ಸಂಸ್ಥೆಯವಿವರ
ಗುಣಮಟ್ಟದ ಶಿಕ್ಷಣವನ್ನು ನೀಡವುದು ಹಾಗೂ ಸುಸ್ಥಿರ ಕೃಷಿಗಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯೊಂದಿಗೆ, ಮೂರು ಪದವಿ ಕಾರ್ಯಕ್ರಮಗಳಾದ ಬಿ.ಎಸ್ಸಿ. (ಹಾನ್ಸ್) ಕ್ರಷಿ, ಬಿ.ಟೆಕ್. (ಜೈವಿಕ ತಂತ್ರಜ್ಞಾನ.) ಮತ್ತು ಬಿ.ಟೆಕ್ (ಆಹಾರ ತಂತ್ರಜ್ಞಾನ)ವನ್ನು ಈ ಆವರಣದಲ್ಲಿ ನೀಡಲಾಗುತ್ತಿದೆ. ಪ್ರತಿಯೊಂದು ಪದವಿ ಕಾರ್ಯಕ್ರಮಗಳಿಗೆ ಪ್ರತ್ಯೇಕ ಮೂಲಭೂತಸೌಕರ್ಯಗಳನ್ನು ಒದಗಿಸಲಾಗಿದೆ. ಆವರಣದಲ್ಲಿ ಒಟ್ಟು 908 ವಿದ್ಯಾರ್ಥಿಗಳು (476 ಹುಡುಗಿಯರು ಮತ್ತು 432 ಹುಡುಗರು) ಓದುತ್ತಿದ್ದಾರೆ. ವಿದ್ಯಾರ್ಥಿಗಳು ಗ್ರಾಮೀಣ ಕೃಷಿ, ಬೆಳೆ ಪದ್ಧತಿ, ತೋಟಗಾರಿಕೆ ಮತ್ತು ಆಹಾರ ಮತ್ತು ಜೈವಿಕ ತಂತ್ರಜ್ಞಾನ ಕೈಗಾರಿಕೆಗಳು ಮತ್ತು ಇತರ ಸಂಬಂಧಿತ ಸಂಶೋಧನಾ ಸಂಸ್ಥೆಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.
ಎಲೆಕ್ಟ್ರಾನಿಕ್ ಇಮೇಜ್ ಪ್ರೊಜೆಕ್ಟರ್ಗಳೊಂದಿಗೆ ಆಧುನಿಕ ತರಗತಿ ಕೊಠಡಿಗಳು, ಸುಸಜ್ಜಿತ ಉಪನ್ಯಾಸ ಕೊಠಡಿ ಮತ್ತು ದೃಶ್ಯ ಕಣ್ಗಾವಲು ವ್ಯವಸ್ಥೆಯೊಂದಿಗೆ ಪರೀಕ್ಷಾ ಕೊಠಡಿ ಸೇರಿದಂತೆ ಬೋಧನೆ ಮತ್ತು ಕಲಿಕೆ ಕಾರ್ಯಕ್ರಮಗಳಿಗೆ ಕೃಷಿ ಕಾಲೇಜು ಅತ್ಯುತ್ತಮ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಹೊಂದಿದೆ. ಪಠ್ಯಕ್ರಮದ ಮುಖ್ಯ ಮತ್ತು ಸಂಬಂಧಿತ ವಿಷಯಗಳನ್ನು ಬೋಧಿಸಲು ಸುಸಜ್ಜಿತ ಪ್ರಯೋಗಾಲಯಗಳಿವೆ. ಕೃಷಿ ರಸಾಯನಶಾಸ್ತ್ರ, ಸಸ್ಯ ರೋಗಶಾಸ್ತ್ರ, ಕೃಷಿ ಸೂಕ್ಷ್ಮಾಣು ಜೀವಶಾಸ್ತ್ರ, ಕೃಷಿ ಕೀಟಶಾಸ್ತ್ರ, ಬೆಳೆ ಶಾರೀರಿಕ ಕ್ರಿಯಾಶಾಸ್ತ್ರ ಮತ್ತು ಅನುವಂಶಿಯತೆ ಮತ್ತು ತಳಿ ಪ್ರಯೋಗಾಲಯಗಳು, ಪ್ರಾತ್ಯಕ್ಷಿಕೆಗಳು, ಮಾದರಿಗಳು, ಹಾಗೂ ಪ್ರಾಯೋಗಿಕ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿವೆ. HPLC, ಪರಮಾಣು ಹೀರಿಕೊಳ್ಳುವ ಸ್ಪೆಕ್ಟ್ರೋಫೋಟೋ ಮೀಟರ್, UV-VIS ಸ್ಪೆಕ್ಟ್ರೋಫೋಟೋಮೀಟರ್, ಸ್ವಯಂಚಾಲಿತ ಸಾಕ್ಸ್ಲೆಟ್ ಸಿಸ್ಟಮ್, ಸ್ವಯಂಚಾಲಿತ ಕೆ-ಜೆಲ್ಡಾಲ್ ಸಿಸ್ಟಮ್, ಫ್ಲೇಮ್ ಫೋಟೊಮೀಟರ್ ಇತ್ಯಾದಿಗಳನ್ನು ಹೊಂದಿರುವ ಕೇಂದ್ರೀಯ ಉಪಕರಣ ಪ್ರಯೋಗಾಲಯವು ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಾಲೇಜಿನಲ್ಲಿ ಮಣ್ಣು ಮತ್ತು ಸಸ್ಯ ವಿಶ್ಲೇಷಣೆ ಮತ್ತು ರಸಗೊಬ್ಬರಗಳ ಶಿಫಾರಸು, ಪುನಶ್ಚೇತನ ಕ್ರಮಗಳು, ಪೋಷಕಾಂಶಗಳ ಕೊರತೆ, ರೋಗನಿರ್ಣಯ, ಮಣ್ಣಿನ ಫಲವತ್ತತೆ ನಕ್ಷೆ, ನೀರಾವರಿಯ ನೀರಿನ ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಅತ್ಯಾಧುನಿಕ ಮಣ್ಣಿನ ಆರೋಗ್ಯ ಚಿಕಿತ್ಸಾಲಯ ಮತ್ತು ರೋಗ ಮುನ್ಸೂಚನೆ ಸೌಲಭ್ಯಗಳೊಂದಿಗೆ ಸಸ್ಯ ಆರೋಗ್ಯ ಚಿಕಿತ್ಸಾಲಯವನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ರಸಗೊಬ್ಬರ ಮತ್ತು ಗೊಬ್ಬರಗಳ ಬಳಕೆ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ನೀಡಲಾಗುತ್ತಿದೆ.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಗಳನ್ನು (RAWEP) ಪಠ್ಯಕ್ರಮದ ಭಾಗವಾಗಿ ಅಯ್ದ ಹಳ್ಳಿಗಳಲ್ಲಿ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಹಳ್ಳಿಗಳಲ್ಲಿ ವಾಸಿಸುತ್ತಾರೆ ಮತ್ತು ಕ್ಷೇತ್ರ ಭೇಟಿ, ಪ್ರಾಣಿ ಮತ್ತು ಮಾನವ ಆರೋಗ್ಯ ಅಭಿಯಾನ, ಕೃಷಿ ಸಂಬಂಧಿತ ತರಬೇತಿ ಕಾರ್ಯಕ್ರಮಗಳು ಮತ್ತು ಬೆಳೆ ವಿಮೆಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಾರೆ, ಕೃಷಿ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಮತ್ತು ಜೈವಿಕ ಇಂಧನ ಉದ್ಯಾನವನದ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ ಮತ್ತು ಉಪಯುಕ್ತ ಮಾಹಿತಿಯನ್ನು ರೈತರಿಗೆ ನೀಡುತ್ತಾರೆ.
ಆಧುನಿಕ ಪೀಠೋಪಕರಣಗಳು ಮತ್ತು ಶ್ರವ್ಯ ದೃಶ್ಯ ಬೋಧನಾ ಸಾಧನಗಳು, ಹೈ ಡೆಫಿನಿಷನ್ ಇಂಟರ್ಯಾಕ್ಟಿವ್ ಪ್ರೊಜೆಕ್ಟರ್, ಇತ್ಯಾದಿಗಳೊಂದಿಗೆ ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಉಪನ್ಯಾಸ ಕೊಠಡಿಯಂತಹ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರತ್ಯೇಕ ಜೈವಿಕ ತಂತ್ರಜ್ಞಾನ ಬ್ಲಾಕ್ ಅನ್ನು ಸ್ಥಾಪಿಸಲಾಗಿದೆ. ಈ ವಿಭಾಗವು ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿದೆ. ಬಯೋ ಇನ್ಫರ್ಮ್ಯಾಟಿಕ್ಸ್, ಅಂಗಾಂಶ ಕೃಷಿ, ಜೆನೆಟಿಕ್ ಇಂಜಿನಿಯರಿಂಗ್, ಮೈಕ್ರೋಬಿಯಲ್ ಜೆನೆಟಿಕ್ಸ್, ಬಯೋಕೆಮಿಸ್ಟ್ರಿ, ಸೆಲ್ ಮತ್ತು ಮಾಲಿಕ್ಯುಲರ್ ಬಯಾಲಜಿ ಮತ್ತು ಪ್ರೊಟೀನ್ ಕೆಮಿಸ್ಟ್ರಿ. ಬಯೋಇನ್ಫರ್ಮ್ಯಾಟಿಕ್ಸ್ ಲ್ಯಾಬ್ನ 40 ಕಂಪ್ಯೂಟರ್ಗಳಿಗೆ ನೆಟ್ವರ್ಕ್ ಸೌಲಭ್ಯ ಒದಗಿಸಿದೆ ಮತ್ತು ಹೈಸ್ಪೀಡ್ ಬ್ರಾಡ್ಬ್ಯಾಂಡ್ನೊಂದಿಗೆ ಸಂಪರ್ಕ ಹೊಂದಿದೆ. ಇತರ ಬೋಧನಾ ಪ್ರಯೋಗಾಲಯಗಳಲ್ಲಿನ ಪ್ರಮುಖ ಸಾಧನಗಳೆಂದರೆ ಆಪ್ಟಿಕಲ್ ಬ್ರೈಟ್ ಫೀಲ್ಡ್ ಮತ್ತು ಫೇಸ್ ಕಾಂಟ್ರಾಸ್ಟ್ ಬೈನಾಕ್ಯುಲರ್ ಮೈಕ್ರೋಸ್ಕೋಪ್ ಜೊತೆಗೆ ದಾಖಲಾತಿ ಸೌಲಭ್ಯ, UV-Vis. ಸ್ಪೆಕ್ಟ್ರೋ ಫೋಟೋಮೀಟರ್, PCR ಯಂತ್ರಗಳು, ಹೆಚ್ಚಿನ ರೆಸಲ್ಯೂಶನ್-ಹೈ ಕಂಟೆಂಟ್ ಜೆಲ್ ಎಲೆಕ್ಟ್ರೋಫೋರೆಸಿಸ್ ಸಿಸ್ಟಮ್ಸ್, ಜೆಲ್ ಡಾಕ್ಯುಮೆಂಟೇಶನ್ ಸಿಸ್ಟಮ್, ಮಲ್ಟಿಪರ್ಪಸ್ ಬಯೋ-ರಿಯಾಕ್ಟರ್, ಇತ್ಯಾದಿ.
ಅಂತಿಮ ಸೆಮಿಸ್ಟರ್ನಲ್ಲಿ, ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ 4 ತಿಂಗಳ ಅವಧಿಗೆ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿ ಮೌಲ್ಯವರ್ಧಿತ ಪ್ರಯೋಗಾಲಯಗಳಲ್ಲಿ ತರಬೇತಿಯನ್ನು ಪಡೆಯುತ್ತಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಇನ್ಸ್ಟಮ್, ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹಾರ್ಟಿಕಲ್ಚರ್ ರಿಸರ್ಚ್, ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರಲಿ ಇಂಪಾರ್ಟೆಂಟ್ ಇನ್ಸೆಕ್ಟ್ಸ್, ಮೊನ್ಸಾಂಟೊ ರಿಸರ್ಚ್ ಸೆಂಟರ್ ಮತ್ತು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ನಂತಹ ಪ್ರತಿಷ್ಟಿತ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಲು ಅವಕಾಶವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳ ಸಂಶೋಧನೆ ಯೋಜನೆಗಳನ್ನು ಈ ಮೇಲೆ ಉಲ್ಲೇಖಿಸಿದ ಸಂಸ್ಥೆಗಳ ವಿಜ್ಞಾನಿಗಳು ಬಹಳವಾಗಿ ಮೆಚ್ಚಿದ್ದಾರೆ.
ಆಹಾರ ಸೂಕ್ಷ್ಮ ಜೀವವಿಜ್ಞಾನ ಮತ್ತು ತಂತ್ರಜ್ಞಾನ, ಡೈರಿ ತಂತ್ರಜ್ಞಾನ, ಹಣ್ಣುಗಳು ಮತ್ತು ತರಕಾರಿ ಸಂಸ್ಕರಣೆ, ಧಾನ್ಯ ತಂತ್ರಜ್ಞಾನ ಮತ್ತು ಬೇಕಿಂಗ್ ತಂತ್ರಜ್ಞಾನದಂತಹ ಐದು ಬೋಧನಾ ಪ್ರಯೋಗಾಲಯಗಳೊಂದಿಗೆ ಪ್ರತ್ಯೇಕ ಆಹಾರ ವಿಜ್ಞಾನ ಬ್ಲಾಕ್ ಅನ್ನು ಸ್ಥಾಪಿಸಲಾಗಿದೆ. ಎಲ್ಲಾ ತರಗತಿ ಕೊಠಡಿಗಳು ಆಧುನಿಕ ಬೋಧನಾ ಸಾಧನಗಳೊಂದಿಗೆ ಸುಸಜ್ಜಿತವಾಗಿವೆ. ಈ ವಿಭಾಗದಲ್ಲಿನ ಪ್ರಮುಖ ಸೌಲಭ್ಯಗಳು/ಉಪಕರಣಗಳೆಂದರೆ ಲೈಯೋಫೈಲೈಸರ್, ಸ್ಪ್ರೇ ಡ್ರೈಯರ್, ಡಿ-ಹಸ್ಕರ್, ಪಾಲಿಷರ್, ಪರ್ಲರ್, ಫ್ಲೋರ್ ಮಿಲ್, ಬೇಕಿಂಗ್ ಓವನ್, ಎಕ್ಸ್ಟ್ರೂಡರ್, ಬ್ಲೆಂಡರ್, ಸ್ವಯಂಚಾಲಿತ ಸಾಕ್ಸ್ಲೆಟ್ ಉಪಕರಣ ಹಣ್ಣು ಮತ್ತು ತರಕಾರಿ ಜ್ಯೂಸರ್, ಇತ್ಯಾದಿ.
ಅಂತಿಮ ಸೆಮಿಸ್ಟರ್ನಲ್ಲಿ ಆಹಾರ ತಂತ್ರಜ್ಞಾನ ಕೈಗಾರಿಕಾ ಅನುಭವದ ಭಾಗವಾಗಿ, ವಿದ್ಯಾರ್ಥಿಗಳು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಆಹಾರ ಉದ್ಯಮಗಳಾದ CFTRI, DFRL, ಕೋಕಾ ಕೋಲಾ, ಪೆಪ್ಸಿಕೊ, MTR ಫುಡ್ಸ್, ನೆಸ್ಲೆ, ಯುನಿಬಿಕ್, ಮೈಯಾಸ್ ಫುಡ್ಸ್ಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆಯುತ್ತಾರೆ.
ಕಂಪ್ಯೂಟರ್ಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಕೇಂದ್ರೀಯ ಕಂಪ್ಯೂಟರ್ ಸೌಲಭ್ಯ ಮತ್ತು ವೈವಿಧ್ಯಮಯ ಜ್ಞಾನ ಡೊಮೇನ್ಗಳಿಂದ 15000 ಕ್ಕೂ ಹೆಚ್ಚು ಗ್ರಂಥಗಳನ್ನು ಹೊಂದಿರುವ ಗ್ರಂಥಾಲಯವು ಬೋಧನೆ ಮತ್ತು ಕಲಿಕೆಯ ಕಾರ್ಯಕ್ರಮಗಳನ್ನು ಬಲಪಡಿಸುತ್ತದೆ. ಗ್ರಂಥಾಲಯ ಡಿಜಿಟಲ್ ಆರ್ಕೈವ್, ಆನ್ಲೈನ್ ಜರ್ನಲ್ಗಳು, ಆಫ್ಲೈನ್ ಇ-ಪುಸ್ತಕಗಳು ಇತ್ಯಾದಿಗಳನ್ನು ಹೊಂದಿದೆ.
ಸಂಯೋಜಿತ ತಂತ್ರಜ್ಞಾನಗಳು ಹಾಗೂ ಪರಿಣಾಮಕಾರಿ ವ್ಯವಸ್ಥೆಗಳ ಅಳವಡಿಕೆಯ ಮೂಲಕ ಕೃಷಿ ಕ್ಷೇತ್ರದ ತಾಂತ್ರಿಕ-ಸಾಮಾಜಿಕ-ಆರ್ಥಿಕ ಸಬಲೀಕರಣವು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ತಂತ್ರಜ್ಞಾನವನ್ನು ರೈತರಿಗೆ, ಯುವ ಸಮುದಾಯಕ್ಕೆ ಪರಿಣಾಮಕಾರಿಯಾಗಿ ವರ್ಗಾಯಿಸುವಲ್ಲಿ ಮತ್ತು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಪದವೀಧರರಲ್ಲಿ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಶಿಕ್ಷಕರು, ಸಂಶೋಧಕರು ಮತ್ತು ವಿಸ್ತರಣಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು