ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗವು, ಬೋಧನೆ, ಸಂಶೋಧನಾ ಪ್ರಕಟಣೆಯಲ್ಲಿ ಹಾಗೂ ಉತ್ತಮ ಕಲಿಕೆಯಲ್ಲಿ ಪ್ರಮುಖವಾಗಿದೆ. ಪಠ್ಯಕ್ರಮದ ಪ್ರಕಾರ ವಿಭಾಗವು ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತದೆ. ವಿಭಾಗವು ಪಿಹೆಚ್.ಡಿ. ಪದವಿ ಸ್ನಾತಕೋತ್ತರ, ಸ್ನಾತಕ ಪದವಿಗಳನ್ನು ಹಾಗೂ ಡಿಪ್ಲೊಮಾ (ಕೃಷಿ) ಕೋರ್ಸ್ಗಳನ್ನು ಉತ್ತಮಕ್ಷೇತ್ರ ಮಾನ್ಯತೆಯೊಂದಿಗೆ ಸೈದ್ದಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಕಲಿಯಲು ಸಮಾನ ಅವಕಾಶವನ್ನು ನೀಡುತ್ತದೆ. ವಿಭಾಗವು ಆವರಣದಲ್ಲಿ ವಿವಿಧ ಅರಣ್ಯ ಸಸ್ಯಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿದೆ ಜೊತೆಗೆಆವರಣಕ್ಕೆ ಒಂದು ಮೆರಗು ನೀಡಿದೆ. ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ರೈತರಿಗೆ ಅರಣ್ಯ ಕೃಷಿ ಸಂಬಂಧಿತ ಮಾಹಿತಿಯನ್ನು ಒದಗಿಸುವಲ್ಲಿ ವಿಭಾಗವು ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಕೃಷಿ ಮಹಾವಿದ್ಯಾಲಯದ ಆವರಣದ ಸುತ್ತಮುತ್ತ ಉರುವಲು, ಮೇವು ಔಷಧಿ, ಜೈವಿಕಇಂಧನ ಹಾಗೂ ತೈಲ ಗಿಡಗಳು, ಅಲಂಕಾರಿಕಾ ಗಿಡಗಳು, ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ವಿಭಾಗವು ಸುಸಜ್ಜಿತವಾದ ತಾಕುಗಳನ್ನು ಹೊಂದಿದ್ದು, ಇಲ್ಲಿ ಅರಣ್ಯ ಸಸ್ಯಗಳ ಮಹತ್ವ ಹಾಗೂ ವೈವಿದ್ಯತೆಯನ್ನುಕಾಣಬಹುದು. ವಿಭಾಗವು“ಮರ – ಪ್ರಕೃತಿಯ ವರ”ಸಂಪತ್ತಿನ ಆಗರ ಹಾಗೂ ಭವ್ಯ ಭವಿಷ್ಯದ ಬುನಾದಿ ಎಂಬ ದೃಷ್ಠಿಕೋನದಿಂದ ಮುಂದಿನ ದಿನಗಳ ಸಸ್ಯಗಳನ್ನು ನೆಟ್ಟು ಬೆಳೆಸುವ ಸಂಕಲ್ಪವನ್ನುತೊಟ್ಟಿದೆ
ಸಿಬ್ಬಂದಿ
ಹುದ್ದೆ: ಸಹಾಯಕ ಪ್ರಾಧ್ಯಾಪಕರು
ವಿಶೇಷತೆ: ಪರಿಸರ ವಿಜ್ಞಾನ, ಅರಣ್ಯ ಶಾಸ್ತ್ರ, ಕೃಷಿ ಅರಣ್ಯ, ಜೀವ ವೈವಿಧ್ಯತೆ ಮತ್ತು ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳು, ಜಲಜೀವ ಶಾಸ್ತ್ರ ಮತ್ತು ಆಲ್ಗೆ ಡೈವರ್ಸಿಟಿ
+91 9739333306
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು