ನಮ್ಮನ್ನು ಕುರಿತು

ಸ್ಥಳ

ಈ ಮಹಾವಿದ್ಯಾಲಯವು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೇಂದ್ರಸ್ಥಾನದಲ್ಲಿದೆ.

ಐತಿಹ್ಯ

ಈ ಮಹಾವಿದ್ಯಾಲಯವು ೧೯೪೬ರಲ್ಲಿ ಆರಂಭವಾಯಿತು ಮತ್ತು ೧೯೬೪ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಘಟಕವಾಯಿತು. ಈ ಮಹಾವಿದ್ಯಾಲಯವು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬೋಧನಾಂಗದÀ ಪರಿವೀಕ್ಷಣೆಯಡಿಯಲ್ಲಿರುವ ಬೋಧನ ಕಾರ್ಯಕ್ರಮಗಳಿಗೆ ದಿಕ್ಸೂಚಿಯಾಗಿದೆ. ಈ ಮಹಾವಿದ್ಯಾಲಯವು ೧೯೬೬ರಲ್ಲಿ ೫ ವಿಭಾಗಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಪ್ರಸ್ತುತ ೨೩ ಸ್ನಾತಕೋತ್ತರ ಹಾಗೂ ೧೩ ಪಿಎಚ್‌ಡಿ ಪದವಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.

ಧ್ಯೇಯ

ರಾಜ್ಯ ಮತ್ತು ದೇಶದ ಜನತೆಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವುದು.

ಗುರಿಗಳು
  • ಬೌದ್ಧಿಕವಾಗಿ ಪ್ರೇರೇಪಿಸುವ ಆವರಣವನ್ನು ಸೃಷ್ಟಿಸುವುದು.
  • ರಾಜ್ಯದಲ್ಲಿ ಕೃಷಿ ಮತ್ತು ಸಂಬAಧಿಸಿದ ಚಟುವಟಿಕೆಗಳನ್ನು ಬೆಂಬಲಿಸಲು ತಾಂತ್ರಿಕ ಒತ್ತಾಸೆ ಮತ್ತು ಮಾನವಶಕ್ತಿಯನ್ನು ಒದಗಿಸುವುದು.
  • ಸ್ನಾತಕೋತ್ತರ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಮತ್ತು ಪರಸ್ಪರ ಬಲಪಡಿಸಲು ಕೌಶಲ್ಯಗಳನ್ನು ಯೋಜಿಸಿ ಕಾರ್ಯಗತಗೊಳಿಸುವುದು.
ಆಧ್ಯಯನ-ಆಡಳಿತ ಮಂಡಳಿ
  • ಈ ಮಹಾವಿದ್ಯಾಲಯವು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಕೃಷಿ ಬೋಧನಾಂಗ, ಕೃಷಿ ವ್ಯವಹಾರ ನಿರ್ವಹಣೆ ಹಾಗೂ ಆಹಾರ, ಪೋಷಣೆ ಮತ್ತು ಆಹಾರ ಪದ್ಧತಿ ಬೋಧನಾಂಗಗಳಿಗೆ ತಲಾ ಒಂದರಂತೆ ಮೂರು ಆಧ್ಯಯನ-ಆಡಳಿತ ಮಂಡಳಿಯನ್ನು ಹೊಂದಿದೆ.
ಬಾಹ್ಯ ಪರೀಕ್ಷಾ ಕೋಶ
  • 2024
ರ‍್ಯಾಗಿಂಗ್ ವಿರೋಧಿ ಕೋಶ
  • ಮಹಾವಿದ್ಯಾಲಯವು ಪ್ರತಿ ವರ್ಷ ರ‍್ಯಾಗಿಂಗ್ ವಿರೋಧಿ ಸಮಿತಿಯನ್ನು ರಚಿಸುತ್ತದೆ ಮತ್ತು ಆವರಣದಲ್ಲಿ ರ‍್ಯಾಗಿಂಗ್ ಅನ್ನು ಸಂಪೂರ್ಣವಾಗಿ ನಿಗ್ರಹಿಸುತ್ತದೆ ಎಂದು ಖಚಿತಪಡಿಸುತ್ತದೆ. ಸಮಿತಿಯು ಕೆಲಸದ ಸಮಯದಲ್ಲಿ ಮತ್ತು ತಡರಾತ್ರಿಯವರೆಗೂ ಆವರಣದಲ್ಲಿ ಮೇಲ್ವಿಚಾರಣೆ ಮಾಡಲು ಹಾಗೂ ಜಾಗೃತೆ ಹೊಂದಲು ರ‍್ಯಾಗಿಂಗ್ ವಿರೋಧಿ ತಂಡಗಳನ್ನು ರಚಿಸುತ್ತದೆ. ಇದರಿಂದಾಗಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ರ‍್ಯಾಗಿಂಗ್‌ಗೆ ತುತ್ತಾಗುವುದನ್ನು ಪರಿಣಾಕಾರಿಯಾಗಿ ತಡೆಗಟ್ಟುವುದಲ್ಲದೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಿದೆ.
  • ಆವರಣದಲ್ಲಿ ರ‍್ಯಾಗಿಂಗ್ ತಡೆಗಟ್ಟಲು ಪ್ರತಿ ವರ್ಷ ವಿವಿಧ ಶ್ರೇಣಿಯ ಅಧ್ಯಾಪಕರನ್ನೊಳಗೊಂಡ ರ‍್ಯಾಗಿಂಗ್ ವಿರೋಧಿ ಜಾಗೃತ ಸಮಿತಿ’ ಯನ್ನು ರಚಿಸಲಾಗುತ್ತದೆ. ಯಾರಾದರೂ ರ‍್ಯಾಗಿಂಗ್‌ನಲ್ಲಿ ತೊಡಗಿದ್ದಲ್ಲಿ ಈ ಕೆಳಗಿನ ಶಿಕ್ಷೆಗಳನ್ನು ರೂಪಿಸಲಾಗಿದೆ.• ಪ್ರವೇಶ ರದ್ದುಗೊಳಿಸುವುದು
    • ತರಗತಿಗಳಿಗೆ ಹಾಜರಾಗದಂತೆ ಅಮಾನತುಗೊಳಿಸುವುದು
    • ವಿದ್ಯಾರ್ಥಿ ವೇತನ/ಫೆಲೊಶಿಪ್/ಇತರೆ ಸವಲತ್ತುಗಳನ್ನು ತಡೆಹಿಡಿಯುವುದು ಅಥವಾ ಹಿಂಪಡೆಯುವುದು
    • ಯಾವುದೇ ಪರೀಕ್ಷೆ/ಮೌಲ್ಯಮಾಪನೆಯಿಂದ ಹೊರಹಾಕುವುದು
    • ಫಲಿತಾಂಶಗಳನ್ನು ತಡೆಹಿಡಿಯುವುದು
    • ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಯಾವುದೇ ರಾಷ್ಟಿçÃಯ/ಅಂತರರಾಷ್ಟಿçÃಯ ಕೂಟಗಳಿಂದ/ ಯುವಜನೋತ್ಸವಗಳಿಂದ ಹೊರಹಾಕುವುದು
    • ವಿದ್ಯಾರ್ಥಿನಿಲಯದಿಂದ ಹೊರಹಾಕುವುದು
    • ೧ ರಿಂದ ೨ ಸೆಮೆಸ್ಟರ್‌ಗಳವರೆಗೆ ವಿಶ್ವವಿದ್ಯಾನಿಲಯದಿಂದ ಉಚ್ಛಾಟಿಸುವುದು
    • ವಿಶ್ವವಿದ್ಯಾನಿಲಯದಿಂದ ಉಚ್ಛಾಟಿಸುವುದರ ಪರಿಣಾಮವಾಗಿ ಇತರೆ ಸಂಸ್ಥೆಗಳಲ್ಲಿ ಪ್ರವೇಶ ನಿರ್ಬಂಧಿಸುವುದು
    • ೨೫ ಸಾವಿರದಷ್ಟು ದಂಡ ವಿಧಿಸುವುದು
    • ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸುವುದು.
ಸಮಾಲೋಚನೆ
  • ಎಲ್ಲಾ ವಿದ್ಯಾರ್ಥಿಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಲು ಮಹಾವಿದ್ಯಾಲಯದ ಅಧ್ಯಾಪಕರನ್ನು ನಿಯೋಜಿಸಲಾಗಿದೆ. ಸಲಹೆಗಾರರು ನಿಯಮಿತವಾಗಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುತ್ತಾರೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸುತ್ತಾರೆ ಹಾಗೂ ಶೈಕ್ಷಣಿಕ ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರಿಗೆ ಬೆಂಬಲ ನೀಡುತ್ತಾರೆೆ.
ಕಲಿಕೆಯ ಸಂಪನ್ಮೂಲಗಳು
  • ಕಲಿಕೆಯ ಸಂಪನ್ಮೂಲಗಳು ಪ್ರಾಥಮಿಕವಾಗಿ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯ ಪ್ರಕ್ರಿಯೆಯನ್ನು ಸುಲಭಗೊಳಿಸುವ ಶೈಕ್ಷಣಿಕ ಸಾಧನಗಳಾಗಿವೆ. ಈ ಸಂಪನ್ಮೂಲಗಳು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಸರಳವಾಗಿ ಕಲಿಕೆಯ ಪ್ರಕ್ರಿಯೆಯನ್ನು ಕಲಿಸಲು ಅನುವು ಮಾಡಿಕೊಡುತ್ತವೆ.
ಬೋಧನಾಂಗದ ಗರಿಮೆಗಳು
  • ಅಧ್ಯಾಪಕರು ತಂತಮ್ಮ ವಿಷಯಗಳಲ್ಲಿ ಪರಿಣಿತಿ ಹೊಂದಲು ಬೋಧನೆ ಮತ್ತು ಸಂಶೋಧನೆಗೆ ಉಪಯುಕ್ತವಾಗಲು ನಿಯಮಿತ ತರಬೇತಿ ಕಾರ್ಯಕ್ರಮಗಳಗೆ ಒಳಗಾಗುತ್ತಾರೆ. ಅಧ್ಯಾಪಕರು ಆಯೋಜಿಸುವ ಅನೇಕ ಅಂತರರಾಷ್ಟಿçÃಯ ಸಮ್ಮೇಳನಗಳು/ಸೆಮಿನಾರ್‌ಗಳು ವಿದ್ಯಾರ್ಥಿಗಳಿಗೆ ವಿವಿಧ ಅಂತರರಾಷ್ಟಿçÃಯ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು, ಅವಕಾಶಗಳನ್ನು ಒದಗಿಸಲು ಸಹಾಯ ಮಾಡುತ್ತಿವೆ. ಅಧ್ಯಾಪಕರು ಬಾಹ್ಯ ಅನುದಾನಿತ ಪ್ರಾಯೋಜನೆಗಳ ಸಹಾಯದಿಂದ ವಿಶ್ವವಿದ್ಯಾನಿಲಯದ ಮೂಲಸೌಕರ್ಯಗಳನ್ನು ಸುಧಾರಿಸಲು ಸಹಾಯ ಮಾಡುವುದರ ಜೊತೆಗೆ ವಿದ್ಯಾರ್ಥಿಗಳು ಸುಧಾರಿತ ಉಪಕರಣಗಳು ಮತ್ತು ನವೀನ ತಂತ್ರಜ್ಞಾನಗಳಿಗೆ ತೆರೆದುಕೊಳ್ಳಲು ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದಾರೆ.
ಬೋಧನ ವಿಧಾನಗಳು ಮತ್ತು ನೆರವಿನ ಬಳಕೆ
  • ಬೋಧನಾ-ಕಲಿಕೆ ಪ್ರಕ್ರಿಯೆಯು ಗಣಕಯಂತ್ರಗಳು, ಪ್ರೊಜೆಕ್ಟರ್‌ಗಳು, ವೈರ್‌ಲೆಸ್ ಮೈಕ್ರೊಫೋನ್‌ಗಳು ಮತ್ತು ಸ್ಪೀಕರ್‌ಗಳೊಂದಿಗೆ ಸುಸಜ್ಜಿತವಾಗಿರುವ ಸಾಂಪ್ರದಾಯಿಕ ತರಗತಿಗಳ ಮೂಲಕ ನಡೆಸಲಾಗುತ್ತದೆ. ಈ ಸೌಲಭ್ಯವು ಅಧ್ಯಾಪಕರಿಗೆ ವಿಡಿಯೋ ಕ್ಲಿಪ್‌ಗಳು ಮತ್ತು ಪವರ್ ಪಾಯಿಂಟ್‌ಗಳ ಪ್ರಸ್ತುತಿಯಿಂದ ವಿಷಯವನ್ನು ಕಲಿಸಲು ಸಹಾಯ ಮಾಡುತ್ತದೆ. ಇತರ ಬೋಧನ ವಿಧಾನಗಳಲ್ಲಿ ಸೂಕ್ತವಾದ ತತ್ರಾಂಶಗಳು ಮತ್ತು ಮಲ್ಟಿಮೀಡಿಯಾಗಳನ್ನು ಬಳಸಿ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ತರಬೇತಿ, ವಿಶೇಷ ಉಪನ್ಯಾಸಗಳು, ಸೆಮಿನಾರ್‌ಗಳು, ಮನೆಕೆಲಸ, ಕ್ಷೇತ್ರಕೆಲಸ, ಅಧ್ಯಯನ ಪ್ರವಾಸಗಳು, ಮತ್ತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುತ್ತದೆ.
ಇ-ಟಿಪ್ಪಣಿಗಳು
  • ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಕೆಲವು ನಿಗದಿತ ಕೋರ್ಸ್ಗಳಿಗೆ ಇ-ಟಿಪ್ಪಣಿಗಳನ್ನು ಅಧ್ಯಾಪಕರು ಸಿದ್ಧಪಡಿಸಿದ್ದಾರೆ ಮತ್ತು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ ಹಾಗೂ ಇವುಗಳು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಲಭ್ಯವಿವೆ. ಕೋರ್ಸ್ ಆರಂಭದಲ್ಲಿಯೇ ಉಪನ್ಯಾಸಗಳ ವೇಳಾಪಟ್ಟಿ ಮತ್ತು ಉಲ್ಲೇಖ ಸಾಮಗ್ರಿಗಳ ಪಟ್ಟಿಯನ್ನೂ ತಿಳಿಸಲಾಗುತ್ತದೆ. ತರಗತಿಗಳಲ್ಲಿ ಮತ್ತು ವಿಷಯಗಳ ಬೋಧನ ಸಮಯದಲ್ಲಿ ಉಪನ್ಯಾಸಗಳ ರೂಪುರೇಷೆಗಳು, ಸಾರಾಂಶ, ಲೇಖನಗಳು ಮತ್ತು ಪ್ರಾಯೋಗಿಕ ಕೈಪಿಡಿಗಳನ್ನು ಒದಗಿಸಲಾಗುತ್ತದೆ.
ಪೂರೈಕೆಗಳು
  • ರೈತರು ಮತ್ತು ರೈತ ಸಮುದಾಯವು ವಿವಿಧ ಕೃಷಿ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳನ್ನು ಗುರುತಿಸುವುದು ಹಾಗೂ ನಿರ್ವಹಿಸುವುದು.
  • ರೈತರು ಮತ್ತು ಕೃಷಿ-ಆಧಾರಿತ ಕೈಗಾರಿಕೆಗಳು ಎದುರಿಸುವ ಸಮಸ್ಯೆಗಳು/ವಿಷಯಗಳಿಗೆ ಸಂಬAಧಿಸಿದAತೆ ಮುಂಜಾಗ್ರತೆಯ, ಉತ್ತೇಜನಕಾರಿ ಮತ್ತು ಗುಣಪಡಿಸುವ ಕ್ರಮಗಳನ್ನು ಅಧ್ಯಯನ ಮಾಡುವುದು.
  • ಸಮಾಜ ಮತ್ತು ಪರಿಸರ ವ್ಯವಸ್ಥೆಯ ಕ್ಷೇಮಾಭ್ಯುದಯಕ್ಕೆ ಸಂಬAಧಿಸಿದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಪರಿಸರದ ಅಂಶಗಳನ್ನು ಶ್ಲಾಘಿಸಿಸುವ ಹಾಗೂ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸುವಾಗ ರೈತರ ಬಗ್ಗೆ ಸಹಾನುಭೂತಿಯ ಮನೋಭಾವವನ್ನು ಬೆಳೆಸಿಕೊಳ್ಳವುದು.
  • ಕೃಷಿ/ಪಶುಸಂಗೋಪನೆಗೆ ಸಂಬAಧಿಸಿದ ವಿವಿಧ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಕಾರ್ಯಕ್ರಮಗಳು/ನೀತಿಗಳ ಪರಿಚಯ ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ಅರಿವನ್ನು ಹೊಂದಿರುವುದು.
  • ಅಗತ್ಯ ಕೌಶಲ್ಯಗಳನ್ನು ಗಳಿಸುವುದರ ಜೊತೆಗೆ ಕ್ಷಿಪ್ರವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳನ್ನು ಬಳಸುವತ್ತ ಸ್ವಯಂ ಕಲಿಕೆಯ ಮನೋಭಾವವನ್ನು ಅಭಿವೃದ್ಧಿಗೊಳಿಸುವುದು.
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು