ಅಭಾಸುಪ್ರಾಯೋಜನೆ/ಘಟಕ : ಅಖಿಲ ಭಾರತ ಸುಸಂಘಟಿತ ದೀರ್ಘಾವಧಿ ರಸಗೊಬ್ಬರಗಳ ಪ್ರಾಯೋಜನೆ | ||||||
ಸ್ಥಳ : ಇ-೮ ಬ್ಲಾಕ್, ವಲಯ ಕೃಷಿ ಸಂಶೋಧನಾಕೇAದ್ರ, ಜಿ.ಕೆ.ವಿ.ಕೆ, ಬೆಂಗಳೂರು | ||||||
ಪ್ರಾರಂಭವಾದ ವರ್ಷ : ೧೯೭೨ | ||||||
ಉದ್ದೇಶಗಳು:
v ಬಹುಬೆಳೆ ಪದ್ಧತಿಯಲ್ಲಿ ನಿರಂತರವಾಗಿ ಸಾವಯವ ಹಾಗೂ ರಸಗೊಬ್ಬರಗಳನ್ನು ಬಳಸಿದಾಗ ಬೆಳೆ ಇಳುವರಿ, ಪೊಷಕಾಂಶಗಳ ಸಂಯೋಜನೆ ಹಾಗೂ ಅವುಗಳ ಹಿರುವಿಕೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡುವುದು. v ಬೆಳೆ ಇಳುವರಿಯ ಮೇಲೆ ದ್ವಿತೀಯ ಮತ್ತು ಸೂಕ್ಷಮ ಪೋಷಕಾಂಶಗಳ (ಅಗತ್ಯಕ್ಕೆ ಅನುಗುಣವಾಗಿ) ಅನ್ವಯಿಸುವಿಕೆಯ ಪರಿಣಾಮವನ್ನುಅಧ್ಯಯನ ಮಾಡಲು ಮತ್ತು ತೀವ್ರವಾದ ಬೆಳೆ ನಿರ್ವಹಣೆಯ ಕಾರ್ಯಕ್ರಮದಡಿಯಲ್ಲಿ ಈ ಅಂಶಗಳ ಅಗತ್ಯತೆಯ ಮೌಲ್ಯಮಾಪನವನ್ನುಅಧ್ಯಯನ ಮಾಡಲು v ಬೆಳೆಗಳಿಂದ ವಿವಿಧ ಪೋಷಕಾಂಶಗಳ ಹೀರುವ ಪ್ರಮಾಣಗಳ ಅಧ್ಯಯನ. v ನಿರಂತರ ಗೊಬ್ಬರಗಳ ಬಳಕೆ ಮತ್ತು ಬೆಳೆಗಳ ಪರಿಣಾಮವಾಗಿ ಮಣ್ಣಿನ ಉತ್ಪಾದಕತೆಗೆ ಸಂಬಂಧಿಸಿದತೆ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಸೂಕ್ಷಮ ಜೀವಿಗಳ ಗುಣಲಕ್ಷಣಗಳಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡವುದು. v ಬಯೋಸಿಡಲ್ ರಾಸಾಯನಿಕಗಳಾದ ಕಳೆ ಮತ್ತು ಕೀಟನಾಶಕಗಳ ತೀವ್ರವಾದ ಬಳಕೆಯಿಂದ ಮಣ್ಣಿನಲ್ಲಿ ಇವುಗಳ ಉಳಕೆಯ ಪ್ರಮಾಣ ಹಾಗೂ ಮಣ್ಣಿನಉತ್ಪಾದಕತೆಯಲ್ಲಿಯಾಗುವ ಪರಿಣಾಮವನ್ನು ತನಿಖೆ ಮಾಡಲು. v ಉದ್ದೇಶಿತ ಗೊಬ್ಬರ ಮತ್ತು ಬೆಳೆ ಕಾರ್ಯಕ್ರಮದಡಿಯಲ್ಲಿ ಮಣ್ಣಿನಿಂದ ಹರಡುವ ರೊಗಗಳು ಅಲ್ಲದೆ ಕೀಟಗಳು ಮತ್ತು ರೋಗಕಾರಕಗಳಲ್ಲಿನ ಬದಲಾವಣೆಗಳ ಬಗ್ಗೆ ಮೌಲ್ಯಮಾಪನ ಮಾಡುವುದು. v ಮಣ್ಣಿನ ಸೂಚಕವನ್ನು ಗುರುತಿಸಲು ಮತ್ತು ಮಣ್ಣಿನ ಗುಣಮಟ್ಟವನ್ನು ನಿರ್ಣಯಿಸಲು; v ಮಣ್ಣಿನ ಉತ್ಪಾದಕತೆ ಮತ್ತು ಮಣ್ಣಿನ ಆರೋಗ್ಯದ ಮೇಲೆ ಬದಲಾಗುತ್ತಿರುವ ಹವಾಮಾನದ ಪರಿಣಾಮ; |
||||||
ಸಂಶೋಧನಾ ಕಾರ್ಯಕ್ರಮಗಳು:
v ರಾಗಿ-ಮೆಕ್ಕೆಜೋಳ ಬೆಳೆಯ ಅನುಕ್ರಮದಲ್ಲಿ ದೀರ್ಘಾವಧಿ ರಸಗೊಬ್ಬರಗಳ ಬಳಕೆಯಿಂದ ರಾಗಿ ಬೆಳೆಯ ಉತ್ಪಾದನೆ, ಪೋ಼ಷಕಾಂಶಗಳ ಗ್ರಹಿಸುವಿಕೆ ಮತ್ತು ಮಣ್ಣಿನ ರಾಸಾಯನಿಕ ಗುಣಲಕ್ಷಣಗಳ ಮೇಲಾಗುವ ಪರಿಣಾಮಗಳು. v ದೀರ್ಘಾವಧಿ ರಸಗೊಬ್ಬರಗಳ ಬಳಕೆಯ ಆಯ್ದ ತಾಕುಗಳಲ್ಲಿ (T3, T4, T6 &T7) ಗೊಬ್ಬರ ಮತ್ತು ಸುಣ್ಣಉತ್ಕಷ್ಟ ಉಪಚರಿಕೆಯಿಂದರಾಗಿಯ ಇಳುವರಿ ಮತ್ತು ಪೋಷಕಾಂಶಗಳ ಗ್ರಹಿ ಸುವಿಕೆಯ ಮೇಲಾಗುವ ಪರಿಣಾವiಗಳು. v ರಾಗಿ-ಮೆಕ್ಕೆಜೋಳ ಬೆಳೆಯ ಅನುಕ್ರಮದಲ್ಲಿ ದೀರ್ಘಾವಧಿ ರಸಗೊಬ್ಬರಗಳ ಬಳಕೆಯಿಂದ ಮೆಕ್ಕೆ ಜೋಳ ಬೆಳೆಯ ಉತ್ಪಾದನೆ, ಪೋ಼ಷಕಾಂಶಗಳ ಗ್ರಹಿಸುವಿಕೆ ಮತ್ತು ಮಣ್ಣಿನರಾಸಾಯನಿಕ ಗುಣಲಕ್ಷಣಗಳ ಮೇಲಾಗುವಪರಿಣಾಮಗಳು. v ದೀರ್ಘಾವಧಿ ರಸಗೊಬ್ಬರಗಳ ಬಳಕೆಯ ಆಯ್ದ ತಾಕುಗಳಲ್ಲಿ (T3, T4, T6 &T7) ಗೊಬ್ಬರ ಮತ್ತು ಸುಣ್ಣಉತ್ಕಷ್ಟ ಉಪಚರಿಕೆಯಿಂದ ಮೆಕ್ಕೆ ಜೋಳದ ಬೆಳೆಯ ಉತ್ಪಾದನೆ, ಪೋ಼ಷಕಾಂಶಗಳ ಗ್ರಹಿಸುವಿಕೆ ಮತ್ತು ಮಣ್ಣಿನ ರಾಸಾಯನಿಕ ಗುಣಲಕ್ಷಣಗಳ ಮೇಲಾಗುವ ಪರಿಣಾಮಗಳು. v ದೀರ್ಘಾವಧಿ ರಸಗೊಬ್ಬರಗಳ ಬಳಕೆಯಿಂದ ರಾಗಿಯ ಪೌಷ್ಟಿಕಾಂಶದಗುಣಮಟ್ಟದ ಮೇಲಾಗುವ ಪರಿಣಾಮಗಳು. |
||||||
ಸಂಶೋಧನಾಸಾಧನೆಗಳು :
(Varieties released /Technologies developed / Patents developed/ Commercialized etc…) · ಶಿಫಾರಸ್ಸಿನ ಪ್ರಮಾಣದ ರಸಗೊಬ್ಬರಗಳೊಂದಿಗೆ (ಸಾ.ರಂ.ಪೋ) ಕೊಟ್ಟಿಗೆ ಗೊಬ್ಬರಗಳನ್ನು ಬಳಸಿದಾಗ ಮಣ್ಣಿನ ಭೌತಿಕ ಗುಣಲಕ್ಷಣಗಳಾದ ಸ್ಥೂಲ ಸಾಂದ್ರತೆ, ಒಟ್ಟು ಸರಂದ್ರತೆ ಮತ್ತು ಹೈಡ್ರಾಲಿಕ್ ವಾಹಕತೆಯನ್ನು ಸುಧಾರಿಸಬಹುದಾಗಿದೆ. · ಕೊಟ್ಟಿಗೆಗೊಬ್ಬರವು ಆಮ್ಲೀಯ ಮಣ್ಣು ಸುಧಾರಕವಾಗಿ ಸುಣ್ಣಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೆ ಕೊಟ್ಟಿಗೆ ಗೊಬ್ಬರವು ಪ್ರಮುಖ ಪೋಷಕಾಂಶಗಳ ಜೊತೆಗೆಇತರ ಸೂಕ್ಷಮ ಪೋಷಕಾಂಶಗಳನ್ನು ಸಹ ಪೂರೈಸುತ್ತದೆ. · ನಿರಂತರವಾಗಿ ರಸಗೊಬ್ಬರಳನ್ನು ಮಾತ್ರ ಬಳಸಿದಾಗ (ವಿಶೇಷವಾಗಿ ಸಿಫಾರಸಿಕ್ಕಿಂತ ಹೆಚ್ಚಿನ ಪ್ರಮಾಣ ಮತ್ತು ಕೇವಲ ಸಾರಜನಕ ಬಳಕೆ) ಮಣ್ಣಿನ ರಸಸಾರವುಗಣನೀಯವಾಗಿ ಇಳಿಕೆಗೆ ಕಾರಣವಾಗಿದೆ. · ನಿರಂತರವಾಗಿ ರಂಜಕದ ರಸಗೊಬ್ಬರಗಳ ಬಳಕೆಯಿಂದ (ವಿಶೇಷವಾಗಿ ಸಿಫಾರಸಿಕ್ಕಿಂತ ೧೫೦% ಹೆಚ್ಚಿನ ಪ್ರಮಾಣ ಮತ್ತು ೧೦೦% ರಂಜಕದ ಬಳಕೆಯಲ್ಲಿ) ಮಣ್ಣಿನಲ್ಲಿ ರಂಜಕದ ಲಭ್ಯತೆಯ ಪ್ರಮಾಣವುಅತಿ ಹೆಚ್ಚಾಗಿರುವುದು ಕಂಡುಬದಿರುತ್ತದೆ. · ನಿರಂತರ ಬಳಕೆಯಿಂದಾಗಿ ಮಣ್ಣಿನಲ್ಲಿರಂಜಕ ಪೋಷಕಾಂಶವು ಸಂಗ್ರಹವಾಗಿರುವುದರಿಂದ, , ಅಂತ : ಜಮೀನಿಗೆರಂಜಕದ ಪ್ರಮಾಣವನ್ನುಅರ್ಧಕ್ಕೆ ಇಳಿಸುವುದರಿಂದ ಎರಡೂ ಬೆಳೆಗಳ ಉತ್ಪಾದಕತೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. · ಎಸ್.ಎಸ್.ಪಿ ರಸಗೊಬ್ಬರವನ್ನು ರಂಜಕದ ಮೂಲವಾಗಿ ಬಳಕೆ ಮಾಡಿದಾಗ ಮಣ್ಣಿನಲ್ಲಿ ಗಂಧಕದ ಲಭ್ಯತೆ ಯುಗಮನಾರ್ಹವಾಗಿ ಹೆಚ್ಚಾಗಿರುತ್ತದೆ. ಆದರೆ, ಡಿ.ಎ.ಪಿ ಯನ್ನು ಬಳಸಿದಾಗ ಮಣ್ಣಿನಲ್ಲಿ ಗಂಧಕದ ಕೊರತೆಯನ್ನು ಗಮನಿಸಲಾಗಿದೆ. · ಸಮತೋಲಿತವಾಗಿ ರಸಗೊಬ್ಬರಗಳ ಜೊತೆಗೆ ಸಾವಯವಗೊಬ್ಬರವನ್ನು ನಿರಂತರವಾಗಿ ಬಳಸಿದಾಗ ಇದು ವರೆಗೆ ಮಣ್ಣಿನಲ್ಲಿ ಸೂಕ್ಷಮ ಪೋಷಕಾಂಶಗಳ ಕೊರತೆಯನ್ನು ಕಂಡುಬದಿರುವುದಿಲ್ಲ. · ಸಮತೋಲಿತ ರಾಸಾಯನಿ ಕಗೊಬ್ಬರದ ಬಳಕೆಯು ಮಣ್ಣಿನ ಸಾವಯವ ಇಂಗಾಲವನ್ನು ಕಾಪಾಡಿಕೊಂಡಿರುತ್ತದೆ . ಮಣ್ಣಿನಲ್ಲಿ ಆರಂಭಿಕ ಇಗಾಲದ ಮಟ್ಟವನ್ನು ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಪ್ರಮಾಣವು (ಮಿತಿ) ಪ್ರದೇಶದ ಹವಾಮಾನ ಹಾಗೂ ಮಣ್ಣಿನಲ್ಲಿನ ಆರಂಭಿಕದ ಇಗಾಲದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ ಮತ್ತು ಇದು ಪ್ರತಿ ಹೆಕ್ಟರ್ ಹಾಗೂ ಪ್ರತಿ ವರ್ಷ ಕ್ಕೆ ೩೬೦೦ ಕಿ.ಗ್ರಾಂ. ಪ್ರಮಾಣ ಬೇಕಾಗುತ್ತದೆ ಎಂದುಕಂಡು ಬದಿದೆ. . ರಾಗಿ-ಮೆಕ್ಕೆ ಜೋಳದ ಬೆಳೆಗಳ ಸುಸ್ಥಿರ ಇಳುವರಿ ಸೂಚ್ಯಂಕ (SಙI) ೧೦೦% ಸಾ.ರ.ಪೊ + ಕೊಟ್ಟಿಗೆಗೊಬ್ಬರ + ಸುಣ್ಣ> ೧೫೦% ಸಾ.ರ.ಪೊ > ೧೦೦% ಸಾ.ರ.ಪೊ > ೧೦೦% ಸಾ.ರ. + ೧೦೦% ಸಾ. > ನಿಯಂತ್ರಣದ ಕ್ರಮದಲ್ಲಿ ಪ್ರವೃತ್ತಿಯನ್ನು ತೋರಿಸಿದೆ. . ಸಮತೋಲಿತ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆಯು ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಏಕೈಕ ಆಯ್ಕೆಯಾಗಿದೆ, ಇದುರಸಗೊಬ್ಬರದ ಮೇಲಿನ ವೆಚ್ಚವನ್ನು ಕಡಿತಗೊಳಿಸುತ್ತದೆ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತೆದೆ. . ಪೋಷಕಾಂಶಗಳ ಸಮತೋಲಿತ ಮತ್ತು ಸಂಯೋಜಿತ ಬಳಕೆಯು ಮಣ್ಣಿನಲ್ಲಿರುವ ಸೂಕ್ಷöಮ ಜೀವಿಗಳ ಸಂಖ್ಯೆ ಮತ್ತು ಚಟುವಟಿಕೆಯನ್ನು ಸುಧಾರಿಸಿದೆ. ಇದಕ್ಕೆ ವಿರುದ್ಧವಾಗಿ, ಅಸಮತೋಲಿತ ಪೋಷಕಾಂಶಗಳ ನಿರ್ವಹಣೆಯು ಸೂಕ್ಷöಮ ಜೀವಿಗಳ ಸಂಖ್ಯೆ ಮತ್ತು ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. . ಮಣ್ಣಿನ ರಸಸಾರ, ಪೊಟ್ಯಾಷಿಯಂ, ಸುಣ್ಣ, ಮೆಗ್ನೀಸಿಯಂ ಮತ್ತು ಸೂಕ್ಷಮಜೀವಿಯ ಜೀವರಾಶಿ ಇಂಗಾಲವು ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಕಾಳಜಿ ವಹಿಸಬೇಕಾದ ಪ್ರಮುಖ ಮಣ್ಣಿನ ಸೂಚಕಗಳಾಗಿವೆ. . ಸಮತೋಲಿತ ಪೋಷಕಾಂಶಗಳ ಬಳಕೆಯಿಂದ ಹೆಚ್ಚಿನ SQI ಮೌಲ್ಯ ದಾಖಲಿಸಿದೆ. |
||||||
ಪ್ರಶಸ್ತಿಗಳು / ಗುರುತಿಸುವಿಕೆ : | ||||||
ಲಭ್ಯವಿರುವ ಸೌಲಭ್ಯಗಳು :
v ಮಣ್ಣು ಮತ್ತು ಸಸ್ಯ ವಿಶ್ಲೇಷಣೆಗಾಗಿ ವಿಶ್ಲೇಷಣಾತ್ಮಕ ಉಪಕರಣಗಳು |
||||||
ಇತರೆ ಚಟುವಟಿಕೆಗಳು :
v ಭಾರತ ಸರ್ಕಾರದ ಬುಡಕಟ್ಟು ಜನಾಂಗ ಅಭಿವೃದ್ಧಿ ಕಾರ್ಯಕ್ರಮದಡಿ ಕರ್ನಾಟಕದ ಬುಡಕಟ್ಟು ರೈತರ ಜಮೀನುಗಳಲ್ಲಿ ವಿವಿಧ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ನಡೆಸುವುದು. |
||||||
ಕಾರ್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು : | ||||||
ಕ್ರ. ಸಂ. | ಯೋಜನೆಯ ಶೀರ್ಷಿಕೆ | ಮುಖ್ಯ ವಿಜ್ಞಾನಿಗಳು | ಹಣಕಾಸು
ಸಂಸ್ಥೆ |
ಪ್ರಾರಂಭದ ವರ್ಷ | ಕೊನೆಗೊಳ್ಳುವ ವರ್ಷ | ಗಮನಾರ್ಹ ಫಲಿತಾಂಶ |
1 | ಏರೋಬಿಕ್ ಭತ್ತದಲಿ 5:15:0:10S ದರ್ಜೆಯ ಮಣ್ಣಿನ ಅನ್ವಯದ ಅಧ್ಯಯನ | ಡಾ. ಜಯಂತಿ, ಟಿ | ಅಂತರಾಷ್ಟಿಯ ಕೋರಮಂಡಲ್‌ಲಿ ಮಿಟೆಡ್. ಸಿಕಂದ್ರಬಾದ್ | 2023 | 2024 | ಪ್ರಗತಿಯಲ್ಲಿದೆ |
2 | ಮೆಕ್ಕಜೋಳದ ಬೆಳಯಲ್ಲಿ ಸಮುದ್ರ ಕಳೆಸಾರಗಳ ಮಣ್ಣಿನ ಅನ್ವಯದಅಧ್ಯಯನ | ಡಾ. ಜಿ.ಜಿ.ಕಾದಳ್ಳಿ, | ಅಂತರಾಷ್ಟಿಯ ಕೋರಮಂಡಲ್ ಲಿಮಿಟೆಡ್. ಸಿಕಂದ್ರಬಾದ್ | 2023 | 2024 | ಪ್ರಗತಿಯಲ್ಲಿದೆ |
ಸಿಬ್ಬಂದಿ ವಿವರ :
ವೈಜ್ಞಾನಿಕ ಸಿಬ್ಬಂದಿ
ಶೈಕ್ಷಣಿಕ ವಿದ್ಯಾಭ್ಯಾಸ : ಎಮ್ಸ್ಸಿ (ಕೃಷಿ), ಪಿಹೆಚ್.ಡಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 26-02-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 16-02-2018
ltfeuasb@gmail.com
ggkadalli@rediffmail.com
ತಾಂತ್ರಿಕ ಸಿಬ್ಬಂದಿ:
ಶೈಕ್ಷಣಿಕ ವಿದ್ಯಾಭ್ಯಾಸ : ಎಮ್ಸ್ಸಿ (ಕೃಷಿ)
ವಿಷಯ ಪರಿಣತೆ : ಮಣ್ಣು ವಿಜ್ಞಾನ ಮತ್ತುರಸಾಯನ ಶಾಸ್ತ್ರ ವಿಭಾಗ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 26-10-2011
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 06-09-2023 (ಮಧ್ಯಾನ)
umeshhr1@rediffmail.com
ಸಹಾಯಕ ಸಿಬ್ಬಂದಿ :
ಶೈಕ್ಷಣಿಕ ವಿದ್ಯಾಭ್ಯಾಸ ; ಎಮ್ಸ್ಸಿ (ಕೃಷಿ), ಪಿಹೆಚ್.ಡಿ
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 21-06-2021
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು