ಡಾ.ಎಚ್.ಎಸ್.ಶಿವರಾಮು
ಕೃಷಿ ವಿಶ್ವವಿದ್ಯಾನಿಲಯ,
ಜಿ.ಕೆ.ವಿ.ಕೆ, ಬೆಂಗಳೂರು-560 065
ಸಂಶೋಧನಾ ನಿರ್ದೇಶಕರು
ರಾಜ್ಯದಲ್ಲಿನ ಕೃಷಿಯು ಸಣ್ಣ ಹಿಡುವಳಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣರೈತರ ಪ್ರಾಬಲ್ಯ ಹೊಂದಿದೆ. ಈ ರೈತರ ಆದಾಯವನ್ನು ವೃದ್ಧಿಗೊಳಿಸಬೇಕಾದರೆ ಉತ್ಪಾದಕತೆಯನ್ನು ಹೆಚ್ಚಿಸುವುದು ಪ್ರಮುಖ ಅಂಶವಾಗಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿನ ಸಂಶೋಧನೆಯು ರೈತರಿಗೆ ಲಾಭದಾಯಕವಾಗುವಂತೆ ಮತ್ತು ಆಹಾರಕ್ಕಾಗಿ ಬೆಳೆಯುತ್ತಿರುವ ಬೆಳೆಗಳ ಬೇಡಿಕೆಯನ್ನು ಪೂರೈಸಲು ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯನ್ನು ಹೊಂದಿದೆ.
ಆಹಾರ ಭದ್ರತೆಯನ್ನು ಖಾತರಿ ಪಡಿಸುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಿ ಮತ್ತು ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದೆ ಕೃಷಿ ಸಂಪನ್ಮೂಲಗಳ ದಕ್ಷತೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯ ಮತ್ತು ಸಾಮಾಜಿಕ ಸ್ಥಿತಿಯ ಗುಣಮಟ್ಟವನ್ನು ಸುಧಾರಿಸುವಂತಹ ಹಾಗು ಸಣ್ಣ ಹಿಡುವಳಿದಾರರು ಮತ್ತು ಅತಿ ಸಣ್ಣರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ೧೦ ಜಿಲ್ಲೆಗಳಲ್ಲಿರುವ ತನ್ನ ೧೨ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಕಾರ್ಯತಂತ್ರವನ್ನು ಮತ್ತು ನಿರೀಕ್ಷಿತ ಸಂಶೋಧನಾ ಕಾರ್ಯಕ್ರಮಗಳನ್ನು ರೂಪಿಸಿದೆ.
ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಹೊಸ ತಳಿಗಳು ಮತ್ತು ಹೊಸ ಉತ್ಪಾದನಾ ತಂತ್ರಜ್ಞಾನಗಳ ಅಳವಡಿಕೆಯು ಇಳುವರಿಯನ್ನು ಹೆಚ್ಚಿಸುವುದಲ್ಲದೆÀ ಬರ ಸಹಿಷ್ಣುತೆಯನ್ನು ಸುಧಾರಿಸುತ್ತದೆ, ಕೀಟಗಳು ಮತ್ತು ರೋಗಗಳಿಗೆ ಪ್ರತಿರೋಧವನ್ನು ಹೆಚ್ಚಿಸಿ, ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವುದರ ಮೂಲಕ ರೈತರ ಬೆಳೆ ವ್ಯವಸ್ಥೆಯನ್ನು ಸಮರ್ಥವಾಗಿ ಬಲಪಡಿಸುತ್ತದೆ. ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಹತ್ತಿಬೆಳೆಯ ಅಂತರ-ನಿರ್ದಿಷ್ಟಸAಕರಣ ತಳಿಯನ್ನು ಹಾಗು ದೇಶದಲ್ಲೇ ಮೊದಲಬಾರಿಗೆ ಭತ್ತದಲ್ಲಿ (ಕೆಆರ್‌ಹೆಚ್-೧) ಹಾಗೂ ಸಿಎಂಎಸ್ ಆಧಾರಿತ ಸೂರ್ಯಕಾಂತಿ (ಬಿಎಸ್‌ಹೆಚ್-೧) ಸಂಕರಣ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ. ವಿಶ್ವವಿದ್ಯಾನಿಲಯವು ಪ್ರಾರಂಭವಾದಾಗಿನಿAದಲೂ (೧೯೬೫-೨೦೨೪) ಇಲ್ಲಿಯವರೆಗೆ ೨೮೯ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ, ೧೨೮ ಧಾನ್ಯಗಳು ಮತ್ತು ಸಿರಿಧಾನ್ಯಗಳ ತಳಿಗಳು, ೫೪ ದ್ವಿದಳ ಧಾನ್ಯಗಳ ತಳಿಗಳು, ೨೮ ಎಣ್ಣೆಕಾಳುಗಳ ತಳಿಗಳು, ೩೧ ವಾಣಿಜ್ಯ ಬೆಳೆಗಳ ತಳಿಗಳು, ೩೨ ತೋಟಗಾರಿಕಾ ಬೆಳೆಗಳ ತಳಿಗಳು, ೧೧ ಮೇವಿನ ಬೆಳೆಗಳ ತಳಿಗಳು ಮತ್ತು ೫ ಸಮರ್ಥ ಬೆಳೆಗಳ ತಳಿಗಳು. ಇದರ ಜೊತೆಗೆ ೩೬ ಸಂಕರಣ ತಳಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ, ೩ ಭತ್ತ, ೭ ಮೆಕ್ಕೆಜೋಳ, ೩ ಮುಸುಕಿನ ಜೋಳ, ೧ ಕಡಲೆ, ೧೦ ಸೂರ್ಯಕಾಂತಿ, ೩ ಹರಳು, ೩ ಹತ್ತಿ, ೧ ಆಲೂಗಡ್ಡೆ, ೧ ಮೆಣಸಿನಕಾಯಿ, ೪ ಮೇವು ಬೆಳೆಯ ಸಂಕರಣ ತಳಿಗಳನ್ನು ಮತ್ತು ೧ ಕುರಿ ಹಾಗು ಮತ್ತು ೬ ಕೋಳಿ (೬) ತಳಿಯನ್ನು ಅಭಿವೃದ್ಧಿಪಡಿಸಿದೆ.
ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ೫೦೦ ಕ್ಕೂ ಹೆಚ್ಚು ಸುಸ್ಥಿರ ಕೃಷಿ ತಂತ್ರಜ್ಞಾನಗಳು ರೈತ ಸಮುದಾಯದ ಜೀವನೋಪಾಯವನ್ನು ಖಾತ್ರಿಪಡಿಸುವ ಮೂಲಕ ದಕ್ಷಿಣ ಭಾರತದಲ್ಲಿ ಮಳೆಯಾಧಾರಿತ ಕೃಷಿಯ ಭೂದೃಶ್ಯವನ್ನು ಪರಿವರ್ತಿಸಿದೆ. ಒಣ ಭೂಮಿ ಕೃಷಿಗಾಗಿ ಅಭಿವೃದ್ಧಿಪಡಿಸಲಾದ ಉತ್ಪಾದನಾ ತಂತ್ರಜ್ಞಾನಗಳು ವಿರಳ ಮಳೆಯ ವರ್ಷಗಳಲ್ಲಿಯೂ ಕೃಷಿ ಉತ್ಪಾದಕತೆಯನ್ನು ಸುಸ್ಥಿರಗೊಳಿಸಲು ಸಹಾಯ ಮಾಡಿದೆ. ವಿಶ್ವವಿದ್ಯಾನಿಲಯವು ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸಲು ಹಲವಾರುಕಡಿಮೆ ವೆಚ್ಚದ, ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಹಲವಾರು ಮೌಲ್ಯವರ್ಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರೈತರು ಮತ್ತು ಇತರ ಪಾಲುದಾರರ ನಿಕಟ ಸಹಯೋಗದೊಂದಿಗೆ ತಂತ್ರಜ್ಞಾನಗಳ ಪ್ರಸರಣ, ಮೌಲ್ಯಮಾಪನ ಮತ್ತು ನಿರಂತರವಾಗಿ ಸುಧಾರಿಸುವ ಸುಸಂಘಟಿತ ಪ್ರಯತ್ನಗಳು ಜಾರಿಯಲ್ಲಿದೆ.
ರೈತರು, ಪಾಲುದಾರರು ಮತ್ತು ಸಾರ್ವಜನಿಕರಿಗೆ ಲಭ್ಯವಿರುವ ತಂತ್ರಜ್ಞಾನಗಳ ಮಾಹಿತಿಯನ್ನು ಒದಗಿಸುವುದು ನಿರ್ದೇಶನಾಲಯದ ಪ್ರಮುಖ ಆದ್ಯತೆಯಾಗಿರುತ್ತದೆ.
ನಿರ್ದೇಶನಾಲಯ, ಅದರ ಚಟುವಟಿಕೆಗಳು, ಸಾಧನೆಗಳು ಮತ್ತು ಉಪಕ್ರಮಗಳ ಬಗ್ಗೆ ವಿಶ್ವವಿದ್ಯಾನಿಲಯದ ಜಾಲತಾಣದಲ್ಲಿ ಸಂಪೂರ್ಣಮಾಹಿತಿಯನ್ನು ನೀಡಿದ್ದು, ನಿರ್ದೇಶನಾಲಯಗಳ ವಿವಿಧ ಪ್ರಕಟಣೆಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ನೀವು ಇಲ್ಲಿ ಕಾಣಬಹುದು ಮತ್ತು ನಮ್ಮ ಎಲ್ಲಾ ಸಂಶೋಧನಾ ಕೇಂದ್ರಗಳು ಮತ್ತು ಯೋಜನಾ ಅನುಷ್ಠಾನ ಘಟಕಗಳ ಸಂಪರ್ಕದ ಮಾಹಿತಿಯನ್ನು ಸಹ ಇಲ್ಲಿ ಕಾಣಬಹುದು.
ದೃಷ್ಟಿಕೋನ
ಸೂಕ್ತ ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಗಳನ್ನು ರೈತ ಸಮುದಾಯದ ಜೀವನೋಪಾಯದ ಸುರಕ್ಷತೆಗಾಗಿ ಕೈಗೊಳ್ಳುವ ಈ ವಿಶ್ವವಿದ್ಯಾನಿಲಯವು ದೇಶದಲ್ಲೇ ಅತ್ಯಂತ ಯಶಸ್ವಿ ರಾಜ್ಯ ಕೃಷಿ ವಿಶ್ವವಿದ್ಯಾನಿಲಯವಾಗಿದೆ ಎಂಬುದಾಗಿ ನಿರೂಪಿಸುವುದು ರ್ದೇ ಶನಾಲಯದ ಗುರಿಯಾಗಿದೆ
ಉದ್ದೇಶ
ಪ್ರದೇಶದ ಪರಿಸರವನ್ನು ಕಾಪಾಡುವುದರ ಜೊತೆಗೆ ಕೃಷಿ ಉತ್ಪಾದಕತೆ ಹಾಗೂ ಆಹಾರ ಸುರಕ್ಷತೆಯನ್ನು ಹೆಚ್ಚಿಸುವಂತಹ ಸಮಕಾಲೀನ ಸಮಸ್ಯೆಗಳ ಕುರಿತಂತೆ ಭಾಗವಹಿಸುವಿಕೆ ವಿಧಾನದಲ್ಲಿ ಕ್ಷೇತ್ರದಲ್ಲಿ ನಮತ್ತು ಕೇಂದ್ರಗಳಲ್ಲಿನ ಸಂಶೋಧನೆಗೆ ಒತ್ತುನೀಡುವುದು ರ್ದೇ ಶನಾಲಯದ ಉದ್ದೇಶವಾಗಿದೆ.
ಸಂಶೋಧನಾ ನಿರ್ದೇಶನಾಲಯದ ಸಾಂಸ್ಥಿಕ ನಕ್ಷೆ
ಕೃಷಿ ವಲಯಗಳಾದ ಪೂರ್ವ ಒಣ ವಲಯ (ವಲಯ-೫), ದಕ್ಷಿಣಒಣ ಒಲಯ (ವಲಯ-೬) ಮತ್ತು ದಕ್ಷಿಣ ಅರೆಮಲೆನಾಡು ವಲಯ (ವಲಯ-೭) ಹಾಗೂ ಮದ್ಯ ಒಣ ವಲಯ(ವಲಯ-೪) ಭಾಗಗಳನ್ನೊಳಗೊಂಡಿರುವ ೧೦ ದಕ್ಷಿಣ ಜಿಲ್ಲೆಗಳ ಸಂಶೋಧನಾ ಅಗತ್ಯತೆಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಪೂರೈಸುತ್ತದೆ. ಸಂಶೋಧನಾ ನಿರ್ದೇಶಕರು, ಹಮ್ಮಿಕೊಳ್ಳುವ ಸಂಶೋಧನಾ ಕೇಂದ್ರಗಳ ಕಾರ್ಯಕ್ಷಮತೆ ಮತ್ತು ವಿಶ್ವವಿದ್ಯಾನಿಲಯವು ಎಲ್ಲಾ ಸೋಶೋಧನೆಗಳ ಕಾರ್ಯಕ್ಷಮತೆ, ಸಮನ್ವಯ ಹಾಗೂ ಮೀಲ್ವಿಚಾರಣೆ ಜವಾಬ್ದಾರಿಯನ್ನು ಹೊಂದಿರುತ್ತಾರೆ. ವಲಯವಾರು ಕೃಷಿ ಸಂಶೋಧನಾ ಕೇಂದ್ರಗಳು, ವಿಸ್ತರಣಾತಜ್ಞರು ಮತ್ತು ವಿಶ್ವವಿದ್ಯಾನಿಲಯದೊಳಗಿನ ಬೋಧನಾ ವಿಭಾಗಗಳ ತಜ್ಞರು, ಇತರೆ ಸಂಶೋಧನಾ ಸಂಸ್ಥೆಗಳು, ರಾಜ್ಯ ಸರ್ಕಾರದ ಇಲಾಖೆಗಳು, ಪ್ರಗತಿಪರರೈತರು ಮತ್ತು ಕೃಷಿ ಉದ್ಯಮಿಗಳು ಎಲ್ಲರೂ ಸೇರಿ ಆ ಕ್ಷೇತ್ರಕ್ಕೆ ಸೂಕ್ತವಾದ ಕಾರ್ಯಸೂಚಿಯನ್ನು ರೂಪಿಸಲು ಕಾಯಾಚರಣೆಯ ಚೌಕಟ್ಟನ್ನು ಹಾಗೂ ವ್ಯವಸ್ಥೆಯನ್ನು ಒದಗಿಸುತ್ತಾರೆ.
ಸಂಶೋಧನಾ ನಿರ್ದೇಶಕರು, ಸಂಶೋಧನಾ ನಿರ್ದೇಶನಾಲಯದ ನೇತೃತ್ವವನ್ನು ಹೊಂದಿರುತ್ತಾರೆ. ಅವರಿಗೆ ಸಹಕಾರಿಯಾಗಿ, ವಲಯ ೪ ಮತ್ತು ೫ಕ್ಕೆ ಒಬ್ಬರು ಸಹ ಸಂಶೋಧನಾ ನಿರ್ದೇಶಕರು, ಹಾಗೂವಲಯ ೬ ಮತ್ತು ೭ಕ್ಕೆ ಒಬ್ಬರು ಸಹ ಸಂಶೋಧನಾ ನಿರ್ದೇಶಕರಿದ್ದಾರೆ. ಸಹ ಸಂಶೋಧನಾ ನಿರ್ದೇಶಕರು, ಅವರ ವಲಯ ಕೃಷಿ ಸಂಶೋಧನಾ ಕೇಂದ್ರಗಳಿAದ ತಮ್ಮ ಕಾರ್ಯವ್ಯಾಪ್ತಿಗೆ ಬರುವ ಕೃಷಿ ಸಂಶೋಧನಾ ಕೇಂದ್ರಗಳ ಹಾಗೂ ಪ್ರಾಯೋಜನೆಗಳ (ಬಾಹ್ಯಧನಸಹಾಯ ಹಾಗೂ ಆ.ಭಾ.ಸು.ಸಂ.ಪ್ರಾ)ಮೀಲ್ವಿಚಾರಣೆ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಪ್ರತಿ ವಲಯದ ಸಹ ಸಂಶೋಧನಾ ನಿರ್ದೇಶಕರು, ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿರುವ ಸಂಶೋಧನಾ ಚಟುವಟಿಕಡಗಳನ್ನು ಸಂಘಟಿಸಲು ಸಂಶೋಧನಾ ನಿರ್ದೇಶಕರಿಗೆ ಸಹಕಾರಿಯಾಗಿರುತ್ತಾರೆ ಮತ್ತು ಅದರಜೊತೆಗೆ ಇಲಾಖೆಯವರೊಂದಿಗೆ ನಿಕಟ ಸಂಪರ್ಕದೊAದಿಗೆ ಸೇರಿಅವರವರ ವಲಯಕ್ಕೆ ಸೀಮಿತಗೋಂಡ ಸ್ಥಳ ನಿರ್ದಿಷ್ಟ ಸಮಸ್ಯೆಗಳನ್ನು ಮತ್ತು ಸಂಶೋಧನಾ ಅಗತ್ಯತೆಗಳನ್ನು ಗುರುತಿಸಿ, ಆದ್ಯತೆಯ ಮೇರೆಗೆ ಸೂಕ್ತ ತಾಂತ್ರಿಕ ಕಾರ್ಯಕ್ರಮಗಳನ್ನು ಸೂತ್ರೀಕರಿಸಿ ಅನುಷ್ಠಾನಗೊಳಿಸುವುದು ಹಾಗೂ ಎಲ್ಲಾ ಯೋಜನೆಗಳ ಮೀಲ್ವಿಚಾರಣೆ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಬಾಹ್ಯಧನಸಹಾಯಕ್ಕಾಗಿ ಸಹಯೋಗಿ ಸಂಶೋಧನಾ ಯೋಜನೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಲಾಗುತ್ತದೆ.
ಪ್ರತಿ ಕೃಷಿ ಸಂಶೋಧನಾ ಕೇಂದ್ರಗಳ ಜವಾಬ್ದಾರಿಯುಹಿರಿಯ ವಿಜ್ಞಾನಿ/ ಕ್ಷೇತ್ರ ಆಧಿಕ್ಷಕರದ್ದಾಗಿರುತ್ತದೆ. ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಗಳ ಜವಾಬ್ದಾರಿಯುಯೋಜನಾ ಮುಖ್ಯಸ್ಥರದ್ದಾಗಿರುತ್ತದೆ. ಮುಖ್ಯ ವೈಜ್ಞಾನಿಕ ಅಧಿಕಾರಿಗಳು, ತಾಂತ್ರಕ ಅಧಿಕಾರಿಗಳು ಹಾಗೂ ದಸ್ತಾವೇಜು ವಿಭಾಗವು ಸಂಶೋಧನಾ ನಿರ್ದೇಶಕರಿಗೆ ಸಹಕಾರಿಯಾಗಿರುತ್ತಾರೆ. ಸಂಶೋಧನಾ ನಿರ್ದೇಶನಾಲಯದ ಕಾರ್ಯಾಚರಣೆಯ ನಕ್ಷೆಯನ್ನು ವಿವರವಾಗಿ ಚಿತ್ರಾತ್ಮಿಕ ಪ್ರಾತಿನಿಧ್ಯವನ್ನು ನೀಡಲಾಗಿದೆ
ಸಂಶೋಧನಾ ಸಮನ್ವಯಕಾರ್ಯ ವಿಧಾನ
ಸಹ ಸಂಶೋಧನಾ ನಿರ್ದೇಶಕರು, ಮುಖ್ಯ ವೈಜ್ಞಾನಿಕ ಅಧಿಕಾರಿಗಳು ಹಾಗೂ ತಾಂತ್ರಕ ಅಧಿಕಾರಿಗಳು ಸಹಯೋಗದೊಂದಿಗೆ ಸಂಶೋಧನಾ ನಿರ್ದೇಶಕರು, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಗಳ ಮತ್ತು ಬಾಹ್ಯಅನುದಾನಿತ ಸಂಶೋಧನಾ ಯೋಜನೆಗಳ ಸಂಶೋಧನಾ ಚಟುವಟಿಕೆಗಳನ್ನು ಸಂಯೋಜಿಸುತ್ತಾರೆ ಹಾಗೂ ಅದರ ಮೇಲ್ವಿಚಾರಣೆ ಹಾಗೂ ಮೈಲ್ಯಮಾಪನವನ್ನು ಮಾಡುತ್ತಾರೆ. ಸಂಶೋಧನೆಯಲ್ಲಿ ತೊಡಗಿರುವ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಸಿಬ್ಬಂದಿಗಳು ವಾರ್ಷಿಕ ವಲಯ ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಗಾರದಲ್ಲಿ ವಿಭಾಗವಾರುವಾರ್ಷಿಕ ತಾಂತ್ರಿಕ ಕಾರ್ಯಕ್ರಮಗಳಲ್ಲಿ ಮನ್ನಣೆ ಪಡೆದಹಿಂದಿನ ವರ್ಷದ ಸಂಶೋಧನಾ ಫಲಿತಾಂಶಗಳನ್ನು, ಹೊಸ ತಳಿ ಹಾಗೂ ತಂತ್ರಜ್ಞಾನಗಳ ಪ್ರಸ್ತಾವನೆಗಳನ್ನು, ಕ್ಷೇತ್ರ ಪ್ರಯೋಗಗಳ ಪ್ರಸ್ತಾವನೆಗಳು, ಬಹು ಕ್ಷೇತ್ರ ಪ್ರಯೋಗಗಳ ಪ್ರಸ್ತಾವನೆಗಳು, ವಾಣಿಜ್ಯಕರಣಕ್ಕಾಗಿ ಪ್ರಸ್ತಾವನೆಗಳು ಮತ್ತು ತಾಂತ್ರಿಕ ಕಾರ್ಯಕ್ರಮಗಳನ್ನು ಮಂಡಿಸುತ್ತಾರೆ. ಈ ವಾರ್ಷಿಕ ಕಾರ್ಯಗಾರದಲ್ಲಿ ಕುಲಸಚಿವರು, ಕುಲಪತಿಗಳು, ಸಂಶೋಧನಾ ನಿರ್ದೇಶಕರು, ವಿಸ್ತರಣಾ ನಿರ್ದೇಶಕರು, ಸಹ ಸಂಶೋಧನಾ ನಿರ್ದೇಶಕರುಗಳು, ಸಹ ವಿಸ್ತರಣಾ ನಿರ್ದೇಶಕರುಗಳು, ವಿಶ್ವವಿದ್ಯಾನಿಲಯದ ಮುಖ್ಯಸ್ಥರುಗಳು, ಕೃಷಿ ಇಲಾಖಾ ಮುಖ್ಯಸ್ಥರುಗಳು ಹಾಗೂ ಅಧಿಕಾರಿಗಳು, ಎಲ್ಲಾವಿಜ್ಞಾನಿಗಳು, ಸಂಬAಧಿತ ಇತರೆ ಇಲಾಖಾ ಅಧಿಕಾರಿಗಳು, ಪ್ರಗತಿಪರ ರೈತರು ಮತ್ತು ಕೃಷಿ ಉದ್ಯಮಿಗಳು ಪಾಲ್ಗೊಳ್ಳುತ್ತಾರೆ.
ವಲಯ ಕಾರ್ಯಗಾರದಲ್ಲಿ ಮನ್ನಣೆ ಪಡೆದಹೊಸ ತಳಿ ಹಾಗೂ ತಂತ್ರಜ್ಞಾನಗಳ ಪ್ರಸ್ತಾವನೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಸೇರಿಸಲು ಹಾಗೂ ಕ್ಷೇತ್ರ ಪ್ರಯೋಗಗಳ ಪ್ರಸ್ತಾವನೆಗಳನ್ನು ಮತ್ತು ಪ್ರಾಯೋಗಗಳನ್ನು ಜಾರಿಗೊಳಿಸಲು ಸಂಶೋಧನಾ ಪರಿಷತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗುತ್ತದೆ. ಅನುಮೋದಿಸಲಾದ ತಾಂತ್ರಿಕ ಕಾರ್ಯಕ್ರಮಗಳನ್ನು ಹಾಗೂ ಬಹುಕ್ಷೇತ್ರ ಪ್ರಯೋಗಗಳನ್ನು ಸಂಬAಧಿತ ಸಂಶೋಧನಾ ಕೇಂದ್ರಗಳಲ್ಲಿ ಹಾಗೂ ಪ್ರಾಯೋಜನೆಗಳಲ್ಲಿ ಹಮ್ಮಿಕೊಳ್ಳುತ್ತಾರೆ ಹಾಗೂ ರೈತರ ತಾಕುಗಳಲ್ಲಿ ಇಲಾಖೆಯ ಸಹಯೋಗದೊಂದಿಗೆ ಕ್ಷೇತ್ರ ಪ್ರಯೋಗಗಳನ್ನು ಹಮ್ಮಿಕೊಳ್ಳುತ್ತಾರೆ. ಅನುಮೋದಿಸಲಾದ ಹಕ್ಕು ಪತ್ರಕ್ಕಾಗಿ ಸಲ್ಲಿಸಿದ ಪ್ರಸ್ತಾವನೆಗಳನ್ನು ಮತ್ತು ವಾಣ್ಯಿಜಿಕರಣಕ್ಕಾಗಿ ಸಲ್ಲಿಸಲಾದ ಪ್ರಸ್ತಾವನೆಗಳನ್ನು
ಸಂಶೋಧನಾ ನಿರ್ದೇಶನಾಲಯದ ಸಿಬ್ಬಂದಿ
ಪಿ.ಹೆಚ್.ಡಿ
ಸಸ್ಯರೋಗ ಶಾಸ್ರ
+91-9901513044
ಎಂ. ಎಸ್. ಸಿ (ಕೃಷಿ ಮಾರಾಟ, ಸಹಾಕಾರ ಮತ್ತು ವ್ಯವಹಾರ ನಿರ್ವಹಣೆ)
ಕೃಷಿ ಮಾರಾಟ, ಸಹಾಕಾರ ಮತ್ತು ವ್ಯವಹಾರ ನಿರ್ವಹಣೆ
ಸಂಶೋಧನಾ ನಿರ್ದೇಶನಾಲಯ,
ಗಾ.ಕೃವಿಕೆ, ಬೆಂಗಳೂರು
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು