Title Image

ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ ಸಂಸ್ಥೆ

ಬೇಕರಿ ಮತ್ತು ಮೌಲ್ಯವರ್ಧನಾ ಕೇಂದ್ರ ವನ್ನು ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ಎಂದು ಮರುನಾಮಕರಣಗೊಳಿಸಿದ್ದು, ನೂತನ ಕಟ್ಟಡವನ್ನು ೧೮.೧೦.೨೦೨೩ ರಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿರುತ್ತಾರೆ


ಪರಿಚಯ

ಬೇಕರಿ ಒಂದು ಬೃಹತ್ ಉದ್ದಿಮೆಯಾಗಿ ಪ್ರಪಂಚದಾದ್ಯAತ ಶರವೇಗದಲ್ಲಿ ಬೆಳೆಯುತ್ತಿದ್ದು, ಸ್ವಯಂ ಉದ್ಯೋಗಾಕಂಕ್ಷಿಗಳಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಬೇಕರಿ ತರಬೇತಿ ಕೇಂದ್ರವು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದಲ್ಲಿ ೧೯೬೮ ರಲ್ಲಿ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಯು. ಎಸ್. ವೀಟ್. ಅಸೋಸೀಯೇಟ್ಸ್, ನವದೆಹಲಿಯವರು ಕೌಶಲ್ಯ ತರಬೇತಿಯನ್ನು ಉತ್ತೇಜಿಸುವ ಸಲುವಾಗಿ ಆರ್ಥಿಕ ನೆರವು ನೀಡುವುದರ ಮೂಲಕ ಯಂತ್ರೋಪಕರಣಗಳ ವ್ಯವಸ್ಥೆ ಕಲ್ಪಿಸಿತು. ಪ್ರಾರಂಭದಲ್ಲಿ ಮಹಿಳೆಯರಿಗಾಗಿ ಮೂರು ದಿನಗಳ ಬೇಕರಿ ತಿನಿಸುಗಳ ತಯಾರಿಕಾ ತರಬೇತಿ ಪ್ರಾರಂಭಿಸಿದ್ದು, ಕ್ರಮೇಣ ತಂತ್ರಜ್ಞಾನ ಆಧಾರಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಂತರ ಈ ಸಂಸ್ಥೆಯು ಅವಶ್ಯತೆಗನುಸಾರವಾಗಿ ಯುವಕ ಹಾಗೂ ಯುವತಿಯರನ್ನು ಕೌಶಲ್ಯದಲ್ಲಿ ಸ್ವಾವಲಂಬಿಗಳಾಗಿಸಲು ಬೇಕಾದ ತಂತ್ರಜ್ಞಾನ ಆಧರಿಸಿ ಹಂತ ಹಂತವಾಗಿ ವಿವಿಧ ಕಾಲಾವಧಿಯ ತರಬೇತಿ ಕಾರ್ಯಕ್ರಮಗಳನ್ನು ಆಳವಡಿಸಿಕೊಳ್ಳುತ್ತಾ ಬಂದಿದೆ.ಪ್ರಯೋಗಾಲಯದಲ್ಲಿ ಬೇಕರಿ ಉತ್ಪನ್ನಗಳನ್ನು ಕೌಶಲ್ಯ ತರಬೇತಿಯ ಮೂಲಕವೇ ಸಾಮರ್ಥ್ಯ ಬಲವರ್ದನೆ ಮಾಡಲಾಗುತ್ತಿದೆ. ಇದರ ಮೂಲ ಉದ್ದೇಶವು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಉದ್ದಿಮೆಯ ಎಲ್ಲಾ ಹಂತದ ಅರಿವು ಮೂಡುವಂತೆ ಸಮರ್ಥವಾಗಿ ತಿಳಿಸಿಕೊಡುವುದು.

ಸ್ವಯಂ ಉದ್ದಿಮೆಯ ಆಕಾಂಕ್ಷಿಗಳ ಅವಶ್ಯಕತೆಗೆ ತಕ್ಕಂತೆ ಕೈಗಾರಿಕೋದ್ದಿಮಿಗಳು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಯೋಜನೆಗಳ ಮುಖಾಂತರವೂ, ವಿವಿಧ ಗುಂಪಿನ ಜನತೆಗೆ ತರಬೇತಿ ಒದಗಿಸುತ್ತಿದೆ. ಸ್ವಯಂ ಉದ್ಯೋಗ ಹಂಬಲಿಸಿದ ಯುವಕ/ಯುವತಿಯರು ಬೇಕರಿ ಕೈಗಾರಿಕೆಗಳಲ್ಲಿ ನೌಕರಿ ಪಡೆದಿದ್ದಾರೆ. ಇನ್ನು ಕೆಲವರು ಸ್ವಂತ ಉದ್ದಿಮೆ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಭಾರತದೆಲ್ಲೆಡೆ ವಿವಿಧ ಕೇಂದ್ರಗಳಲ್ಲಿ/ವಿಶ್ವವಿದ್ಯಾನಿಲಯಗಳಲ್ಲಿ ತರಬೇತಿದಾರರಾಗಿದ್ದಾರೆ, ಪಾಶ್ಚಾತ್ಯ ದೇಶಗಳಲ್ಲಿನ ಕೈಗಾರಿಕೆಗಳಲ್ಲಿ, ಭಾರತೀಯ ನೌಕಾದಳ/ವಿಮಾನ/ಪಂಚತಾರ ಹೋಟೆಲ್ಗಳ ಬೇಕರಿ ಘಟಕಗಳಲ್ಲಿ ಸ್ಥಾನ ಗಳಿಸಿದ್ದಾರೆ. ಇತ್ತೀಚಿಗೆ “ಕ್ಯಾಂಪಸ್ ರೆಕ್ರೂಟ್ಮೆಂಟ್” ವ್ಯವಸ್ಥೆಯ ಮೂಲಕವೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳಡಿ, ಯುವಕರ ಗುಂಪು, ಸ್ವಸಹಾಯ ಗುಂಪಿನ ಮಹಿಳೆಯರು; ಸ್ವಯಂ ನಿವೃತ್ತಿ ಪಡೆದಿರುವ ಪುರುಷ, ಮಹಿಳೆಯರಿಗೂ ಸ್ವಯಂ ಉದ್ಯೋಗಾಕಾಂಕ್ಷಿ ಎನ್.ಜಿ.ಒ ಮಹಿಳೆಯರು, ಸ್ಪಾಸ್ಟಿಕ್ ಸೊಸೈಟಿಯ ಸದಸ್ಯರು, ಹೀಗೆ ನಾನಾ ಗುಂಪಿನವರ ಅಗತ್ಯಕ್ಕನುಸಾರವಾಗಿ ತರಬೇತಿ ಪಠ್ಯ ಹಾಗೂ ಪ್ರಾಯೋಗಿಕ ಕೌಶಲ್ಯತೆಯನ್ನು ಮಾರ್ಪಡಿಸಿ ಸೌಲಭ್ಯ ಒದಗಿಸಲಾಗಿದೆ. ಇತರ ರಾಜ್ಯಗಳ ಕೈಗಾರಿಕೆ ಅಭಿವೃದ್ಧಿ ಕೇಂದ್ರಗಳ (ಅಸ್ಸಾಂ) ಆರ್ಥಿಕ ನೆರವಿನಿಂದ ಇತರ ರಾಜ್ಯದ ಯುವಕರಿಗೂ ಬೇಕರಿ ತರಬೇತಿ ಒದಗಿಸಲಾಗಿದೆ. ವಿವಿಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನತೆಯ ಸೌಕರ್ಯಕ್ಕಾಗಿ ಪ್ರಾತ್ಯಕ್ಷಿಕೆಗಳನ್ನೂ; ಬೇಕರಿ ತಿನಿಸುಗಳ ವಸ್ತು ಪ್ರದರ್ಶನ, ಸ್ಪರ್ಧೆಗಳನ್ನೂ ನೆರೆವೇರಿಸುವಲ್ಲಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ನಿರಂತರವಾಗಿ ಭಾಗವಹಿಸುತ್ತದೆ.

೨೦೦೬ ರಿಂದ ಈಚೆಗೆ ಈ ಕೇಂದ್ರದ ಚಟುವಟಿಕೆಯಲ್ಲಿ ‘ಆಹಾರ ಮೌಲ್ಯವರ್ಧನೆ’ ಸೇರ್ಪಡೆಗೊಂಡಿದೆ. ‘ಆಹಾರ ಸಂಸ್ಕರಣೆ ’ ಸ್ವಯಂ ಉದ್ಯೋಗಿಗಳ ಗಮನ ಸೆಳೆದಿರುವುದನ್ನು ಗಮನದಲ್ಲಿಟ್ಟುಕೊಂಡು, ವಿಶ್ವವಿದ್ಯಾನಿಲಯವು “ಭಾರತ ಸರ್ಕಾರ ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆ ಸಚಿವಾಲಯ”, ಪ್ರಾಯೋಜಿತ ಯೋಜನೆಯ ಆರ್ಥಿಕ ಸಹಾಯದಲ್ಲಿ “ಫುಡ್ ಪ್ರೊಸೆಸಿಂಗ್ ಮತ್ತು ಟ್ರೆöÊನಿಂಗ್ ಸೆಂಟರ್’ ವಿಭಾಗವನ್ನೂ ಈ ಕೇಂದ್ರದಲ್ಲಿ ಪ್ರಾರಂಭಿಸಿದೆ.ಈ ಕೇಂದ್ರವು ಆಹಾರ ತಂತ್ರಜ್ಞಾನ ಸಂಶೋಧನೆಯ ನಿಟ್ಟಿನಲ್ಲಿಯೂ ನಿರಂತರವಾಗಿ ಕೈಜೋಡಿಸಿ ತರಬೇತಿಯನ್ನು ನೀಡುತ್ತಿದೆ. ಇದರಲ್ಲಿ ಧಾನ್ಯಗಳ ಸಂಸ್ಕರಣೆ; ಹಣ್ಣು ತರಕಾರಿಗಳ ಸಂಸ್ಕರಣೆ; ಸೋಯಾ ಅವರೆ ಸಂಸ್ಕರಣೆ; ಹೀಗೆ ಸಂಸ್ಕರಿಸಿ, ಶೇಖರಿಸಿ “ಆಹಾರ ಸಂಸ್ಕರu ೆ’ ಯ ಉದ್ದಿಮೆ ಹಮ್ಮಿಕೊಳ್ಳಲು ಆಶಿಸುವವರಿಗೆ ತರಬೇತಿ ಒದಗಿಸಲಾರಂಭಿಸಿದೆ. ರಾಗಿ ಆಧಾರಿತ ತಿನಿಸುಗಳ ತಯಾರಿಕೆ, ಮುಸುಕಿನ ಜೋಳದ ತಿನಿಸುಗಳು, ಸಾಂಬಾರ ಪದಾರ್ಥಗಳ ಮಿಶ್ರಣ ತಯಾರಿಕೆ ತರಬೇತಿ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.

ಈ ಎಲ್ಲಾ ಚಟುವಟಿಕೆಗಳನ್ನು ಪರಿಶೀಲಿಸಿ “ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆ ಸಚಿವಾಲಯ” ಭಾರತ ಸರ್ಕಾರವು, ಮಾರ್ಚ್ ೨೦೦೮ ರಲ್ಲಿ ಈ ತರಬೇತಿ ಕೇಂದ್ರಕ್ಕೆ “ರಾಷ್ಟಿಯ ಉತ್ಪಾದನಾ ಪರಿಷತ್ನ ಪ್ರಶಸ್ತಿ” ನೀಡಿ ಗೌರವಿಸಿದ

ಸಂಸ್ಥೆಯ ದೃಷ್ಟಿಕೋನ

ಮೌಲ್ಯಭರಿತ ಜ್ಞಾನ ಒದಗಿಸಿ, ನಿರಂತರವಾಗಿ ಹೆಚ್ಚು ಗುಣಮಟ್ಟದ ಉತ್ಪನ್ನಗಳ ತಯಾರಿಕೆಯ ಬಗ್ಗೆ ಎಲ್ಲಾ ಶಿಕ್ಷಣಾರ್ಥಿಗಳಿಗೆ (ಬೇಕರಿ ಉದ್ಯಮಿಗಳು, ಗೃಹಣಿಯರು ಮತ್ತು ಬೇಕರಿ ಮಾಲೀಕರು) ಅತ್ಯುತ್ತಮ ಸೇವೆ ಒದಗಿಸುವ ವಿಶ್ವಾಸಾರ್ಹತೆ ಹಾಗೂ ಭಾರತೀಯ ಅತ್ಯುತ್ತಮ ನಿರ್ವಹಣೆಯ ಬೇಕರಿ ಮತ್ತು ಸಂಸ್ಕರಣಾ ಸಲಹೆಗಾರ ಸಂಸ್ಥೆಯಾಗಿ ಕಾರ್ಯಚರಣೆ..

ಸಂಸ್ಥೆಯ ಗುರಿ

ತತ್ವ ಮತ್ತು ಸೇವೆಯಲ್ಲಿನ ಬದ್ಧತೆಯ ಮೂಲಕ ಪ್ರಬಲ ಹಾಗೂ ಸ್ಥಿರ ಉತ್ಪಾದನಾ ಪದ್ಧತಿಗಳನ್ನು ಅಳವಡಿಸಿಕೊಂಡು ಸಮರ್ಥನೀಯ ಆರ್ಥಿಕ ಮೌಲ್ಯವನ್ನು ಎತ್ತಿ ಹಿಡಿಯುವ ಬೇಕರಿ ಮಾಲೀಕರು ಮತ್ತು ಬೇಕರಿ ಪೂರೈಕೆದಾರರ ಸೃಷ್ಟಿ.

ಕೇಂದ್ರದ ಗುಣಮಟ್ಟದ ನೀತಿ :

ಧ್ಯೇಯೋದ್ದೇಶಗಳು

  • ಬೇಕರಿ ಉದ್ದಿಮೆ ಹಾಗೂ ಮೌಲ್ಯವರ್ಧನೆ ಬಗ್ಗೆ ಮೂಲಭೂತ ಜ್ಞಾನವನ್ನು ಒದಗಿಸುವುದು.
  • ಬೇಕರಿ ಕಚ್ಚಾಪದಾರ್ಥಗಳ ಬಗ್ಗೆ ತಿಳುವಳಿಕೆ ನೀಡುವುದು
  • ಬೇಕರಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಬಗ್ಗೆ ಪ್ರಾಯೋಗಿಕ ತರಬೇತಿ ಒದಗಿಸುವುದು.
  • ಆಹಾರ ಸ್ವಚ್ಛತೆ, ನೈರ್ಮಲ್ಯ ಮತ್ತು ಸುರಕ್ಷತೆ ಪರಿಪಾಲನೆ ಬಗ್ಗೆ ತಿಳುವಳಿಕೆ ನೀಡುವುದು
  • ಬೇಕರಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಉದ್ದಿಮೆಗಳಲ್ಲಿ ವೆಚ್ಚ ಲಾಭ ಕುರಿತು ಆರ್ಥಿಕ ಲೆಕ್ಕಚಾರದ ನಿರ್ವಹಣೆ ಬಗ್ಗೆ ಮಾಹಿತಿ ನೀಡುವುದು
  • ಆರ್ಥಿಕ ಸಬಲೀಕರಣಕ್ಕಾಗಿ ಬೇಕರಿ ಹಾಗೂ ಮೌಲ್ಯವರ್ಧಿತ ಉದ್ದಿಮೆಗಳನ್ನು ಉತ್ತೇಜಿಸುವುದು
  • ಅರೆಸ್ವಯಂಚಾಲಿತ ಘಟಕವನ್ನು ನಿರ್ವಹಿಸುವ ತರಬೇತಿ ನೀಡುವುದು
  • ಸಂಭಾವ್ಯ ಉದ್ಯಮಿಗಳ ಅಭಿವೃದ್ಧಿಗಾಗಿ ತಾಂತ್ರಿಕ ಬೆಂಬಲ ಒದಗಿಸುವುದು
  • ಆಹಾರ ಉದ್ಯಮಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲಗಳ ಪೂರೈಕೆ ಮಾಡುವುದು
  • ಬೇಕರಿ ಮತ್ತು ಮೌಲ್ಯವರ್ಧನೆಯ ಉದ್ಯಮಗಳ ಗ್ರಾಮಿಣೀಕರಣ

ವೈಶಿಷ್ಯತೆಗಳು:

ಪ್ರಯೋಗಾಲಯದಲ್ಲಿ ಬೇಕರಿ ಉತ್ಪನ್ನಗಳನ್ನು ಕೌಶಲ್ಯ ತರಬೇತಿಯ ಮೂಲಕವೇ ತಯಾರಿಸಿ, ಲಾಭನಷ್ಟವಿಲ್ಲದ ಸಮತೋಲನ ಬೆಲೆಯಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಇದರ ಮೂಲ ಉದ್ದೇಶವು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಉದ್ದಿಮೆಯ ಎಲ್ಲಾ ಹಂತದ ಅರಿವು ಮೂಡುವಂತೆ ಸಮರ್ಥವಾಗಿ ತಿಳಿಸಿಕೊಡುವುದು.

ತರಬೇತಿ ಕಾರ್ಯಕ್ರಮಗಳು:

  • ೧೪-ವಾರದ ಬೇಕರಿ ತಂತ್ರಜ್ಞಾನ ತರಬೇತಿ- ವಾಣಿಜ್ಯ ಉದ್ದೇಶಕ್ಕಾಗಿ
  • ೪-ವಾರದ ಬೇಕರಿ ತಿನಿಸು ತಯಾರಿ ತರಬೇತಿ – ಗೃಹ ಮಟ್ಟಕ್ಕೆ ಅಥವಾ ಹವ್ಯಾಸಕ್ಕಾಗಿ

ಕಡಿಮೆ ಅವಧಿ:

  • ಕೇಕ್ ಮತ್ತು ಕೇಕ್ ಅಲಂಕಾರ (೫ ದಿನಗಳು)
  • ಹೆಲ್ತ್ ಬೇಕರಿ ತಿನಿಸು (೫ ದಿನಗಳು )
  • ವಿಶೇಷ ಕೇಕ್ಗಳ ತಯಾರಿಕೆ (೩ ದಿನಗಳು)
  • ಮೊಟ್ಟೆ ರಹಿತ ಬೇಕರಿ ಪದಾರ್ಥಗಳ ತಯಾರಿಕೆ (೩ ದಿನಗಳು)
  • ಹಣ್ಣು ತರಕಾರಿಗಳ ಸಂಸ್ಕರಣೆ ತರಬೇತಿ (೨ ದಿನಗಳು
  • ಹಾಲು ಮತ್ತು ಹಾಲಿನ ಉತ್ಪನ್ನಗಳು (೩ ದಿನಗಳು)
  • ಸೋಯಾ ಅವರೆ ಆಧಾರಿತ ಆಹಾರ ಸಂಸ್ಕರಣೆ (೨ ದಿನಗಳು)
  • ಸಾಂಬಾರ್ ಪುಡಿಗಳ ತಯಾರಿಕೆ (೨ ದಿನಗಳು)
  • ರಾಗಿ /ತೃಣ ಧಾನ್ಯ ಆಧಾರಿತ ಬೇಕರಿ ತಿನಿಸು ತಯಾರಿ ತರಬೇತಿ (೩ ದಿನಗಳು)
  • ನೆಲ್ಲಿಕಾಯಿ ಪದಾರ್ಥಗಳ ತಯಾರಿಕೆ (೨ ದಿನಗಳು)
  • ಮಧುಮೇಹ ರೋಗಿಗಳಿಗೆ ಆಹಾರ ನಿರ್ವಹಣೆ(೨ ದಿನಗಳು)
  • ಚಾಟ್ ತಯಾರಿಕೆ (೨ದಿನಗಳು )
  • ಮೌಲ್ಯವರ್ಧಿತ ಬಿಸ್ಕತ್ತುಗಳ ತಯಾರಿಕೆ (೩ ದಿನಗಳು)

ಇತರೆ ಸೇವೆಗಳು:

  • ಹೊರಆವರಣ ರಬೇತಿ
  • ಪುನಶ್ಚೇತನ ತರಬೇತಿ ಕಾರ್ಯಕ್ರಮ
  • ಜ್ಞಾನವೃದ್ಧಿ ತರಬೇತಿ ಕಾರ್ಯಕ್ರಮ
  • ಪ್ರಾಯೋಜಿತ ತರಬೇತಿ ಕಾರ್ಯಕ್ರಮ
  • ಸಹಭಾಗಿತ್ವ ತರಬೇತಿ ಕಾರ್ಯಕ್ರಮ

ಸಂಭಾವ್ಯ ಉದ್ಯಮಿಗಳಿಗೆ ತಾಂತ್ರಿಕ ಬೆಂಬಲ ಮತ್ತು ಸಲಹೆ

  • ಯೋಜನೆಯ ಯೋಜನೆ ಮತ್ತು ಅನುಷ್ಠಾನದಲ್ಲಿ ಸಹಾಯ ಮಾಡುವುದು
  • ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಲೇಬಲಿಂಗ್
  • ಉತ್ಪನ್ನಗಳ ಪ್ರದರ್ಶನ ಸುರಕ್ಷತೆ, ನೈರ್ಮಲ್ಯ ಮತ್ತು ವೈಯಕ್ತಿಕ
  • ನೈರ್ಮಲ್ಯದ ಬಗ್ಗೆ ಮಾರ್ಗದರ್ಶನ
  • ಬುಕ್ ಕೀಪಿಂಗ್ ಇತ್ಯಾದಿ…
  • ಹಣಕಾಸು ಸಹಾಯಕ್ಕಾಗಿ ಬ್ಯಾಂಕ್‌ಗಳು, ಎನ್‌ಜಿಒಗಳು, ಕೈಗಾರಿಕೆಗಳೊಂದಿಗೆ ಸಂಪರ್ಕಗಳು.
  • ಆಹಾರ ಉದ್ಯಮಗಳಲ್ಲಿ ಉದ್ಯೋಗ ಉಲ್ಲೇಖಗಳು – ಪ್ಲೇಸ್‌ಮೆಂಟ್ ಸೆಲ್
  • ಉದ್ಯಮ ತಜ್ಞರಿಂದ ಅತಿಥಿ ಉಪನ್ಯಾಸಗಳು.
  • ವಿವಿಧ ಕೈಗಾರಿಕೆಗಳಿಗೆ ತರಬೇತಿ ಪಡೆದವರ ಭೇಟಿ – ಆಹಾರ ಕೈಗಾರಿಕೆಗಳು, ಬೇಕರಿ ಉಪಕರಣ ತಯಾರಕರು, ಸಂಶೋಧನಾ ಪ್ರಯೋಗಾಲಯಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಬೇಕರಿಗಳು.
ಸಾಧನೆಗಳು
  • ರಾಷ್ಟ್ರೀಯ ಉತ್ಪಾದನಾ ಮಂಡಳಿ ಪ್ರಶಸ್ತಿ ವಿಜೇತ ಘಟಕ
  • ಪ್ರಪ್ರಥಮ ಬಾರಿಗೆ ಕೇಂದ್ರದಿದ ಬೇಕರಿ ರಾಷ್ಟಿಯ ಸಮ್ಮೇಳನ ಆಯೋಜನೆ
  • ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬೇಕರಿ ಘಟಕದ ಸ್ಥಾಪನೆ
  • ವಿಕಲಚೇತನರಿಗೆ ತರಬೇತಿ
  • ಸ್ವಸಹಾಯ ಗುಂಪುಗಳಿಗೆ, ನರ್ಸಿಂಗ್ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ತರಬೇತಿ
  • ಬುಡಕಟ್ಟು ಪಂಗಡದವರಿಗೆ ಆಹಾರ ಸಂಸ್ಕರಣೆಯಲ್ಲಿ ತರಬೇತಿ
  • ತರಬೇತಿ ಪಡೆದವರಿಗೆ ಶೇ.೧೦೦ರಷ್ಟು ಉದ್ಯೋಗವಕಾಶ ದೊರಕಿಸಿರುವುದು
  • ಬೇಕರಿ ಮತ್ತು ಆಹಾರ ಸಂಸ್ಕರಣೆಯಲ್ಲಿ ಉದ್ದಿಮೆದಾರರನ್ನು ರೂಪಿಸಿರುವುದು
  • ತಾಂತ್ರಿಕ ಸಲಹೆ ಮತ್ತು ಸೇವೆ
  • ಉದ್ದಿಮೆದಾರರ ಸ್ಥಳದಲ್ಲೇ ತರಬೇತಿ

ಸಿಬ್ಬಂದಿ

ಡಾ.ಸವಿತಾ ಎಸ್.ಮಂಗನವರ
ಸಹಕಾರ್ಯದರ್ಶಿ
+8722244999
ಡಾ|| ಎ.ಅಶ್ವಿನಿ
ಸಹಾಯಕ ಪ್ರಾಧ್ಯಾಪಕರು
+09731164357
ಡಾ|| ಪ್ರಕೃತಿ ಎನ್. ರಾಜ್
ಸಹಾಯಕ ಪ್ರಾಧ್ಯಾಪಕರು
bakery.uas@gmail.com
prakruthi84@gmail.com
+9740618692
ಶ್ರೀಮಹೇಶ್ಬಿ
ಬೇಕರಿನರ್ವಾಹಕ
+09591827553
ಶ್ರೀವಿನಾಯಕ್
ಬೇಕರಿನರ್ವಾಹಕ
+07259866404
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು