ತೋಟಗಾರಿಕಾ ವಿಭಾಗ

ತೋಟಗಾರಿಕೆ ವಿಭಾಗ, ಜಿಕೆವಿಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯದಲ್ಲಿ ತೋಟಗಾರಿಕಾ ಸಂಬಂದಪಟ್ಟವಿಷಯಗಳಲ್ಲಿ ಶಿಕ್ಷಣವನ್ನು ನೀಡುವ ಮುಂಚೂಣಿಯಲ್ಲಿದೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯ ಉದ್ದೇಶಿತ ಚಟುವಟಿಕೆಗಳನ್ನು ಪೂರೈಸಲು ಹಾಗೂ ಹೆಚ್ಚಿದ ಚಟುವಟಿಕೆಗಳು, ವ್ಯಾಪ್ತಿ ಮತ್ತು ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ೧೯೭೬ ರಲ್ಲಿ ತೋಟಗಾರಿಕ ವಿಭಾಗಕ್ಕೆ ಸಾಕಷ್ಟು ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಯೊಂದಿಗೆ ಪ್ರತ್ಯೇಕ ವಿಭಾಗಿಯ ಸ್ಥಾನಮಾನ ನೀಡಲಾಯಿತು.

ಬಿ.ಎಸ್ಸಿ(ಕೃಷಿ) ಗಾಗಿ ೫ ಕೋರ್ಸ್ಗಳನ್ನು (೧೦ ಕ್ರೆಡಿಟ್), ಬಿ.ಎಸ್ಸಿ(ಕೃಷಿ ಮಾರುಕಟ್ಟೆ) ಗಾಗಿ ೨ ಕೋರ್ಸ್‍ಗಳನ್ನುನು (೫ ಕ್ರೆಡಿಟ್) ಹಾಗೂ ಬಿ.ಎಸ್ಸಿ(ಇಂಜಿನಿಯರಿಂಗ್) ಗಾಗಿ ೧ ಕೋರ್ಸ್‍ಗಳನ್ನು (೩ ಕ್ರೆಡಿಟ್) ಪದವಿ ಕಾರ್ಯಕ್ರಮವದಲ್ಲಿ ಭೋದಿಸಲಾಗುತ್ತಿದೆ . ಈ ಮೇಲಿನ ಕೋರ್ಸ್‍ಗಳನ್ನು ಹೊರತಾಗಿ ೨೦ ಕ್ರೆಡಿಟ್ಗಳು ಪ್ರಾಯೋಗಿಕ ಹಾಗೂ ೨೦ ಕ್ರೆಡಿಟ್ಗಳು ಗ್ರಾಮೀಣ ಅನುಭವ ಶಿಭಿರಗಳಿಗೆ ನೀಡಲಾಗುತ್ತಿದೆ.

ಸ್ವಾತಕೋತ್ತರ ಪದವಿ ಕಾರ್ಯಕ್ರಮವನ್ನು ಎಂ.ಎಸ್ಸಿ (ಕೃಷಿ) ತೋಟಗಾರಿಕೆಯಲ್ಲಿ ಹಾಗೂ ಡಾಕ್ಟರಲ್ ಪದವಿ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಇತ್ತೀಚಿಗೆ ತೋಟಗಾರಿಕೆಯಲ್ಲಿ ಅಂಗಾ ಕೃಷಿ ಮತ್ತು ಜೈವಿಕ ಜೀವಾಶಾಸ್ತ್ರ ಕ ವಿಶೇಷ ಸ್ಥಾನಮಾನ ನೀಡಲಾಗಿದೆ ಮತ್ತು ಗುಣಮಟ್ಟದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ೧೯೮೨ ರಿಂದ ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ಸಂಗ್ರಹವನ್ನು ಕೈಗೊಳ್ಳಲಾಗಿದೆ. ೧೮೦ ಜಾತಿಯ ಔಷಧೀಯ ಸಸ್ಯಗಳು ಮತ್ತು ೮೦ ಜಾತಿಯ ಸುಗಂಧ ದ್ರವ್ಯ ಬೆಳೆಗಳ ಜೊತೆಗೆ ಕೆಲವು ನೈಸರ್ಗಿಕ ಬಣ್ಣವನ್ನು ನೀಡುವ ಸಸ್ಯಗಳನ್ನು ಸಹ ಸಂಗ್ರಹಿಸಲಾಗಿದೆ. ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ಉದ್ಯಾನವು ದೇಶದ ಅತ್ಯುತ್ತಮ ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ಕೇಂದ್ರಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಆರಂಭಿಕ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಮತ್ತು ಉದಯೋನ್ಮಖ ಪ್ರವೃತ್ತಿಗೆ ಸಹಾಯಕಾರಿಯಾಗಿದೆ.

ತೋಟಗಾರಿಕೆ ವಿಭಾಗವನ್ನು ICAR ಅತ್ಯುತ್ತಮ ಪ್ಲಾಸ್ಟಿಕ್ ಅಭಿವೃದ್ಧಿ ಕೇಂದ್ರದಲ್ಲಿ ಒಂದು ಎಂದು ಗುರುತಿಸಲಾಗಿದೆ. ಈ ಕೇಂದ್ರಗಳನ್ನು ಈಗ ನಿಖತ ಕೃಷಿ ಅಭಿವೃದ್ಧಿ ಕೇಂದ್ರಗಳು ಎಂದು ಮರುನಾಮಕರಣ ಮಾಡಲಾಗಿದೆ.

ಸಸ್ಯ ಆಂಗಾಶ ಸಸ್ಯಾಭಿವೃದ್ಧಿ ಪ್ರಯೋಗಾಲಯವು ೨೫೦೦ ಚದರ ಅಡಿ ವಿಸ್ತೀರ್ಣದ ಜಾಗವನ್ನು ಹೊಂದಿದ್ದು ಗಿಡಗಳ ಬೆಳವಣಿಗೆಯ ಕೋಣೆಯಲ್ಲಿ ೫೦,೦೦೦ ಅಂಗಾAಶ ಕೃಷಿ ಸಸ್ಯಗಳ ಸಂಗ್ರಹಗಳಾಗಿ ಹಿಡಿದಿಟ್ಟುಕೊಳ್ಳಬಹುದು ಮತ್ತು ವರ್ಷಕ್ಕೆ ೫ ಲಕ್ಷ ಸಸ್ಯಗಳ ಉತ್ಪಾದನಾ ಸಾಮರ್ಥ್ಯವಿದೆ. ಪ್ರಯೋಗಾಲಯವು ಸ್ನಾತಕೋತ್ತರ ಬೋಧನೆ ಮತ್ತು ಸಂಶೋಧನೆಗೆ ಉತ್ತಮ ಸೌಲಭ್ಯವನ್ನು ಹೊಂದಿದೆ.

ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾದ ತಳಿಗಳು

ಕ್ರ.ಸಂ ಬೆಳೆ ತಳಿ
1 ದಾಳಿಂಬೆ ಜ್ಯೋತಿ
2 ಮಾವು ಐಶ್ವರ್ಯ
3 ನೇರಳೆ ಚಿಂತಾಮಣಿ ಆಯ್ಕೆ-1
4 ನುಗ್ಗೆಕಾಯಿ ಜಿಕೆವಿಕೆ -1 ಮತ್ತು ಜಿಕೆವಿಕೆ -2
5 ಹುಣಸೆ ಜಿಕೆವಿಕೆ -17
6 ಗೋಡಂಬಿ ಉಲ್ಲಾಲ-1, ಉಲ್ಲಾಲ-2, ಉಲ್ಲಾಲ-3, ಉಲ್ಲಾಲ-4, ಯುಎನ್ -50, ಚಿಂತಾಮಣಿ -1
7 ಕೊಲಿಯಸ್ ಐಸಿರಿ
8 ಸ್ಟೀವಿಯಾ ಜಿಕೆವಿಕೆ -1

ತಂತ್ರಜ್ಞಾನ ಅಭಿವೃದ್ಧಿ

ಹಣ್ಣುಗಳು ಮತ್ತು ತೋಟ ಬೆಳೆಗಳು

  • ಗೋಡಂಬಿ, ಮಾವು ಮತ್ತು ಹಲಸು ತಳಿಗಳ ಸಸ್ಯಾಭಿವೃಧ್ಧಿಯಲ್ಲಿ ಮೃದುಕಾಂಡ ಕಸಿ ತಂತ್ರಜ್ಞಾನವನ್ನು ಪ್ರಮಾಣೀಕರಿಸಲಾಗಿದೆ.
  • ಅರ್ಥಿಕವಲ್ಲದ ಗೊಡಂಬಿ ತೋಟಗಳ ಪ್ರಮಾಣಿತ ಪುನಶ್ಚೇತನಗೊಳಿಸುವಿಕೆ.
  • ಹಣ್ಣಿನ ಬೆಳೆಗಳ (ಪ್ರಮುಖ ಮತ್ತು ಸಣ್ಣ) ನರ್ಸರಿ ಸ್ಥಾಪಿಸಲಾಗಿದೆ.

ತರಕಾರಿ ಬೆಳೆಗಳು

  • ಜಿಐ ವೈರ್ ಜಾಲರಿಯನ್ನು ಬಳಸಿಕೊಂಡು ಟೊಮ್ಯಾಟೊ ಮತ್ತು ಬಳ್ಳಿ ತರಕಾರಿ ಬೆಳೆಗಳಿಗೆ ತರಬೇತಿ ನೀಡಲು ಹೊಸದಾಗಿ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
  • ಬಳ್ಳಿ ಹುರುಳಿಗಾಗಿ ಸಾರಜನಕ, ರಂಜಕ ಮತ್ತು ಪೋಟ್ಯಾಸಿಯಂಗಳ ಗರಿಷ್ಠ ಅವಶ್ಯಕತೆಗಳ ಪ್ರಮಾಣಿಕತೆ.
  • ತರಕಾರಿ ವೈವಿಧ್ಯಮಯ ಬೀಜ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು.
  • ತರಕಾರಿ ಸಸಿಗಳ ನರ್ಸರಿ ಸ್ಥಾಪಿಸಲಾಗಿದೆ.

ಹೂವಿನ ಕೃಷಿ

  • ಹೂವಿನ ಸಸ್ಯಾಭಿವೃದ್ಧಿ ಮತ್ತು ಮಾರಾಟಕ್ಕಾಗಿ ಅಲಂಕಾರಿಕ ಸಸ್ಯಗಳ ನರ್ಸರಿಯನ್ನು ಸ್ಥಾಪಿಸಲಾಗಿದೆ.
  • ವಾರ್ಷಿಕ ಹೂವಿನ ಬೀಜ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.
  • ಋತುಮಾನಕ್ಕೆ ಅನುಗುಣವಾಗಿ ವಾಣಿಜ್ಯ ಪುಷ್ಟಗಳ ಹೂವಿನಾ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.

ಔಷಧೀಯ, ಮಸಾಲೆ ಮತ್ತು ಸುಗಂಧ ದ್ರವ್ಯಗಳ ಬೆಳೆಗಳು

  • ಅಳಿವಿನಂಚಿರುವ ಮತ್ತು ಅಪರೂಪದ ಜಾತಿ ಔಷಧೀಯ, ಮಸಾಲೆ ಮತ್ತು ಸುಗಂಧ ದ್ರವ್ಯಗಳ ಸಸ್ಯಗಳ ಸಂಗ್ರಹ ಮತ್ತು ಸಂರಕ್ಷಣೆ.
  • ಗಿಡಮೂಲಿಕೆಗಳ ಮತ್ತು ಸುಗಂಧ ದ್ರವ್ಯಗಳ ಉದ್ಯಾನ, ಮಸಾಲೆ ಬೆಳೆಗಳ ತಾಕು ಮತ್ತು ನರ್ಸರಿಗಳನ್ನು ಸ್ಥಾಪಿಸಲಾಯಿತು.
  • ಸುಗಂಧ ದ್ರವ್ಯ ಬೆಳೆಗಳಿಂದ ತೈಲಗಳನ್ನು ಹೊರತೆಗೆಯುವುದು ಹಾಗೂ ತೈಲಗಳ ಗುಣಮಟ್ಟದ ವಿಶ್ಲೇಷಣೆ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ರಸಾಯನಿಕ ವಸ್ತುಗಳ ವಿಶ್ಲೇಷಣೆ.
  • ಔಷಧೀಯ ಮತ್ತು ಸುಗಂಧ ದ್ರವ್ಯಗಳ ಬೆಳೆಗಳಿಗೆ ಉತ್ಕರ್ಷಣ ನಿರೋಧಕ ಚಟುವಟಿಕೆಯ ಇನ್- ವಿಟ್ರೋ ಮೌಲ್ಯಮಾಪನ

ನಿಖರ ಕೃಷಿ ಅಭಿವೃದ್ಧಿ ಕೇಂದ್ರ

  • ಆಯ್ದ ತರಕಾರಿ, ಹೂವು ಮತ್ತು ಹಣ್ಣಿನ ಬೆಳೆಗಳಲ್ಲಿ ಹಾನಿ ನೀರಾವರಿ, ರಸಾವರಿ ವ್ಯವಸ್ಥೆ ಮತ್ತು ಪಾಲಿಥಿಲೀನ್ ಹಾಳೆಗಳಿಂದ ಸಮರ್ಥ ನೀರು ಮತ್ತು ಕಳೆ ನಿರ್ವಹಣೆಗಾಗಿ ಪ್ರಮಾಣೀಕರಿಸಲಾಗಿದೆ.

ಸಸ್ಯ ಅಂಗಾ ಕೃಷಿ

 

  • ಹಲಸು ತಳಿ ಸಿಂಗಾಪುರ ಅಂಗಾ ಸಸ್ಯಾಭಿವೃದ್ಧಿ ಪ್ರೋಟೋಕಾಲ್ ಸ್ಥಾಪಿಸಲಾಗಿದೆ.
  • ಸಹಿ ಪ್ರಕಾರದ ಸ್ಟಾರ್ ಹಣ್ಣಿನಲ್ಲಿ (ಕ್ಯಾರಂಬೋಲಾ), ಮೊದಲ ಬಾರಿಗೆ ನೇರ ಮತ್ತು ಪರೋಕ್ಷ ಸೊಮ್ಯಾಟಿಕ್ ಭ್ರೂಣಜನಕದ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
  • ಗ್ಲೋರಿಯೊಸಾದಲ್ಲಿ, ಮೊದಲ ಬಾರಿಗೆ ಹೆಚ್ಚು ಮೌಲ್ಯಯುತ ಔಷಧೀಯ ಸಸ್ಯ ಸೊಮ್ಯಾಟಿಕ್ ಬ್ರೂಣಜನಕ ಪುನರುತ್ಪಾದನೆ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
  • ಕೋಲಿಯಸ್, ಬೇವು, ಪ್ಯಾಚೌಲಿ, ಟಿನೋಸ್ಪೊರಾ, ಉದ್ದ ಮೆಣಸು, ಸ್ಟೀವಿಯಾ, ಜಿಮ್ನೆಮಾ ಮತ್ತು ಶತಾವರಿಯಂತಹ ಔಷಧೀಯ ಮತ್ತು ಸುಗಂಧ ದ್ರವ್ಯಗಳ ಬೆಳೆಗಳಲ್ಲಿ ಅಂಗಾAಶ ಸಸ್ಯಾಭಿವೃದ್ಧಿ ಪ್ರೋಟೋಕಾಲ್ಗಳನ್ನು ಸ್ಥಾಪಿಸಲಾಗಿದೆ.

ಮೂಲ ಸೌಕರ್ಯಗಳು ಲಭ್ಯವಿದೆ

  • ಸಸ್ಯ ಜೈವಿಕ ಜೀವಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
  • ಸಸ್ಯ ಅಂಗಾ ಕೃಷಿ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
  • ಔಷಧೀಯ ಮತ್ತು ಸುಗಂಧ ದ್ರವ್ಯಗಳ ಬೆಳೆಗಳ ವಿಶ್ಲೇಷಣೆ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
  • ಕೊಯ್ಲೋತ್ತರ ನಂತರದ ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
  • ಹಣ್ಣು ಮತ್ತು ತೋಟದ ಬೆಳೆಗಳ ತಾಕುಗಳಿವೆ.
  • ತರಕಾರಿ ಬೆಳೆಗಳ ಮತ್ತು ಹೂವಿನ ತಾಕುಗಳಿವೆ
  • ಕಡಿಮೆ ವೆಚ್ಚ ಮತ್ತು ಮಧ್ಯಮ ವೆಚ್ಚದ ಪಾಲಿಹೌಸ್ಗಳು, ನೆರಳು ಮನೆಗಳನ್ನು ನಿರ್ಮಿಸಲಾಗಿದೆ.
  • ಔಷಧೀಯ ಮತ್ತು ಸುಗಂಧ ದ್ರವ್ಯಗಳ ಬೆಳೆಗಳಿಗೆ ಪಾಲಿಹೌಸ್ ಮತ್ತು ಬೀಜ ಸಂಗ್ರಹ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ.

 

ಸಂಪರ್ಕ ವಿವರಗಳು     

ಡಾ. ಆರ್. ವಸಂತ ಕುಮಾರಿ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು

ತೋಟಗಾರಿಕೆ,

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ,GKVK, ಕ್ಯಾಂಪಸ್, ಬೆಂಗಳೂರು – 560 065.

91-080-2333 0153 Extn: 338, 342, 340
+91-99001 03338

ಸಿಬ್ಬಂದಿ

ಡಾ. ಆರ್. ವಸಂತ ಕುಮಾರಿ
ಪ್ರಾಧ್ಯಾಪಕರು  ಹಾಗೂ ಮುಖ್ಯಸ್ಥರು – ತೋಟಗಾರಿಕೆ
ಪ್ರಭಾರ- ಹೂವಿನ ನರ್ಸರಿ ಪಿಹೆಚ್.ಡಿ ( ತೋಟಗಾರಿಕೆ) ಹೂವಿನ ಬೆಳೆಗಳ ಅಭಿವೃದ್ಧಿ ಹಾಗೂ ಉದ್ಯಾನ ಹಾಗೂ ನರ್ಸರಿ ನಿರ್ವಹಣೆ
+91-080-2333 0153 Extn: 338, 342, 340
+91-99001 03338
ಡಾ. ಪಿ. ವೆಂಕಟೇಶ ಮೂರ್ತಿ
ಪ್ರಾಧ್ಯಾಪಕರು – ತೋಟಗಾರಿಕೆ,
ಪ್ರಭಾರ- ಸಸ್ಯ ಅಂಗಾಂಶಾಭಿವೃದ್ಧಿ ಪ್ರಯೋಗಾಲಯ
ಪಿಹೆಚ್.ಡಿ ( ತೋಟಗಾರಿಕೆ) ಹಣ್ಣಿನ ವಿಭಾಗ, ಸಸ್ಯ ಅಂಗಾಂಶಾಭಿವೃದ್ಧಿ, ಉದ್ಯಾನ ಮತ್ತು ರ್ಸ ರಿ ನರ್ವಿಹಣೆ
+91-080-2333 0153 Extn: 338, 342, 340
+91-94486 57775
ಡಾ.ಶ್ರೀನಿವಾಸಪ್ಪ
ಪ್ರಾಧ್ಯಾಪಕರು – ತೋಟಗಾರಿಕೆ
ಪ್ರಭಾರ- ತೋಟ ಪಟ್ಟಿ ಬೆಳೆಗಳು, ಔಷಧೀಯ ಹಾಗೂ ಸುಗಂಧದ್ರವ್ಯ ನರ್ಸರಿ ಪಿಹೆಚ್.ಡಿ ( ತೋಟಗಾರಿಕೆ)
ತೋಟ ಪಟ್ಟಿ ಬೆಳೆಗಳು, ಔಷಧೀಯ ಹಾಗೂ ಸುಗಂಧದ್ರವ್ಯ ಬೆಳೆಗಳು
+91-080-2333 0153 Extn: 338, 342, 340
+91-98457 74509
ಡಾ. ಕವಿತಾ ಕಂಡಪಾಲ್
ಪ್ರಾಧ್ಯಾಪಕರು – ತೋಟಗಾರಿಕೆ
ಪ್ರಭಾರ – ತರಕಾರಿ ನರ್ಸರಿ ಪಿಹೆಚ್.ಡಿ ( ತೋಟಗಾರಿಕೆ) ಹೂವಿನ ಹಾಗೂ ತರಕಾರಿ ಬೆಳೆಗಳ ಅಭಿವೃದ್ಧಿ
+91-080-2333 0153 Extn: 338, 342, 340
+91-88613 08308
ಡಾ. ವಿದ್ಯಾ, ಎ
ಸಹ ಪ್ರಾಧ್ಯಾಪಕರು – ತೋಟಗಾರಿಕೆ
ಪಿಹೆಚ್.ಡಿ ( ತೋಟಗಾರಿಕೆ) ಹಣ್ಣಿನ ಬೆಳೆಗಳ ಅಭಿವೃದ್ಧಿ
+91-080-2333 0153 Extn: 338, 342, 340
+91-98446 39445
ಡಾ. ಮಂಜುನಾಥಸ್ವಾಮಿ
ಸಹಾಯಕ ಪ್ರಾಧ್ಯಾಪಕರು – ತೋಟಗಾರಿಕೆ ಹಾಗೂ ತೋಟಗಾರಿಕಾ ತಜ್ಞರು ಪಿಹೆಚ್.ಡಿ ( ತೋಟಗಾರಿಕೆ) ತೋಟ ಪಟ್ಟಿ ಬೆಳೆಗಳು, ಔಷಧೀಯ ಹಾಗೂ ಸುಗಂಧದ್ರವ್ಯ ಬೆಳೆಗಳು
+91-080-2333 0153 Extn: 338, 342, 340
+91-89713 43517
ಡಾ. ಸಿ. ಸುನೀತಾ
ಸಹಾಯಕ ಪ್ರಾಧ್ಯಾಪಕರು – ತೋಟಗಾರಿಕೆ
ಪಿಹೆಚ್.ಡಿ (ಜೈವಿಕ ತಂತ್ರಜ್ಞಾನ) ಹೂವಿನ ಬೆಳೆಗಳು ಹಾಗೂ ಜೈವಿಕ ತಂತ್ರಜ್ಞಾನ
+91-080-2333 0153 Extn: 338, 342, 340
+91-72595 50736
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು