ಕೀಟಶಾಸ್ತ್ರ ವಿಭಾಗವು ಬೋಧನೆ, ಸಂಶೋಧನೆ, ನವೀನ ಆವಿಷ್ಕಾರ, ಸಂಶೋಧನಾ ಲೇಖನಾ ಪ್ರಕಟಣೆಯಲ್ಲಿ ಮತ್ತು ಉನ್ನತ ಕಲಿಕೆಯಲ್ಲಿ ಅಂತರರಾಷ್ಟ್ರೀಯವಾಗಿ ಪ್ರಸಿದ್ಧವಾದ ಕೀಟಶಾಸ್ತ್ರ ಸಂಸ್ಥೆಯಾಗುವುದು ವಿಭಾಗದ ಹಿತದೃಷ್ಟಿಯಾಗಿದೆ. ಪಠ್ಯಕ್ರಮದ ಪ್ರಕಾರ ಕೀಟಶಾಸ್ತ್ರ ಹಾಗೂ ಆರ್ಥಿಕ ಕೀಟಶಾಸ್ತ್ರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ನಾವು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಯಅವಕಾಶವನ್ನು ವಿಸ್ತರಿಸುತ್ತಿದ್ದೇವೆ ಹಾಗೂ ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಕಂಡುಬರುವ ಕೀಟ-ಪೀಡೆಗಳ ಸಮಸ್ಯೆಯನ್ನು ಪರಿಹರಿಸಲು ಅನುವು ಮಾಡಿಕೊಡುತ್ತಿದ್ದೇವೆ. ಪ್ರಕೃತಿಯಲ್ಲಿರುವ ಕೀಟಗಳು ಮತ್ತು ಇತರೆ ಸಂಧಿಪದಿಗಳಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ನಾವು ಸಾರ್ವಜನಿಕರಿಗೆ ತಿಳಿಸಿ ಶಿಕ್ಷಣವನ್ನು ನೀಡುತ್ತಿದ್ದೇವೆ. ಕೀಟಶಾಸ್ತ್ರ ವಿಭಾಗವು ೯ ಪದವಿ ಕೋರ್ಸ್, ೧೨ ಸ್ನಾತಕೋತ್ತರ ಕೋರ್ಸ್ ಮತ್ತು ೦೫ ಡಿಪ್ಲೊಮಾ(ಕೃಷಿ) ಕೋರ್ಸ್UÀಳನ್ನು ಉತ್ತಮಕ್ಷೇತ್ರ ಮಾನ್ಯತೆಯೊಂದಿಗೆ ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಕಲಿಯಲು ಸಮಾನ ಅವಕಾಶವನ್ನು ನೀಡುತ್ತದೆ. ವಿಭಾಗವು ನುರಿತ ಅಧ್ಯಾಪಕರುಗಳು ಮತ್ತು ಉತ್ತಮ ಪ್ರಯೋಗಾಲಯವನ್ನು ಹೊಂದಿದ್ದು, ಸ್ನಾತಕೋತ್ತರ ಸಂಶೋಧನೆ ನಡೆಸಲು ಸುಸಜ್ಜಿತವಾಗಿದೆ ಮತ್ತು ಕೀಟಶಾಸ್ತ್ರದ ವಿವಿಧ ಶಾಖೆಗಳಾದ ಕೀಟಗಳ ವರ್ಗೀಕರಣ, ಕೀಟ ಸಸ್ಯಗಳ ಪರಸ್ಪರ ಕ್ರಿಯೆಗಳು, ಕೀಟಗಳ ಶರೀರಕ್ರಿಯಾಶಾಸ್ತ್ರ, ಕೀಟರೂಪ ವಿಜ್ಞಾನ, ಕೀಟ ಪರಿಸರ ವಿಜ್ಞಾನ, ಜೈವಿಕ ನಿಯಂತ್ರಣ, ಕೀಟನಾಶಕ ವಿಷಶಾಸ್ತ್ರ, ಕೀಟಗಳ ರಾಸಾಯನಿಕ ಪರಿಸರ ವಿಜ್ಞಾನ ಮತ್ತು ವಿವಿಧ ಬೆಳಗಳಲ್ಲಿ ಕಂಡು ಬರುವ ಸಮಗ್ರಕೀಟ ನಿರ್ವಹಣೆಯ ಜ್ಞಾನವನ್ನು ವಿಸ್ತರಿಸಲು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ
ಸಿಬ್ಬಂದಿ
ವಿದ್ಯಾರ್ಹತೆ : ಪಿಹೆಚ್.ಡಿ. ಪಿಡಿ (ಯುಜಿಸಿ), ಎಆರ್ಎಸ್ (ಐಸಿಎಆರ್)
ವಿಶೇಷತೆ : ಕೀಟ-ಸಸ್ಯಗಳ ಪರಸ್ಪರಕ್ರಿಯೆ, ಕೀಟಗಳ ಜೀವ ಸ್ವರೂಪಿಗಳು ಮತ್ತು ಭತ್ತದಕೀಟ ಶಾಸ್ತ್ರ
+91 9483836789
ಕೀಟಶಾಸ್ತ್ರ ವಿಭಾಗ
ವಿದ್ಯಾರ್ಹತೆ : ಎಂ.ಎಸ್ಸಿ. (ಕೃಷಿ), ಪಿಹೆಚ್.ಡಿ.
ವಿಶೇಷತೆ : ಕೀಟ ನಿರ್ವಹಣೆ ಮತ್ತು ನುಸಿ ಶಾಸ್ತ್ರ
+91 9535600611
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು