Title Image

ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿ

ಕ್ಷೇತ್ರಾಧೀಕ್ಷಕರ ಹೆಸರು : ಡಾ|| ವಿ. ವೆಂಕಟಾಚಲಪತಿ
ಮೊಬೈಲ್ ಸಂಖ್ಯೆ: 9449866913
ಮಿಂಚಚೆ: arschintamani@gmail.com

ಜಿಲ್ಲೆ : ಚಿಕ್ಕಬಳ್ಳಾಪುರ
ಸ್ಥಾಪನಾ ವರ್ಷ: 1975
ವಲಯ : 5
ಅಕ್ಷಾಂಶ : 13º24′ ಉ
ರೇಖಾಂಶ : 70º 04′ ಪೂ
ಎತ್ತರ : 911 ಮೀ (ಸಮುದ್ರ ಮಟ್ಟದಿಂದ)
ಮಣ್ಣು : ಕೆಂಪು ಮರಳು ಗೋಡು
ಒಟ್ಟಾರೆ ವಿಸ್ತೀರ್ಣ : 74.14 ಹೆ.

ಚಟುವಟಿಕೆಗಳು :

> ಬೀಜೋತ್ಪಾದನೆ(ತಳಿವರ್ಧಕ, ಮೂಲ ಮತ್ತು ಪ್ರಮಾಣೀಕೃತ ಬೀಜೋತ್ಪಾದನೆ): ರಾಗಿ, ತೊಗರಿ, ಸೋಯಾಬಿನ್, ಅಲಸಂದೆ, ಹುರುಳಿ, ಹೆಸರುಕಾಳು, ನೆಲಗಡಲೆ ಮುಂತಾದ ಬೆಳೆಗಳ ಬೀಜೋತ್ಪಾದನೆ.

> ಸಿರಿಧಾನ್ಯಗಳು, ನೆಲಗಡಲೆ, ಸೂರ್ಯಕಾಂತಿ, ಹುಚ್ಚೆಳ್ಳು ಇತ್ಯಾದಿ ಬೆಳೆಗಳ ಸಾವಯವ ಕೃಷಿ ಸಂಶೋಧನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

> ರಾಗಿ, ಹರಳು, ಎಳ್ಳು, ನೆಲಗಡಲೆ, ಹುಚ್ಚೆಳ್ಳು ಇತ್ಯಾದಿ ಬೆಳೆಗಳ ಬಹುಸ್ಥಳ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತದೆ.

> ಮೇವು ಬೆಳೆಯ ತಾಕುಗಳು(14 ವಿವಿಧ ಮೇವಿನ ಬೆಳೆಗಳನ್ನು ನಿರ್ವಹಿಸಲಾಗುತ್ತದೆ)

> ತೋಟಗಾರಿಕೆ ಸಸ್ಯಗಾರ ನಿರ್ವಹಣೆ: ಮಾವು, ಗೋಡಂಬಿ, ಹುಣಸೆ ಮತ್ತು ಜಂಬುನೇರಳೆ ಕಸಿಮಾಡಿದ ಗಿಡಗಳ ಉತ್ಪಾದನೆ ಮತ್ತು ಮಾರಾಟ. ಸಯಾನ್ ಬ್ಯಾಂಕ್‍ನಲ್ಲಿ ಗೋಡಂಬಿ(ಚಿಂತಾಮಣಿ-1, ಚಿಂತಾಮಣಿ-2), ಜಂಬುನೇರಳೆ(ಚಿಂತಾಮಣಿ ಸೆಲೆಕ್ಷನ್-1), ಹುಣಸೆ(ಜಿ.ಕೆ.ವಿ.ಕೆ-17) ಮತ್ತು ಮಾವು(ಮಲ್ಲಿಕಾ, ತೋತಾಪುರಿ, ಬೆನಿಶ, ಹಿಮಾಮ್‍ಪಸಂದ್ ಇತ್ಯಾದಿ) ನಿರ್ವಹಿಸಲಾಗುತ್ತಿದೆ.

> ಸಮಗ್ರ ಕೃಷಿ ಪದ್ಥತಿಗಳು: ಹೈನುಗಾರಿಕೆ ಘಟಕ, ಕುರಿ ಮತ್ತು ಮೇಕೆ ಸಾಕಾಣಿಕ ಘಟಕ, ಎರೆಹುಳ ಘಟಕ, ಬಯೋಡೈಜೆಸ್ಟರ್ ಘಟಕ, ಅಜೋಲ್ಲಾ ಘಟಕ, ಮೇವು ಬೆಳೆಯ ಸಂಗ್ರಹಾಲಯ, ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತು ಕೃಷಿ ಅರಣ್ಯ ಘಟಕಗಳನ್ನು ನಿರ್ವಹಿಸಲಾಗುತ್ತಿದೆ.

> ಮಳೆ ನೀರು ಕೊಯ್ಲಿನ ಸಂಗ್ರಹಣೆ ಮಾಡಲಾಗುತ್ತಿದೆ.

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು