತ್ತದೆ. ಇದನ್ನು ತಡೆಗಟ್ಟಲು, ಕೃಷಿ ತ್ಯಾಜ್ಯವನ್ನು ಭೂಮಿಗೆ ಸೇರ್ಪಡಿಸುವುದು ಉತ್ತಮ, ಹೆಚ್ಚು ಸಾವಯವ ಗೊಬ್ಬ g  ಕೊಟ್ಟಿಗೆ ಗೊಬ್ಬರ, ಮೆಕ್ಕೆಜೋಳದ ತ್ಯಾಜ್ಯ, ಜಿಪ್ಸಂ ಮತ್ತು ಇತರೆ ಬೆಳೆ ಉಳಿಕೆಯನ್ನು ಸಹ ಬಳಸುವುದರಿಂದ ಹೆಪ್ಪುಗಟ್ಟುವಿಕೆಯನ್ನು ತಗ್ಗಿಸ ಬಹುದು ಹಾಗೂ ಹೆಪ್ಪು ಹೊಡೆಯುವ ಸಾದನವು ಬೆಳೆಗಳ ಮೋಳಕೆ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರವು ಶಿಫರಸ್ಸು ಮಡಿದೆ.

· ಅಲಸಂದೆ ಹೆಸರು ಬೆಳೆಗಳಿಗೆ ಗಂಧಕ ಹಾಕುವುದರಿಂದ ಶೇ. ೩೧.೩೯ % ಇಳುವರಿ ಹೆಚ್ಚಿಸಬಹುದು. ಅಲ್ಲದೆ ನೆಲಗಡಲೆ, ಮುಸಕಿನ ಜೋಳ ಮತ್ತು ರಾಗಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ೧೦-೧೨.೫ ಕೆ.ಜಿ. ಸತುವಿನ ಸಲ್ಪೇಟ್ ಬಳಕೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು. ಇದೇ ರೀತಿ ಪ್ರತಿ ಹೆಕ್ಟೇರ್ ಗೆ ೧೦ ಕೆ.ಜಿ. ಬೋರಾಕ್ಸ್ ಉಪಯೋಗಿಸುವುದರಿಂದ ಖುಷ್ಕಿ ಬೆಳೆಗಳ ಇಳುವರಿ ಮಟ್ಟ ಹೆಚ್ಚಿಸಬಹುದು.

· ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಹೊಲದಲ್ಲಿ ರಾಸಯಾನಿಕ ಗೋಬ್ಬರಗಳ ಜೊತೆಗೆ ಹಸಿರೆಲೆಗೊಬ್ಬರದ ಉತ್ಪಾದನೆ, (ಬದುಗಳ ಮೇಲೆ ಗ್ಲಿರಿಸೀಡಿಯಾ) ಬೆಳೆತ್ಯಾಜ್ಯಗಳ ಬಳಕೆ, ಕೊಟ್ಟಿಗೆ ಗೊಬ್ಬರದ ಬಳಕೆ, ಹಾಗೂ ಪೂರ್ವ ಮುಂಗಾರಿನಲ್ಲಿ ಹಸಿರೆಲೆ ಗೊಬ್ಬರಕ್ಕೆ ಉತ್ತಮ ಬೆಳೆಗಳನ್ನು ಬಿತ್ತಿ ಹೂ ಬಿಡುವ ಸಮಯದಲ್ಲಿ ಸ್ಥಳದಲ್ಲಿ ಉಳುಮೆ ಮಾಡಿ ಭೂಮಿಗೆ ಸೇರಿಸುವುದರಿಂದ ಬೆಳೆಗಳ ಇಳುವರಿ ಹೆಚ್ಚಿಸಬಹುದು.

 ಬರ ಶಮನಗೊಳಿಸುವ ಪದ್ಧತಿಗಳು :

· ಅಂತರ ಬೇಸಾಯ ಕ್ರಮದಿಂದ ಧೂಳಿನ ಹೊದಿಕೆ ನಿರ್ಮಿಸುವುದು, ಕಳೆಗಳನ್ನು ತೆಗೆದು ಸಾಲುಗಳ ಮಧ್ಯ ಹೊದಿಕೆಯಾಗಿ ಹಾಕುವುದು.

· ಮುಂಗಾರು ಮಳೆಯು ಮುಂಚಿತಾವಧಿಯಾಗಿ ಕೊನೆಗೊಂಡಾಗ, ಸಸಿಗಳ ಸಂಖ್ಯೆಯನ್ನು ಕಡಿಮೆ ಮಾಡವುದು, ಹಾಗೂ ಕಳೆಯನ್ನು ತೆಗೆಯುವುದು ಅಥವಾ ಬೆಳೆಗಳನ್ನು ಕನಿಷ್ಠ ಮೇವಿಗಾಗಿ (ಮುಸುಕಿನ ಜೋಳ, ರಾಗಿ, ಹುರಳಿ) ಅಥವಾ ತರಕಾರಿಗಾಗಿ (ತೊಗರಿ, ಅವರೆ, ಅಲಸಂದೆ) ಕಟಾವು ಮಾಡುವುದು ಸೂಕ್ತ.

· ಮುಂಗಾರು ತಡವಾಗಿ ಬಂದಲ್ಲಿ ರಾಗಿ/ಮೆಣಸಿನಕಾಯಿ ಸಸಿಗಳನ್ನು ವಿವಿಧ ಹಂತಗಳಲ್ಲಿ ಸಸಿಮಡಿ ತಯಾರಿಸಿಕೊಂಡು, ಬೀಜ ಬಿತ್ತುವ ಬದಲು ನಾಟಿ ಮಾಡುವುದು ಸೂಕ್ತವೆಂದು ಕೇಂದ್ರವು ಸಂಶೋಧನೆ ಶಿಫಾರಸ್ಸು ಮಡಿದೆ.

· ಮುಂಗಾರು ಮಳೆ ಒಂದು ವಾರದಲ್ಲಿ ಬರುವ ಸನ್ನಿವೇಶಗಳಲ್ಲಿ, ಸ್ವಲ್ಪ ಹೆಚ್ಚು ಪ್ರಮಾಣದ ರಾಗಿ ಬೀಜವನ್ನು ಒಣ ಬಿತ್ತನೆ ಮಾಡುವುದು ಒಂದು ಪದ್ದತಿಯಾಗಿದೆ

· ಬಿತ್ತನೆ ಬೀಜವನ್ನು ೮ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನೆರಳಿನಲ್ಲಿ ಒಣಗಿಸಿ, ಹದಗೊಲಿಳಿಸಿ ಬಿತ್ತನೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು.

· ಬರ ಪರಿಸ್ತಿತಿಯಲ್ಲಿ ೨% ಪೋಟ್ಯಾಸಿಯಂ ಸಿಂಪರಣೆಯು ಬರ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕನಿಷ್ಠ ಇಳುವರಿಯನ್ನು ಪಡೆಯಲು ಸಹಾಯಮಾಡುತ್ತದೆ .

 

ಕೃಷಿಯಲ್ಲಿ ಶಕ್ತಿ ನಿರ್ವಹಣೆಯೊಂದಿಗೆ ಯಾಂತ್ರಿಕರಣ :

ಭಾರತ ದೇಶ ಕೃಷಿ ಪ್ರಧಾನವಾಗಿದ್ದು ಎಲ್ಲ ಕೃಷಿ ಚಟುವಟಿಕೆಗಳಿಗೆ, ಮಾನವ ಹಾಗೂ ಜಾನುವಾರುಗಳ ಶಕ್ತಿಯು ಬಹುಮುಖ್ಯವಾದದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಕೈಗಾರೀಕರಣ ಮತ್ತು ನಗರೀಕರಣಗಳಿಂದ ಕೃಷಿಗೆ ಬೇಕಾಗುವ ಸಂಪನ್ಮೂಲ ಹಾಗೂ ಕೃಷಿ ಬಳಕೆಯ ಸಾಮರ್ಥ್ಯ ಕ್ಷೀಣಿಸುತ್ತಿವೆ, ಜೊತೆಗೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅದರಲ್ಲಿಯು ಖುಷ್ಕಿ ಬೇಸಾಯದಲ್ಲಿ ಇದರ ಪರಿಣಾಮ ಹೆಚ್ಚು ಕಾಣಬಹುದು. ಆದುದರಿಂದ ಕೃಷಿಯಲ್ಲಿ ಯಾಂತ್ರೀಕರಣ ಇಂದು ಅತ್ಯಗತ್ಯ, ಕೃಷಿ ಯಾಂತ್ರೀರಣದಿಂದ ಖುಷ್ಕಿ ಬೇಸಾಯದಲ್ಲಿನ ಕೃಷಿ ಚಟುವಟಿಕೆಗಳನ್ನು ಕಾಲ ಕಾಲಕ್ಕೆ ಸರಿಯಾಗಿ ಮಾಡುವುದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರವು ಕಡಿಮೆ ಖರ್ಚಿನಲ್ಲಿ ವಿವಿಧ ನವೀನ ಕೃಷಿ ಯಂತ್ರೋಪಕರಣವನ್ನು ವಿನ್ಯಾಸ ಮಾಡಿ ಅವುಗಳ ಮೌಲ್ಯಮಾಪನ ಮಾಡಿ ರೈತರಿಗೆ ಶಿಫಾರಸ್ಸು ಮಾಡಿದೆ.

• ಎತ್ತು ಚಾಲಿತ ಸುಧಾರಿತ ರಾಗಿ ಬಿತ್ತನೆ ಕೂರಿಗೆ,ಟ್ರಾಕ್ಟರ್ ಚಾಲಿತ ವಿವಿಧ ಬೆಳೆ ಕೂರಿಗೆಯು ಕಡಲೆ, ರಾಗಿ, ಅವರೆ, ಹುರುಳಿ ಮತ್ತು ಇತರೆ ದ್ವಿದಳ ಧಾನ್ಯ ಎಣ್ಣೆ ಕಾಳುಗಳಿಗೆ ಸೂಕ್ತವಾಗುವುದಲ್ಲದೆ, ಇವುಗಳನ್ನು ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ

• ಆಳವಾದ ಉಳುಮೆಗೆ, ಹೆಪ್ಪು ಹೊಡೆಯಲು, ಕಳೆನಿಯಂತ್ರಣ ಮತ್ತು ಅಂತರ ಬೇಸಾಯದಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿವಿಧ ಉಪಕರಣಗಳು,ಸಣ್ಣ ಹಿಡುವಳಿ ರೈತರಿಗೆ ಸೂಕ್ತವಾದ ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ದೀರ್ಘಾವಧಿ ಬೆಳೆಗಳಿಗೆ ಗುಂಡಿ ತೆಗೆಯುವ ಸಾಧನಗಳು, ಬೆಳೆ ಒಕ್ಕಣೆ ಮತ್ತು ಸಂಸ್ಕರಣಾ ಸಾಧನಗಳ ಕಾರ್ಯ ಕ್ಷೆಮತೆಯನ್ನು ಪರಿಶೀಲಿಸಿ ರೈತರಿಗೆ ಶಿಫಾರಸು ಮಾಡಿದ ಹೆಗ್ಗಲಿಕೆ ಕೇಂದ್ರಕ್ಕಿದೆ.

ಗುಂಡಿ ತೆಗೆಯುವ ಸಾಧನ ಎತ್ತು ಚಾಲಿತ ಸುಧಾರಿತ ರಾಗಿ ಬಿತ್ತನೆ ಕೂರಿಗೆ ಸುಧಾರಿತ ಉಪಕರಣಗಳು
ಕೇಂದ್ರಕ್ಕೆ ಲಭಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು:

 ಖುಷ್ಕಿ ಬೇಸಾಯ ಪ್ರಾಯೋಜನೆ ಕೇಂದ್ರವು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಗಮನಾರ್ಹವಾದವುಗಳೆಂದರೆ;

·೧೯೮೭-೮೮ರಲ್ಲಿ ಐ.ಸಿ.ಎ.ಆರ್., ನವದೆಹಲಿಯಿಂದ ರಾಷ್ಟ್ರೀಯ ಉತ್ಪಾದಕತೆ ಪ್ರಶಸ್ತಿ

· ೨೦೦೪ರಲ್ಲಿ ಐ.ಸಿ.ಎ.ಆರ್., ನವದೆಹಲಿಯಿಂದ ಶ್ರೇಷ್ಢತೆಯ ಕೇಂದ್ರ ಪ್ರಶಸ್ತಿ

· ೨೦೦೭-೨೦೨೨ರವರೆಗೆ , ಕೃ.ವಿ,ವಿ., ಬೆಂಗಳೂರು ವತಿಯಿಂತ ಅತ್ಯುತ್ತಮ ಕ್ಷೇತ್ರ ಪ್ರಾತ್ಯಕ್ಷಿಕೆ ಪ್ರಶಸ್ತಿ

·೨೦೦೮-೦೯ ಮತ್ತು ೨೦೧೭-೧೮ರಲ್ಲಿ ಕ್ರೀಡಾ, ಹೈದರಾಬಾದ್ ವತಿಯಿಂದ ಅತ್ಯಂತ ಪ್ರತಿಕ್ರಿಯಾಶೀಲ ಕೇಂದ್ರ ಪ್ರಶಸ್ತಿ

· ೨೦೦೯ ಮತ್ತು ೨೦೨೦ರಲ್ಲಿ ಐ.ಸಿ.ಎ.ಆರ್., ನವದೆಹಲಿಯಿಂದ ಶ್ರೀ ಚೌಧರಿ ದೇವಿ ಲಾಲ್ ಅತ್ಯುತ್ತಮ ಅಖಿಲ ಭಾರತ ಸುಸಂಘಟಿತ ಪ್ರಾಯೋಜನೆ ಪ್ರಶಸ್ತಿ

· ಏಪ್ರಿಲ್ ೨೦೧೧ರ ಐ.ಸಿ.ಎ.ಆರ್., ನವದೆಹಲಿಯ ಓಂAS ಕಾಂಪ್ಲೆಕ್ಸ್ ಸಂವಾದ ಸಭೆಯ ಸಮಯದಲ್ಲಿ “ಂ” ಗ್ರೇಡ್ ಪ್ರಮಾಣ ಪತ್ರ

· ೨೦೦೮-೦೯ ಮತ್ತು ೨೦೧೭-೧೮ರಲ್ಲಿ ಕ್ರೀಡಾ, ಹೈದರಾಬಾದ್ ವತಿಯಿಂದಅತ್ಯುತ್ತಮ ಅಖಿಲ ಭಾರತ ಸುಸಂಘಟಿತ ಖುಷ್ಕಿ ಬೇಸಾಯಪ್ರಾಯೋಜನೆ

· ಪ್ರಶಸ್ತಿ೨೦೧೫-೧೬ ರಲ್ಲಿ ಐ.ಸಿ.ಎ.ಆರ್., ನವದೆಹಲಿ ವತಿಯಿಂದ ಖುಷ್ಕಿ ಬೇಸಾಯ ಸಂಶೋಧನೆಗಾಗಿ ಐ.ಸಿ.ಎ.ಆರ್-ವಸಂತ್ ರಾವ್ ನಾಯಕ್ ಪ್ರಶಸ್ತಿ ಬಂದಿದೆ.

ಶ್ರೀ ಚೌಧರಿ ದೇವಿ ಲಾಲ್ ಅತ್ಯುತ್ತಮ ಅಖಿಲ ಭಾರತ ಸುಸಂಘಟಿತ ಪ್ರಾಯೋಜನೆ ಪ್ರಶಸ್ತಿ ಅತ್ಯಂತ ಪ್ರತಿಕ್ರಿಯಾಶೀಲ ಕೇಂದ್ರ ಪ್ರಶಸ್ತಿ .ಸಿ..ಆರ್ವಸಂತ್ ರಾವ್ ನಾಯಕ್ ಪ್ರಶಸ್ತಿ ಅತ್ಯುತ್ತಮ ಕ್ಷೇತ್ರ ಪ್ರಾತ್ಯಕ್ಷಿಕೆ ಪ್ರಶಸ್ತಿ
 ಲಭ್ಯವಿರುವ ಸೌಲಭ್ಯಗಳು :

· ಮಣ್ಣು ಮತ್ತು ನೀರು ವಿಶ್ಲೇಷಣೆ ಪ್ರಯೋಗಾಲಯ

· ೧೫ ಗುಂಟೆಗಳ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಸೌಲಭ್ಯದೊಂದಿಗೆ ಶೇಖರಣಾ ತೊಟ್ಟಿಯೊಂದಿರುವ ಪಾಲಿಹೌಸ್

· ಸಂವೇದಕ ಆಧಾರಿತ ಹನಿ ನೀರಾವರಿ ವ್ಯವಸ್ಥೆ

· ಪಾಟ್ ಕಲ್ಚರ್ ಪ್ರಯೋಗಗಳಿಗೆ ಹಸಿರು ಮನೆ ಸೌಲಭ್ಯ

· ಲೀಫ್ ಏರಿಯಾ ಮೀಟರ್, ಗ್ರೀನ್ ಸೀಕರ್, ಸ್ಪಾಡ್ ಮೀಟರ್, ಮಣ್ಣಿನ ತೇವಾಂಶ ಅಳೆಯುವ ಉಪಕರಣಗಳು (ಟಿಡಿಆರ್), ಟೆನ್ನ್ಸಿಯೋ ಮೀಟರ್‌ಗಳು

· ಮಳೆ ನೀರು ಕೊಯ್ಲಿಗಾಗಿ ವಿವಿಧ ಲೇಪನಗಳ ೨೫೦. ಘ.ಮೀ ಸಾಮರ್ಥ್ಯದ ೭ ಕೃಷಿ ಹೊಂಡಗಳು

ಇತರೆ ಚಟುವಟಿಕೆಗಳು :

· ಕೇಂದ್ರದ ವಿಜ್ಞಾನಿಗಳು ವಿವಿಧ ಇಲಾಖೆಗಳಿಂದ (ರೈತ ತರಬೇತಿ ಕೇಂದ್ರ, ಸಿಬ್ಬಂದಿ ತರಬೇತಿ ಕೇಂದ್ರ, ಕೃಷಿ ಇಲಾಖೆ ಮತ್ತು ಇನ್ನಿತರ ಇಲಾಖೆಗಳು) ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿರುವರು

· ಕರ್ನಾಟಕ ರಾಜ್ಯದ ಖುಷ್ಕಿ ಬೇಸಾಯದಲ್ಲಿನ ಕಂಡುಬರುವ ಸಮಸ್ಯೆಗಳಿಗೆ ಕಾರ್ಯನೀತಿ ರೂಪಿಸುವಲ್ಲಿ ಕೇಂದ್ರವು ಮಹತ್ತರ ಪಾತ್ರವನ್ನು ಹೊಂದಿದೆ

· ಕೇಂದ್ರದ ವಿಜ್ಞಾನಿಗಳು ಸರ್ಕಾರದ ವಿವಿಧ ಯೋಜನೆಗಳಿಗೆ ಸಲಹಾ ಸಮಿತಿ ಸದಸ್ಯರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

· ಕೇಂದ್ರವು ಸುಧಾರಿತ ಮಳೆಯಾಶ್ರಿತ ಸಮಗ್ರ ಕೃಷಿ ಪದ್ದತಿಗಳ ಬಲಪಡಿಸುವ ಕುರಿತು ಸಂಶೋಧನೆಯನ್ನು ಕೈಗೊಂಡಿದೆ

· ಹವಾಮಾನ ವೈಪರಿತ್ಯ ಅನುಗುಣವಾಗಿ ಸುಧಾರಿತ ಕೃಷಿ ಪದ್ದತಿಗಳ ಬಲಪಡಿಸುವ ಕುರಿತು ಸಂಶೋಧನೆಯನ್ನು ಕೈಗೊಂಡಿದೆ

 

Externally Funded Projects in Operation:06
No. Project Title Principal Investigator Funding agency Year of Start Year of  Completion Significant Outcome
1 National Innovations in Climate Resilient Agriculture Project Dr. Mudalagiriyappa CRIDA, Hyderabad 2011 Long term
2 Standardization of conservation agriculture practices for pigeonpea – finger millet   sequence cropping system Dr. Mudalagiriyappa CRP-CA CRIDA, Hyderabad 2020 Long term
3 Comparative Assessment of Aldor (30-00-05+7S) as an alternative to Urea on yield and nutrient use efficiency of rainfed maize in Karnataka Dr. Mudalagiriyappa CRIDA, Hyderabad 2022 2023
4 Studies on different granular fertilizers and bio stimulants on growth and yield of field crops Dr. Mudalagiriyappa M/s Sulphur mills Ltd., 2022 2024
5 Effect of foliar application of different Nano fertilizers on nutrient use efficiency, productivity and economics of finger millet Dr. B.G. Vasanthi IFFICO & CRIDA 2021 2023
6 Livelihood security enhancement through improved rice productivity among SC farmers of Kolar District of Karnataka Dr. D. H. Roopashree IIRR, Hyderabad 2023 2024

QRT 2024

ಸಿಬ್ಬಂದಿ ವಿವರ

ವೈಜ್ಞಾನಿಕ ಸಿಬ್ಬಂದಿ :

ಡಾ. ಮೂಡಲಗಿರಿಯಪ್ಪ
ಹುದ್ದೆ : ಮುಖ್ಯ ವಿಜ್ಞಾನಿ
ಶೈಕ್ಷಣಿಕ ವಿವರಗಳು : ಎಂ.ಎಸ್.ಸಿ (ಕೃಷಿ), ಪಿ.ಎಚ್.ಡಿ
ಪರಿಣಿತಿ ಹೊಂದಿರುವ ವಿಷಯ : ಕಳೆ ನಿರ್ವಹಣೆ, ನಿಖರ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ನಿವಾರ್ಹಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 14-03-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 28-09-2018

drylandgkvk@uasbangalore.edu.in
mudal68@yahoo.com

080-23330153
91-9632067656
ಡಾ. ಬಿ.ಜಿ., ವಾಸಂತಿ
ಹುದ್ದೆ: ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ)
ಶೈಕ್ಷಣಿಕ ವಿವರಗಳು : ಎಂ.ಎಸ್.ಸಿ (ಕೃಷಿ), ಪಿ.ಎಚ್.ಡಿ
ಪರಿಣಿತಿ ಹೊಂದಿರುವ ವಿಷಯ : ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶ ನಿವಾರ್ಹಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 28-03-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 31-01-2018

drylandgkvk@uasbangalore.edu.in
vasubgkvk@gmail.com

080-23330153
91-9986989269
ಡಾ. ಕೆ. ದೇವರಾಜ
ಹುದ್ದೆ : ಹಿರಿಯ ವಿಜ್ಞಾನಿ (ಮಣ್ಣು ಮತ್ತು ನೀರು ನಿವಾರ್ಹಣಾ ಅಭಿಯಂತರರು )
ಶೈಕ್ಷಣಿಕ ವಿವರಗಳು : ಎಂ.ಎಸ್.ಸಿ (ಮಣ್ಣು ಮತ್ತು ನೀರು ನಿವಾರ್ಹಣೆ), ಪಿ.ಎಚ್.ಡಿ
ಪರಿಣಿತಿ ಹೊಂದಿರುವ ವಿಷಯ : ಮಣ್ಣು ಮತ್ತು ನೀರು ನಿವಾರ್ಹಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :  07-10-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 07-10-2013

drylandgkvk@uasbangalore.edu.in
devarajaanuradha@gmail.com

080-23330153
91-7411957368
ಡಾ. ರೂಪಶ್ರೀ, ಡಿ.ಹೆಚ್.
ಹುದ್ದೆ : ಹಿರಿಯ ವಿಜ್ಞಾನಿ (ಬೇಸಾಯಶಾಸ್ತç)
ಶೈಕ್ಷಣಿಕ ವಿವರಗಳು : ಎಂ.ಎಸ್.ಸಿ (ಕೃಷಿ), ಪಿ.ಎಚ್.ಡಿ
ಪರಿಣಿತಿ ಹೊಂದಿರುವ ವಿಷಯ : ಸಮಗ್ರ ಪೋಷಕಾಂಶ ನಿವಾರ್ಹಣೆ, ಸಾವಯವ ಕೃಷಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 20.02.2018
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 15-07-2022

drylandgkvk@uasbangalore.edu.in
roopa229@rediffmail.com

080-23330153
91-8747022838
ಡಾ. ಲತಾ, ಹೆಚ್.ಎಸ್
ಹುದ್ದೆ : ಹಿರಿಯ ವಿಜ್ಞಾನಿ (ಬೇಸಾಯಶಾಸ್ತç)
ಶೈಕ್ಷಣಿಕ ವಿವರಗಳು : ಎಂ.ಎಸ್.ಸಿ (ಕೃಷಿ), ಪಿ.ಎಚ್.ಡಿ
ಪರಿಣಿತಿ ಹೊಂದಿರುವ ವಿಷಯ : ಬೆಳೆ ಪದ್ಧತಿ, ಸಾವಯವ ಕೃಷಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :  23-03-2018
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 24-01-2021

drylandgkvk@uasbangalore.edu.in
lathahs@gmail.com

080-23330153
91-8197995325

ತಾಂತ್ರಿಕ ಸಿಬ್ಬಂದಿ:

ಶ್ರೀಮತಿ ಹೆಚ್. ಎಚ್. ಪದ್ಮ ಶ್ರೀ
ಹುದ್ದೆ : ಹಿರಿಯ ತಾಂತ್ರಿಕ ಸಹಾಯಕರು
ಶೈಕ್ಷಣಿಕ ವಿವರಗಳು : ಎಂ.ಎಸ್.ಸಿ (ಕೃಷಿ),
ಪರಿಣಿತಿ ಹೊಂದಿರುವ ವಿಷಯ : Agricultural Statistics
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 27.03.2014
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01-04-2018

drylandgkvk@uasbangalore.edu.in

080-23330153
91-7259046146
ಶ್ರೀ. ಶ್ಯಾಮಸುಸುಂದರ್
ಹುದ್ದೆ : ಹಿರಿಯ ತಾಂತ್ರಿಕ ಸಹಾಯಕರು
ಶೈಕ್ಷಣಿಕ ವಿವರಗಳು :B.Com, DISM
ಪರಿಣಿತಿ ಹೊಂದಿರುವ :ವಿಷಯ ಗಣಕ ಯಂತ್ರ ವಿಜ್ಞಾನ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 19-01-2011
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 10-07-2020

drylandgkvk@uasbangalore.edu.in
shyamasundarkr@gmail.com

080-23330153
91-9481828190

Supporting staff:

ಶ್ರೀ. ಆರ್. ಜಗದೀಶ್
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿವರಗಳು : SSLC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :01-05-1995
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 03-06-2011
9482306193
ಶ್ರೀ. ಜಿ.ಎನ್. ಕೃಷ್ಣಯ್ಯ
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿವರಗಳು : JOC with PUC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 06-07-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :10-08-2022
9945451127
ಶ್ರೀ. ಪುಟ್ಟಸ್ವಾಮಿ
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿವರಗಳು : PUC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 01-07-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :  30-07-2021
9740053409
ಶ್ರೀ. ಬಿ. ಶಿವಕುಮಾರ್
ಹುದ್ದೆ : ಹಿರಿಯ ಸಹಾಯಕರು ಮತ್ತು ಗಣಕ ಯಂತ್ರ ನಿರ್ವಾಹಕರು
ಶೈಕ್ಷಣಿಕ ವಿವರಗಳು : PUC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 29-06-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ  11-07-2019
9844838722
ಶ್ರೀ. ಎಸ್, ದಾಸರಾಜು
ಹುದ್ದೆ : ಪ್ರಯೋಗಶಾಲೆ ಪರಿಚಾರಕರು
ಶೈಕ್ಷಣಿಕ ವಿವರಗಳು : SSLC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 04-10-2000
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01-04-2015
9902740493
ಶ್ರೀ. ಎಚ್.ಎಸ್. ಹರೀಶ್
ಹುದ್ದೆ : ಲಘು ವಾಹನ ಚಾಲಕರು
ಶೈಕ್ಷಣಿಕ ವಿವರಗಳು : SSLC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 11-09-2019
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 13-07-2021
9731192930
ಶ್ರೀ. ಮಲ್ಲಪ್ಪ
ಹುದ್ದೆ : ಸೇವಕ
ಶೈಕ್ಷಣಿಕ ವಿವರಗಳು: 7th
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 06-06-1993
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :12-11-2007
7760025497
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು