
ಡಾ.ಪಿ.ವೆಂಕಟರವಣ
ಎಂ.ಎಸ್ಸಿ. (ಅಗ್ರಿ.), ಪಿಎಚ್.ಡಿ. ಜೆನೆಟಿಕ್ಸ್ ಮತ್ತು ಸಸ್ಯ ಸಂತಾನೋತ್ಪತ್ತಿ
ರೇಷ್ಮೆ ಕೃಷಿ ಕಾಲೇಜು
ಚಿಂತಾಮಣಿ-೫೬೩ ೧೨೫.
ಡೀನ್ ರವರ ಸಂದೇಶ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಕಾಲೇಜನ್ನು ೧೯೯೫ರಲ್ಲಿ ಪ್ರಾರಂಭಿಸಲಾಯಿತು. ಬೆಂಗಳೂರಿನಿAದ ಸುಮಾರು ೭೫ ಕಿ.ಮೀ. ದೂರದಲ್ಲಿರುವ ಚಿಂತಾಮಣಿಯಿAದ ಈ ಆವರಣವು ಚಿಂತಾಮಣಿ-ಕೋಲಾರ ರಸ್ತೆಯಲ್ಲಿ ಚಿಂತಾಮಣಿಯಿAದ ಸುಮಾರು ೭ ಕಿ.ಮೀ ದೂರದಲ್ಲಿದೆ. ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಆವರಣವು ಏಷ್ಯಾದಲ್ಲಿ ಬಿ.ಎಸ್ಸಿ. (ಆನರ್ಸ್ಾ) ರೇಷ್ಮೆಕೃಷಿ ಪದವಿಯನ್ನು ನೀಡುವ ಏಕೈಕ ಶಿಕ್ಷಣ ಕೇಂದ್ರವಾಗಿದೆ. ಈ ಕಾಲೇಜನ್ನು ೨೦೦೩ರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ನವದೆಹಲಿಯಿಂದ ಅತ್ಯುತ್ತಮವಾದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಆವರಣವು ಸುಮಾರು ೧೮೦ ಎಕರೆ ಪ್ರದೇಶವನ್ನು ಹೊಂದಿದೆ. ಈ ಆವರಣದಲ್ಲಿ ಬಿ.ಎಸ್ಸಿ.(ಆನರ್ಸ್ಣ) ರೇಷೆಕೃಷಿ ಮತ್ತು ಬಿ.ಎಸ್ಸಿ.(ಆನರ್ಸ್ಸ್ ) ಕೃಷಿ ಪದವಿಗಳನ್ನು ಬೋಧನೆ ಮಾಡಲಾಗುತ್ತಿದೆ. ಇದಲ್ಲದೆ, ಕೃಷಿ ಸಂಶೋಧನಾ ಕೇಂದ್ರ ಸಹ ಇದ್ದು, ಒಣ ಭೂಮಿ ಕೃಷಿ, ತೋಟಗಾರಿಕೆ ಮತ್ತು ಇತರೆ ಬೆಳೆ ಸಂಶೋಧನಾ ಕಾರ್ಯಕ್ರಮಗಳ ಕುರಿತು ಸಂಶೋಧನೆ ನಡೆಸುತ್ತಿದೆ. ರೈತರಿಗೆ ತಂತ್ರಜ್ಞಾನದ ವರ್ಗಾವಣೆಗಾಗಿ ಈ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಸಮುದಾಯ ಆಧಾರಿತ ಟ್ಯಾಂಕ್ ನಿರ್ವಹಣಾ ಯೋಜನೆ ಸಲಹಾ ಸೇವೆಗಳು ಇದ್ದು ರೈತರಿಗೆ ತಂತ್ರಜ್ಞಾನಗಳನ್ನು ವರ್ಗಾಯಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.
ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಆವರಣದಲ್ಲಿ ಸುಸಜ್ಜಿತ ಉಪನ್ಯಾಸ ಸಭಾಂಗಣಗಳು, ಪ್ರಯೋಗಾಲಯಗಳು, ವಿದ್ಯಾರ್ಥಿಗಳ ಕೊಠಡಿ, ಕಂಪ್ಯೂಟರ್ ಲ್ಯಾಬೋರೇಟರಿ, ಗ್ರಂಥಾಲಯ ಮತ್ತು ಕ್ರೀಡಾ ಸೌಲಭ್ಯಗಳು, ಪದವಿ ವಿದ್ಯಾರ್ಥಿಗಳಿಗೆ ವಿಶೇಷ ತರಭೇತಿ ಘಟಕಗಳು ಹಾಗೂ ಬಾಲಕ ಮತ್ತು ಬಾಲಕಿಯರಿಗಾಗಿ ವಿದ್ಯಾರ್ಥಿನಿಲಯಗಳಿವೆ.
ಹಾಸ್ಟೆಲ್‌ಗಳು
96 ಮತ್ತು 27 ಬೋರ್ಡರ್‌ಗಳ ಸಾಮರ್ಥ್ಯವಿರುವ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳು ಲಭ್ಯವಿದೆ.


ಅರ್ಹತೆ
B.Sc.(Seri.) ಮತ್ತು B.Sc ಗೆ ಪ್ರವೇಶಕ್ಕಾಗಿ ಅರ್ಹತೆ (ಅಗ್ರಿ.) ಪದವಿ ಕಾರ್ಯಕ್ರಮವು PCMB ಜೊತೆಗೆ ಐಚ್ಛಿಕವಾಗಿ 10+2 ಆಗಿದೆ.
ಆರ್ಥಿಕ ನೆರವು
- ಮೆರಿಟ್ ಆಧಾರಿತ
- ಉಚಿತ ವಿದ್ಯಾರ್ಥಿ ವಿದ್ಯಾರ್ಥಿವೇತನಗಳು
- ಸಾಮಾನ್ಯ ವಿದ್ಯಾರ್ಥಿವೇತನ
- ಜಿಂದಾಲ್ ವಿದ್ಯಾರ್ಥಿವೇತನ
- GOI ವಿದ್ಯಾರ್ಥಿವೇತನ
- ವಿದ್ಯಾರ್ಥಿ ಸಹಾಯ ನಿಧಿ ಮತ್ತು ಫ್ರೀಶಿಪ್‌ಗಳು
- ನೀವು ಕಲಿಯುವಾಗ ಗಳಿಸಿ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಫೆಬ್ರವರಿ 18, 2025
- ಸೈಟ್ ಅಂಕಿಅಂಶಗಳು