ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕನ್ನಡ ಭಾಷೆಯಲ್ಲಿ ಕೃಷಿಯಲ್ಲಿ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ಮುಂದಾಳತ್ವವನ್ನು ೧೯೭೪ರಲ್ಲಿ ವಹಿಸಿಕೊಂಡಿತು. ದೂರ ಶಿಕ್ಷಣ ಕಾರ್ಯಕ್ರಮವು ರೈತರು ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೆಪಿಸಲು ಕೃಷಿ ಉತ್ಪಾದನೆ ತಾಂತ್ರಿಕತೆಗಳ ಬಗ್ಗೆ ಪ್ರಾರಂಭಿಸಿದೆ.
ವಿಸ್ತರಣಾ ನಿರ್ದೇಶನಾಲಯವು ವಿವಿಧ ವಿಭಾಗಗಳ ತಜ್ಞರನ್ನು ಬಳಸಿಕೊಂಡು ಕೋರ್ಸ್ ಪರಿವಿಡಿಯನ್ನು ಕನ್ನಡ ಭಾಷೆಯಲ್ಲಿ ತಯಾರಿಸಿರುತ್ತಾರೆ. ಪ್ರಸ್ತುತ ವಿಸ್ತರಣಾ ನಿರ್ದೇಶನಾಲಯವು ಮ್ಯಾನೇಜ್ (PGDAEM) ಸಹಯೋಗದೊಂದಿಗೆ ಒಂದು ವರ್ಷದ ಕೃಷಿ ಡಿಪ್ಲೊಮಾ (PGDA) ಕೋರ್ಸ್ಗೆ ಸಂಪರ್ಕ ತರಗತಿ ಮತ್ತು ಮೌಲ್ಯಮಾಪನ ನಡೆಸುತ್ತದೆ ಜೊತೆಗೆ ಒಂದು ವರ್ಷದ ಸ್ನಾತ್ತಕೋತ್ತರ ಕೃಷಿ ಡಿಪ್ಲೋಮಾ ಒಂದು ವರ್ಷದ ಕೃಷಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳಾದ, ಆಹಾರಧಾನ್ಯ, ಹಣ್ಣು ಮತ್ತು ತರಕಾರಿಗಳ ಕೋಯ್ಲೊತ್ತರ ನಿರ್ವಹಣೆ, ಸಾವಯವ ಕೃಷಿ, ಸಮಗ್ರ ಕೃಷಿ ಕೋರ್ಸ್ಗಳನ್ನು ರೈತರ ಅನೂಕೂಲಕ್ಕಾಗಿ ನಡೆಸುತ್ತದೆ.
ಕೃಷಿ ವಿಶ್ವವಿದ್ಯಾನಿಲಯವು ೨೦೧೨ರಲ್ಲಿ ಎಲ್ಲಾ ದೂರ ಶಿಕ್ಷಣ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ನಡೆಸಲು ಅನುಕೂಲವಾಗುವಂತೆ ವಿಸ್ತರಣಾ ನಿರ್ದೇಶನಾಲಯದಲ್ಲಿ ದೂರ ಶಿಕ್ಷಣ ಘಟಕವನ್ನು ಪ್ರಾರಂಭಿಸಿದೆ
ದ್ಯೇಯೊದ್ದೇಶಗಳು
- ತಾತ್ರಿಕ ಮಾಹಿತಿಯನ್ನು ಅಕ್ಷರಸ್ಥ ರೈತರಿಗೆ ಪ್ರಸರಣೆ ಮಾಡುವುದು.
- ರೈತರಿಗೆ ಅನೂಕೂಲವಾದ ಸಮಯ ಮತ್ತು ಸ್ಥಳದಲ್ಲಿ ಮಾಹಿತಿ ಪ್ರಸರಿಸುವುದು
- ದೂರದ ಸ್ಥಳಗಳಲ್ಲಿ ವಾಸಿಸುತ್ತಿರುವ ರೈತರಿಗೆ ಕಲಿಸಲು ಅನುವುಮಾಡುವುದು.
- ರೈತರಿಗೆ ತಂತ್ರಜ್ಞಾನವನ್ನು ಒದಗಿಸುವುದು.
- ಕೃಷಿ ಕ್ಷೇತ್ರದಲ್ಲಿ ದೂರ ಶಿಕ್ಷಣವನ್ನು ಉತ್ತೇಜಿಸುವುದು.
ಚಟುವಟಿಕೆಗಳು
- ವಿಜ್ಞಾನಿಗಳ ಸಮಾಲೋಚನೆಯಲ್ಲಿ ಕೋರ್ಸ್ಗೆ ಸಂಬಂಧಿಸಿದ ವಿಷಯಗಳನ್ನು ಗುರುತಿಸುವುದು.
- ಸ್ಥಳೀಯ ಭಾಷೆ (ಕನ್ನಡ)ಯಲ್ಲಿ ಪಠ್ಯಕ್ರಮ ಮತ್ತು ಟಿಪ್ಪಣಿಗಳನ್ನು ಅಭಿವೃದ್ದಿಪಡಿಸುವುದು.
- ಕೃಷಿ ಸಮುದಾಯಕ್ಕಾಗಿ ಮಾಧ್ಯಮಗಳ ಮೂಲಕ ಶಿಕ್ಷಣದ ಪ್ರಚಾರ
- ಪಾಲ್ಗೊಳ್ಳುವವರಿಗೆ ನಿಯಮಿತವಾಗಿ ನೊಂದಾಣಿ ಮತ್ತು ಪಠ್ಯಪುಸ್ತಕಗಳನ್ನು ಒದಗಿಸುವುದು.
- ಅಭ್ಯರ್ಥಿಗಳ ಪ್ರತಿಕ್ರೀಯೆ ಮತ್ತು ಮೌಲ್ಯಮಾಪನವನ್ನು ಸಂಗ್ರಹಿಸುವುದು.
- ಕೋರ್ಸ್ಗಳಲ್ಲಿ ತೇರ್ಗಡೆಗೊಂಡ ನಂತರ ಪ್ರಮಾಣಪತ್ರಗಳನ್ನು ನೀಡುವುದು.
ತಾಂತ್ರಿಕ ಸಿಬ್ಬಂದಿ
Album
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು