Title Image

ಅಖಿಲ ಭಾರತ ಸುಸಂಘಟಿತ ಶುಷ್ಕ ದ್ವಿದಳ ಬೆಳೆಗಳು ಪ್ರಾಯೋಜನೆ,ಜಿಕೆವಿಕೆ, ಕೃ.ವಿ.ವಿ

ಪ್ರಾಯೋಜನೆ / ಘಟಕ : ಅಖಿಲ ಭಾರತ ಸುಸಂಘಟಿತ ಶುಷ್ಕ ದ್ವಿದಳ ಬೆಳೆಗಳು
ಕಾರ್ಯ ಸ್ಥಾನ : ಜಿಕೆವಿಕೆ, ಬೆಂಗಳೂರು೬೫
ಘಟಕ/ ಪ್ರಾಯೋಜನೆ ಆರಂಭವಾದ ವರ್ಷ: 1995
ಉದ್ದೇಶಗಳು :

 ಬೆಳೆ ಅಭಿವೃದ್ಧಿ  :

· ಕಡಿಮೆ ಮಳೆ ಬೀಳುವ ಅಥವಕಡಿಮೆ ಮಣ್ಣಿನ ತೇವಾಂಶ ಪ್ರದೇಶಗಳಿಗೆ ಉತ್ತಮ ಅಲಸಂದೆ ಹಾಗು ಹುರುಳಿ ತಳಿಗಳನ್ನು ಅಭಿವೃದ್ಧಿ ಪಡಿಸುವುದು

· ಉತ್ತಮ ಹವಾಮಾನ ಸನ್ನಿವೇಶಗಳ ಬಳಕೆಗೆ ಹಾಗೂ ವಿವಿಧ ಬೆಳೆ ಪದ್ದತಿಗಳಿಗೆ ಮತ್ತುಅಧಿಕ ಒಳಹರಿವುಗಳುಳ್ಳ ಪ್ರದೇಶಗಳಿಗೆ ಸೂಕ್ತವಾದ ತಳಿಗಳನ್ನು ಅಭಿವೃದ್ಧಿಪಡಿಸುವುದು

· ಬರದ ಪರಿಸ್ಥಿತಿಗಳಿಂದ ಪಾರಾಗಲು ಅಲಸಂದೆ ಹಾಗು ಹುರುಳಿಯಲ್ಲಿ ಅಲ್ಪಾವಧಿ ತಳಿಗಳನ್ನು ಅಭಿವೃದ್ಧಿಪಡಿಸುವುದು

· ಏಕ ಬೆಳೆ ಪದ್ದತಿಗೆ, ಸುಧೀರ್ಘಕಾಲಾವಧಿಗೆ ಹೊಂದಿಕೊಳ್ಳುವಂತ ಮತ್ತು ವಿವಿಧರೈತ ಸಮೂಹದಆಶಯಕ್ಕೆ ಹೊಂದುವಂತಹ ತಳಿಗಳ ಅಭಿವೃದ್ಧಿಪಡಿಸುವುದು

ಉತ್ಪಾದನೆ :

Ø  ಆಫ್ ಸೀಸನ್‌ಗಾಗಿ (ಮಾನ್ಸೂನ್ ಮಳೆಯ ಮುಂಚಿತ ಆರಂಭ ಮತು ತಡವಾದ ಆರಂಭ), ಕಳಪೆ ಒಳಹರಿವು ಮತ್ತು ಉತ್ತಮ ಒಳಹರಿವು ಸನ್ನಿವೇಶಗಳಿಗೆ ಉತ್ಪಾದನಾ ತಂತ್ರಜ್ಞಾನಗಳ ಅಭಿವೃದ್ಧಿ.

Ø  ಸ್ಥಳ ನಿರ್ದಿಷ್ಠ ಸನ್ನಿವೇಶಗಳಿಗೆ ಮತ್ತು ವಿವಿಧ ಬೆಳೆ ಪದ್ಧತಿಗಳಿಗೆ ಸಂಬಂಧಿಸಿದಂತೆ ತೃಪ್ತಿದಾಯಕ ಇಳುವರಿ ಉತ್ಪಾದನೆಗಳ ಸಾಕ್ಷಾತ್ಕಾರದಲ್ಲಿ ಪ್ರಮುಖ ಉತ್ಪಾದನಾ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಿವುದು.

Ø  ಬಿಡುಗಡೆಯಾದ ಅಥವಾ ಬಿಡುಗಡೆ ಹಂತದಲ್ಲಿರುವ ತಳಿಗಳ ಕೃಷಿ ಅಗತ್ಯತೆಗಳನ್ನು ಅಭಿವೃದ್ಧಿಪಡಿಸುವುದು.

Ø  ಮಣ್ಣಿನತೇವಾಂಶ, ಭೂಮಿ ಮತ್ತು ಸಮಯದ ಪ್ರತಿಯುನಿಟ್‌ಗೆ ಸಂಬಂಧಿಸಿದಂತೆ ಉತ್ಪಾದನೆಯನ್ನು ಅಧಿಕ ಗೊಳಿಸುವ ವಿಧಾನಗಳ ಅಭಿವೃದ್ಧಿ ಮತ್ತು ನವೀನ ವಿಧಾನಗಳನ್ನು ಅವಿಷ್ಕಾರ ಮಾಡುವುದು.

ಸಂಶೋಧನಾ ಕಾರ್ಯಕ್ರಮಗಳು :

§ ಅಲಸಂದೆ ಹಾಗು ಹುರುಳಿಯಲ್ಲಿ ಸಸ್ಯತಳಿ ಅಭಿವೃದ್ದಿ ಕರ‍್ಯಕ್ರಮಗಳು

§ ವಿವಿಧ ಕೃಷಿ ಹವಾಮಾನ ವಲಯಗಳಲ್ಲಿ ಕಡಿಮೆ ಅವಧಿಯ ಶುಷ್ಕ ದ್ವಿದಳ ಬೆಳಗಳ ಕ್ಷೇತ್ರ ಪ್ರಯೋಗಗಳನ್ನು ವಿವಿಧ ಬೆಳೆ ಪರಿಸ್ಥಿತಿಗಳಲ್ಲಿ ವಿಶ್ಲೇಷಣೆ ಮಾಡುವುದು

§  ಅಲಸಂದೆ ಮತ್ತು ಹುರುಳಿಯನ್ನು ಪ್ರಚಲಿತದಲ್ಲಿರುವ ಅಂತರ ಬೆಳೆಗಳಾದ ರಾಗಿ ಮತ್ತು ಹರಳುನೊಂದಿಗೆ ೬:೧ ಅನುಪಾತದಲ್ಲಿ ಬಹು ಸ್ಥಳೀಯ ಮೌಲ್ಯಮಾಪನ ಮಾಡುವುದು ಮತ್ತು ಸ್ಥಿರೀಕರಣಗೊಳಿಸುವುದು..

 § ಅಲಸಂದೆಯಲ್ಲಿ  ಉತ್ತಮ ಕಳೆ ನಿರ್ವಹಣೆಗಾಗಿ ಪ್ರಚಲಿತದಲ್ಲಿರುವ ಉದಯ ಪೂರ್ವ ಕಳೆನಾಶಕಗಳಾದ ಪೆಂಡಿಮಿಥಿಲಿನ್ @ 0-75 ಕಿ.ಗ್ರಾಂ. a.i. / ಹೆ ಬಳಕೆ ಬಗ್ಗೆ ಪರೀಕ್ಷಿಸುವುದು ಮತ್ತು ಶಿಫಾರಸ್ಸುಗೊಳಪಡಿಸುವುದು.

§ ಅಲಸಂದೆ ಮತ್ತು ಹುರುಳಿಯಲ್ಲಿ ಅಧಿಕ ಇಳುವರಿ ಪಡೆಯಲು ಸಮಗ್ರ ಪೋಷಕಾಂಶಗಳ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು.

§ ಇಳುವರಿ ಗರಿಷ್ಠಗೊಳಿಸಲು  ಅಂತರ ಬೆಳೆ ಪದ್ಧತಿಯಾದರಿತ ಅಲಸಂದೆ ಮತ್ತು ಹುರುಳಿ ಬೆಳೆಗಳಲ್ಲಿ ರಸಗೊಬ್ಬರಗಳ ನಿರ್ವಹಣೆಯ ಮೌಲ್ಯಮಾಪನ ಕೈಗೊಳ್ಳುವುದು.

§ ಸುಧಾರಿತ ಬೇಸಾಯ ಕ್ರಮಗಳಾದ ಸಮರ್ಪಕ ಬೀಜದ ಪ್ರಮಾಣ, ಬಿತ್ತನೆಅಂತರ ಮತ್ತು ಗೊಬ್ಬರಗಳ ಪ್ರಮಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಅಲಸಂದೆಯಲ್ಲಿ ಬಿಡುಗಡೆಗೊಳಿಸಿರುವ ಸುಧಾರಿತ ತಳಿಗಳನ್ನು ಸೂಕ್ತ ಕಾಲದಲ್ಲಿ ೪೫ x೧೦ ಸೆ.ಮೀ. ಅಂತರ ಮತ್ತು ೨೫:೨೦:೨೫ ಸಾ.ರಂ.ಪೊ/ಹೆ ನೀಡಿ ಬಿತ್ತನೆ ಮಾಡಿದಾಗ ಗರಿಷ್ಠ ಇಳುವರಿ ಪಡೆಯಲು ಸಾಧ್ಯವಾಗಿದೆ.  ಹಾಗೆಯೆ ಪ್ರಾರಂಭಿಕ ಹಂತದಲ್ಲಿ ಕಳೆ ನಿರ್ವಹಣೆಗಾಗಿ ಉದಯ ಪೂರ್ವ ಕಳೆನಾಶಕವಾದ ಪೆಂಡಿಮಿಥಿಲಿನ್ ಜೊತೆಗೆ ಒಂದು ಅಥವಾ ಎರಡು ಬಾರಿಅಂತರ ಬೇಸಾಯ ಮಾಡಿದಾಗ ಬೆಳೆಗಳ ಇಳುವರಿಯಲ್ಲಿ ಉತ್ತಮ ಸ್ಪಂದನೆಕಡುಬದಿದೆ..

ಸಂಶೋಧನಾಸಾಧನೆಗಳು :

(ಬಿಡುಗಡೆಗೆ ಶಿಫಾರಸ್ಸು ಮಾಡಿದ ತಳಿಗಳು /ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು /ಸಂಶೋಧನೆಯ ಹಕ್ಕು ಪತ್ರಗಳು /  ವಾಣಿಜ್ಯೀಕರಿಸಲಾದ ತಂತ್ರಜ್ಞಾನಗಳ ವಿವರಗಳು)

Sl. No. Name Centre Year of release
1 KBC-11 (KC-8) GKVK 2020
2 PGCP-6 GKVK 2019
3 KBC 9 (AV-6) GKVK 2017
4 MFC-09-1 (Forage) Mandya 2017
5 AV-5 (Vegetable) GKVK 2012
6 PKB-4 (Vegetable) GKVK 2010
7 KM-5 GKVK 2007
8 IT-38956-1 GKVK 2006
9 PKB-6 (Vegetable) GKVK 2006
10 KBC-2 GKVK 1997
Horsegram    
1 PHG – 9 GKVK 1998

 

Ø  ಅಲಸಂದೆ ಮತ್ತು ಹುರುಳಿಯನ್ನು ರಾಗಿ ಅಥವಾ ಹರಳು ಬೆಳೆಗಳೊಂದಿಗೆ ೬:೧ ಅನುಪಾತದಲ್ಲಿ ಅಂತರ ಬೆಳೆ ಕೃಷಿ ಮಾಡಿದಾಗ ಅಧಿಕ ಆದಾಯ ದಾಖಲಾಗಿರುತ್ತದೆ.

Ø  ಅಲಸಂದೆಯಲ್ಲಿ ಲಘು ಪೋಷಕಾಂಶವಾದ ಝಿಂಕ್ ಸಲ್ಪೆಟ್ ನ್ನು ೨೫ ಕಿ.ಗ್ರಾಂ./ಹೆ (ವರ್ಷ ಬಿಟ್ಟು ವರ್ಷ) ಬಳಸಿದಾಗ ಅಧಿಕ ಇಳುವರಿ ಪಡಿಯಬಹುದಾಗಿದೆ

Ø  ಅಲಸಂದೆಯಲ್ಲಿ ಉದಯಪೂರ್ವಕ ಕಳೆನಾಶಕವಾದ ಪೆಂಡಿಮಿಥಿಲಿನ್‌ನ್ನು ೦.೭೫ ಕಿ.ಗ್ರಾಂ. ಚಿ.i./ ಪ್ರತಿ ಹೆಕ್ಟೇರ್‌ಗೆ ಸಿಂಪಡಿಸಿ ಬೆಳೆ ಹಂತದಲ್ಲಿ ಒಂದು ಅಥವಾ ಎರಡು ಬಾರಿಅಂತರ ಬೇಸಾಯ ಕ್ರಮಗಳನ್ನು ಕೈಗೊಂಡಾಗ ಅಧಿಕ ಇಳುವರಿ ಮತ್ತು ಉತ್ತಮ ಆದಾಯವನ್ನು ಪಡೆಯಬಹುದಾಗಿದೆ.

Ø  ಕೃಷಿ ಕಾರ್ಮಿಕರ ಲಭ್ಯತೆಯಿಲ್ಲದಿದ್ದಾಗ ಕಳೆನಾಶಗಳ ಬಳಕೆಯಿಂದಲೇ ಕಳೆ ನಿರ್ವಹಣೆ ಮಾಡಬೇಕಾದಾಗ ಉದಯ ಪೂರ್ವಕ ಕಳೆನಾಶಕವಾಗಿ ಪೆಂಡಿಮಿಥಿಲಿನ್ (ಬಿತ್ತಿದ ೩ ದಿನಗಳೊಳಗಾಗಿ) ಮತ್ತು ಉದಯೋತ್ತರ ಕಳೆನಾಶಕವಾಗಿ ಇಮೆಜೆತಾಫೈರ್ + ಇಮೆಜೋಮ್ಯಾಕ್ಸ್ @ 40ಗ್ರಾಂ. a.i./ ಹೆ. ಅನ್ನು ಬಿತ್ತಿದ ೨೦-೨೫ ದಿವಸದಲ್ಲಿ ಬಳಸಿದಾಗ ಉತ್ತಮ ಕಳೆ ನಿರ್ವಹಣೆ ಮಾಡಬಹುದಾಗಿದೆ.

ಪ್ರಶಸ್ತಿಗಳು / ಗುರುತಿಸುವಿಕೆ :

1.ಉತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ – ಕೃಷಿಮೇಳ 2020

2.ಉತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ – ಕೃಷಿಮೇಳ 2021

ಲಭ್ಯವಿರುವಸೌಲಭ್ಯಗಳು :

Ø  ಪ್ರಯೋಗಗಳನ್ನು ನಡೆಸಲು ಉತ್ತಮ ಸಂಶೋಧನಾ ತಾಕುಗಳು

Ø  ಮಣ್ಣು ಮತ್ತು ಸಸ್ಯವಿಶ್ಲೇಷಣೆಗೆ ಪ್ರಯೋಗಾಲಯ

ಇತರೆಚಟುವಟಿಕೆಗಳು :

ü  ಅಲಸಂದೆ ಹಾಗು ಹುರುಳಿಯ ಹೊಸ ತಳಿಗಳ ಮುಂಚೂಣಿಕ್ಷೇತ್ರ ಪರಯೋಗಗಳನ್ನು ನಡೆಸುವುದು

ü  ಉತ್ತಮ ಹಾಗು ಮೂಲ ಬೀಜೋತ್ಪಾಧನೆ

 

ಸಿಬ್ಬಂದಿವಿವರ :

ವೈಜ್ಞಾನಿಕ ಸಿಬ್ಬಂದಿ :

ಡಾ. ಕೃಷ್ಣ ಟಿ.ವಿ.
ಹುದ್ದೆ : ಹಿರಿಯ ವಿಜ್ಞಾನಿ (ಸಸ್ಯತಳಿ ಅಭಿವೃದ್ಧಿ)
ಶೈಕ್ಷಣಿಕ ವಿದ್ಯಾಭ್ಯಾಸ : ಪಿ ಎಚ್ ಡಿ
ವಿಷಯಪರಿಣತೆ : ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 21.12.2011
ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 01.08.2019

krishnatv@uasbangalore.edu.in

080- 23515644 / 29533844
+91 – 9972607223
ಡಾ. ಆನಂದ ಎಂ. ಆರ್.
ಹುದ್ದೆ : ಸಹ ಪ್ರಾಧ್ಯಾಪಕರು
ಶೈಕ್ಷಣಿಕ ವಿದ್ಯಾಭ್ಯಾಸ: ಪಿ ಎಚ್ ಡಿ
ವಿಷಯಪರಿಣತೆ : ಬೇಸಾಯ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :19.02.2007
ಪ್ರಾಯೋಜನೆಗೆ ವರದಿ ಮಾಡಿಕೊಂಡದಿನ : 14.03.2020

anandmr@uasbangaluru.edu.in
anandmruas@gmail.com

+91 83109 45125

ಸಹಾಯಕ ಸಿಬ್ಬಂದಿ :

ಶ್ರೀ ಕೃಷ್ಣಪ್ಪ ಎಂ.
ಹುದ್ದೆ :  ಹಿರಿಯಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : SSLC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 08.7.1992
ಪ್ರಾಯೋಜನೆಗೆವರದಿಮಾಡಿಕೊಂಡದಿನ :  26.02.2009
7259559684
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು