Title Image

ಶಿಕ್ಷಣ ನಿರ್ದೇಶನಾಲಯ

ಡಾ.ಎಸ್.ವಿ.ಸುರೇಶ.
ಶಿಕ್ಷಣ ನಿರ್ದೇಶಕರು
ಕೃಷಿ ವಿಶ್ವ ವಿದ್ಯಾನಿಲಯ
ಜಿಕೆವಿಕೆ ಬೆಂಗಳೂರು-560 065
+91-80-2363 6826
+91-80-2333 0153 (Extn. 207)
+91-80-2333 0277
ಒಂದು ತ್ರಿಪಕ್ಷೀಯ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯನ್ನು ಸಮಗ್ರಗೊಳಿಸುವುದು ಬಹಳ ಮುಖ್ಯವಾಗಿದೆ. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ವಿವಿಧ ಶಾಖೆಗಳಲ್ಲಿ ಮಾನವ ಸಂಪನ್ಮೂಲದ ಕ್ಷಮತೆ ಮತ್ತು ಅರ್ಹತೆಯನ್ನು ಅಭಿವೃದ್ಧಿಪಡಿಸಲು ಸಿಬ್ಬಂದಿಗೆ ಸೂಕ್ತ ತರಬೇತಿ ಒದಗಿಸುವುದು ಪರಿಗಣಿಸಬೇಕಾದ ಮತ್ತೊಂದು ವಿಷಯವಾಗಿದೆ. ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ಕಾಯ್ದಿರಿಸಲು ಹಾಗೂ ಕೌಶಲ್ಯತೆ ಪಡೆದು ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿದ್ಯಾರ್ಥಿ ಸೌಕರ್ಯಗಳ ಸುಧಾರಣೆಗೆ ಶೈಕ್ಷಣಿಕ ನಿಬಂಧನೆಗಳ, ಪರೀಕ್ಷಾ ಸುಧಾರಣೆಗಳ, ಮೂಲಭೂತ ಸೌಕರ್ಯ ಅಭಿವೃದ್ಧಿಯ, ಬೋಧಕ ಸಿಬ್ಬಂದಿ ನೇಮಕಾತಿ ಹಾಗೂ ಚಲನೆಯ, ಗ್ರಂಥಾಲಯ ಸಂಪರ್ಕಜಾಲದ ಮತ್ತು ಪ್ರಕಟಣೆಗಳ, ಪಠ್ಯಕ್ರಮದ ಪುನರ್ ರಚನೆಯ ಕನಿಷ್ಠ ಮಾನಕಗಳನ್ನು ನಿರ್ವಹಿಸಬೇಕಾಗಿದೆ.

ಬೋಧನೆಗೆ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಖಾತರಿಗೊಳಿಸುವುದರ ಮೂಲಕ ಹಾಗೂ ವಿವಿಧ ಪ್ರದೇಶದ ರೈತರಿಗೆ ಸಂಶೋಧನೆ ಮತ್ತು ನವೀನ ತಂತ್ರಜ್ಞಾನಗಳನ್ನು ರೈತರಿಗೆ ಕೃಷಿ ವಿಜ್ಞಾನ ಕೇಂದ್ರಗಳ, ರೈತ ತರಬೇತಿ ಸಂಸ್ಥೆಗಳ ಮತ್ತು ಸಿಬ್ಬಂದಿ ತರಬೇತಿ ಘಟಕಗಳ ತನ್ನ ವಿಸ್ತರಣಾ ಜಾಲದ ಮೂಲಕ ತಲುಪಿಸುವ ಮೂಲಕ ಅತ್ಯಂತ ಸೂಕ್ತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾನಿಲಯವು ಈ ಮೇಲಿನ ತ್ರಿಪಕ್ಷೀಯ ಕಾರ್ಯಗಳನ್ನು ಸಮಗ್ರಗೊಳಿಸಲು ತನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು