ಈ ವಿಭಾಗವು ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನೆರವು ನೀಡುವ ಸಂಸ್ಥೆಗಳಿಂದ ಸಂಶೋಧನಾ ಹಣಕಾಸು ನೆರವು ಪಡೆದುಕೊಂಡಿದೆ . ಸಸ್ಯ ಸಂರಕ್ಷಣಾ ಕಾರ್ಯಕ್ರಮದಲ್ಲಿ ಈ ವಿಭಾಗದ ಕೊಡುಗೆಯನ್ನು ಯುಎನ್ಡಿಪಿ ಪರಿಶೀಲನಾ ಸಮಿತಿಯು ಅತೀವವಾಗಿ ಕೊಂಡಾಡಿದೆ. ಪ್ರಸ್ತುತ ಈ ವಿಭಾಗವು ಪದವಿ ಹಂತದ ವಿದ್ಯಾರ್ಥಿಗಳಿಗೆಂದು ಮೂಲಭೂತ ಸೂಕ್ಷ್ಮಣುಜೀವಿ ಶಾಸ್ತ್ರ, ಕೃಷಿ ಹಾಗೂ ಅನ್ವಯಿಕ ಸೂಕ್ಷ್ಮಣುಜೀವಿ ಶಾಸ್ತ್ರ ದಂತಹ ಕೋರ್ಸುಗಳನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ೫ನೇಯ ಡೀನ್ ಸಮಿತಿಯು ಶಿಫಾರಸ್ಸುಗಳ ಮೇರೆಗೆ ಜೈವಿಕ ಗೊಬ್ಬರ ಉತ್ಪಾದನೆ ಹಾಗೂ ಅಣಬೆ ಬೇಸಾಯದ ತರಬೇತಿಗಳನ್ನು ಕೂಡ ನೀಡುತ್ತಿದೆ. ಸ್ನಾತಕೋತ್ತರ ಹಂತದಲ್ಲಿನ ಕೋರ್ಸುಗಳು ಇಂತಿವೆ: ಪ್ರಿನ್ಸಿಪಲ್ಸ್ ಆಫ್ ಮೈಕ್ರೋಬಯಾಲಜಿ, ಮೈಕ್ರೋಬಿಯಲ್ಟ್ಯಾಕ್ಸೊನಾಮಿ, ಸೈಟಾಲಜಿ ಆ್ಯಂಡ್ ಮಾರ್ಫೋಲಾಜಿ ಆಫ್ ಮೈಕ್ರೋ ಆರ್ಗ್ಯಾನಿಸಮ್ ಸಾಯಿಲ್ ಮೈಕ್ರೋಬಯಾಲಜಿ, ಮೈಕ್ರೋಬಿಯಲ್ ಟೆಕ್ನಿಕ್ಸ್ , ಮೈಕ್ರೋಬಿಯಲ್ ಫಿಜಿಯಾಲಜಿ ಆ್ಯಂಡ್ ಮೆಟಾಬಲಿಸಮ್, ಮೈಕ್ರೋಬಿಯಲ್ ಜೆನೆಟಿಕ್ಸ್,ಮೈಕ್ರೋಬಿಯಲ್ ಬಯೋಟೆಕ್ನಾಲಜಿ, ಫುಡ್ ಆ್ಯಂಡ್ ಡೈರಿ ಮೈಕ್ರೋಬಯಾಲಜಿ, ಎನ್ವಿರಾನ್ಮೆಂಟಲ್ ಮೈಕ್ರೋಬಯಾಲಜಿ, ಇಂಡಸ್ಟಿಯಲ್ ಮೈಕ್ರೋಬಯಾಲಜಿ, ಬಯೋಫರ್ಟಿಲೈಸರ್ ಟೆಕ್ನಾಲಜಿ, ಅಟೊಟ್ರೋಫಿಕ್ ಮೈಕ್ರೋ ಆರ್ಗ್ಯಾನಿಸಮ್ಸ್, ಇನ್ಸೆಕ್ಟ್ ಮೈಕ್ರೋಬಯಾಲಜಿ, ಬ್ಯಾಕ್ಟಿರಿಯೊಫಾಜಂ, ಇದಲ್ಲದೆ ಡಾಕ್ಟರೇಟ್ ಹಂತದ ವಿದ್ಯಾರ್ಥಿಗಳಿಗಾಗಿ ಈ ಮುಂದೆ ಪ್ರಸ್ತಾಪಿಸಲಾಗಿರುವ ಕೋರ್ಸುಗಳನ್ನು ಕೂಡ ನಡೆಸಲಾಗುತ್ತಿದೆ.
ಅಡ್ವಾನ್ಸಸ್ ಇನ್ ಫರ್ಮೆಂಟೇಶನ್, ಅಡ್ವಾನ್ಸಡ್ಮೈಕ್ರೋಬಿಯಲ್ ಫಿಜಿಯಾಲಜಿ, ರೆಗ್ಯುಲೇಷನ್ ಆಫ್ ಮೈಕ್ರೋಬಿಯಲ್ ಬಯೊಸಿಂಥೀಸಿಸ್, ಕರೆಂಟ್ ಟಾಪಿಕ್ಸ್ ಇನ್ಸಾಯಿಲ್ ಮೈಕ್ರೋಬಯಾಲಜಿ, ಪ್ಲಾಂಟ್-ಮೈಕ್ರೋಬ್ ಇಂಟರಾಕ್ಷನ್, ಮೈಕ್ರೋ ಆರ್ಗ್ಯಾನಿಸಮ್ ಇನ್ ಬಯೋಫ್ಯುಲ್ಸ್ಆ್ಯಂಡ್ ಬಯೋ ಎನರ್ಜಿ ಪ್ರೊಡಕ್ಷನ್, ಮೈಕ್ರೋಬಿಯಲ್ ಮ್ಯಾನೇಜ್ಮೆಂಟ್ ಆಫ್ ಆರ್ಗ್ಯಾನಿಕ್ ವೇಸ್ಟ್ ಆ್ಯಂಡ್ 0ಜೀನೊ-ಬಾಯೊಟಿಕ್ಸ್ವಿಜ್ಞಾನಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವಿಭಾಗವು ನಾನಾ ವಿಶಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಬೇಸಿಗೆ ಹಾಗೂ ಚಳಿಗಾಲದ ಶಾಲೆಗಳು, ವಿಚಾರ ಸಂಕಿರಣ, ಸಮಾವೇಶ, ಕಾರ್ಯಾಗಾರಗಳನ್ನು ಆಯೋಜಿಸುವುದು. ಇವುಗಳೊಂದಿಗೆ ಕಾಲಕಾಲಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರು ಹಾಗೂ ಕಿರಿಯ ಹಂತದ ಸಂಶೋಧಕರ ಪ್ರಯೋಜನಕ್ಕಾಗಿ ತರಬೇತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿಕೊಂಡು ಬರಲಾಗುತ್ತಿದೆ.
ಲಭ್ಯವಿರುವ ಸೌಲಭ್ಯಗಳು
ಡಿ.ಎಸ್.ಟಿ -ಫಿಸ್ಟ್ ನೆರವಿನ ವಿಭಾಗ ಎಂದೆನಿಸಿರುವುದರಿಂದ ಈ ವಿಭಾಗದ ಪ್ರಯೋಗ ಶಾಲೆಗಳಲ್ಲಿ ಮುಂದೆಪ್ರಸಾಪಿಸಲಾಗಿರುವ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ: ಎಚ್.ಪಿ.ಎಲ್.ಸಿ, ಫ್ಲುಯಿಡ್ ಬೆಡ್ ರಿಯಾಕ್ಟರ್, ಫರ್ಮೆಂಟರ್ಸ್, ಪಿಸಿಆರ್ ಫುಡ್ ಫರ್ಮೆಂಟೇಷನ್, ಮೈಕ್ರೋಬಿಯಲ್ ಪೈಲೋಜಿನಿ ಬಯೊಟೆಕ್ನಾಲಜಿ ಆಫ್ಮ ಶ್ರೂಮ್, ಮೈಕ್ರೋಬಿಯಲ್ ಆ್ಯಂಡ್ ಇಂಡಸ್ಟಿçಯಲ್ ಬಯೋಟೆಕ್ನಾಲಜಿ, ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿನ ಸಂಶೋಧನೆಗಾಗಿ ಜೆಲ್ ಡಾಕ್ಯುಮೆಂಟೇಷನ್ ಘಟಕಗಳನ್ನು ಹೊಂದಲಾಗಿದೆ. ಇವುಗಳೊಂದಿಗೆ ಸ್ನಾತಕೋತ್ತರ ಹಂತದ ಹಾಗೂ ಸಿಬ್ಬಂದಿ ವರ್ಗದವರ ಅನುಕೂಲಕ್ಕಾಗಿ ಶೀತ ಕೊಠಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದ ಪ್ರಯೋಜನಕ್ಕೆಂದು ಸಾಕಷ್ಟು ಪ್ರಮಾಣದ ಕಂಪ್ಯೂಟರ್ ಗಳನ್ನು ಹಗಲು –ರಾತ್ರಿ ಇಂಟರ್ನೆಟ್ ಅನುಕೂಲವನ್ನು ಹೊಂದಿದೆ. ಕರ್ನಾಟಕ ಸರಕಾರದ ಹಣಕಾಸು ನೆರವು ಪಡೆದು ಈ ವಿಭಾಗದಲ್ಲಿ ಜೈವಿಕ ಗೊಬ್ಬರ ಉತ್ಪಾದನಾ ಘಟಕ ಹಾಗೂ ಗುಣಮಟ್ಟ ನಿಯಂತ್ರಣ ಪ್ರಯೋಗ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯ ಉತ್ಪಾದನಾ ಘಟಕವು ರೈತರಿಗೆ ಅಪಾರ ಪ್ರಮಾಣದಲ್ಲಿ ವಿತರಿಸುವ ಉದ್ದೇಶದಿಂದ ಗುಣಮಟ್ಟದ ರೈಜೋಬಿಯಮ್, ಅಜೋಸ್ಪೆರಿಲಮ್, ಅಝಟೊಬ್ಯಾಕ್ಟರ್, ಫಾಸ್ಫೇಟ್ ಕರಗಿಸಬಲ್ಲ ಜೈವಿಕ ಗೊಬ್ಬರಗಳನ್ನು ಉತ್ಪಾದಿಸುತ್ತಿದೆ. ಅಲ್ಲದೆ ಸಾವಯವ ವಸ್ತು ವಿಭಜನಕಾರಿ ಹಾಗೂ ಜೈವಿಕ ನಿಯಂತ್ರಕ ಜೀವಿಗಳಾದ ಟ್ರೆಕೋಡರ್ಮಾ ಹಾಗೂ ಸ್ಯುಡೊಮೊನಾಸ್ ಫ್ಲುರೊಸೆನ್ಸ್ಗಳ ಉತ್ಪತ್ತಿ ಕೂಡ ಇಲ್ಲಿ ನಡೆಯುತ್ತಿದೆ.ಇಲ್ಲಿನ ಬಹುತೇಕ ಸಿಬ್ಬಂದಿ ವರ್ಗದವರು ಸಮಕಾಲೀನ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೂ ಈ ಮುಂದೆ ಸೂಚಿಸಲಾದ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಮೈಕ್ರೋಬಿಯಲ್ ಫೈಲೋಜೆನಿ, ಅಣಬೆ ಬೇಸಾಯ ಹಾಗೂ ಜೈವಿಕ ತಂತ್ರಜ್ಞಾನ, ಸಸ್ಯ-ಸೂಕ್ಷ್ಮಜೀವಿಗಳ ಪರಸ್ಪರ ಕ್ರಿಯೆಗಳು, ಸಸ್ಯರೋಗಕಾರಕಗಳ ಜೈವಿಕ ನಿಯಂತ್ರಣ , ಮೈಕ್ರೋರೈಜಿಯಲ್ ಸಂಶೋಧನೆ, ಆಹಾರ ಪರಿವರ್ತನೆಗಳ ತಾಂತ್ರಿಕತೆ, ಆಹಾರ ಹುದುಗುವಿಕೆ ಮತ್ತು ಸಂಸ್ಕರಣೆ, ಸಾವಯವ ವಸ್ತುಗಳ ಕೊಳೆಯುವಿಕೆ ಇತ್ಯಾದಿ ವಿದ್ಯಾರ್ಥಿಗಳಿಗೆಲ್ಲ ಅವರವರ ವಿಶೇಷ ಐಚ್ಚಿಕ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹಾಗೂ ಅಧ್ಯಾಪಕ ವರ್ಗದ ಪರಿಣತಿಯನ್ನು ಬಳಸಿಕೊಂಡು ಇದುವರೆಗೆ ೫೨೨ ಸ್ನಾತಕ ಹಾಗೂ ೧೮೩ ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿ ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ಹಾಗೂ ಅಭಿವೃದ್ದಿ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಈ ವಿಭಾಗವು ಆರಂಭಗೊಂಡಾಗಿನಿಂದಲೂ ಕೃಷಿ ಸೂಕ್ಷ್ಮಾಣು ಜೀವಿ ವಲಯಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ ಬೇಡಿಕೆಯನ್ನು ಪೂರೈಸಿಕೊಂಡು ಬಂದಿದೆ. ಅಲ್ಲದೆ ಸಾವಯವ ಕೃಷಿ ಹಾಗೂ ಸುಸ್ಥಿರ ಬೇಸಾಯಕ್ಕಾಗಿ ಅಗ್ಗದ ದರದಲ್ಲಿ ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡುವ ಮೂಲಕ ರೈತರ ಪಾಲಿಗೆ ವರದಾನ ಎಂದೆನಿಸಿದೆ.
ಡಾ|| ಕೆ. ನಾಗರಾಜು
ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು
ಎಮ್. ಎಸ್ಸಿ. (ಕೃಷಿ) ಪಿಹೆಚ್.ಡಿ.
ಮಣ್ಣಿನಲ್ಲಿರುವ ಸಸ್ಯರೋಗಕಾರಕ ಜೀವಿಗಳ ಜೈವಿಕ ನಿಯಂತ್ರಣ, ಜೈವಿಕ ಗೊಬ್ಬರಗಳು
nagaraj.k.samandur@gmail.com
+91-8123613956
ಸಿಬ್ಬಂದಿ
ಎಮ್. ಎಸ್ಸಿ. (ಕೃಷಿ) ಪಿಹೆಚ್.ಡಿ., ಪಿಜಿಡಿಎಫೆಎಸ್ಕ್ಯುಎಮ್, ಎಸ್ಸಿ.ಟಿ (ಯುಎಸ್ಎ) ಅಣಬೆ ಉತ್ಪಾದನೆಯ ತಾಂತ್ರಿಕತೆ, ಜೈವಿಕ ಶಕ್ತಿ ಉತ್ಪಾದನೆ, ನಿರುಪಯುಕ್ತ ನೀರಿನ ಉಪಚರಣೆ ಮತ್ತು ಸೂಕ್ಷ್ಮಜೀವಿಗಳ ಪರಸ್ಪರಕ್ರಿಯೆಗಳು
ಎಮ್. ಎಸ್ಸಿ. (ಕೃಷಿ) ಪಿ.ಹೆಚ್ಡಿ., (ಐಎಆರ್ಐ)
ಜೈವಿಕ ಇನೊಕ್ಯುಲಂಟ್ಸ್ ಸಸ್ಯ ರೋಗಕಾರಕ ಜೀವಿಗಳ ಜೈವಿಕ ನಿಯಂತ್ರಣ,
ಸಸ್ಯ ಬೆಳವಣಿಗೆ ವೃದ್ಧಿಸುವ ಬೇರುವಲಯ ಸೂಕ್ಷ್ಮಜೀವಿಗಳ ಮುಖಾಂತರ ಸಸ್ಯಗಳಲ್ಲಿ ಬರ ಸಹಿಸುವ ಸಾಮರ್ಥ್ಯ
ಅವಾಯು ಸೂಕ್ಷ್ಮ ಜೀವಿಶಾಸ್ತ್ರ, ಹುದುಗುವಿಕೆ ತಾಂತ್ರಿಕತೆ
+91-80-23330153- Extn 372
ಸಸ್ಯ ಸೂಕ್ಷ್ಮ ಜೀವಿಗಳ ಪರಸ್ಪರ ಕ್ರಿಯೆ, ಪರಿಸರ ಸೂಕ್ಷ್ಮ ಜೀವಿಶಾಸ್ತ್ರ, ಜೈವಿಕ ಇಂಧನಗಳು,
ಸೂಕ್ಷ್ಮಜೀವಿಗಳಲ್ಲಿ ಜೈವಿಕ ವೈವಿಧ್ಯತೆ
+91-80-23330153 Ext. 372
Album
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು