ಡೀನ್ ಸಂದೇಶ

ಡಾ. ಸಿ. ದೊರೆಸ್ವಾಮಿ
ವಿಶೇಷಾಧಿಕಾರಿಗಳು
ಕೃಷಿ ಮಹಾವಿದ್ಯಾಲಯ
ಚಾಮರಾಜನಗರ -571127
08226-297098
8277893972

ಪ್ರಸ್ತುತ ಚಾಮರಾಜನಗರ ಜಿಲ್ಲೆಯಲ್ಲಿ ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ಮತ್ತು ಹನೂರು ತಾಲ್ಲೂಕುಗಳಿದ್ದು ಅದರಲ್ಲಿ ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಹನೂರು ತಾಲೂಕುಗಳು ಮಳೆಯಾಶ್ರಿತ ಕೃಷಿ ಮಾಡುತ್ತಿದ್ದರೆ, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಿಗೆ ಕಾವೇರಿ ನೀರಿನ ಭರವಸೆ ಹೊಂದಿವೆ. ಜಿಲ್ಲೆಯು ೫,೬೪೮ ಚ. ಕಿ.ಮೀ ಭೌಗೋಳಿಕ ಪ್ರದೇಶವನ್ನು ಹೊಂದಿದ್ದು, ಕೆಂಪು ಮರಳು ಮಣ್ಣು ಮತ್ತು ಮಧ್ಯಮ ಕಪ್ಪು ಮಣ್ಣನ್ನು ಹೊಂದಿರುವುದರ ಜೊತೆಗೆ ವಾರ್ಷಿಕ ಸರಾಸರಿ ೭೦೫ ಸೆಂ.ಮೀ. ಮಳೆ ಬೀಳುತ್ತದೆ.

ಚಾಮರಾಜನಗರ ಜಿಲ್ಲೆಯು ಭತ್ತ, ಕಬ್ಬು. ರಾಗಿ, ಜೋಳ, ಬೆಳೆಕಾಳುಗಳು, ವಾಣಿಜ್ಯ ಬೆಳೆಗಳಾದ ಅರಿಶಿನ, ಶುಂಠಿ, ಬಾಳೆ, ಹತ್ತಿ, ಹಣ್ಣುಗಳು, ತರಕಾರಿ ಹಾಗೂ ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ತೆಂಗುಗಳತಹ ವೈವಿಧ್ಯಮಯ ಬೆಳೆ ಪದ್ಧತಿಗೆ ಹೆಸರುವಾಸಿಯಾಗಿದೆ. ಅದರ ಜೊತೆಗೆ ರೇಷ್ಮೆ ಕೃಷಿ, ಹೈನುಗಾರಿಕೆ, ಜೇನು ಸಾಕಣಿ, ಮೀನುಗಾರಿಕೆಯಂತಹ ಉದ್ಯಮಗಳನ್ನು ಒಳಗೊಂಡಿರುವುದಲ್ಲದೆ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವನ್ಯಜೀವಿ ಸೇರಿದಂತೆ ಪರಿಸರ ಪ್ರವಾಸೋದ್ಯಮದ ತಾಣವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಶಿಕ್ಷಣದ ಪ್ರಾಮುಖ್ಯತೆಯನ್ನು ಮನಗಂಡು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಚಾಮರಾಜನಗರದಲ್ಲಿ ಕೃಷಿ ಕಾಲೇಜು ಪ್ರಾರಂಭಿಸಲು ಸೂಕ್ತ ಸ್ಥಳವಾಗಿ ಆಯ್ಕೆ ಮಾಡಿದೆ. ಇದಲ್ಲದೆ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಬಲವಾದ ವಿಸ್ತರಣಾ ಸಂಪರ್ಕವಾದ ಕೃಷಿ ವಿಜ್ಞಾನ ಕೇಂದ್ರ, ಅಖಿ¯ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಗಳು (ಹತ್ತಿ ಮತ್ತು ಜೋಳ) ಚಾಮರಾಜನಗರದಲ್ಲಿ ಸ್ಥಾಪಿಸಿದೆ. ಈ ಕಾಲೇಜಿನಿಂದ ಕೃಷಿ ಪದವಿಯನ್ನು ಪಡೆಯುವ ವಿದ್ಯಾರ್ಥಿಗಳು ಉತ್ತಮ ಮಾನವಶಕ್ತಿಯಾಗಿ ಹೊರಹೊಮ್ಮುವುದರ ಜೊತೆಗೆ ಗ್ರಾಮೀಣ ಸಮುದಾಯದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಚಾಮರಾಜನಗರದಲ್ಲಿ ಕೃಷಿ ಮಹಾವಿದ್ಯಾಲಯು ೨೦೧೮ ರಲ್ಲಿ ಪ್ರಾರಂಭವಾಗಿದ್ದು ನಾಲ್ಕು(೪) ವರ್ಷಗಳ ಶೈಕ್ಷಣಿಕ ಸಾಧನೆಯನ್ನು ಯಶಸ್ವಿಯಾಗಿ ಪೂರೈಸಿದೆ. ಚಾಮರಾಜನಗರ , ಕೊಯಂಬತ್ತೂರು ರಸ್ತೆಯಲ್ಲಿ ನಗರದಿಂದ ೫ ಕಿ.ಮೀ. ಅಂತರದಲ್ಲಿ ಹರದನಹಳ್ಳಿ ಫಾರಂ ಎಂದು ಜನಪ್ರಿಯವಾಗಿದೆ. ಪ್ರಸ್ತುತ ನಾಲ್ಕು ತಂಡಗಳಿಂದ ೧೨೭ ಕೃಷಿ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಕೃಷಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಿಸಿರುವುದು ಅತ್ಯಂತ ಸೂಕ್ತವಾಗಿದ್ದು ಇಲ್ಲಿ ಪದವಿ ಹೊಂದುವ ವಿದ್ಯಾರ್ಥಿಗಳು ರೈತ ಸಮಯದಾಯಕ್ಕೆ ಒಂದು ಉತ್ತಮ ಆಶ್ರಿತವಾಗಿರುತ್ತಾರೆ.

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು