ರಾಜ್ಯದ ವಿವಿಧ ಭಾಗಗಳಲ್ಲಿ ಜೇನುಸಾಕಣೆಯ ಅಭಿವೃದ್ದಿಗೆ ಸರಿಹೊಂದುವAತೆ, ೧೯೯೬ ರ ಡಿಸೆಂಬರ್ ನಲ್ಲಿ ಕೃಷಿ ವಿಶ್ವವಿದ್ಯಾಲಯವು., ಜಿ.ಕೆ.ವಿ.ಕೆ.ಯಲ್ಲಿ ಜೇನುಕೃಷಿ ವಿಭಾಗವನ್ನು ಪ್ರಾರಂಭಿಸಿತು. ರಾಜ್ಯದಲ್ಲಿ ಜೆನುಸಾಕಣೆಯಲ್ಲಿ ಭೋಧನೆ, ಸಂಶೋಧನೆ ಮತ್ತಿ ವಿಸ್ತರಣಾ ಚಟುವಟಿಕೆಗಳನ್ನು ಬಲಪಡಿಸುವ ಏಕೈಕ ಉದ್ದೇಶದಿಂದ ಈ ವಿಭಾಗವು ಜೇನು ಕೃಷಿಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಇದು ಭಾರತದಲ್ಲಿ ಜೇನುಕೃಷಿ ವಿಷಯದಲ್ಲಿ ಏಕೈಕ ಸ್ನಾತಕೋತ್ತರ ಕಾರ್ಯಕ್ರಮವಾಗಿದೆ.
ಜೇನುಸಾಕಣೆಯ ಪರಿಚಯ (API ೩೧೧, Introduction to Apiculture (೧+೧) ಎಂಬ ಪಠ್ಯಕ್ರಮ ಅಭಿವೃದ್ದಿಪಡಿಸಲಾಗಿದೆ ಮತ್ತು ಬಿ.ಎಸ್ಸಿ ಹಾನರ್ (ಕೃಷಿ), ಬಿ.ಎಸ್ಸಿ ಹಾನರ್ (ರೇಷ್ಮೆ ಕೃಷಿ) ಮತ್ತು API ೩೧೨, Introduction to Apiculture (೦+೧) ಎಂಬ ಪಠ್ಯಕ್ರಮ ಬಿ.ಎಸ್ಸಿ ಹಾರ‍್ಸ್ (ಕೃಷಿ ವ್ಯವಹಾರ ನಿರ್ವಹಣೆ)ದ ಇವೆಲ್ಲ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಈ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಜೇನುನೊಣಗಳ ಪಾತ್ರಕ್ಕೆ ವಿಶೇಷ ಒತ್ತು ನೀಡಿ ಜೇನುನೊಣಗಳು, ಜೇನು ಸಾಕಣೆ ಸಲಕರಣೆಗಳು, ಜೇನುನೊಣ ಉತ್ಪನ್ನಗಳು, ಜೇನುನೊಣದ ವಿವಿಧ ಪ್ರಬೇದ, ಜೇನುಸಾಕಣೆಯಲ್ಲಿ ವೈಜ್ಞಾನಿಕ ನಿರ್ವಹಣಾ ಕ್ರಮಗಳು ಇತ್ಯಾದಿಗಳನ್ನು ನಿರ್ವಹಿಸುವಲ್ಲಿ ಪ್ರಾಯೋಗಿಕ ತರಬೇತಿಗಳನ್ನು ಆಸಕ್ತ ರೈತರು, ಸಾರ್ವಜನಿಕರು ಹಾಗೂ ತೋಟಗಾರಿಕೆ ಇಲಾಖೆ, ಕರ್ನಾಟಕ ಹಾಲು ಒಕ್ಕೂಟ ಹಾಗೂ ರಾಷ್ಟಿçÃಯ ಡೈರಿ ಮಂಡಳಿ ಸಿಬ್ಬಂಧಿಗೆ ನೀಡಲಾಗುತ್ತಿದೆ.
ಅಂತಿಮ ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಪ್ರತಿವರ್ಷ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ (Rural Awareness Work Experience Programme) ಮತ್ತು ಪ್ರಾಯೋಗಿಕ ತರಬೇತಿ (Hands on Training) ಕಾರ್ಯಕ್ರಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಲ್ಲಿ ಭೋದಕರು ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ಅಧ್ಯಾಪಕರು ಕ್ಷೇತ್ರ ಬೇಟಿ ಮತ್ತು ಜೇನು ಸಾಕಣೆ ಕುರಿತು ರೈತರಿಗೆ ಅವಶ್ಯಕತೆ ಬಿದ್ದಾಗ ಸಲಹಾ ಸೇವೆಗಳನ್ನು ವದಗಿಸುತ್ತಾರೆ
ಜೇನುಕೃಷಿಯಲ್ಲಿ ಕೃಷಿ ಸ್ನಾತಕೋತ್ತರ ಪದವಿ ೧೯೯೭-೯೮ ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಯಿತು, ಹಾಗೂ ಅದರ ಪಠ್ಯಕ್ರಮವನ್ನು ಜೇನುನೊಣಗಳ ರೂಪ ವಿಜ್ಞಾನ ಮತ್ತು ಅಂಗರಚನಾ ಶಾಸ್ತ್ರ ಜೇನುನೊಣಗಳ ಜೀವ ಶಾಸ್ತ್ರ, ಜೇನುನೊಣಗಳ ಶರೀರಕ್ರಿಯಾ ಶಾಸ್ತ್ರ, ಜೇನುನೊಣಗಳ ಪರಿಸರ ವಿಜ್ಞಾನ ಮತ್ತು ನಡವಳಿಕೆ, ಜೇನುನೊಣಗಳ ವಿಷಶಾಸ್ತ್ರ, ಜೇನು ಸಾಕಾಣಿಕೆ ಮತ್ತು ಅದರ ನಿರ್ವಹಣೆ, ಜೇನು ಮತ್ತು ಜೇನುನೊಣಗಳ ಉತ್ಪನ್ನಗಳು, ಜೇನು ಪರಾಗ ಸ್ಪರ್ಶ ಮತ್ತು ಬೆಳೆ ಉತ್ಪಾದನೆ, ಜೇನುನೊಣಗಳ ರೋಗ ಮತ್ತು ಕೀಟಗಳ ನಿರ್ವಹಣೆ ಮತ್ತು ಎಪಿಸ್ ಪ್ರಬೇಗಳಲ್ಲದ ಜೇನುನೊಣಗಳು ಎಂಬ ಕೋರ್ಸ್ಗಳಿಗೆ ಪಠ್ಯಕ್ರಮವನ್ನು ಅಭಿವೃದ್ದಿಪಡಿಸಲಾಯಿತು. ಇಲ್ಲಿಯವರೆಗೆ, ಜೇನುಕೃಷಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಯು ಜೇನುನೊಣಗಳ ಪರಾಗಸ್ಪರ್ಶಕ್ರಿಯೆ, ಜೇನುನೊಣಗಳ ರೋಗ ಮತ್ತು ಕೀಟಗಳ ನಿರ್ವಹಣೆ, ಜೇನುನೊಣಗಳ ನಡವಳಿಕೆ, ವಿಷಶಾಸ್ತ್ರ (Bee toxicology), ಶಿರೀರಕ್ರಿಯಾಶಾಸ್ತ್ರ , ಎಪಿಸ್ ಪ್ರಬೇಗಳಲ್ಲದ ಜೇನುನೊಣಗಳು, ಜೇನುನೊಣಗಳ ಆಹಾರ ಮತ್ತು ಪೋಷಣೆ ಮುಂತಾದ ವ್ಯಾಪಕ ವಿಷಯಗಳನ್ನು ಒಳಗೊಂಡಿದೆ.
ವಿಭಾಗದ ಭೋದಕರು ಈವರೆಗೆ ೨೦ ಹೊರಗಿನ ಸಂಸ್ಥೆಗಳ ಅನುದಾನಿತ ಸಂಶೋಧನಾ ಪ್ರಯೋಜನೆಗಳನ್ನು ನಿರ್ವಹಿಸಿದ್ದು, ಅದರ ಒಟ್ಟು ಮೌಲ್ಯ ರೂ.೧೬.೬೫ ಕೋಟಿ ರೂ. ಆಗಿರುತ್ತದೆ ಜೇನುಸಾಕಣೆ, ಗೂಡುಕಟ್ಟುವಿಕೆ, ವಲಸೆ ವರ್ತನೆ ಮತ್ತು ಹೆಜ್ಜೇನು (ಎಪಿಸ್ ಡೋರ್ಸಾಟಾ) ಗೂಡುಕಟ್ಟುವ ತಾಣಗಳ ನಿರ್ವಹಣೆ, ಸಮೀಕ್ಷೆ, ಪರಿಸರ ವಿಜ್ಞಾನ ಮತ್ತು ತುಡುವೆ ಜೇನು (ಅಪಿಸ್ ಸೆರಾನಾ) ದ ಥೈಸ್ಯಾಕ್ ಬ್ರೂಡ್ ನಂಜು ರೋಗದ ವಿರ್ವಹಣೆ, ವಿವಿಧ ಬೆಳೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಸುವಲ್ಲಿ ಜೇನುನೊಣಗಳ ಪರಾಗಸ್ಪರ್ಶಕ್ರಿಯೆ ಸಾಮರ್ಥ್ಯ, ಪಶ್ಚಿಮ ಘಟ್ಟಗಳಲ್ಲಿ ಜೇನುಸಾಕಣೆಯ ಪುನಶ್ಚೆತನ ಹಾಗೂ ಜನಪ್ರಿಯಗೊಳಿಸುವುದು, ತುಡುವೆ ಜೇನುನೊಣಗಳ ಮೇಲೆ ಬಿಟಿ ಕೀಟನಾಶಕದ ಪ್ರೋಟಿನಿನ ಪರಿಣಾಮ, ಪರತಂತ್ರಜೀವಿ ನುಸಿ (ಟ್ರೋಪೋಲೆಲಾಪ್ಸ್ ಕ್ಲೇರಿ) ಇಟಾಲಿ ಜೇನು ಎಪಿಸ್.ಮೆಲ್ಲಿಫೆರಾದ ಮೇಲೆ ಬೀರುವ ದುಷ್ಪರಿಣಾಮ, ಎಪಿಸ್.ಸೆರಾನಾ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಮೌಲ್ಯ ಸರಪಳಿ ಅಭಿವೃದ್ದಿಯಲ್ಲಿ ಅದರ ಪಾತ್ರಕ್ಕಾಗಿ ಪರಾಗ ಪೂರೈಸುವುದರ ಬಗ್ಗೆ ಸಂಶ್ಲೇಷಣೆ ಮತ್ತು ಮೌಲ್ಯಮಾಪನ, ಹೆಜ್ಜೇನುಹುಳುಗಳ ಮೌಲ್ಯ ಸರಪಳಿ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿರುತ್ತದೆ, ಇದಲ್ಲದೇ ಜೇನುತುಪ್ಪದ ಗುಣ ಮಟ್ಟವನ್ನು ಪರೀಕ್ಷಿಸಲು ಓಒಖ ಆದಾರಿತ ಪ್ರಯೋಗಶಾಲೆಯ ಅನುಷ್ಟಾನ ಪ್ರಗತಿಯಲ್ಲಿದೆ.
ಬೋಧನೆ:
ಪದವಿಪೂರ್ವ ವ್ಯಾಸಂಗ:
ಒಂದು ಕೋರ್ಸ್, ಜೇನುಸಾಕಣೆಯ ಪರಿಚಯ (1+1) ಅನ್ನು ಇಲಾಖೆಯು ಅಭಿವೃದ್ಧಿಪಡಿಸಿದೆ ಮತ್ತು B.Sc (Agri.), B.Sc (Hort.), B.Sc (ಫೋರ್ಟ್.), B ಯ ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳಿಗೆ ಕಲಿಸಿದೆ. .Sc (Seri.), ಮತ್ತು B.Sc (Ag.Maco) ಜೇನುನೊಣಗಳ ನಿರ್ವಹಣೆಯಲ್ಲಿ ಪ್ರಾಯೋಗಿಕ ತರಬೇತಿ, ಜೇನುಸಾಕಣೆ ಉಪಕರಣಗಳು, ಜೇನುಸಾಕಣೆ ಉತ್ಪನ್ನಗಳು, ಜೇನುನೊಣ ಜಾತಿಗಳು, ನಿರ್ವಹಣಾ ಅಭ್ಯಾಸಗಳು ಇತ್ಯಾದಿ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಜೇನುನೊಣಗಳ ಪಾತ್ರಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕೋರ್ಸ್ ನಲ್ಲಿ ನೀಡಲಾಗಿದೆ.
ಅಂತಿಮ ಬಿಎಸ್ಸಿಗೆ ಸಹಾಯ ಮಾಡುವಲ್ಲಿ ಸಿಬ್ಬಂದಿ ಕೂಡ ತೊಡಗಿಸಿಕೊಂಡಿದ್ದಾರೆ. (ಅಗ್ರಿ.) ವಿದ್ಯಾರ್ಥಿಗಳು ಪ್ರತಿ ವರ್ಷ UAS ನಲ್ಲಿ ಗ್ರಾಮೀಣ ಕೃಷಿ ಕೆಲಸದ ಅನುಭವ (RAWE) ಕಾರ್ಯಕ್ರಮದಲ್ಲಿ. ಜೇನುಸಾಕಣೆಯ ಕುರಿತು ಕ್ಷೇತ್ರ ಭೇಟಿ ಮತ್ತು ಸಲಹಾ ಸೇವೆಯನ್ನು ಇಲಾಖೆಯ ಸಿಬ್ಬಂದಿಗಳು ನಿಯಮಿತವಾಗಿ ನಿರ್ವಹಿಸುತ್ತಿದ್ದಾರೆ.
ಪಿಜಿ ಕಾರ್ಯಕ್ರಮ:
1997-98ರ ಶೈಕ್ಷಣಿಕ ವರ್ಷದಲ್ಲಿ ಪಿಜಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕೋರ್ಸ್ ಪಠ್ಯಕ್ರಮವನ್ನು ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಅಂತರಶಿಸ್ತೀಯ ಕೋರ್ಸ್‌ಗಳನ್ನು ಸಹ ಸೇರಿಸಲಾಗಿದೆ.
ಜೇನುನೊಣಗಳ ರೂಪವಿಜ್ಞಾನ ಮತ್ತು ಅಂಗರಚನಾಶಾಸ್ತ್ರ, ವರ್ಗೀಕರಣ ಮತ್ತು ವ್ಯವಸ್ಥಿತ, ಜೇನುನೊಣಗಳ ಜೀವಶಾಸ್ತ್ರ, ಜೇನುನೊಣಗಳ ಶರೀರಶಾಸ್ತ್ರ, ಜೇನುನೊಣಗಳ ಪರಿಸರ ವಿಜ್ಞಾನ ಮತ್ತು ನಡವಳಿಕೆ, ಜೇನುನೊಣ ವಿಷಶಾಸ್ತ್ರ, ಜೇನುಸಾಕಣೆ ಮತ್ತು ಅದರ ನಿರ್ವಹಣೆ, ತಳಿಶಾಸ್ತ್ರ ಮತ್ತು ಜೇನುನೊಣಗಳ ಸಂತಾನೋತ್ಪತ್ತಿ, ಜೇನುನೊಣ ಸಸ್ಯಶಾಸ್ತ್ರ, ಜೇನು ಮತ್ತು ಜೇನುನೊಣ ಉತ್ಪನ್ನಗಳ ಸಸ್ಯಶಾಸ್ತ್ರ, ಜೇನು ಪರಾಗಸ್ಪರ್ಶ ಮತ್ತು ಬೆಳೆ ಉತ್ಪಾದನೆ, ಜೇನುನೊಣಗಳ ಕೀಟಗಳು ಮತ್ತು ರೋಗಗಳು, ಆಪಿಸ್ ಅಲ್ಲದ ಪರಾಗಸ್ಪರ್ಶಕಗಳು ಮತ್ತು ಜೇನುಸಾಕಣೆಯಲ್ಲಿ ಎಂಜಿನಿಯರಿಂಗ್ ತತ್ವಗಳ ಅಪ್ಲಿಕೇಶನ್ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಕಲಿಸಲಾಗಿದೆ.
ಸ್ನಾತಕೋತ್ತರ ಸಂಶೋಧನೆ: ಸ್ನಾತಕೋತ್ತರ ಸಂಶೋಧನೆಯು ಪರಾಗಸ್ಪರ್ಶ, ರೋಗಶಾಸ್ತ್ರ, ನಿರ್ವಹಣೆ, ನಡವಳಿಕೆ, ವಿಷಶಾಸ್ತ್ರ, ಶರೀರಶಾಸ್ತ್ರ, ನಾನ್-ಆಪಿಸ್ ಜೇನುನೊಣಗಳು, ಪೋಷಣೆ ಇತ್ಯಾದಿಗಳಂತಹ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ.
ಡಾ.ಮೋಹನ್ ಈಶ್ವರ್ ನಾಯ್ಕ್
ಪ್ರಾದ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು.
ಎಂ.ಎಸ್ಸಿ.(ಕೃಷಿ), ಪಿ.ಎಚ್ಡಿ (ಕೃಷಿ ಕೀಟಶಾಸ್ತ್ರ)
+91-80-23330153; Extension No. 289
+91 9448856892
ಸಿಬ್ಬಂದಿ
ಪ್ರಾದ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು
ವಿಷಯ ವಿಶೇಷತೆ: ಕೀಟ ಪರಿಸರ ವಿಜ್ಞಾನ, ಸಮಗ್ರ ಪೀಡೆಗಳ ನಿರ್ವಹಣೆ, ಕಶೇರುಕ ಪ್ರಾಣಿ ನಿರ್ವಹಣೆ.ಜೇನುಕೃಷಿ
+91 9448856892
ಪ್ರಾದ್ಯಾಪಕರು
ವಿಷಯ ವಿಶೇಷತೆ: ಕೀಟ ಪರಿಸರ ವಿಜ್ಞಾನ, ಪೀಡೆಗಳ ಜೈವಿಕ ನಿಯಂತ್ರಣ, ಸಮಗ್ರ ಪೀಡೆ ನಿರ್ವಹಣೆ, ಪರಿಸರ ವಿಜ್ಞಾನ
+91-9341960569
ಸಹಾಯಕ ಪ್ರಾದ್ಯಾಪಕರು (ಜೇನು ಕೃಷಿ)
ವಿಷಯ ವಿಶೇಷತೆ: ಜೇನು ನೊಣ ಪೀಡೆ ಹಾಗೂ ರೋಗ ನಿರ್ವಹಣೆ, ಜೇನು ನೊಣಜೀವ ವಿಜ್ಞಾನ, ಜೇನು ವಿಷಶಾಸ್ತ್ರ
ಸಹಾಯಕ ಪ್ರಾದ್ಯಾಪಕರು (ಜೇನು ಕೃಷಿ)
ವಿಷಯ ವಿಶೇಷತೆ: ಜೇನು ನೊಣ ನಡುವಳಿಕಾ ಶಾಸ್ತ್ರ, ಜೇನುನೊಣ ಪರಿಸರ ವಿಜ್ಞಾನ,
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು