ಕೃಷಿ ಅರ್ಥಶಾಸ್ತ್ರ ವಿಭಾಗವು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ೧೯೬೪ರಲ್ಲಿ ಪ್ರಾರಂಭವಾಯಿತು.ಕೃಷಿ ಅರ್ಥಶಾಸ್ತ್ರ ವಿಭಾಗವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ್ದು, ದೇಶದಲ್ಲಿಯೇ ಕೃಷಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳ ಅಧ್ಯಯನಕ್ಕೆ ಹೆಚ್ಚು ಬೇಡಿಕೆಯಿರುವ ವಿಭಾಗಗಳಲ್ಲಿ ಒಂದಾಗಿದೆ.
ಕೃಷಿ ಅರ್ಥಶಾಸ್ತ್ರ ವಿಭಾಗವು ಉತ್ಪಾದನಾ ಅರ್ಥಶಾಸ್ತ್ರ ಮತ್ತು ನೀತಿ-ಆಧಾರಿತ ಸಂಶೋಧನೆಯಲ್ಲಿ ಪರಿಣತಿ ಹೊಂದಿದ್ದು, NATP ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅರ್ಥಶಾಸ್ತ್ರದಲ್ಲಿ ಉತ್ಕೃಷ್ಟತೆಯ ಕೇಂದ್ರವೆಂದು ಗುರುತಿಸಲ್ಪಟ್ಟ ಕೀರ್ತಿಯನ್ನು ಪಡೆದಿರುತ್ತದೆ. ವಿಭಾಗವು ತಂತ್ರಜ್ಞಾನಗಳ ಪ್ರಭಾವದ ಮೌಲ್ಯಮಾಪನ ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ ಅಧ್ಯಯನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಉತ್ತಮ ಶಿಕ್ಷಣದ ದೃಷ್ಟಿಯನ್ನು ಹೊಂದಿರುವ ವಿಭಾಗದ ಅಧ್ಯಾಪಕರ ಪರಿಶ್ರಮದ ಫಲವಾಗಿ ಅನೇಕ ಸಾಧನೆಗಳನ್ನು ಮಾಡಿದೆ. ವಿಮರ್ಶಾತ್ಮಕ ಚಿಂತನೆಯ ಬದ್ಧತೆಯ ಮೇಲೆ ಅಧ್ಯಯನ ಮತ್ತು ಪಠ್ಯಕ್ರಮಗಳ ಸುಧಾರಣೆಗಳ ಯೋಜನೆ ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಅಧ್ಯಾಪಕರು ಆದ್ಯತೆ ನೀಡುತ್ತಾರೆ. ಉತ್ತಮ ಸಂವಹನ ಕೌಶಲ್ಯಗಳೊಂದಿಗೆ ಉತೃಷ್ಥ ಸಂಶೋಧನೆಗಳಿದ ಉತ್ತಮ ವಿದ್ಯಾರ್ಥಿ-ಬೋಧಕ ಸಂವಹನಯಿಂದ ಪ್ರತಿ ವಿದ್ಯಾರ್ಥಿಗೆ ಹೆಚ್ಚು ಸೂಚನಾ ಸಮಯವನ್ನು ಒದಗಿಸಲು ಸಾಧ್ಯವಾಗಿದೆ. ವಿಭಾಗವು ಸುಸಜ್ಜಿತ ಗಣಕಯಂತ್ರ ಪ್ರಯೋಗಾಲಯ ಮತ್ತು ಗ್ರಂಥಾಲಯವನ್ನು ಹೊಂದಿದೆ.
ವಿಭಾಗದ ಅಧ್ಯಾಪಕರುಗಳು ರಾಷ್ಟ್ರೀಯ ಮಟ್ಟದಜವಹಾರ್ ಲಾಲ್ ನೆಹರು ಪ್ರಶಸ್ತಿ, ಭಾರತೀಯ ಕೃಷಿ ಅನುಸಂದಾನ ಪರಿಷತ್ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತುಅಂತ ರಾಷ್ಟ್ರೀಯ ಮನ್ನಣೆಗಳಾದ DAAD ವಿದ್ಯಾರ್ಥಿ ವೇತನ, ಎರಾಸ್ಮಸ್ ಮುಂಡಸ್, IMRD ಅಡಿಯಲ್ಲಿ ವಿಸಿಟಿಂಗ್ ಫೆಲೋಗಳು, ಫುಲ್ ಬ್ರೆಟ್ ಫೆಲೋಶಿಪ್, ಫೋರ್ಡ್ ಫೌಂಡೇಶನ್ ಅನುದಾನಗಳು, ವಿಶ್ವ ಬ್ಯಾಂಕ್ ನಲ್ಲಿ ನಪರಿಸರ ಅರ್ಥಶಾಸ್ತ್ರದಲ್ಲಿ ಪಡೆಯುವದರ ಮೂಲಕ ವಿಭಾಗಕ್ಕೆ ಹೆಮ್ಮೆತಂದಿರುತ್ತಾರೆ.
ವಿಭಾಗವು IGIDR, ICAR, DES, NATP ಮತ್ತು DBT (SCB) ನಂತಹ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಹಲವಾರು ಸ್ಪರ್ಧಾತ್ಮಕ ಸಂಶೋಧನಾ ಯೋಜನೆಗಳ ಮುಖಾಂತ ಅನುಧಾನಗಳನ್ನು ಪಡೆದಿದೆ. ವಿಭಾಗವು DBTಯ ಸಹಾಯದೊಂದಿಗೆ ಬೆಂಗಳೂರಿನ ಗ್ರಾಮೀಣ ನಗರ ಸಾಮಪ್ಯದಲ್ಲಿ ಕೃಷಿಯ ಮೇಲೆ ನಗರೀಕರಣದ ಪ್ರಭಾವ ಕುರಿತು ಇಂಡೋ-ಜರ್ಮನ್ ಸಹಯೋಗದ ಸಂಶೋಧನಾ ಯೋಜನೆಗಳನ್ನು ಸಂಯೋಜಿಸುತ್ತಿದೆ. ಭಾರತ ಸರ್ಕಾರ ಮತ್ತು DFG (ಜರ್ಮನ್‌ರಿಸರ್ಚ್ ಫೌಂಡೇಶನ್) ಪಾಲುದಾರರೊಂದಿಗೆ ಬೆಂಗಳೂರಿನ ಗ್ರಾಮೀಣ-ನಗರ ಅಂತರ ಸಂಪರ್ಕ ಸಾಧನ: ಕೃಷಿ, ಆರ್ಥಿಕತೆ ಮತ್ತು ಸಮಾಜದಲ್ಲಿನ ಪರಿವರ್ತನೆ ಎಂಬ ಸಂಶೋಧನಾ ಯೋಜನೆಯ ಹಂತ-೨ನ್ನು 2021-22 ರಿಂದ 2023-24 ರವರೆಗೆ ಜರ್ಮನಿಯ ಕ್ಯಾಸೆಲ್ ಮತ್ತು ಗಾಟ್ಟಿಂಗನ್ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿ ಮುಂದುವರಿಸಿದೆ. ಭಾರತೀಯ ಸಂಶೋಧನಾ ಘಟಕಕ್ಕೆ, ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಜರ್ಮನ್ ಸಂಶೋಧನಾ ಘಟಕಕ್ಕೆ, ಜರ್ಮನಿಯ ಸಂಶೋಧನಾ ಪ್ರತಿಷ್ಠಾನವು ಹಣಕಾಸಿನ ನೆರವು ಒದಗಿಸುತ್ತಿವೆ.
ವಿಭಾಗವು ಅಂತರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ಇಂಟರ್‌ನ್ಯಾಷನಲ್ ವರ್ಚುವಲ್ ಕೋರ್ಸ್ (IVC) ಅನ್ನು 2020 ರಲ್ಲಿ ಪ್ರಾರಂಭಿಸಿದ್ದು, ಇದು ಈ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ವಲ್ಲದೆ ಇಡೀ ಭಾರತದ ಎಲ್ಲಾ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಲ್ಲೆ ಮೊದಲ ಕಾರ್ಯಕ್ರಮವಾಗಿದೆ. ಇದರಲ್ಲಿ ಜ್ಯೂರಿಚ್ ಯುನಿವರ್ಸಿಟಿ ಆಫ್ ಅಪ್ಲೆಡ್ ಸೈನ್ಸಸ್ (ZHAW), ಸ್ವಿಟ್ಜರ್ಲೆಂಡ್, ಫೆಡರಲ್ ಯೂನಿವರ್ಸಿಟಿ ಆಫ್ ಗ್ರಾಂಡೆ ಡೌರಾಡೋಸ್ (UFGD) ಬ್ರೆಜಿಲ್, ನೈರೋಬಿ ವಿಶ್ವವಿದ್ಯಾನಿಲಯ, ಕೀನ್ಯಾ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಈ ೪ ವಿಶ್ವವಿದ್ಯಾನಿಲಯಗಳು ಪ್ರಪಂಚದ ವಿವಿಧ ನಾಲ್ಕು ಖಂಡಗಳಾದ ಯುರೋಪ್, ದಕ್ಷಿಣಅಮೇರಿಕಾ, ಆಫ್ರಿಕಾ ಮತ್ತು ಏಷ್ಯಾ ಖಂಡಗಳನ್ನು ಪ್ರತಿನಿಧಿಸುತ್ತಿವೆ. IVC ಯು “ಜಾಗತಿಕ ಕಲಿಕೆಯ ಮೂಲಕ ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು” ಎಂಬ ವಿಷಯಾಧಾರಿತವಾಗಿದ್ದು ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಸವಾಲುಗಳ ಜೊತೆಗೆ ವಿವಿಧ ಭೌಗೋಳಿಕ ಸಂದರ್ಭಗಳಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವಿಕೆ ಮತ್ತು ಪರಿಣಾಮಗಳ ತಗ್ಗಿಸುವಿಕೆಗಾಗಿ ತಂತ್ರಗಳನ್ನು ರೂಪಿಸುತ್ತಿದೆ. ಈ ಕೋರ್ಸ್‍ಗಳಿಗೆ ಆಸಕ್ತಿ ಮತ್ತು ಪ್ರೇರಣೆಯ ವಿಷಯದ ಆಧಾರದ ಮೇಲೆ, ಪ್ರತಿ ಪಾಲುದಾರ ಸಂಸ್ಥೆಗಳಿದ ತಲಾ ಹತ್ತು ಕೃಷಿ ವಿಜ್ಞಾನ ಮತ್ತು ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಆಯ್ಮಾಡಲಾಗುತ್ತದೆ.ಅವರ ವಿಶೇಷ ಕೌಶಲ್ಯಗಳ ಜೊತೆಗೆ, ಡಿಜಿಟಲೀಕರಣ ಮತ್ತು ಅಂತರ್‌ಸಾಸ್ಕೃತಿಕ ಸಹಕಾರದಲ್ಲಿ ಅಂತರಾಷ್ಟ್ರೀ ಕಲಿಕೆಯ ಮೂಲಕ ವಿದ್ಯಾರ್ಥಿಗಳ ಕೌಶಲ್ಯ ವನ್ನು ಬಲಪಡಿಸಲಾಗುತ್ತದೆ. ಈ ಕೋರ್ಸ್‍ನಲ್ಲಿ ಜಾಗತಿಕ ಬದಲಾವಣೆ ತಯಾರಕರಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯು“ಆನ್ ಲೈನ್” ಮತ್ತು“ಆಫ್ ಲೈನ್”ಎರಡರ ಮೂಲಕ ನಡೆಯುತ್ತದೆ. ಅಂತರಾಷ್ಟ್ರೀಯ ತಜ್ಞರು ಮತ್ತು ಅಂತರಾಷ್ಟ್ರೀಯ ಕೇಸ್ ಸ್ಟಡಿ ಗುಂಪುಗಳಿದ ಮಾಹಿತಿ/ಉಪನ್ಯಾಸಗಳ ಪ್ರಸಾರವನ್ನುಆನ್ ಲೈನ್ ಮೂಲಕ ಮಾಡಲಾಗುತ್ತದೆ. ಈ ಕಾರ್ಯಕ್ರಮವು ಜಾಗತಿಕ ಹವಾಮಾನ ಬದಲಾವಣೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೊಸ ನೋಟವನ್ನು ತೆರೆಯುವ ನಿರೀಕ್ಷೆಯಿದೆ. ಈ ಜಂಟಿ ಶೈಕ್ಷಣಿಕ ಕಾರ್ಯಕ್ರಮವು ಐದು ವರ್ಷಗಳ ಅವಧಿಗೆ (2020-2024) Movetia (ವಿನಿಮಯ ಮತ್ತು ಚಲನಶೀಲತೆಗಾಗಿ ಸ್ವಿಸ್ ಸಂಸ್ಥೆ) ಮತ್ತು ಮರ್ಕೇಟರ್ ಫೌಂಡೇಶನ್, ಸ್ವಿಟ್ಜರ್ಲೆಂಡ್‌ನ ಧನ ಸಹಾಯ ಪಡೆದಿದೆ.
ವಿಭಾಗವು ೨೦೧೭ ರಿಂದ ೨೦೧೯ ರವರೆಗೆ ವಿಶಿಷ್ಟವಾದ ಸುಸ್ಥಿರ ಅಭಿವೃದ್ಧಿಗಾಗಿ ೨೦೩೦ ಕಾರ್ಯಸೂಚಿ ಉತ್ತೇಜಿಸಲು“ಆಹಾರದ ಮೌಲ್ಯ ಸರಪಳಿಗಳನ್ನು ವಿನ್ಯಾಸಗೊಳಿಸುವುದು” ಎಂಬ ವಿಷಯ ಆಧಾರಿತ ಮೂರು (೩) “ಅಂತರಾಷ್ಟ್ರೀಯ ಬೇಸಿಗೆ ಶಾಲೆ” (೨೦೧೭ ಸ್ವಿಟ್ಜರ್ಲೇಂಡ್, ೨೦೧೮ ಯು.ಎ.ಎಸ್ ಬೆಂಗಳೂರಿನಲ್ಲಿ ಮತ್ತು ೨೦೧೯ ಸ್ಲೋವೇನಿಯಾ) ಗಳನ್ನು ಅತೀ ಯಶಸ್ವಿಯಾಗಿ ಆಯೋಜಿಸಿದೆ.
ಕೃಷಿ ಅರ್ಥಶಾಸ್ತ್ರ ವಿಭಾಗವು ಕೃಷಿ ವಿಶ್ವವಿದ್ಯಾನಿಲಯ, ಗಾಂ.ಕೃ.ವಿ. ಕೇಂ., ಬೆಂಗಳೂರಿನ ಕೃಷಿ ಅರ್ಥಶಾಸ್ತ್ರ ವಿಭಾಗವು ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಈ ಕೆಳಗಿನ ಅಂತರಾಷ್ಟ್ರೀಯ ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳನ್ನು ಹೊಂದಿದೆ.
ಡಾ. ಲೋಕೇಶ, ಹೆಚ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಕೃಷಿಕ್ಷೇತ್ರ ನಿರ್ವಹಣೆ ಮತ್ತು ಉತ್ಪಾದನಾಅರ್ಥಶಾಸ್ತ್ರ ,
ಸ್ಥೂಲ ಅರ್ಥಶಾಸ್ತ್ರ ವಿಶ್ಲೇಷಣೆ, ಕೃಷಿ ಮಾರಾಟ ಮತ್ತು ಕೃಷಿ ಹಣಕಾಸು
Faculty
ಕೃಷಿ ಅರ್ಥಶಾಸ್ತ್ರ ,ಸೂಕ್ಷಮ ಅರ್ಥಶಾಸ್ತ್ರ ,ಅಭಿವೃದ್ಧಿಅರ್ಥಶಾಸ್ತ್ರ ಮತ್ತು ವ್ಯಾಪಾರ,
ನೈಸರ್ಗಿಕ ಸಂಪನ್ಮೂಲಗಳ ಅರ್ಥಶಾಸ್ತ್ರ ಮತ್ತು ಪರಿಸರ ಅರ್ಥಶಾಸ್ತ್ರ
ಕೃಷಿಕ್ಷೇತ್ರ ನಿರ್ವಹಣೆಮತ್ತುಉತ್ಪಾದನಾಅರ್ಥಶಾಸ್ತ್ರ , ಸ್ಥೂಲ ಅರ್ಥಶಾಸ್ತ್ರ ವಿಶ್ಲೇಷಣೆ, ಕೃಷಿ ಮಾರಾಟ ಮತ್ತು ಕೃಷಿ ಹಣಕಾಸು
ಕೃಷಿ ಕ್ಷೇತ್ರ ನಿರ್ವಹಣೆ ಮತ್ತು ಕೃಷಿ ಉತ್ಪಾದನಾಅರ್ಥಶಾಸ್ತ್ರ , ಕೃಷಿ ಹಣಕಾಸು ಹಾಗು ಕೃಷಿಮಾರಾಟ.
ಕೃಷಿ ಉತ್ಪನ್ನಅರ್ಥ ಶಾಸ್ತ್ರ , ಕೃಷಿ ಮೌಲ್ಯ ಸರಪಳಿಗಳು, ಉಸ್ತುವಾರಿ ಮತ್ತು ಪರಿಣಾಮಗಳ ಮೌಲ್ಯಮಾಪನ, ಪ್ರಾಯೋಗಿಕ ಮತ್ತು ನಡುವಳಿಕೆ ಅರ್ಥಶಾಸ್ತ್ರ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು