ಡಾ.ಎನ್.ಬಿ.ಪ್ರಕಾಶ್
ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು–560 065
+91 080-23330153 Extn. 285
ಕೃಷಿ ಶಿಕ್ಷಣದ ಈ ದೇಗುಲಕ್ಕೆ ಹೃತ್ಪೂರ್ವಕ ಸ್ವಾಗತ. ಬದಲಾಗುತ್ತಿರುವ ಕೃಷಿಯ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲಗಳ ಅವಶ್ಯಕತೆಗಳನ್ನು ಪೂರೈಸಲು ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಸ್ತರಿಸಿದೆೆ. ಕೃಷಿಯಲ್ಲಿ ನವೀನ ತಂತ್ರಜ್ಞಾನ-ಆಧಾರಿತ ಪದವಿ ಕಾರ್ಯಕ್ರಮಗಳು, ಕೃಷಿ ಮಾರುಕಟ್ಟೆ, ಕೃಷಿ ಜೈವಿಕ ತಂತ್ರಜ್ಞಾನ, ಕೃಷಿ ಇಂಜಿನಿಯರಿAಗ್, ಆಹಾರ ವಿಜ್ಞಾನ, ರೇಷ್ಮೆ ಕೃಷಿ ಪದವಿಗಳನ್ನು ರೂಪಿಸಲಾಗಿದೆ. ಸ್ನಾತಕೋತ್ತರ ಪದವಿಯನ್ನು ೨೬ ವಿಷಯಗಳಲ್ಲೂ ಮತ್ತು ಪಿಎಚ್‌ಡಿ ಪದವಿಗಳನ್ನು ಕೃಷಿ ವಿಜ್ಞಾನದ ೧೬ ವಿಷಯಗಳಲ್ಲಿ ನೀಡಲಾಗುತ್ತಿದೆ.
ಆರಂಭದ ದಿನಗಳಿಂದಲೂ ವಿಶ್ವವಿದ್ಯಾನಿಲಯವು ಶೈಕ್ಷಣಿಕ ಸಮಯದಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳಲ್ಲಿ ಕಾರ್ಯತಂತ್ರದ ಬೋಧನೆಯ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಸತ್ಪçಜೆಗಳು ಹಾಗೂ ಯಶಸ್ವಿ ವೃತ್ತಿಪರರನ್ನಾಗಿ ಮಾಡುವತ್ತ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಇದರ ಪರಿಣಾಮವಾಗಿ ನಮ್ಮ ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಐ.ಸಿ.ಎ.ಆರ್. ರಾಂಕ್ ಹಾಗೂ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ.
ವಿಶ್ವವಿದ್ಯಾನಿಲಯವು ಕ್ರಿಯಾತ್ಮಕ ಪಠ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಐ.ಸಿ.ಎ.ಆರ್.-ಐದನೇ ಡೀನ್ಸ್ ಸಮಿತಿಯ ಶಿಫಾರಸ್ಸುಗಳನ್ನು ೨೦೧೬-೧೭ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರುವ ಉದ್ದೇಶದಿಂದ ದೇಶದಲ್ಲಿ ಎಲ್ಲಾ ಪದವಿ ಕಾರ್ಯಕ್ರಮಗಳಿಗೆ ನಿರೂಪಿಸಿರುವಂತೆ ೧೮೩ ಕ್ರೆಡಿಟ್ಸ್ಗಳನ್ನು ಪದವಿ ಕಾರ್ಯಕ್ರಮಗಳಿಗೆ ಕಾರ್ಯಗತಗೊಳಿಸಲಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್, ದೈಹಿಕ ಶಿಕ್ಷಣ ಮತ್ತು ಯೋಗಾಭ್ಯಾಸಗಳನ್ನು ಪಠ್ಯ ಕ್ರಮದ ಭಾಗವಾಗಿ ಸೇರಿಸಲಾಗಿದೆ. ೨೦೧೬-೧೭ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಭಾಷಾ ಕೋರ್ಸ್ನೊಂದಿಗೆ ‘ವಿದ್ಯಾರ್ಥಿ ಖಇಂಆಙ’ (ಗ್ರಾಮೀಣ ವಾಣಿಜ್ಯೋದ್ಯಮ ಜಾಗೃತಿ ಮತ್ತು ಅಭಿವೃದ್ಧಿ ಯೋಜನೆ) ಕುರಿತು ಹೊಸ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ.
ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮಾಡಲು, ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರದ ಮುದ್ರಣ ಒಳಗೊಂಡAತೆ ಪ್ರವೇಶ ದಿನಾಂಕದಿAದ ಪದವಿಯವರೆಗಿನ ಎಲ್ಲಾ ಹಂತಗಳಲ್ಲಿ ‘ಅಂಡರ್ ಗ್ರಾಜುಯೇಟ್ ಮ್ಯಾನೇಜ್‌ಮೆಂಟ್’ (Uಉಂಒ) ತತ್ರಾಂಶವನ್ನು ಅಳವಡಿಸಿಕೊಂಡಿದೆ. ದೇಶದಲ್ಲಿ ಇದನ್ನು ಪ್ರಥಮ ಬಾರಿಗೆ ನಮ್ಮ ವಿಶ್ವವಿದ್ಯಾನಿಲಯವು ಕಾರ್ಯಗತಗೊಳಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಯವರು ತಮ್ಮ ವೃತ್ತಿಜೀವನದಲ್ಲಿ ಮಹತ್ತರವಾದ ಯಶಸ್ಸಿಗೆ ಗುಣಮಟ್ಟದ ಮೂಲಸೌಕರ್ಯಗಳನ್ನು ಬಳಸುತ್ತಾರೆಂದು ನಾನು ಭಾವಿಸುತ್ತೇನೆ.
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು