ಈ ಮಹಾವಿದ್ಯಾಲಯವು ಮೂರು ಸ್ನಾತಕ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ
ಪದವಿ ಕಾರ್ಯಕ್ರಮಗಳು | ಪ್ರಾರಂಭಿಸಿದ ವರ್ಷ |
ಬಿ.ಎಸ್ಸಿ. (ಆನರ‍್ಸ್) ಕೃಷಿ | 1965 |
ಬಿ.ಎಸ್ಸಿ. (ಆನರ‍್ಸ್) ಕೃಷಿ-ವ್ಯವಹಾರ ನಿರ್ವಹಣೆ | 1976 |
ಬಿ.ಎಸ್ಸಿ. (ಆನರ‍್ಸ್) ಆಹಾರ ವಿಜ್ಞಾನ ಮತ್ತು ಆಹಾರ ಪದ್ಧತಿ | 2021-22 |
ಸ್ನಾತಕೋತ್ತರ-ಎಂ.ಎಸ್ಸಿ.-೨೬ ವಿಷಯಗಳು; ಪಿಎಚ್‌ಡಿ- ೧೮ ವಿಷಯಗಳು
- ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಕೃಷಿ ವಿಭಾಗದ ೨೩ ವಿಶೇಷ ಕ್ಷೇತ್ರಗಳಲ್ಲಿ ನೀಡಲಾಗುತ್ತದೆ. ಇವುಗಳನ್ನು ವಿಶ್ವವಿದ್ಯಾನಿಲಯದ ಮೂರು ಆವರಣಗಳಲ್ಲಿ ಅಂದರೆ ಗಾಕೃವಿಕೇಂ., ಮಂಡ್ಯ ಮತ್ತು ಹಾಸನದಲ್ಲಿ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿಯ ಶೈಕ್ಷಣಿಕ ಅವಧಿಯು ೨ ವರ್ಷಗಳಾಗಿರುತ್ತದೆ.
ಸಂಶೋಧನೆ/ಪಿಎಚ್‌ಡಿ
- ಡಾಕ್ಟರೇಟ್ ಪದವಿಯನ್ನು ಕೃಷಿ ವಿಭಾಗದ ೧೩ ವಿಶೇಷ ಕ್ಷೇತ್ರಗಳಲ್ಲಿ ನೀಡಲಾಗುತ್ತದೆ. ಇವುಗಳನ್ನು ವಿಶ್ವವಿದ್ಯಾನಿಲಯದ ಕೇಂದ್ರ ಆವರಣವಾದ ಗಾಕೃವಿಕೇಂಯಲ್ಲಿ ನೀಡಲಾಗುತ್ತದೆ. ಡಾಕ್ಟರೇಟ್ ಪದವಿಯ ಶೈಕ್ಷಣಿಕ ಅವಧಿಯು ೩ ವರ್ಷಗಳಾಗಿರುತ್ತದೆ.
ತರಬೇತಿ
- ಕರ್ನಾಟಕ ರಾಜ್ಯ ಸರ್ಕಾರವು ಪ್ರಾಯೋಜಿಸಿರುವ ‘ಸ್ವಾವಲಂಬನಾ’ ಯೋಜನೆಯಡಿಯಲ್ಲಿ ಗ್ರಾಮೀಣ ಯುವಜನತೆಗೆ ೧೨ ವಾರಗಳ ತರಬೇತಿ ಕಾರ್ಯಕ್ರಮಗಳನ್ನು ಹೈನುಗಾರಿಕೆ, ಕೋಳಿ ಸಾಕಾಣಿಕೆ, ಬೇಕರಿ, ಅಣಬೆ ಉತ್ಪಾದನೆ ಮತ್ತು ಸಸಿಮಡಿ ಉತ್ಪಾದನೆ ಹಾಗೂ ನಿರ್ವಹಣೆಯ ಕ್ಷೇತ್ರಗಳಲ್ಲಿ ನೀಡಲಾಗುತ್ತದೆ.
- ವಿಸ್ತರಣಾ ನಿರ್ದೇಶನಾಲಯದ ವ್ಯಾಪ್ತಿಯಲ್ಲಿರುವ ಸಿಬ್ಬಂದಿ ತರಬೇತಿ ಘಟಕವು ಐಎಎಸ್ ಪ್ರೊಬೇಷನರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಅನುಕೂಲಕ್ಕಾಗಿ ನಿಯಮಿತವಾಗಿ ತರಬೇತಿ ಕೋರ್ಸ್ ಅನ್ನು ನಡೆಸುತ್ತದೆ. ಕೃಷಿ ವಿಶ್ವವಿದ್ಯಾನಿಲಯವು ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ನಿರತರಾಗಿರುವ ತನ್ನದೇ ಸಿಬ್ಬಂದಿಗಳಿಗೆ ಕೃಷಿ ಮತ್ತು ಸಂಬAಧಿತ ಕ್ಷೇತ್ರಗಳಲ್ಲಿರುವ ನವೀನ ತಂತ್ರಗಳು ಹಾಗೂ ಸಾಧನೆಗಳ ಬಗ್ಗೆ ನಿರಂತರವಾಗಿ ತರಬೇತಿ ನೀಡುತ್ತದೆ.
ವಿಸ್ತರಣಾ ನಿರ್ದೇಶನಾಲಯದ ಇತರ ಅಂಗ ಸಂಸ್ಥೆಗಳಾದ ರೈತ ತರಬೇತಿ ಸಂಸ್ಥೆ, ವಿಸ್ತರಣಾ ಘಟಕಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳೂ ಸಹ ತರಬೇತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ತೊಡಗಿಕೊಂಡಿವೆ. ಬೆAಗಳೂರಿನ ಮಹಾವಿದ್ಯಾಲಯದ ವಿವಿಧ ವಿಭಾಗಗಳು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ಅನುಕೂಲಕ್ಕಾಗಿ ಬೇಸಿಗೆ ಶಿಕ್ಷಣ/ಪುನಶ್ಚೇತನ ಕೋರ್ಸ್ಗಳನ್ನು ಹಮ್ಮಿಕೊಳ್ಳುತ್ತವೆ.
ಪದವಿ-ರಹಿತ ಕೋರ್ಸ್ಗಳು
- ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿರುವ ಬೇಕರಿ ತರಬೇತಿ ಘಟಕವು ಈ ಕೆಳಗಿನ ತರಬೇತಿ ಕೋರ್ಸ್ಗಳನ್ನು ನಡೆಸುತ್ತದೆ.
- ಬೇಕರಿ ತಂತ್ರಜ್ಞಾನದಲ್ಲಿ ೧೪ ವಾರಗಳ ಪ್ರಮಾಣಪತ್ರದ ಕೋರ್ಸ್
- ವಾಣಿಜ್ಯ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ೨ ಮತ್ತು ೪ ವಾರಗಳ ಬೇಕರಿ ಉತ್ಪನ್ನ ತಯಾರಿಕೆ ಕೋರ್ಸ್
- ಆಯ್ದ ವೃತ್ತಿಪರರಿಗೆ ಒಂದು ವಾರದ ಕೋರ್ಸ್
- ಮಹಿಳೆಯರಿಗೆ ೩ ದಿನಗಳ ಹೋಮ್ ಬೇಕರಿ ಕೋರ್ಸ್
• ಡಿಪ್ಲೊಮೊ ಕೋರ್ಸ್
• ಒಂದು ವರ್ಷದ ಡಿಪ್ಲೊಮೊ ಅರ್ಜಿ-೨೦೨೨-೨೩
• ಒಂದು ವರ್ಷದ ದೂರಶಿಕ್ಷಣ ಡಿಪ್ಲೊಮೊ ಅಧಿಸೂಚನೆ-೨೦೨೨-೨೩
ವಿಸ್ತರಣಾ ನಿರ್ದೇಶನಾಲಯವು ರಾಜ್ಯದ ಅಭಿವೃದ್ಧಿ ಇಲಾಖೆಗಳಿಗೆ, ಕಾರ್ಪೊರೇಟ್ ವಲಯಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ರೈತರು, ಗ್ರಾಮೀಣ ಯುವಜನತೆ ಮತ್ತು ಮಹಿಳೆಯರಿಗೆ ತನ್ನ ವಿಸ್ತರಣಾ ಶಿಕ್ಷಣಾ ಜಾಲ, ರೈತರ ತರಬೇತಿ ಸಂಸ್ಥೆ ಇತ್ಯಾದಿಗಳ ಮೂಲಕ ಪ್ರಾಯೋಜಿತ ಕಾರ್ಯಕ್ರಮಗಳನ್ನು ನಡೆಸುತ್ತದೆ. ಸಮಗ್ರ ಕೃಷಿ ಪದ್ಧತಿಗಾಗಿ ದೂರ ಶಿಕ್ಷಣ ಕೋರ್ಸ್ಗಳನ್ನು ಗ್ರಾಮೀಣ ಯುವಜನತೆಗಾಗಿ ನಡೆಸಲಾಗುತ್ತದೆ, ಹಾಗೂ ಒಳಸುರಿವು ಮಾರಾಟಗಾರರಿಗೆ (ಆಂಇSI) ಕೃಷಿ ವಿಸ್ತರಣ ಸೇವೆಗಳಲ್ಲಿ ಡಿಪ್ಲಮೊ ಅನ್ನು ಹೈದರಾಬಾದ್‌ನ ‘ಮ್ಯಾನೇಜ್’ (ಒಂಓAಉಇ) ಸಹಯೋಗದೊಂದಿಗೆ ನಡೆಸಲಾಗುತ್ತದೆ.
ಈ ಮಹಾವಿದ್ಯಾಲಯದಲ್ಲಿರುವ ಬೋಧನಾಂಗವು ಕೃಷಿ ಮತ್ತು ಸಂಬಂದಿಸಿದ ವಿಜ್ಞಾನಗಳ ವಿವಿಧ ವಿಷಯ ಕ್ಷೇತ್ರಗಳಲ್ಲಿ ಅರ್ಹ ಮತ್ತು ಪ್ರಶಂಸನೀಯ ಶಿಕ್ಷಕರ ತಂಡವನ್ನೊಳಗೊAಡಿದೆ. ಅವರಲ್ಲಿ ಅನೇಕರು ತಮ್ಮ ಅತ್ಯತ್ತಮ ಸಾಧನೆಗಳಿಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಾನ್ವಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಮಹಾವಿದ್ಯಾಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಅವರಲ್ಲಿ ಅನೇಕರು ಪ್ರತಿಷ್ಠಿತ ಅಂತರರಾಷ್ಟಿçÃಯ ವಿಶ್ವವಿದ್ಯಾನಿಲಯಗಳು/ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಈ ಮಹಾವಿದ್ಯಾಲಯದ ಪದವೀಧರರು ವಿವಿಧ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ, ನಾಗರೀಕ ಸೇವೆಗಳಲ್ಲಿ ಮತ್ತು ಪ್ರತಿಷ್ಠಿತ ಖಾಸಗಿ ವಲಯದ ಸಂಸ್ಥೆಗಳಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಉದ್ಯೋಗವಕಾಶವನ್ನು ಪಡೆದಿದ್ದಾರೆ.
ಅಧ್ಯಯನ ಮಂಡಳಿ
- 14ನೇ ಅಧ್ಯಯನ ಮಂಡಳಿಯ ಪ್ರಕ್ರಿಯೆಗಳು
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು