Dr. S. Rajendra Prasad, Former Vice-Chancellor
Academic and Professional Experience
- Awarded M.Sc. (Agri.) and Ph.D. in Seed Technology from the University of Agricultural Sciences, Bengaluru with distinction
- PG Diploma in Business Administration
- Undergone administrative training on Leadership Development at NAARM, Hyderabad and Science Governance and Management Programme at Administrative College of India, Hyderabad
- Under gone International Training with Fellowships on Advances in Seed Science and Technology in The Netherlands, Thailand and Philippines
ಡಾ. ಎಸ್. ರಾಜೇಂದ್ರ ಪ್ರಸಾದ್ ರವರು 1959ರ ಏಪ್ರಿಲ್ 20ರಂದು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಅಣ್ಣೂರು ಗ್ರಾಮದ ಶ್ರೀ ಸಿದ್ದೇಗೌಡರು ಹಾಗು ಶ್ರೀಮತಿ ಅಂಕಮ್ಮ ದಂಪತಿಯವರಿಗೆ 6ನೇ ಮಗುವಾಗಿ, ರೈತ ಕುಟುಂಬದಲ್ಲಿ ಜನಿಸಿರುತ್ತಾರೆ. ಇವರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ 1980ರಲ್ಲಿ ಕೃಷಿ ಪದವಿ, 1983ರಲ್ಲಿ ಕೃಷಿ ಬೀಜ ತಾಂತ್ರಿಕತೆಯಲ್ಲಿ ಮಾಸ್ಟರ್ ಪದವಿ ಹಾಗೂ 1998ರಲ್ಲಿ ಕೃಷಿ ಬೀಜ ತಾಂತ್ರಿಕತೆಯಲ್ಲಿ ಪಿಹೆಚ್.ಡಿ.ಪದವಿಯನ್ನು ಪಡೆದಿದ್ದಾರೆ. ಅಲ್ಲದೆ, ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮೋ ಪದವಿ ಪಡೆದಿರುತ್ತಾರೆ. ಆನಂತರ ಹೆಚ್ಚಿನ ಆಡಳಿತಾತ್ಮಕ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಹೈದರಾಬಾದಿನ ಪ್ರತಿಷ್ಠಿತ NAARM ಸಂಸ್ಥೆ ಹಾಗೂ ಭಾರತೀಯ ಆಡಳಿತ ಮಹಾವಿದ್ಯಾಲಯಗಳಲ್ಲಿ ಉನ್ನತ ತರಬೇತಿಯನ್ನು ಪಡೆದಿರುತ್ತಾರೆ. ಮುಂದುವರಿದಂತೆ, ನೆದರ್ಲ್ಯಾಂಡ್, ಥಾಯ್ಲೆಂಡ್ ಹಾಗೂ ಫಿಲಿಪೈನ್ಸ್ ರಾಷ್ಟ್ರಗಳಲ್ಲಿ ಬೀಜ ವಿಜ್ಞಾನ ಕುರಿತಾದ ನವೀನ ತಾಂತ್ರಿಕತೆಗಳ ಅಂತರಾಷ್ಟ್ರೀಯ ತರಬೇತಿಗಳಲ್ಲಿ ಭಾಗವಹಿಸುವಿಕೆ ಶ್ರೀಯುತರನ್ನು ಒಬ್ಬ ನುರಿತ ವಿಜ್ಞಾನಿ ಹಾಗೂ ಆಡಳಿತಗಾರನ್ನಾಗಿ ರೂಪಿಸುವಲ್ಲಿ ನೆರವಾಗಿವೆ. ಒಟ್ಟಾರೆ, ತಮ್ಮ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಡಾ. ಎಸ್. ರಾಜೇಂದ್ರ ಪ್ರಸಾದ್ರವರ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಕಳೆದ 35 ವರ್ಷಗಳ ಸುದೀರ್ಘ ಅನುಭವ ಶ್ರೀಯುತರನ್ನು ಪಕ್ವಗೊಳಿಸಿದ್ದು, ವಿ.ವಿ.ಯ ವಿವಿಧ ಹುದ್ದೆಗಳಲ್ಲಿ (26 ವರ್ಷ ಸ್ನಾತಕ ಹಾಗೂ ಸ್ನಾತಕೋತ್ತರ ಬೋಧನೆ, ಸಂಶೋಧನೆಯಲ್ಲಿ ಸುಧೀರ್ಘ ಅನುಭವ) ರಾಷ್ಟ್ರದ ಪ್ರತಿಷ್ಠಿತ ಭಾರತೀಯ ಬೀಜ ವಿಜ್ಞಾನ ಸಂಸ್ಥೆ, “ಮಾವು”, ಉತ್ತರಪ್ರದೇಶದಲ್ಲಿ ಐದು ವರ್ಷ ನಿರ್ದೇಶಕರಾಗಿ ಸಲ್ಲಿಸಿದ ಸೇವೆ, ಜಿ.ಕೆ.ವಿ.ಕೆ. ಆವರಣದ “ಡೀನ್ (ಕೃಷಿ)”ರಾಗಿ ಅನುಭವ, ಶ್ರೀಯುತರು ವಿ.ವಿ.ಯ 16ನೇ ಕುಲಪತಿಗಳಾಗಿ 2018ರ ಸೆಪ್ಟೆಂಬರ್ 17ರಂದು ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿರುತ್ತಾರೆ.
ಡಾ. ಎಸ್. ರಾಜೇಂದ್ರ ಪ್ರಸಾದ್ರವರ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಕಳೆದ 35 ವರ್ಷಗಳ ಸುದೀರ್ಘ ಅನುಭವ ಶ್ರೀಯುತರನ್ನು ಪಕ್ವಗೊಳಿಸಿದ್ದು, ವಿ.ವಿ.ಯ ವಿವಿಧ ಹುದ್ದೆಗಳಲ್ಲಿ (26 ವರ್ಷ ಸ್ನಾತಕ ಹಾಗೂ ಸ್ನಾತಕೋತ್ತರ ಬೋಧನೆ, ಸಂಶೋಧನೆಯಲ್ಲಿ ಸುಧೀರ್ಘ ಅನುಭವ) ರಾಷ್ಟ್ರದ ಪ್ರತಿಷ್ಠಿತ ಭಾರತೀಯ ಬೀಜ ವಿಜ್ಞಾನ ಸಂಸ್ಥೆ, “ಮಾವು”, ಉತ್ತರಪ್ರದೇಶದಲ್ಲಿ ಐದು ವರ್ಷ ನಿರ್ದೇಶಕರಾಗಿ ಸಲ್ಲಿಸಿದ ಸೇವೆ, ಜಿ.ಕೆ.ವಿ.ಕೆ. ಆವರಣದ “ಡೀನ್ (ಕೃಷಿ)”ರಾಗಿ ಅನುಭವ, ಶ್ರೀಯುತರು ವಿ.ವಿ.ಯ 16ನೇ ಕುಲಪತಿಗಳಾಗಿ 2018ರ ಸೆಪ್ಟೆಂಬರ್ 17ರಂದು ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿರುತ್ತಾರೆ.
ವಿಶ್ವವಿದ್ಯಾನಿಲಯದ ಬೀಜ ವಿಭಾಗದ ವಿಶೇಷ ಅಧಿಕಾರಿಯಾಗಿ ಹಲವು ಕೊಡುಗೆಗಳನ್ನು ನೀಡಿರುವ ಡಾ. ಎಸ್. ರಾಜೇಂದ್ರ ಪ್ರಸಾದ್ರವರು ಗುಣಮಟ್ಟದ ಬೀಜೋತ್ಪಾದನೆ, ಬೀಜೋತ್ಪಾದನೆ ಸಾಮಥ್ರ್ಯ ಹೆಚ್ಚುಸುವಲ್ಲಿ ಕ್ರಮ ಹಾಗೂ ವಿಶ್ವವಿದ್ಯಾನಿಲಯದ ಸುಧಾರಿತ ತಳಿಗಳನ್ನು ಜನಪ್ರಿಯಗೊಳಿಸಲು ಪ್ರಮುಖ ಪಾತ್ರ ವಹಿಸಿರುತ್ತಾರೆ. ಅದರಲ್ಲೂ ವಿಶೇಷವಾಗಿ ಕೃಷಿಕರ ಸಹಭಾಗಿತ್ವದಲ್ಲಿ ಬೀಜೋತ್ಪಾದನೆ ಹಾಗೂ ಬೀಜ ಗ್ರಾಮ ಯೋಜನೆ ಪ್ರಮುಖವಾದವುಗಳಾಗಿದ್ದು ಈ ನಿಟ್ಟಿನಲ್ಲಿ ಹೊರ ರಾಜ್ಯದ ಕೃಷಿಕರನ್ನೂ ಒಳಗೊಂಡಂತೆ (ಮಾವು, ಗಜಿಯಾಪುರ್, ಬಲಿಯಾ, ಉಝಂಗರ್) ಹಲವು ಬೀಜೋತ್ಪಾದಕ ಕೃಷಿಕರಿಗೆ ತರಬೇತಿ, ಪ್ರಾತ್ಯಕ್ಷಿಕೆಗಳನ್ನು ನೀಡುವ ಮೂಲಕ ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ. ತನ್ಮೂಲಕ ಹಲವು ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಬೀಜೋತ್ಪಾದನೆ ಮೂಲಕ ಉದ್ಯೋಗಾವಕಾಶ ಕಲ್ಪಿಸುವಲ್ಲಿ ನೆರವಾಗಿರುತ್ತಾರೆ. ಅದರಲ್ಲೂ ಪ್ರಮುಖವಾಗಿ ವಿಶ್ವವಿದ್ಯಾನಿಲಯದ ಭರವಸೆಯ ಕೆ.ಆರ್.ಹೆಚ್, ಹೈಬ್ರಿಡ್ ತಳಿಗಳನ್ನು ಜನಪ್ರಿಯಗೊಳಿಸುವಲ್ಲಿ ಸಂಬಂಧಪಟ್ಟ ಸರ್ಕಾರಿ, ಸರ್ಕಾರೇತರ ಹಾಗೂ ಖಾಸಗಿ ಸಂಸ್ಥೆಗಳ ಸಂಪರ್ಕ ಸಾಧಿಸಿ ಪ್ರಾತ್ಯಕ್ಷಿಕೆಗಳನ್ನು, ತರಬೇತಿಗಳನ್ನು ಹಮ್ಮಿಕೊಂಡ ಫಲಶೃತಿ ಪ್ರಸ್ತುತ ಈ ತಳಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದುಕೊಂಡಿದೆ.
ಈ ಒಂದು ಸುದೀರ್ಘ ಶೈಕ್ಷಣಿಕ ಪಯಣದಲ್ಲಿ 14 ಎಂ.ಎಸ್ಸಿ. ಹಾಗೂ 9 ಪಿ.ಹೆಚ್ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದು, 35 ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿದ್ದು, ಅದರಲ್ಲೂ ಕೃಷಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿ ಇವರ ವಿದ್ಯಾರ್ಥಿಯೊಬ್ಬರಿಗೆ ಪ್ರಧಾನ ಮಂತ್ರಿಗಳ ಫೆಲೋಶಿಪ್ ದೊರೆತದ್ದು ಉಲ್ಲೇಖನೀಯ.
ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ನಿಯತ ಕಾಲಿಕಗಳಲ್ಲಿ 190 ವೈಜ್ಞಾನಿಕ ಸಂಶೋಧನಾ ಲೇಖನಗಳು, 55 ಸಂಶೋಧನಾ ಪ್ರಬಂಧಗಳು, 12 ಪುಸ್ತಕಗಳ ರಚನೆ/ಸಂಪಾದಕತ್ವ, 30 ಪುಸ್ತಕಗಳಿಗೆ ಅಧ್ಯಾಯಗಳು, 86 ಸಂಶೋಧನಾ ಟಿಪ್ಪಣಿಗಳು, 32 ತಾಂತ್ರಿಕ ಕಿರುಹೊತ್ತಿಗೆಗಳು, 28 ಸಂಶೋಧನಾ ವರದಿಗಳನ್ನು ಡಾ. ಎಸ್. ರಾಜೇಂದ್ರ ಪ್ರಸಾದ್ ರವರ ಕೃಷಿ ಸಾಹಿತ್ಯ ಪ್ರಕಟಣೆಗಳ ಸಮಗ್ರ ನೋಟಕ್ಕೆ ಹಿಡಿದ ಕನ್ನಡಯಾಗಿದೆ.
ಇದಲ್ಲದೆ, ಶ್ರೀಯುತರು ಹಲವು ಬಾಹ್ಯ ಅನುಧಾನಿತ ಸಂಶೋಧನಾ ಯೋಜನೆಗಳ ಪ್ರಧಾನ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದು, ಇವುಗಳಲ್ಲಿ 18 Extramural Research Projects, CAAST Sub Projects, ರಾಷ್ಟ್ರೀಯ ಕೃಷಿ ವಿಕಸನಾ ಯೋಜನೆಗಳು ಒಳಗೊಂಡಿವೆ.
ಶ್ರೀಯುತರು, ಕೆಲವು ಅಂತರಾಷ್ಟ್ರೀಯ ಸಂಘ ಸಂಸ್ಥೆಗಳಾದ West Africa Agriculture Productivity Programme, International Rice Research Institute, International Seed Testing Association ಮುಂತಾದ ಸಂಸ್ಥೆಗಳ ಜೊತೆ ನಿರಂತರ ಒಡನಾಟವನ್ನು ಇಟ್ಟುಕೊಂಡಿರುತ್ತಾರೆ.
ರಾಷ್ಟ್ರಮಟ್ಟದಲ್ಲಿ ಪ್ರಮಾಣಿತ ಬೀಜಗಳ ಕನಿಷ್ಠ ಗುಣಮಟ್ಟ ಹಾಗೂ ಬೀಜ ಕಾಯ್ದೆಗಳಂತಹ ನೀತಿ ನಿರೂಪಣೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದು, ಹಲವು ಪ್ರತಿಷ್ಠಿತ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಶ್ರೀಯುತರ ಈ ಸುಧೀರ್ಘ ಸೇವಾ ಅವಧಿಯಲ್ಲಿ ಫಿಲಿಪೈನ್ಸ್, ತೈವಾನ್, ನೆದರ್ಲ್ಯಾಂಡ್ಸ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಮಲೇಷಿಯಾ, ನೇಪಾಳ, ಸಿಂಗಾಪುರ್, ಅಮೇರಿಕಾ ಹಾಗೂ ಥಾಯ್ಲೆಂಡ್ ರಾಷ್ಟ್ರಗಳಿಗೆ ಭೇಟಿ ನೀಡಿ ಸಾಗರದಾಚೆಗಿನ ಅನುಭವಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ನೆದರ್ಲ್ಯಾಂಡ್ಸ್ ಹಾಗೂ ಫಿಲಿಪೈನ್ಸ್ ದೇಶಗಳಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಬೀಜ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಗಳಲ್ಲಿ, ತೈಲ್ಯಾಂಡ್ನಲ್ಲಿ ಆಯೋಜಿಸಿದ್ದ ಸಮಗ್ರ ಗುಣಮಟ್ಟದ ಬೀಜ ನಿರ್ವಹಣೆ ತರಬೇತಿಗಳಲ್ಲಿ ಭಾಗವಹಿಸುವಿಕೆ ಹಾಗೂ ಜರ್ಮನಿಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಬೀಜ ವಿಜ್ಞಾನದಲ್ಲಿ ಗುಣಮಟ್ಟದ ಪರೀಕ್ಷೆ ಕುರಿತಾದ ಸಂಶೋಧನೆಯ ಲೇಖನದ ಮಂಡನೆ ಪ್ರಮುಖವಾಗಿವೆ.
ಇವರ ಸಾಧನೆಗಳಿಗೆ ಹಲವು ಪ್ರಶಸ್ತಿ – ಪುರಸ್ಕಾರಗಳು ಸಂದಿದ್ದು ಇವುಗಳಲ್ಲಿ ಡಾ. ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ, ಫಾರ್ಮರ್ ಫ್ರೆಂಡ್ ಪ್ರಶಸ್ತಿ, ಬೀಜ ವಿಜ್ಞಾನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ, ನೆದರ್ಲ್ಯಾಂಡ್ ಸರ್ಕಾರದ ಫೆಲೋಶಿಪ್, ಫಿಲಿಪೈನ್ಸ್ನ ಎನ್. ಎಫ್, ಎಲ್. ಫೆಲೋಶಿಪ್, ಕೆಂಪೆಗೌಡ ಅಂತರಾಷ್ಟ್ರೀಯ ಪ್ರಶಸ್ತಿ, ಗ್ರೇಟ್ ಸನ್ ಆಫ್ ಕರ್ನಾಟಕ ಪ್ರಶಸ್ತಿ, ಶ್ರೀ ವೈ.ಕೆ. ರಾಮಯ್ಯ ಕೃಷಿ ವಿಜ್ಞಾನ ಪ್ರಶಸ್ತಿ, 2019ರ ಕರುಣಾ ಪ್ರಶಸ್ತಿ, ಮುಂತಾದವುಗಳು ಪ್ರಮುಖವಾಗಿವೆ.
ಇವುಗಳ ಜೊತೆ ಶ್ರೀಯುತರು ಹಲವು ಸಂಘ ಸಂಸ್ಥೆಗಳನ್ನು ಕಟ್ಟುವಲ್ಲಿ ಹಲವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಮ್ಮೇಳನ, ಕಮ್ಮಟಗಳನ್ನು ಆಯೋಜಿಸುವಲ್ಲಿ ಮುಂದಾಳತ್ವ ವಹಿಸಿರುವುದು ಉಲ್ಲೇಖನೀಯ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೇಸ್ ನೇತೃತ್ವ ವಹಿಸಿ ಸಮ್ಮೇಳನದ ಸಂಘಟನಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇದಲ್ಲದೆ, ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿ, ಭಾರಾತೀಯ ಕೃಷಿ ಅನುಸಂಧಾನ ಪರಿಷತ್ತಿನ ಹಿರಿಯ ವಿಜ್ಞಾನಿಗಳ ಆಯ್ಕೆ ಅಮಿತಿ ಸದಸ್ಯರಾಗಿ, ಹೈದರಾಬಾದ್ನ ಪ್ರತಿಷ್ಠಿತ ನಾರ್ಮ್ ಸಂಸ್ಥೆಯ ಶೈಕ್ಷಣಿಕ ಸಮಿತಿ ಸದಸ್ಯರಾಗಿ ಹೀಗೆ ಹಲವು ಸಂಸ್ಥೆಗಳ ಜೊತೆ ನಿರಂತರ ಒಡನಾಟವನ್ನು ಹೊಂದಿರುತ್ತಾರೆ.
ರೈತರ ಸುಸ್ಥಿರ ಅಭಿವೃದ್ಧಿಗಾಗಿ ಭೋಧನೆಯಲ್ಲಿ ಗುಣಮಟ್ಟ ಸುಧಾರಣೆ, ಬೇಡಿಕೆ ಆಧಾರಿತ ಸಂಶೋಧನೆ ಹಾಗೂ ಸೂಕ್ತ ವಿಸ್ತರಣಾ ಕಾರ್ಯತಂತ್ರಗಳನ್ನು ತರಲು ಶ್ರೀಯುತರು ಬದ್ಧರಾಗಿದ್ದಾರೆ.
Read More
Vice-Chancellor, UAS, Bangalore 17.9.2018 to 17.09.2022
- Dean (Agri.), College of Agriculture, GKVK, Bengaluru, 29.05.2017 to 16.9.2018
- Director, ICAR- Indian Institute of Seed Science, Mau, U.P., 2011 to 2016.
- Director (Acting), ICAR- National Bureau of Agriculturally Important Microbes, Mau, U.P., (Four months)
- Special Officer (Seeds), University of Agricultural Sciences, Bangalore, 2005 to 2011 and 2016 to 2017.
- Seed Research Officer, University of Agricultural Sciences, Bangalore, 1999 to 2005.
- Associate Professor, University of Agricultural Sciences, Bangalore, 1997 to 1999.
- Assistant Professor, University of Agricultural Sciences, Bangalore, 1989 to 1997.
- Research Assistant, University of Agricultural Sciences, Bangalore, 1984 to 1989.
Number of Students Guided
- Served as Major Advisor of 15 M.Sc. and 9 Ph.D. students in Seed Science and Technology
- In the history of UAS, Bengaluru, my Ph.D. student is the FIRST to secure Prime Minister’s Fellowship
Publications (295)
- 90 peer reviewed full length articles
- 13 authored and edited books
- 30 book chapters
- 86 abstracts in proceedings of seminars/symposia
- 32 technical bulletins/folders
- 28 project reports
Externally Funded Projects Handled
- As a Principal Investigator, operated 18 extra-mural research projects with an outlay of Rs. 3585 Lakhs
- As a Principal Investigator, operating CAAST Sub-project entitled “Centre for Next Generation Technology in Adaptive Agriculture” under NAHEP with an outlay of Rs. 2200 Lakhs
- As a Principal Investigator, operating RKVY funded project titled “Development of sustainable Pilot Model Seed Platform” with an outlay of Rs.81 Lakhs
Working Experience with Statutory Bodies/Authorities
Serving as
- Chairman – 107th Indian Science Congress held at UAS, Bangalore
- Nodal Officer – 32nd ISTA Congress
- Chairman, Board of Management, UAS, Bangalore
- Member, Selection-Cum-Standing Committee for Emeritus Scientist Scheme of ICAR, 2.12.2019 to 2.12.2022.
- Member, Academic Committee of MANAGE, Hyderabad
- Member, Managing Council, GPS Institute of Agricultural Management, Bangalore.
- Member, Agricultural Higher Education Programme Committee of the ICAR NAHEP.
- Member, State Level Coordination Committee of ‘Boo Samrudhi Yojane’ , GOK.
Serving as
- Chairman, Institutional Management Committee, ICAR-IISS, Mau, UP
- Chairman, Institute Research Committee (IRC)
- Chairman, C-CAMP –UAS(B) Agri-Innovation center, GKVK, Bengaluru
- Member, Board of Management, NDUAT, Faizabad, UP
- Member, Board of Management, UAS, Bengaluru
- Member, National Technical Committee, SAARC Gene Bank
- Special Invitee, Central Variety Release Committee (CVRC), GOI
- Member, Varietal Identification Committee
- Member, Board of Directors, Karnataka State Seed Certification Agency
- Member, Academic Council and Board of Studies, UAS, Bengaluru
- Member, RFD (Result Frame Work Document) Committee
- Member, ITMC, National Language Working Committee
- Member, QRT of ICAR – Indian Institute of Seed Science, Mau, UP
Countries Visited
- Philippines, Taiwan, The Netherlands, Germany, France, Belgium, Malaysia, Nepal, Singapore, USA and Thailand
Significant Awards/Recognition
- Dr. Kalayya Krishnamurthy National Award for the Best Agricultural Research by UAS, Bengaluru during 2012
- Farmer friend award Krishik – Mithra Samman by Nand Educational Foundation for Rural Development (NAFORD), Mau (UP) during 2013
- Lifetime Achievement Award (Seed Science & Technology) by Venus International Foundation, Chennai during 2016
- Netherlands Government Fellowship by IAC, Wageningen, The Netherlands International during 1996
- NFL Fellowship by University of Philippines, Los Banos Philippines International during 1988
- International Agricultural Centre Fellowship by DOAE-Seed Division, Bangkok, Thailand International during 2001
- Twelve Certificate of Merit for mobilizing resources through extra-mural research projects and seed production
- ‘AIASA Harit Ratna Award-2018’ for outstanding contribution in Agriculture and in empowerment of youth in agriculture on all India nomination basis by All India Agricultural Students Association (AIASA), New Delhi.
- ‘Kempegowdara International Award’ for outstanding contribution in the field of Agricultural Science by Vishwa Vokkaligara Maha Vedike, Bengaluru during 2019.
- ‘The Great Son of Karnataka’ Award for outstanding services, achievements and contribution by Karnataka State All India Conference of Intellectuals presented by His Excellency Governor of Karnataka during 2019.
- Shri Y.K. Ramaiah “Krishi Vignani’ Award for outstanding contribution in the field of Agricultural Science by Karnataka Sangha ®, Mandya during November, 2019.
- ‘KARUNA AWARD’ presented by Karuna Trust for National Progress, Bengaluru.
Mobilized funds to the tune of Rs.19 crores for construction of
- Five seed processing units.
- Twelve seed storage go-downs.
- Two ISTA labs, drying sheds, threshing yards, irrigation network along with farm development activities in model seed farms at UAS (B) and ICAR – IISS, Mau.
- Established new Regional Station of ICAR-IISS, Mau, UP at GKVK, Bengaluru.
- Established 4 BSP, 3 STR and 6 ICAR Seed Units across the country under XII Plan.
Experience of Organizing Events and HRD Programmes
Organized
- 15 Annual Group Meeting of AICRP on NSP (Crops), ICAR Seed Project and Breeder Seed Review Meetings from 2011 to 2016 as Director and National Co-ordinator.
- Four National seminars.
- Four Brain storming workshops.
- Two QRT meetings.
- Four International, 15 National, 40 State and 480 Regional level training programmes.
- 26 Kisan melas/Krishi melas.
- 250 to 300 HRD programmes per annum namely trainings, field days and seed days were conducted for diverse stake-holders in seed domain.
No Comment