ಬೆಂಗಳೂರಿನ ಕೃಷಿ ಮಹಾ ವಿದ್ಯಾಲಯದಲ್ಲಿರುವ ಬೇಸಾಯಶಾಸ್ತ್ರ ವಿಭಾಗದಿಂದ ಬಿ.ಎಸ್ಸಿ. (ಆನರ್ಸ್) ಕೃಷಿ, ಬಿ. ಎಸ್ಸಿ. (ಆನರ್ಸ್) ಕೃಷಿ ಮಾರುಕಟ್ಟೆ ಮತ್ತು ಬಿ. ಟೆಕ್. (ಕೃಷಿ ಇಂಜಿನಿಯರಿಗ್) ಹಾಗೂ ಎಂ. ಎಸ್ಸಿ (ಕೃಷಿ) ಮತ್ತು ಪಿ.ಎಚ್ಡಿ. ಪದವಿಗಳಿಗೆ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ ಬೇಸಾಯಶಾಸ್ತ್ರ ಎಲ್ಲಾ ಅಂಶಗಳೂ ಒಳಗೊಂಡಿರುವಂತೆ ಬಿ.ಎಸ್ಸಿ. (ಆನರ್ಸ್) ಕೃಷಿ ಪದವಿಗೆ ಅಗತ್ಯವಿರುವ ೨೧ ಕ್ರೆಡಿಟ್ ಅವಧಿಗಳ ೧೦ ಕೋರ್ಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ತಲಾ ೧೦ ಕ್ರೆಡಿಟ್ ಅವಧಿಗಳ ಸಾವಯವ ಉತ್ಪಾದನಾ ತಂತ್ರಜ್ಞಾನ (Organic Production Technology) ಮತ್ತು ಸಮಗ್ರ ಕೃಷಿ ಪದ್ಧತಿ (Integrated Farming System) ಕುರಿತಂತೆ ಕೌಶಲ್ಯಾಧಾರಿತ ತರಬೇತಿಯನ್ನೂ ಸಹ ನೀಡಲಾಗುತ್ತಿದೆ.
ಎಂ.ಎಸ್ಸಿ. (ಕೃಷಿ) ಗೆ ಅಗತ್ಯವಿರುವ ೨೪ ಕ್ರೆಡಿಟ್ ಅವಧಿಗಳ ೧೨ ಕೋರ್ಸ್ಗಳು ಮತ್ತು ಡಾಕ್ಟರೆಟ್ ಪದವಿಗೆ ಅಗತ್ಯವಿರುವ ೧೬ ಕ್ರೆಡಿಟ್ ಅವಧಿಗಳ ೮ ಕೋರ್ಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂತೆಯೇ, ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚುವರಿ ಸಂಶೋಧನೆಗೆ (ಎಂ.ಎಸ್ಸಿ. (ಕೃಷಿ) ಮತ್ತು ಪಿ.ಎಚ್ಡಿ. ಗೆ ಕ್ರಮವಾಗಿ ೫೦ ಕ್ರೆಡಿಟ್ ಅವಧಿ ಮತ್ತು ೭೦ ಕ್ರೆಡಿಟ್ ಅವಧಿಗಳನ್ನು) ಮತ್ತು ಅರ್ಹತಾ ಪರೀಕ್ಷೆಗೆ (ಎಂ.ಎಸ್ಸಿ. (ಕೃಷಿ) ಮತ್ತು ಪಿ.ಎಚ್ಡಿ. ಗೆ ಕ್ರಮವಾಗಿ ೨ ಕ್ರೆಡಿಟ್ ಅವಧಿ ಮತ್ತು ೫ ಕ್ರೆಡಿಟ್ ಅವಧಿಗಳನ್ನು) ನೋಂದಾಯಿಸಿಕೊಳ್ಳಬೇಕು. ಬಿ.ಎಸ್.ಎಂ.ಎ. ಶಿಫಾರಸ್ಸುಗಳ ಪ್ರಕಾರ ೨೦೨೨-೨೩ ರ ಶೈಕ್ಷಣಿಕ ವರ್ಷದಿಂದ ಎಂ.ಎಸ್ಸಿ. (ಕೃಷಿ) ಪದವಿಗೆ ೨೭ ಕ್ರೆಡಿಟ್ ಅವಧಿಗಳು ಮತ್ತು ಪಿ.ಹೆಚ್ಡಿ. ಪದವಿಗೆ ೭೨ ಕ್ರೆಡಿಟ್ ಅವಧಿಗಳನ್ನು ಸಂಶೋಧನೆಗಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಬೇಸಾಯಶಾಸ್ತ್ರ ವಿಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವರವರ ಸಂಶೋಧನಾ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಲು ಅಗತ್ಯವಾದ ಕೌಶಲ್ಯ ಹೊಂದಿರುವ ನುರಿತ ಶಿಕ್ಷಕರನ್ನು ಹೊಂದಿದೆ. ಪ್ರಾಯೋಗಿಕ ತರಗತಿಗಳನ್ನು ನಡೆಸಲು ಬೇಸಾಯಶಾಸ್ತ್ರ ವಿಭಾಗವು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಕ್ಷೇತ್ರ ಘಟಕವನ್ನು ಮತ್ತು ಸುಸಜ್ಜಿತ ಪ್ರಯೋಗಾಲಯವನ್ನು ಹೊಂದಿದೆ.
ಬೇಸಾಯಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳು
ಬೇಸಾಯಶಾಸ್ತ್ರ ವಿಭಾಗದಿಂದ ಸುಮಾರು ೧೭ ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕ ಬೆಳೆ ಉತ್ಪಾದನೆ ಮತ್ತು ಕ್ಷೇತ್ರ ಸಂಶೋಧನೆಗಳನ್ನು ಕೈಗೊಳ್ಳಲು ೫ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿಯೂ ಸೇರಿದಂತೆ ಸಾಕಷ್ಟು ಮೂಲ ಸೌಕರ್ಯಗಳನ್ನು ಸೃಷ್ಟಿಸಲಾಗಿದೆ.
- ಬೆಳೆಗಳ ಮತ್ತು ಮಣ್ಣಿನ ಮಾದರಿಗಳ ರಾಸಾಯನಿಕ ವಿಶ್ಲೇಷಣೆಯನ್ನು ಕೈಗೊಳ್ಳಲು ಸುಸಜ್ಜಿತ ಪ್ರಯೋಗಾಲಯ ಲಭ್ಯವಿದೆ.
- ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳಿಗೆ ಬೇಕಾದ ಮಣ್ಣು ನೀರಿನ ಸಂರಕ್ಷಣಾ ರಚನೆಗಳನ್ನು ಸೃಷ್ಟಿಸಲಾಗಿದೆ.
- ವಿದ್ಯಾರ್ಥಿಗಳ ಪ್ರಾಯೋಗಿಕ ತರಬೇತಿಗೆ ಬೇಕಾದ ನೀರಾವರಿ ರಚನೆಗಳನ್ನು ವಿನ್ಯಾಸಗೊಳಿಸಲಾಗಿದೆ.
- ಪ್ರಾಯೋಗಿಕ ತರಗತಿಗಳಿಗೆ ಬೇಕಾದ ಹವಾಮಾನಶಾಸ್ತçದ ವೀಕ್ಷಣಾಲಯವನ್ನು ಸ್ಥಾಪಿಸಲಾಗಿದೆ.
- ವಿದ್ಯಾರ್ಥಿಗಳ ಪ್ರಾಯೋಗಿಕ ತರಗತಿಗಳಿಗೆ ಬೇಕಾದ ಎಲ್ಲಾ ಸಾಂಪ್ರದಾಯಿಕ ಮತ್ತು ಸುಧಾರಿತ ಉಪಕರಣಗಳು ಲಭ್ಯವಿದೆ.
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲೆಗಳ ವಿಸ್ತೀರ್ಣವನ್ನು ಅಳೆಯುವ ಉಪಕರಣ, ಸ್ವಯಂ ಸಾರಜನಕ ವಿಶ್ಲೇಷಣಾ ಉಪಕರಣ, ಜೈವಿಕ ಆಮ್ಲಜನಕದ ಅವಶ್ಯಕತೆಯನ್ನು ಅಳೆಯುವಂತಹ ಅತ್ಯಾಧುನಿಕ ಉಪಕರಣಗಳು ಲಭ್ಯವಿದೆ.
- ಬೋಧಕ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂಟರ್ನೆಟ್ ಸೌಲಭ್ಯದೊಂದಿಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ.
- ಸ್ನಾತಕೋತ್ತರ ತರಗತಿಗಳು ಮತ್ತು ವಿಚಾರಸಂಕಿರಣಗಳನ್ನು ನಡೆಸಲು ಅಗತ್ಯವಾದ ಶ್ರವಣ- ದೃಶ್ಯ ಸಾಧನಗಳೊಂದಿಗೆ ಸುಸಜ್ಜಿತವಾದ ಎರಡು ವಿಚಾರಸಂಕಿರಣ ಕೊಠಡಿಗಳು ಲಭ್ಯವಿದೆ.
ಡಾ. ಕೆ. ಮುರಳಿ,
ಬೇಸಾಯಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ,
ಜಿ.ಕೆ.ವಿ.ಕೆ. ಕ್ಯಾಂಪಸ್, ಬೆಂಗಳೂರು-೫೬೦ ೦೬೫.
muralikariyappa@yahoo.co.in
muralik69@uasbangalore.edu.in
ವಿಸ್ತರಣೆ ಸಂಖ್ಯೆ: 283/287
ಸಿಬ್ಬಂದಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪರಿಣಿತಿ:
ಮಣ್ಣು ಫಲವತ್ತತೆ ಮತ್ತು ನೀರು ನಿರ್ವಹಣೆ,
ಏರೋಬಿಕ್ ಭತ್ತದ ಬೇಸಾಯ,
ದ್ವಿದಳ ಧಾನ್ಯ ಬೆಳೆ ಉತ್ಪಾದನೆ
ಸಾವಯವ ಕೃಷಿ
+91-9980520498
ಪರಿಣಿತಿ:
ಕಳೆ ನಿರ್ವಹಣೆ
ಪರಿಣಿತಿ:
+91-99645 83868
ಪರಿಣಿತಿ:
ಕಳೆ ನಿರ್ವಹಣೆ, ನೀರು ನಿರ್ವಹಣೆಮತ್ತುಮೇವಿನ ಬೆಳೆ ಉತ್ಪಾದನೆ
+91-09632863100
ಪರಿಣಿತಿ:
ಪರಿಣಿತಿ:
ಸಾವಯವ ಕೃಷಿ, ಸಮಗ್ರ ಪೋಷಕಾಂಶ ನಿರ್ವಹಣೆಮತ್ತುಬೆಳೆ ಪದ್ಧತಿ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು