ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಕೃಷಿ ತಂತ್ರಜ್ಞಾನ ಯೋಜನೆಯಡಿಯಲ್ಲಿ ೧೯೯೯ರ ನವೆಂಬರ್ ನಲ್ಲಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಯೋಗದೊಂದಿಗೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ‘ಏಕಗವಾಕ್ಷಿ’ ಮುಖಾಂತರ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ದಿಪಡಿಸಿದ ಕೃಷಿ ತಂತ್ರಜ್ಞಾನಗಳು ಹಾಗೂ ತಾಂತ್ರಿಕ ಉತ್ಪನ್ನಗಳಾದ ಸುಧಾರಿತ ತಳಿಗಳ ಬಿತ್ತನೆ ಬೀಜಗಳು, ನರ್ಸರಿ ಸಸಿಗಳು, ಪೋಷಕಾಂಶಗಳ ಮಿಶ್ರಣ, ಜೈವಿಕ ಗೊಬ್ಬರಗಳು, ಎರೆಹುಳು ಗೊಬ್ಬರ, ಜೈವಿಕ ಕೀಟನಾಶಕಗಳು, ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಸಣ್ಣ ಕೃಷಿ ಉಪಕರಣಗಳನ್ನು ಮಾರಾಟಕ್ಕೆ ಒದಗಿಸಲಾಗುತ್ತಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನು ಸಾಕಣೆ, ರೇಷ್ಮೆಕೃಷಿ ಮುಂತಾದ ವಿಷಯಗಳಲ್ಲಿ ವಿವಿಧ ವಿಸ್ತರಣಾ ಪದ್ಧತಿಗಳ ಮೂಲಕ ತಾಂತ್ರಿಕ ಸಲಹಾ ಸೇವೆಗಳನ್ನು ರೈತರಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ಇದರ ಜೊತೆಗೆ, ರೈತರು ಮತ್ತು ಇತರ ಸಾರ್ವಜನಿಕರ ಬೇಡಿಕೆ ಪೂರೈಸಲು ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ, ನರ್ಸರಿ ಮೆನ್ ಸಹಕಾರ ಸಂಘ, ಲಾಲ್ಬಾಗ್, ಬೆಂಗಳೂರು ಇವರ ಸಹಯೋಗದೊಂದಿಗೆ ತೋಟಗಾರಿಕಾ ಸಸಿಗಳ ನರ್ಸರಿಯನ್ನು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಸ್ಥಾಪಿಸಲಾಯಿತು. ಇದಲ್ಲದೆ, ಮಾಹಿತಿ ಸಂವಹನಾ ತಂತ್ರಜ್ಞಾನ (Iಅಖಿ) ಉಪಕರಣಗಳ ಮೂಲಕ ಹೆಚ್ಚು ನಿಖರತೆಯಿಂದ ಕೃಷಿ ತಂತ್ರಜ್ಞಾನಗಳನ್ನು ರಾಜ್ಯದ ರೈತ ಸಮುದಾಯಕ್ಕೆ ತಲುಪಿಸುವ ಸಲುವಾಗಿ ಇ-ಕೃಷಿ ಯುಎಎಸ್ಬಿ ಪೋರ್ಟಲ್ನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಸಿದ್ಧಪಡಿಸಲಾಯಿತು, ಈ ಪೋರ್ಟಲ್ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನು ಸಾಕಣೆ, ರೇಷ್ಮೆಕೃಷಿ, ಕೃಷಿ ಯಾಂತ್ರಿಕರಣ, ಮತ್ತು ಕೃಷಿಗೆ ಸಂಬಂಧಿಸಿದ ಇತರ ಪೂರಕ ತಾಂತ್ರಿಕತೆಗಳ ಬಗ್ಗೆ ತಾಂತ್ರಿಕ ಮಾಹಿತಿಯು ಲಭ್ಯವಿರುತ್ತದೆ. ಈ ಪೋರ್ಟಲ್ನ್ನುಇತರೆ ಕೃಷಿ ಸಂಬಂಧಿತ ಅಂತರ್ಜಾಲಗಳೊಂದಿಗೆ ಮತ್ತು ಕರ್ನಾಟಕ ರಾಜ್ಯದ ಇತರೆ ಕೃಷಿ ವಿಶ್ವವಿದ್ಯಾನಿಲಯಗಳಿಗೂ ಸಹ ಸಂಪರ್ಕಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ, ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಪ್ರಶ್ನೋತ್ತರಗಳಿಗಾಗಿ ಹಾಗೂ ತರಬೇತಿ ಕಾರ್ಯಕ್ರಗಳು ಹಾಗೂ ಸಭೆಗಳನ್ನು ಆಯೋಜಿಸಲು ಉಪಯುಕ್ತವಾಗುವಂತೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಪರಿಣಿತ ಕೇಂದ್ರವನ್ನು ಮತ್ತು ಅದರ ಸಹ ಕೇಂದ್ರಗಳನ್ನು ೭ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಪ್ರಾರಂಭಿಸಿ ಬೇಡಿಕೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ನಿಯೋಜಿಸಲಾಗುತ್ತಿದೆ. ಹೀಗಾಗಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರವು ಒದು ಕೃಷಿ ಭಂಡಾರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಇ-ಕೃಷಿ ಪೋರ್ಟಲ್ನ್ನಅಂತರರ್ಜಾಲದ ವಿಳಾಸ: http://e.krishiuasb.karnataka.gov.in
ಧ್ಯೇಯೋದ್ದೇಶಗಳು
- ಸಾಂಸ್ಥಿಕ ಮಟ್ಟದಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಕಾರ್ಯನಿರತವಾಗಿ ಕೃಷಿ ಮಾಹಿತಿ ಹಾಗೂ ಉತ್ಪನ್ನಗಳನ್ನು ರೈತರಿಗೆ ಒದಗಿಸುವುದು
- ವಿವಿಧ ವಿಷಯ ತಜ್ಞರುಗಳಿಂದ ರೈತರ ಸಮಸ್ಯೆಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡುವುದು.
- ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಪ್ರಕಟಣೆಗಳು ಮತ್ತು ಮಾಧ್ಯಮಗಳ ಮೂಲಕ ರೈತರಿಗೆ ತಲುಪಿಸುವುದು
- ಬಳಕೆದಾರರ ಅನಿಸಿಕೆ, ಅನುಭವಗಳನ್ನು ದಾಖಲಿಸಿ ಕೃಷಿ ವಿಶ್ವವಿದ್ಯಾನಿಲಯಕ್ಕೆ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸುವುದು.
- ಮಾಹಿತಿ ಸಂವಹನಾ ತಂತ್ರಜ್ಞಾನಗಳ ಮೂಲಕ ತಾಂತ್ರಿಕ ಮಾಹಿತಿಯನ್ನು ಒದಗಿಸುವುದು.
ಚಟುವಟಿಕೆಗಳು
- ಏಕಗವಾಕ್ಷಿ ವ್ಯವಸ್ಥೆಯಡಿ ಸಾಂಸ್ಥಿಕ ಮಟ್ಟದಲ್ಲಿ ರೈತರಿಗೆ ಹಾಗೂ ಇತರೆ ಆಸಕ್ತರಿಗೆ ಅಗತ್ಯವಿರುವ ಬಿತ್ತನೆ ಬೀಜ, ನರ್ಸರಿ ಸಸಿಗಳು, ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಪೋಷಕಾಂಶಗಳ ಮಿಶ್ರಣ, ಕೃಷಿ ತಂತ್ರಜ್ಞಾನ ಆಧಾರಿತ ಪ್ರಕಟಣೆಗಳು ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವುದು.
- ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನು ಸಾಕಣೆ, ರೇಷ್ಮೆಕೃಷಿ ಮುಂತಾದ ವಿಷಯಗಳಲ್ಲಿ ವಿವಿಧ ವಿಸ್ತರಣಾ ಪದ್ಧತಿಗಳ ಮೂಲಕ ತಾಂತ್ರಿಕ ಸಲಹಾ ಸೇವೆಗಳನ್ನು ಉಚಿತವಾಗಿ ರೈತರಿಗೆ ಒದಗಿಸುವುದು.
- ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರವು ನಿರ್ವಹಣಾ ವೆಚ್ಚದಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಂಡು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನು ಸಾಕಣೆಹಾಗೂ ರೇಷ್ಮೆಕೃಷಿಯಲ್ಲಿ ಆಧುನಿಕ ಬೇಸಾಯ ಪದ್ಧತಿಗಳ ಪುಸ್ತಕಗಳು, ಹಸ್ತ ಪ್ರತಿಗಳು ಹಾಗೂ ಕಿರು ಹೊತ್ತಿಗೆಗಳನ್ನು ಪ್ರಕಟಿಸಿ ಮಾರಾಟ ಮಾಡುವುದು.
- ಇತರೆ ಸಂಸ್ಥೆಗಳು ಆಯೋಜಿಸುವ ಕೃಷಿ ಮೇಳಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯದತಂತ್ರಜ್ಞಾನ ಪ್ರದರ್ಶನ ಮತ್ತು ಸುಧಾರಿತ ಬೇಸಾಯ ಪದ್ಧತಿಗಳ ಪುಸ್ತಕಗಳು, ಹಸ್ತಪ್ರತಿಗಳು, ಮಲ್ಟಿಮೀಡಿಯ ಡಿ.ವಿ.ಡಿ.ಗಳು ಮತ್ತು ಇತರೆ ಪ್ರಕಟಣೆಗಳನ್ನು ಮಾರಾಟ ಮಾಡುವುದು.
- ತಂತ್ರಜ್ಞಾನದ ಅಳವಡಿಕೆಯ ಬಗ್ಗೆ ರೈತರ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ದಾಖಲಿಸಿ ಮುಂದಿನ ಕ್ರಮಕ್ಕಾಗಿ ವಿಶ್ವವಿದ್ಯಾನಿಲಯದ ಸಂಶೋಧನೆಗೆ ಒದಗಿಸುವುದು.
- ವಿಶ್ವವಿದ್ಯಾನಿಲಯ ಮತ್ತು ರೈತರ ನಡುವಿನ ಸಂಪರ್ಕವನ್ನು ಸದೃಡಗೊಳಿಸುವುದು.
- ರೈತರ ಸಮಸ್ಯಾತ್ಮಕ ತಾಕುಗಳಿಗೆ ಭೇಟಿ ಹಾಗೂ ಸಲಹಾ ಸೇವೆಯನ್ನು ಒದಗಿಸುವುದು.
- ಅಗ್ರಿ-ಪೋರ್ಟಲ್ ನಿರ್ವಹಣೆ ಮತ್ತು ಡಿಜಿಟೈಸ್ಡ್ ಮಾಹಿತಿಯನ್ನು ಎಲ್ಲಾ ಪಾಲುದಾರರಿಗೆ ಒದಗಿಸುವುದು.
- ವೀಡಿಯೋಕಾನ್ಫ್ರೆನ್ಸ್ ಮುಖಾಂತರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ರೈತರು ನಿರಂತರವಾಗಿ ಕೇಳುವ ಪ್ರಶ್ನೆಗಳಿಗೆ ದಿನ ಪತ್ರಿಕೆಯವಿ ಶೇಷ ಅಂಕಣ (ರೈತ ಮಿತ್ರ) ಮೂಲಕ ಸಮಂಜಸ ಉತ್ತರಗಳನ್ನು ನೀಡುವುದು.
E-Krishi Seve
ಸಿಬ್ಬಂದಿ
ಚಟುವಟಿಕೆಗಳ ಚಿತ್ರಗಳು
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು