ವಿಭಾಗದ ಸಂಕ್ಷಿಪ್ತ ಚಿತ್ರಣ
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ರೇಷ್ಮೆಕೃಷಿ ವಿಭಾಗವು ಕೃಷಿ ಕೀಟಶಾಸ್ತ್ರ ವಿಭಾಗದ ಮಗ್ಗಲು ವಿಭಾಗವಾಗಿ ಅಸ್ತಿತ್ವಕ್ಕೆ ಬಂದಿತು. ನಂತರ ೧೯೭೪ ರಲ್ಲಿ ವಿಶ್ವವಿದ್ಯಾನಿಲಯವು ರೇಷ್ಮೆಕೃಷಿ ಕ್ಷೇತ್ರದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಬೆಂಗಳೂರಿನ ಹೆಬ್ಬಾಳ ಹಾಗೂ ಧಾರವಾಡದ ಆವರಣಗಳಲ್ಲಿ ಪ್ರಾರಂಭಿಸಿತು. ಅಲ್ಲದೇ, ರೇಷ್ಮೆ ಹುಳುಗಳ ಬಗ್ಗೆ ಸಂಶೋಧನೆಗಾಗಿ ಸ್ನಾತಕೋತ್ತರ ಪಧವಿಗಳನ್ನು ಕೃಷಿ ಕೀಟಶಶಾಸ್ತ್ರ ವಿಭಾಗದಲ್ಲಿ ಪ್ರಾರಂಭಿಸಲಾಯಿತು. ೧೯೮೦ ರಲ್ಲಿ ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ರೇಷ್ಮೆಕೃಷಿ ಯೋಜನೆ–I ((KSP-I), M.Sc. (Agri.)) ರ ಅಡಿಯಲ್ಲಿ ರೇಷ್ಮೆಕೃಷಿ ವಿಷಯದ ಎಂ. ಎಸ್ಸಿ. (ಕೃಷಿ) ಸ್ನಾತಕೋತ್ತರ ಪಧವಿಯನ್ನು ಕೃಷಿ ಕೀಟಶಾಸ್ತ್ರ ವಿಭಾಗದಲ್ಲಿ ಪ್ರಾರಂಭಿಸಲಾಯಿತು. ಕರ್ನಾಟಕರಾಜ್ಯದ ರೇಷ್ಮೆಇಲಾಖೆಯ ತಾಂತ್ರಿಕ ಮಾನವ ಸಂಪನ್ಮೂಲದ ಅಗತ್ಯಗಳನ್ನು ಪೂರೈಸಲು ಪ್ರತ್ಯೇಕ ರೇಷ್ಮೆಕೃಷಿ ವಿಭಾಗವನ್ನು ೧೯೮೨ರಲಿ ಸ್ಧಾಪಿಸಿ ವಿಶ್ವವಿದ್ಯಾನಿಲಯದ ಇತರೇ ಕೃಷಿ ಪಧವಿಗಳಂತೆ ನಾಲ್ಕು ವರ್ಷಗಳ ಅವಧಿಯ ಬಿ.ಎಸ್ಸಿ. ರೇಷ್ಮೆಕೃಷಿ ಪಧವಿಯನ್ನು ಪ್ರಾರಂಭಿಸಿತು. ಜೊತೆಗೆ ಒಂದುವರ್ಷ ಅವಧಿಯ ರೇಷ್ಮೆಕೃಷಿ ಸ್ನಾತಕೋತ್ತರಡಿ ಪ್ಲೊಮಾಪಧವಿಯನ್ನು ರೇಷ್ಮೆಕೃಷಿ ವಿಭಾಗದಲ್ಲಿ ಆರಂಭಿಸಲಾಯಿತು. ೧೯೮೬ ರಲ್ಲಿ ಎಂ.ಎಸ್ಸಿ. ಹಾಗೂ ಪಿಹೆಚ್.ಡಿ. ಸ್ನಾತಕೋತ್ತರ ಪಧವಿಗಳನ್ನು ರೇಷ್ಮೆಕೃಷಿ ವಿಭಾಗದಲ್ಲಿ ಪ್ರಾರಂಭಿಸಲಾಯಿತು. ಕಾಲಕ್ರಮೇಣ ೧೯೯೫ರಲ್ಲಿ ರೇಷ್ಮೆಕೃಷಿ ಮಹಾವಿದ್ಯಾಲಯವನ್ನು ಚಿಂತಾಮಣಿಯಲ್ಲಿ ಪ್ರಾರಂಭಿಸಿ, ಬಿ.ಎಸ್ಸಿ. ರೇಷ್ಮೆಕೃಷಿ ಪಧವಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು.
ಸ್ನಾತಕೋತ್ತರ ವಿಭಾಗವಾಗಿ ಎಂ. ಎಸಿ.ರೇಷ್ಮೆಕೃಷಿ ಮತ್ತು ಪಿಹೆಚ್.ಡಿ. ರೇಷ್ಮೆಕೃಷಿ ಪಠ್ಯ ಬೋಧನೆಕಾರ್ಯದಲ್ಲಿ ನಿರತವಾಗಿದೆ. ರೇಷ್ಮೆಕೃಷಿ ವಿಷಯದಲ್ಲಿ ಎಂ.ಎಸ್ಸಿ. ಹಾಗೂ ಪಿಹೆಚ್.ಡಿ. ಪಧವೀದರರ ಮುಖಾಂತರ ಮೂಲ ವಿಜ್ಞಾನ ಮತ್ತು ನ್ವಯಿಕ ವಿಜ್ಞಾನಗಳಲ್ಲಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ವಿವಿಧ ಸಂಸ್ಧೆಗಳ ಅನುಧಾನದಡಿಯಲ್ಲಿಯೂ ಸಂಶೋಧನಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಪೂರಕವಾಗಿ ವೈಜ್ಞಾನಿಕವಾಗಿ ನಿರ್ವಹಿಸಲಾದ ಹಿಪ್ಪುನೇರಳೆ ತೋಟ, ವಿವಿಧ ಹಿಪ್ಪುನೇರಳೆ ಮತ್ತು ರೇಷ್ಮೆಹೂಳು ತಳಿಗಳ ಸಂಗ್ರಹ, ಹಿಪ್ಪುನೇರಳೇತರ ರೇಷ್ಮೆ ಹುಳುಗಳ ಆಸರೆ ಸಸ್ಯಗಳು, ಸುಸಜ್ಜಿತ ಪ್ರಯೋಗಾಲಯಗಳು, ಬಿತ್ತನೆಕೋಠಿ, ರೇಷ್ಮೆಹುಳು ಸಾಕಾಣಿಕೆ ಮನೆ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆ ಮತ್ತು ರೇಷ್ಮೆಗೂಡಿ ಕರಕುಶಲ ತರಬೇತಿ ಘಟಕಗಳ ಸೌಲಭ್ಯಗಳು ರೇಷ್ಮೆಕೃಷಿ ವಿಭಾಗದಲ್ಲಿವೆ. ವಿಭಾಗವು ಬಿ.ಎಸ್ಸಿ. (ಆನರ್ಸ್) ಕೃಷಿ ಹಾಗೂ ಬಿ. ಎಸ್ಸಿ. (ಆನರ್ಸ್) ಕೃಷಿ ಮಾರುಕಟ್ಟೆ ಮತ್ತ ಸಹಕಾರ/ ಕೃಷಿ ವ್ಯವಹಾರ ನಿರ್ವಹಣೆ ಪದವಿ ವಿದ್ಯಾರ್ಥಿಗಳಿಗೆ ರೇಷೆಕೃಷಿ ಪಠ್ಯ ಬೋಧನೆ ಕರ್ಯದಲಿಯ್ಲಯೂ ನಿರತವಾಗಿದೆ.
ರೇಷ್ಮೆಕೃಷಿ ಪಧವೀದರರಿಗಿರುವ ವೃತ್ತಿ ಅವಕಾಶಗಳು
ರೇಷ್ಮೆಕೃಷಿ ಪಧವೀದರರುದೇಶದ ಮತ್ತು ವಿದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಬಹುದು. ಅಲ್ಲದೇ ವಿವಿಧಅಭಿವೃದ್ಧಿ ಇಲಾಖೆಗಳಲ್ಲಿ, ಬ್ಯಾಂಕ್ ಮತ್ತು ಕೃಷಿ ಹಣಕಾಸು ಸಂಸ್ಧೆಗಳಲ್ಲಿ, ಪರಿಕರಉತ್ಪಾದನೆ ಹಾಗೂ ಸರಬರಾಜು ಸಂಸ್ಧೆಗಳಲ್ಲಿ, ಸರ್ಕಾರೇತರ ಸಂಸ್ಧೆಗಳಲ್ಲಿ ಉದ್ಯೋಗಾವಕಾಶದೊರೆಯುವುದಲ್ಲದೇ, ಸ್ವಂತವಾಗಿರೇಷ್ಮೆ ಮೊಟ್ಟೆಉತ್ಪಾದನೆ, ರೇಷ್ಮೆಹುಳು ಚಾಕಿ ಸಾಕಾಣಿಕೆ, ರೇಷ್ಮೆ ನೂಲು ಬಿಚ್ಚಾಣಿಕೆ ಮತು ಮಾರಾಟ, ರೇಷ್ಮೆರಪ್ತು಼ ಮತ್ತುಆಮದು ವ್ಯವಹಾರ, ಮುಂತಾದ ಚಟುವಟಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಬಹುದು. ದೇಶಾದ್ಯಂತ ವ್ಯಾಪಿಸಿರುವ ಕೇಂದ್ರರೇಷ್ಮೆ ಮಂಡಳಿಯ ಸಂಶೋಧನಾ ಮತ್ತು ವಿಸ್ತರಣಾ ಘಟಕಗಳಲ್ಲಿ ರೇಷ್ಮೆಕೃಷಿ ಪಧವೀದರರಿಗೆಆಗಿಂದಾಗೆ ಉದ್ಯೋಗವಕಾಶಗಳಿರುತ್ತವೆ. ಹಲವಾರು ಪಧವೀದರರು ಭಾರತ ಹಾಗೂ ಕರ್ನಾಟಕ ಸರ್ಕಾರಗಳ ನಾಗರೀಕ ಸೇವಾ ಹದ್ದೆಗಳಲ್ಲಿಯೂ ಕಾರ್ಯನಿರತರಾಗ್ಗಿದ್ದಾರೆ.
ಸಂಪರ್ಕ ವಿವರಗಳು:
ಡಾ. ಕೆ.ಜಿ.ಬಾನುಪ್ರಕಾಶ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಧರು
ರೇಷ್ಮೆಕೃಷಿ ವಿಭಾಗ, ಕೃಷಿ ಮಹಾವಿದ್ಯಾಲಯ
ಕೃವಿವಿ, ಜಿಕೆವಿಕೆ, ಬೆಂಗಳೂರು-೫೬೦೦೬೫
hoddos2018@gmail.com
+91-9743533047 +91-080-23330153 Extn. 292(O)
ಸಿಬ್ಬಂದಿ
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ:ರೇಷ್ಮೆಹುಳು ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ರೇಷ್ಮೆಹುಳು ಶರೀರಕ್ರಿಯಾಶಾಸ್ತ್ರ ಹಾಗೂ ರೇಷ್ಮೆಹುಳು ರೋಗಶಾಸ್ತ್ರ
+91-9743533047
ವಿದ್ಯಾರ್ಹತೆ: ಎಂ. ಎಸ್ಸಿ. (ಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ಹಿಪುನೇರಳೆ ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ಜೆರ್ಮಪ್ಲಸ್ಮ್ ನಿರ್ವಹಣೆ, ಭತ್ತ ಮತ್ತು ಜೋಳದ ತಳಿ ಅಭಿವೃದ್ಧಿ
+91-9449721475
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ರೇಷ್ಮೆಹುಳುವಿನ ಪೀಡೆನಿರ್ವಹಣೆ, ಪರಿಸರಸ್ನೇಹಿ ಪೀಡೆನಿರ್ವಹಣತಂತ್ರಜ್ಞಾನ, ರೇಷ್ಮೆಕೃಷಿ ತ್ಯಾಜ್ಯನಿರ್ವಹಣೆ ಮತ್ತು ಮೌಲ್ಯವರ್ಧನೆ.
+91-9740056586
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ಸಾವಯವ ಹಿಪ್ಪುನೇರಳೆ ಬೇಸಾಯ, ರೇಷ್ಮೆಹುಳು ಸಾಕಾಣಿಕೆತಾಂತ್ರಿಕತೆ, ರೇಷ್ಮೆಕೃಷಿಯಲ್ಲಿ ಮೌಲ್ಯವರ್ಧನೆ, ರೇಷ್ಮೆಕೃಷಿ ಉದ್ಯಮಅಭಿವೃದ್ಧಿ
+91-9880325001/ +91-8762675849
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ಹಿಪ್ಪುನೇರಳೆ ಮತ್ತು ರೇಷ್ಮೆಹುಳು ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ಸಸ್ಯ ಸಂರಕ್ಷಣೆ
+91-9481243080
Album
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು