ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇದರಒಂದು ಪ್ರಮುಖ ವಿಭಾಗವಾಗಿದ್ದು, ದೇಶದಲ್ಲೇ ಅತ್ಯಂತ ಹಳೆಯ ಕೀಟಶಾಸ್ತ್ರ ವಿಭಾಗವಾಗಿರುತ್ತದೆ.ಇದು ೧೯೪೬ರಲ್ಲಿ ಪ್ರಾರಂಭವಾದ ಕೃಷಿಶಾಲೆ ವ್ಯಾಪ್ತಿಯಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಚಟುವಟಿಕೆಯಲ್ಲಿ ನಿರತವಾಗಿದ್ದು ಮುಂದೆ ಈ ವಿಭಾಗವು ೧೯೪೬ರಲ್ಲಿ ಕೃಷಿ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇದರಲ್ಲಿ ವಿಲೀನವಾಯಿತು. ನಂತರ ಈ ಮಹಾವಿದ್ಯಾಲಯವು ೧೯೬೪ರಲ್ಲಿ ಪೂರ್ತಿ ಸ್ಥಾನಮಾನ ಪಡೆದ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು.
ಕೃಷಿ ಪ್ರಾಧಾನ್ಯವಾದ ನಮ್ಮರಾಜ್ಯದಲ್ಲಿ ಸುಮಾರು ಆರು ದಶಕಗಳಿಂದಲೂ ಕೃಷಿ, ರೇಷ್ಮೆ, ಅರಣ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಬಾಧಿಸುವ ಕೀಟಪೀಡೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಸಕಾಲದಲ್ಲಿ ರೈತಬಾಂಧವರಿಗೆ ಒದಗಿಸುವುದರಲ್ಲಿ ಮುಂಚೂಣಿಯಲ್ಲಿದ್ದು ದೇಶದಲ್ಲೆ ತನ್ನದೇ ಆದಛಾಪು ಮೂಡಿಸಿರುತ್ತದೆ. ಇದರ ಜೊತೆಗೆ ಪರಾಗಸ್ಪರ್ಶ ಕೀಟಗಳು, ಪರಭಕ್ಷಕ ಕೀಟಗಳು, ಪರೋಪಜೀವಿಗಳು ಇನ್ನಿತರ ಉಪಕಾರಿ ಕೀಟಗಳನ್ನು ಪ್ರಕೃತಿಯಲ್ಲಿ ಸಂರಕ್ಷಿಸುವ ಅವಶ್ಯಕತೆ ಹಾಗೂ ವಿಧಾನಗಳ ಬಗ್ಗೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ.
ಈ ವಿಭಾಗವು ಮುಖ್ಯವಾಗಿ ಬೋಧನೆ ಮತ್ತು ಸಂಶೋಧನೆಗೆ ಸಹಾಯವಾಗುವ ಮೂಲಭೂತ ಮತ್ತು ಮೂಲಭೂತ ಮತ್ತು ಅನ್ವಯಕ ಕೀಟಶಾಸ್ತ್ರದಲ್ಲಿ ಸಮಾನತೆ ಕಾಪಾಡಿಕೊಂಡಿರುತ್ತದೆ ಹಾಗೂ ಪ್ರಮುಖ ವಿಷಯಗಳಾದ ಕೀಟ ವರ್ಗೀಕರಣ, ಮಣ್ಣು ಜೀವಶಾಸ್ತ್ರ (ಬೇರುಹುಳು ಮತ್ತು ಗೆದ್ದಲು), ನುಶಿ ಪೀಡೆ ನಿರ್ವಹಣೆ ಮತ್ತು ಕೀಟ ಪರಿಸರ ವಿಷಯಗಳ ಬೋಧನೆ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ.
ಸಂಪರ್ಕ ವಿವರಗಳು
ಡಾ. ಜೇಮ್ಲನಾಯ್ಕ, ಡಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ತರು
ಕೀಟಶಾಸ್ತ್ರ ವಿಭಾಗಜಿ.ಕೆ.ವಿ.ಕೆ., ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ
ಸಿಬ್ಬಂದಿ

ಕೀಟಶಾಸ್ತ್ರ ವಿಭಾಗ ಜಿ.ಕೆ.ವಿ.ಕೆ., ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ
+91- 9449759019

ಕೀಟಶಾಸ್ತ್ರ ವಿಭಾಗ ಜಿ.ಕೆ.ವಿ.ಕೆ., ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ
080-23330153 Ext. 288

ಕೀಟಶಾಸ್ತ್ರ ವಿಭಾಗ ಜಿ.ಕೆ.ವಿ.ಕೆ., ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ
9900721071

-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಫೆಬ್ರವರಿ 18, 2025
- ಸೈಟ್ ಅಂಕಿಅಂಶಗಳು