ಪ್ರಾಯೋಜನೆಯ ಹೆಸರು : ಅಖಿಲ ಭಾರತ ಸುಸಂಘಟಿತ ಸೂರ್ಯಕಾಂತಿ ಸಂಶೋಧನಾ ಪ್ರಾಯೋಜನೆ
ಸ್ಥಳ : ವಲಯ ಕೃಷಿ ಸಂಶೋಧನಾ ಕೇಂದ್ರ, ಕೃ.ವಿ.ವಿ., ಜಿ.ಕೆ.ವಿ.ಕೆ., ಬೆಂಗಳೂರು
ಸ್ಥಾಪನೆ : ೧೯೭೨
ಕಡ್ಡಾಯ / ಅಜ್ಞಾಪಕ ಗುರಿಗಳು :
- ಅನುವಂಶಿಕ ಸಂಪನ್ಮೂಲಗಳ ಮೌಲ್ಯಮಾಪನ
- ಜೈವಿಕ ಮತ್ತು ಅಜೈವಿಕ ಒತ್ತಡಗಳಿಗೆ ಪ್ರತಿರೋಧಕ ಶಕ್ತಿ ಹೊಂದಿರುವ ಪ್ರದೇಶ-ನಿರ್ದಿಷ್ಟ ಹೆಚ್ಚಿನ ಇಳುವರಿ ಕೊಡುವ ತಳಿ/ಸಂಕರಣ ತಳಿಗಳನ್ನು ಅಭಿವೃದ್ಧಿ ಪಡಿಸುವುದು
- ಉತ್ಪಾದನೆಯನ್ನು ಹೆಚ್ಚಿಸಲು ಆರ್ಥಿಕವಾಗಿ ಕಾರ್ಯನಿರ್ವಹಿಸುವ ಉತ್ಪಾದನೆ ಮತ್ತು ಸಂರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು
- ಬಹು-ಸ್ಥಳ ಪರೀಕ್ಷೆಯ ಮೂಲಕ ತಳಿ/ಸಂಕರಣ ತಳಿಗಳನ್ನು ಹಾಗೂ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಾಮುಖ್ಯತೆಯ ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡುವುದು
- ತಂತ್ರಜ್ಞಾನ ವರ್ಗಾವಣೆ
- ಸುಧಾರಿತ ಸಂಕರಣ ತಳಿಗಳ ಮತ್ತು ಅವುಗಳ ಪಾಲಕರ ಮೂಲ ಬೀಜೋತ್ಪಾದನೆ ಮಾಡುವುದು
ಸಂಶೋಧನಾ ಕಾರ್ಯಕ್ರಮಗಳು :
- ಜೈವಿಕ ಹಾಗೂ ನಿರ್ಜೈವಿಕ ಒತ್ತಡಕ್ಕೆ ನಿರೋಧಕತೆ ಹೊಂದಿರುವ ಸಂಕರಣ ತಳಿ ಅಭಿವೃದ್ಧಿಗೆ ಸಸ್ಯ ತಳಿ ಸಂವರ್ಧನ ಹಾಗೂ ಜೈವಿಕ ತಂತ್ರಜ್ಞಾನ ವಿದಾನಗಳ ಬಳಕೆ
- ಉತ್ತಮ ಬೇಸಾಯ ತಾಂತ್ರಿಕತೆಯಿರುವ ಹಾಗೂ ವೈವಿದ್ಯಮಯ ಸಿ.ಎಂ.ಎಸ್ ಮೂಲವಿರುವ ಮತ್ತು ಪ್ರಮುಖ ರೋಗ ಹಾಗೂ ಕೀಟಗಳಿಗೆ ನಿರೋಧಕತೆ ತೋರುವ ಸಂಕರಣ ತಳಿಗಳ ಅಭಿವೃದ್ಧಿ
- ಕೀಟಹಾಗೂ ರೋಗಗಳಿಗೆ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳ ಅಭಿವೃದ್ಧಿಗೊಳಿಸುವಿಕೆ
- ಸೂರ್ಯಕಾಂತಿ ಬೆಳೆಯ ವಿವಿಧ ರೀತಿಯ ಉಪಯೋಗಗಳ ಅಭಿವೃದ್ಧಿ ಹಾಗೂ ಜನಪ್ರಿಯಗೊಳಿಸುವಿಕೆ
- ಆರ್ಥಿಕ ಇಳುವರಿಯ ಹೆಚ್ಚುವರಿಕೆಗೆ ಉತ್ತಮ ನಿರ್ವಹಣಾ ಕ್ರಮಗಳಿಗೆ ಪ್ರಾಶಸ್ತಯ ಕೂಡುವುದು.
ಸಂಶೋಧನಾ ಸಾಧನೆಗಳು :
ತಂತ್ರಜ್ಞಾಗಳ ಅಭಿವೃದ್ಧಿ/ ಪೇಟೆಂಟ್/ ತಳಿಗಳ ಬಿಡುಗಡೆ/ ವಾಣೀಜ್ಯಿಕರಣ :
ಕ್ರಮ ಸಂಖ್ಯೆ | ತಂತ್ರಜ್ಞಾಗಳ ಅಭಿವೃದ್ಧಿ | ವರ್ಷ |
ಬೆಳೆ ಅಭಿವೃದ್ಧಿ: ಬಿ. ಸಂಕರಣ ತಳಿಗಳು/ ತಳಿಗಳ ಬಿಡುಗಡೆ | ||
1. | ಬಿ.ಎಸ್.ಎಚ್-೧ (ರಾಷ್ಟ್ರ ಮಟ್ಟದಲ್ಲಿ) | 1980 |
2. | ಇ.ಸಿ.68415 ತಳಿ (ರಾಜ್ಯ ಮಟ್ಟದಲ್ಲಿ) | 1974 |
3. | ಮಾರ್ಡನ್ ತಳಿ (ರಾಷ್ಟ್ರ ಮಟ್ಟದಲ್ಲಿ) | 1978 |
4. | ಕೆ.ಬಿ.ಎಸ್.ಎಚ್ -1 (ರಾಷ್ಟ್ರೀಯ ಮಟ್ಟದಲ್ಲ್ಲಿ) | 1992 |
5. | ಕೆ.ಬಿ.ಎಸ್.ಎಚ್ -41 (ರಾಜ್ಯ ಮಟ್ಟದಲ್ಲ್ಲಿ) | 2001 |
6. | ಕೆ.ಬಿ.ಎಸ್.ಎಚ್ -42 (ರಾಜ್ಯ ಮಟ್ಟದಲ್ಲ್ಲಿ) | 2001 |
7. | ಕೆ.ಬಿ.ಎಸ್.ಎಚ್ -44 (ರಾಷ್ಟ್ರ ಮಟ್ಟದಲ್ಲಿ) | 2002 |
8. | ಕೆ.ಬಿ.ಎಸ್.ಎಚ್ -53 (ರಾಜ್ಯ ಮಟ್ಟದಲ್ಲಿ) | 2008 |
9. | ಕೆ.ಬಿ.ಎಸ್.ಎಚ್ -78 (ರಾಜ್ಯ ಮಟ್ಟದಲ್ಲಿ) | 2018 |
10. | ಕೆ.ಬಿ.ಎಸ್.ಎಚ್ -85 (ರಾಷ್ಟ್ರೀಯ ಮಟ್ಟದಲ್ಲಿ) | 2022 |
ವಾಣೀಜ್ಯಿಕರಣ :
ಕ್ರಮ ಸಂಖ್ಯೆ | ಸಾಧನೆಗಳು | ಅವಧಿ |
1. | ಮಧ್ಯಮ ಎತ್ತರ ಮತ್ತು ಮುಂಚಿತ ಮಾಗುವಿಕೆಯ 58 RxR ಮತ್ತು 12 B x B ಜೀನ್ ಪೂಲ್‌ಗಳನ್ನು ಅಭಿವೃದ್ಧಿ ಪಡಿಸಲಾಯಿತು. | 2015 – 2022 |
2. | ಅತಿ ಹೆಚ್ಚು ಒಲೀಕ್ ಆಮ್ಲ ಉಳ್ಳಾ 40 R x R ಮತ್ತು 5 B x B ಜೀನ್ ಪೂಲ್‌ಗಳನ್ನು ಅಭಿವೃದ್ಧಿ ಪಡಿಸಲಾಯಿತು | 2012-2022 |
3. | ಗಂಡು ತಳಿಗಳು (ಫರ್ಟಿಲಿಟಿ ರಿಸ್ಟೋರರ್) RHA 95-C-1, RHA 95-C-2, GKVK-1 ಅಭಿವೃದ್ಧಿ ಪಡಿಸಲಾಯಿತು | 2001- 2010 |
4. | 1830 ಸಿಂಗಲ್ ಕ್ರಾಸ್ ಸಂಕರಣ ತಳಿಗಳು ಮತ್ತು 283 ತ್ರೀವೇ ಸಂಕರಣ ತಳಿಗಳನ್ನು ಸಂಶ್ಲೇಷಿಸಲಾಗಿದೆ ಮತ್ತು ಮೌಲ್ಯಮಾಪನ ಮಾಡಲಾಗಿದೆ | 2001 – 2022 |
5. | ಕೇಂದ್ರವು 64 CMS ಲೈನ್‌ಗಳು ಹಾಗೂ ಅವುಗಳ ನಿರ್ವಾಹಕ ಲೈನ್‌ಗಳು, 320 ಫಲವತ್ತತೆ ಪುನಸ್ಥಾಪಕ/ ಗಂಡು ತಳಿಗಳು, 350 ಇನ್ಬೆçಡ್ ಲೈನ್‌ಗಳು, 34 ಜಿಪಿಬಿ ಲೈನ್‌ಗಳು, 98 ಬ್ಯಾಕ್ ಕ್ರಾಸ್ ಲೈನ್‌ಗಳು, 60 ಕನ್‌ಫೆಕ್ಷನರಿ ಲೈನ್‌ಗಳು ಮತ್ತು 4 ಅಲಂಕಾರಿಕ ಲೈನ್‌ಗಳನ್ನು ನಿರ್ವಹಿಸುತ್ತಿದೆ. | 2022 |
6. | ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಜರ್ಮ್ಪ್ಲಾಜಂ ಕ್ಷೇತ್ರ ದಿನಾಚರಣೆಯನ್ನು ನಡೆಸಲಾಯಿತು | 17-18,October 2014 |
7. | NBPGR, ನವದೆಹಲಿಗೆ ಜರ್ಮ್ಪ್ಲಾಜಂ ಲೈನ್‌ಗಳನ್ನು ಸಲ್ಲಿಸಲಾಗಿದೆ / ಠೇವಣಿ ಮಾಡಲಾಗಿದೆ. | 2018-2022 |
8. | ಬಿಡುಗಡೆಯಾದ ಎಲ್ಲಾ ಸಂಕರಣ ತಳಿಗಳ ಪೋಷಕ ರೇಖೆಗಳ ನಿರ್ವಹಣೆ ಸಂತಾನೋತ್ಪತ್ತಿಯನ್ನು ಅನುವಂಶಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಲಾಗಿದೆ | 2022 |
ಸಾಧನೆಗಳು :
- ಕೃ.ವಿ.ವಿ., ಬೆಂಗಳೂರು ೫ ಸೂರ್ಯಕಾಂತಿ ಸಂಕರಣತಳಿಗಳನ್ನು (KBSH 41, KBSH 44 , KBSH 53, KBSH 78 ಮತ್ತು KBSH 79 ) ಖಾಸಗಿ ಕಂಪನಿಗಳೊಂದಿಗೆ ವಾಣೀಜ್ಯಿಕರಣದ ಒಪ್ಪಂದವನ್ನು ಮಾಡಿಕೊಂಡು ಬೇರೆ ರಾಜ್ಯಗಳಲ್ಲಿಯೂ ಸಹ ಸೂರ್ಯಕಾಂತಿ ಬೆಳೆ ಸಾಗುವಳಿಯನ್ನು ವಿಸ್ತರಿಸಲಾಗುತ್ತಿದೆ.
ಬೆಳೆ ಉತ್ಪಾದನೆ ಹಾಗೂ ಸಂರಕ್ಷಣೆ ತಂತ್ರಜ್ಞಾನಗಳು :
ಬಿತ್ತನೆಯ ಸಮಯದಲ್ಲಿ ಒಂದು ಹೆಕ್ಟೇರ್‌ಗೆ ೨೦ ಕೆಜಿ ಝಿಂಕ್ ಸಲ್ಪೇಟ್‌ನ್ನು ಮಣ್ಣಿಗೆ ಸೇರಿಸುವುದು ಹಾಗೂ ಹೂವಾಡುವ ಸಮಯದಲ್ಲಿ ಶೇ. ೦.೨ ರಷ್ಟು ಬೋರಾಕ್ಸ್ನ್ನು ಸಿಂಪರಣೆ ಮಾಡುವುದು
- ಸೂರ್ಯಕಾಂತಿ ಬೆಳೆಯಲ್ಲಿ, ಅಜಟೋಬ್ಯಾಕ್ಟರ್ ಕ್ರಾಕಮ್ ಜೈವಿಕ ಗೊಬ್ಬರ ಜೊತೆ ಬೀಜೊಪಚಾರವನ್ನು ಮಾಡಿ ಜೊತೆಗೆ ಶೇ. ೭೫ ರಷ್ಟು ಶಿಫಾರಸ್ಸಿನ ಗೊಬ್ಬರವನ್ನು ಕೊಡುವುದರಿಂದ ಸೂರ್ಯಕಾಂತಿಯ ಬೀಜದ ಇಳುವರಿಯು ಶೇ. ೧೦೦ ರಷ್ಟು ಶಿಫಾರಸ್ಸಿನ ಗೊಬ್ಬರದ ಬಳಕೆಗೆ ಸರಿಸಮಾನವಾಗಿರುತ್ತದೆ.
- ಬೆಂಗಳೂರಿನ ಕೆಂಪು ಮಣ್ಣೆನಲ್ಲಿ ಸೂರ್ಯಕಾಂತಿ ಬೆಳೆಯು ಶೇ. ೯೦ ಕೆಜಿ ಸಾರಜನಕ ಹಾಗೂ ಶೇ. ೯೦ ಕೆಜಿ ರಂಜಕ ಶಿಫಾರಸ್ಸಿಗೆ ಗಮನಾರ್ಹವಾಗಿ ಹಾಗೂ ಆರ್ಥಿಕವಾಗಿ ಪ್ರತಿಕ್ರಯಿಸುತ್ತದೆ.
- ಸೂರ್ಯಕಾಂತಿ ಬೆಳೆಯಲ್ಲಿ ಪೋಷಕಾಂಶ ಪ್ರಮಾಣ ೬೦:೭೫:೬೦ ಕೆಜಿ ಸಾರಜನಕ, ರಂಜಕ ಹಾಗೂ ಪೂಟ್ಯಾಷ್‌ನ್ನು ೯೦:೯೦:೬೦ ಕೆಜಿ ಸಾರಜನಕ, ರಂಜಕ ಹಾಗೂ ಪೂಟ್ಯಾಷ್ ಪ್ರಮಾಣಕ್ಕೆ ಮರುಮೌಲ್ಯಮಾಪನ ಮಾಡಿ ಶಿಫಾರಸ್ಸು ಮಾಡಲಾಗಿದೆ.
- ಕರ್ನಾಟಕದ ವಲಯ-೬ (ದಕ್ಷಿಣ ಒಣ ಪ್ರದೇಶ) ರಲ್ಲಿ ಸೂರ್ಯಕಾಂತಿ ಬೆಳೆಯನ್ನು ಮುಂಗಾರಿನಲ್ಲಿ ಬೆಳೆದು, ದ್ವಿದಳ ಧಾನ್ಯ ಬೆಳೆಯನ್ನು ಹಿಂಗಾರಿನಲ್ಲಿ ಬೆಳೆಯುವುದರಿಂದ ಸಾರಜನಕ ಪ್ರಮಾಣವನ್ನು ಶೇ. ೨೫ ರಷ್ಟು ಕಡಿಮೆ ಮಾಡಬಹುದು ಹಾಗೂ ಬೀಜದ ಇಳುವರಿಯು ಶೇ. ೧೭ ರಷ್ಟು ಹೆಚ್ಚಿಸುವುದರ ಜೊತೆಗೆ ೨.೨೨ ಲಾಭ ವೆಚ್ಚ ಅನುಪಾತವನ್ನು ಪಡೆಯಬಹುದಾಗಿದೆ.
- ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರವನ್ನು ಬಳಸುವುದರಿಂದ ಶೇ. ೩೩ ರಷ್ಟು ಹೆಚ್ಚಿನ ಸೂರ್ಯಕಾಂತಿ ಇಳುವರಿಯನ್ನು ಪಡೆಯುವುದರ ಜೊತೆಗೆ ೨.೦೩ ಲಾಭ ವೆಚ್ಚ ಅನುಪಾತವನ್ನು ಪಡೆಯಬಹುದಾಗಿದೆ.
- ಮುಂಗಾರಿನಲ್ಲಿ ಶಿಫಾರಸ್ಸಿನ ಶೇ. ೧೦೦ ರಷ್ಟು ರಾಸಾಯನಿಕ ಗೊಬ್ಬರ +೫ಟನ್ ಕೊಟ್ಟಿಗೆ ಗೊಬ್ಬರ ಒಂದು ಹೆಕ್ಟೇರ್‌ಗೆ ಕೊಟ್ಟು ಹಿಂಗಾರಿನಲ್ಲಿ ಸೂರ್ಯಕಾಂತಿ ಬೆಳೆಗೆ ಶೇ. ೧೦೦ ರಷ್ಟು ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಬೆಳೆ ಪದ್ದತಿ ಇಳುವರಿಯಲ್ಲಿ ಶೇ. ೧೬ ರಷ್ಟು ಹೆಚ್ಚು ಇಳುವರಿ ಹಾಗೂ ೨.೭೭ ರಷ್ಟು ಲಾಭ ವೆಚ್ಚ ಅನುಪಾತವನ್ನು ಗಳಿಸಬಹುದು ಎಂದು ಕೆಂಪು ಮಣ್ಣಿನ ದಕ್ಷಿಣ ಒಣ ಪ್ರದೇಶ ಕರ್ನಾಟಕ ರಾಜ್ಯದಲ್ಲಿ ಇದನ್ನು ಪ್ರಮಾಣಿಕರಿಸಲಾಗಿದೆ.
- ಆಲ್‌ಟ್ರನೇರಿಯಾ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ೧೫ ದಿನಕ್ಕೊಮ್ಮೆ ಪ್ರೊಪಿಕೊನಾಜೋಲ್ ೨೫ ಇಸಿ ೧ ಮಿಲೀ / ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು
- ಕೇದಿಗೆ ರೋಗದ ನಿರ್ವಹಣೆಗೆ ಮೆಟಲಾಕ್ಸಿಲ್ ಎಂ. ೩೧.೮% ಇಎಸ್ ೫ ಗ್ರಾಂ ಪ್ರತಿ ಕೆಜಿ ಸೂರ್ಯಕಾಂತಿ ಬೀಜಕ್ಕೆ ಬೀಜೋಪಚಾರ ಮಾಡುವುದು
- ಇಮಿಡಾಕ್ಲೋಪ್ರಿಡ್ ೭೦ ಡಬ್ಲೂ ಎಸ್ ೫ಗ್ರಾಂ/ಕೆಜಿ ಬೀಜಕ್ಕೆ ಅಥವಾ ಥಯೋಮಿತೋಕ್ಸಯಮ ೩೦ ಎಪ್ ಎಸ್ ೪ ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಹಾಕಿ ಬೀಜೋಪಚಾರ ಮಾಡುವುದರಿಂದ ರಸ ಹೀರುವ ಕೀಟಗಳು ಹಾಗೂ ನೆಕ್ರೋಸಿಸ್ ನಂಜಾಣುವಿನ ನಿರ್ವಹಣೆಯನ್ನು ಬಿತ್ತನೆ ಮಾಡಿದ ೨೦ ರಿಂದ ೨೫ ದಿನಗಳವರೆಗೆ ಮಾಡಬಹುದು. ಇದರೊಂದಿಗೆ ಇಮಿಡಾಕ್ಲೋಪ್ರಿಡ್ ೧೭.೮ಎಲ್‌ಎಸ್ @೦.೫ ಎಂ ಎಲ್ / ಲೀಟರ್ ಅಥವಾ ಥಯೋಮಿತೋಕ್ಸಯಮ ೨೫ ಡಬ್ಲೂಜಿ @ ೦.೩ಗ್ರಾಂ/ ಲೀಟರ್ ನೀರಿಗೆ ಬೆರೆಸಿ ಎರಡು ಬಾರಿ ೧೫ ದಿನಕ್ಕೊಮ್ಮೆ ಬಿತ್ತನೆ ಮಾಡಿದ ೩೦ ರಿಂದ ೪೫ ದಿನಗಳ ನಂತರ ಸಿಂಪಡಿಸುವುದರಿಂದ ನೆಕ್ರೋಸಿಸ್ ನಂಜಾಣು ರೋಗವನ್ನು ನಿರ್ವಹಣೆ ಮಾಡಬಹುದು.
- ಸೂರ್ಯಕಾಂತಿ ತೆನೆ ಕೊರಕ ನಿಯಂತ್ರಣಕ್ಕೆಎರಡು ಬಾರಿ ಸ್ಪಿನೋಸಾಡ್ ೪೫ ಎಸ್.ಸಿ @ ೧ಮಿಲಿ ೧೦ ಲೀಟರ್ ನೀರಿಗೆ ಬೆರೆಸಿ ೧೫ ದಿನಗಳ ನಂತರ ಪುನ ಸಿಂಪಡಿಸುವುದು.
- ಎಲೆ ತಿನ್ನುವ ಕಂಬಳಿ ಹುಳಗಳ ನಿರ್ವಹಣೆಗೆ ಶೇ.೫ರ ಬೇವಿನ ಬೀಜದ ಕಷಾಯವನ್ನು ಬಿತ್ತನೆ ಮಾಡಿದ ೪೦ ರಿಂದ ೫೫ ದಿನಗಳಲ್ಲಿ ಸಿಂಪಡಿಸುವುದು
- ಕಳೆಗಳ ನಿರ್ವಹಣೆಗೆ ಉದಯೋತ್ತರ ಕಳೆನಾಶಕ ಕ್ಲೂಜಲೋಫಾಸ್-ಪಿ-ಇತೈಲ್ ೧೫% ಇಸಿ @೧.೫ ಮಿಲೀ/ಲೀಟರ್ ನೀರಿಗೆ ಬೆರಸಿ ಬಿತ್ತನೆಯಾದ ೧೫-೨೦ ದಿನಗಳ ನಂತರ ಸಿಂಪಡಿಸುವುದು.ಕಾರ್ಬಡೈಜಿ ೧೨% + ಮ್ಯಾಂಕೋಜೆಬ್ ೬೩% ಡಬ್ಲೂಪಿ @ ೨ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಬಳಸಿ ಬೀಜೋಪಚಾರ ಮಾಡುವುದು
- ಸೂರ್ಯಕಾಂತಿಯಲ್ಲಿ ಬೂದಿ ರೋಗದ ನಿರ್ವಹಣೆಗೆ,ರೋಗದ ಚಿಹ್ನೆ ನೋಡಿದ ನಂತರ ಅಥವಾ ಬಿತ್ತನೆಯಾದ ೪೫ ದಿನಗಳ ನಂತರ ಡೈಫೆನಕೋನಾಜೋಲ್ ೨೫% + ಪ್ರೋಪಿಕೋನಾಜೋಲ್ ೨೫% @ ೦.೨೫ ಮಿಲಿ/ಲೀಟರ್ ನೀರಿಗೆ ಬೆರೆಸಿಸಿಂಪಡಿಸುವುದು.
ಎಲೆ ತಿನ್ನುವ ಹುಳುಗಳು ಹಾಗೂ ಹೆಲಿಕೋವರ್ಪ ಕೂರಕದ ನಿರ್ವಹಣೆಗೆ ಕ್ಲೋರಂಟ್ರಾನಿಲಿಪ್ರೋಲ್ ೧೮.೫ ಎಸ್ಸಿ ಬಳಕೆ ಬಿಟಿ ೧೨೭ರ ಬಳಕೆಗಿಂತ ಉತ್ತಮ.
ಪ್ರಶಸ್ತಿಗಳು :
- ಐ.ಸಿ.ಎ.ಅರ್-ಐ.ಐ.ಓ.ಆರ್, ಹೈದರಬಾದ್ ರವರು ನಮ್ಮ ಐದು ವರ್ಷಗಳ (೨೦೧೭-೨೦೨೧) ಎಣ್ಣೆಕಾಳುಗಳ ಸಂಶೋಧನಾ ಸಾದನೆಗಳನ್ನು ಪರಿಗಣಿಸಿ ಅತ್ಯುತ್ತಮ ಎಣ್ಣೆಕಾಳು ಕೇಂದ್ರವೆಂದು ಪ್ರಶಸ್ತಿ ನೀಡಿದ್ದಾರೆ.
- ಉತ್ತಮ ಪ್ರದರ್ಶನ ಮಳಿಗೆ ಪ್ರಶಸ್ತಿ- ಕೃಷಿಮೇಳ ೨೦೨೨, ಕೃವಿವಿ, ಬೆಂಗಳೂರು, ಜಿಕೆವಿಕೆ
- ಡಾ. ಸಿ.ಪಿ. ಮಂಜುಳರವರ ವಿದ್ಯಾರ್ಥಿ ಕು. ದಿವ್ಯಶ್ರೀಗೆ ಅತ್ಯುತ್ತಮ ಎಂ.ಎಸ್ಸಿ ಪ್ರಬಂಧ ಪ್ರಶಸ್ತಿ ೨೦೨೨ರಲ್ಲಿ, ಸಸ್ಯ ರೋಗ ಶಾಸ್ತ್ರ ಕೃಷಿ ಕಾಲೇಜು, ಆನಂದ್, ಗುಜರಾತ್‌ರಲ್ಲಿ ನಡೆದ ಸಮ್ಮೇಳನದಲ್ಲಿ ದೊರೆಯಿತ್ತು.
- ಡಾ. ಅರ್ಜುಮನ್ ಬಾನು, ಡಾ. ಉಮರ್ ಎಂ.ಎಸ್., ಕು. ದಿವ್ಯ ರವರು ಅತ್ಯುತ್ತಮ ಪಿಎಚ್‌ಡಿ ಪ್ರಬಂಧ ಪ್ರಶಸ್ತಿಯನ್ನು ೨೦೨೨ ರಲ್ಲಿ ಪಡೆದಿರುತ್ತಾರೆ.
- ಡಾ|| ಎಂ.ಎಸ್. ಉಮಾ ಇವರಿಗೆ ಸಂಸ್ಥಾಪನ ದಿನದೆಂದು ಪ್ರಶಸ್ತಿಯನ್ನು ಕೃವಿವಿ, ಬೆಂಗಳೂರು ಇವರಿಂದ 2016-17 ರಲ್ಲಿ DST, GOI ರವರ ರೂ.62 ಲಕ್ಷ ಪ್ರಯೋಜನೆ ಪಡೆದುದ್ದಕ್ಕೆ ನೀಡಿರುತ್ತಾರೆ.
- ಡಾ. ಜಿ.ಎಂ. ಸುಜಿತ್ ರವರಿಗೆ ಪ್ರೊ. ಬಿ.ವಿ. ವೆಂಕಟರಾವ್ ಅತ್ಯುತ್ತಮ ವೈಜ್ಞಾನಿಕ ಸಂಶೋಧನಾ ಲೇಖನ ಪ್ರಶಸ್ತಿ-೨೦೧೭ರನ್ನು ಕೃಷಿಮೇಳ ೨೦೧೭ ರಲ್ಲಿ ಕೃವಿವಿ, ಬೆಂಗಳ್ರರು ಇವರಿಂದ ಪಡೆದಿದ್ದಾರೆ.
- ಕೃಷಿ ಮೇಳ ೨೦೧೮-೧೯ರ ದತ್ತು ಪ್ರಬಂಧ ಮಂಡನೆಗೆ ಅತ್ಯುತ್ತಮ ಮಳಿಗೆ ಮತ್ತು ಕ್ಷೇತ್ರ ಪ್ರಾತ್ಯಕ್ಷಿಕೆ ಪ್ರಶಸ್ತಿಯನ್ನು ಈ ಪ್ರಯೋಜನೆ ಪಡೆದಿರುತ್ತದೆ.
- ಡಾ. ಸಿ.ಪಿ. ಮಂಜುಳ ಅವರು ೨೦೨೧ ರ ಸೆಪ್ಟೆಂಬರ್ ೧೫ ರಿಂದ ೧೭ ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ೧೬ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ಮಹಿಳಾ ವಿಜ್ಞಾನಿ ಪ್ರಶಸ್ತಿ ಪಡೆದಿರುತ್ತಾರೆ.
- ಕೃಷಿ ಮೇಳ ೨೦೨೦ ಮತ್ತು ೨೦೨೧ರಲ್ಲಿ ದತ್ತು ಪ್ರಯೋಜನೆಯ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತ್ತಿರುತ್ತದೆ
- ಡಾ. ಸಿ.ಪಿ. ಮಂಜುಳಅತ್ಯುತ್ತಮ ವೈಜ್ಞಾನಿಕ ಪ್ರಬಂಧ ಮಂಡನೆಗೆ ೨೦೨೦ ಮತ್ತು ೨೦೨೩ರಲ್ಲಿ ಸಸ್ಯರೋಗಶಾಸ್ತ್ರ ವಿಭಾಗದಲ್ಲಿ ತಮಿಳುನಾಡು ಮತ್ತು ಹ್ಶೆದರಬಾದಿನಲ್ಲಿ ನಡೆ IPS ಮತ್ತು ICVO 2023 ಸವ್ಮ್ಮೇಳನದಲ್ಲಿ ದೊರೆತ್ತಿರುತ್ತದೆ.
ಪ್ರಾಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾದ ಮೂಲ ಸೌಕರ್ಯ ಮತ್ತು ಭೌತಿಕ ಸೌಲಭ್ಯಗಳು
- ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟೊಮೀಟರ್
- ಅಣ್ವಿಕ ಜೈವಿಕ ಪ್ರಯೋಗಾಲಯ
- ಪರದೆ ಮನೆ ಮತ್ತು ಕೀಟ ಪಂಜರ
- ಉನ್ನತ ಮಟ್ಟದ ಉಪಕರಣಗಳಾದ, ಪಿ.ಸಿ.ಆರ್., ಮಿಲಿಪೂರ್ ವಾಟರ್ ಪ್ಯೂರಿಫಿಕೇಶನ್ ಸಿಸ್ಟಂ, ವಾಟರ್ ಪೊಟೆಂಶಿಯಲ್‌ಮೀಟರ್, ಮುಂತಾದವು.
ಇತರೆ ಕಾರ್ಯಕ್ರಮಗಳು :
ತರಬೇತಿ/ ಕ್ಷೇತ್ರೋತ್ಸವ/ / ಅಧಿಕ ಪ್ರಮಾಣದ ಪ್ರಾತ್ಯಕ್ಷಿಕೆಗಳು :
ಕ್ರಮ ಸಂಖ್ಯೆ | ವಿಷಯ | ದಿನಾಂಕ | ಸ್ಥಳ |
1 |
ಹವಾಮಾನ ಬದಲಾವಣೆಯ ಪರಿಸ್ಥಿತಿಯಲ್ಲಿ ಎಣ್ಣೆಬೀಜ ಬೆಳೆಯುವ ಬುಡಕಟ್ಟು ರೈತರ ಜ್ಞಾನವನ್ನು ಹೆಚ್ಚಿಸಲು ತೈಲ ಬೀಜ ಬೆಳೆಗಳ ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು |
18/05/2022 ಣo 19/05/2022 | ಅ.ಭಾ.ಸು.ಸೂ.ಪ್ರಾ,
ಜಿ.ಕೆ.ವಿ.ಕೆ., ಬೆಂಗಳೂರು |
2 | ಸೂರ್ಯಕಾಂತಿ ಮುಂಚೂಣಿ ಪ್ರಾತ್ಯಾಕ್ಷಿಕೆಯ ಕ್ಷೇತ್ರ ದಿನ | 29.10.2022 | ಬೆಂಗ ಹಿರಿಯಬ್ಬೆ, ಹಿರಿಯೂರು ತಾ., ಚಿತ್ರದುರ್ಗ ಜಿಲ್ಲೆ |
3 | ಸರ್ಕಾರಿ ಮತ್ತು ಖಾಸಗಿ ಸೂರ್ಯಕಾಂತಿ ಸಂಕರಣ ತಳಿಗಳ ಕ್ಷೇತ್ರೋತ್ಸವ | 11.02.2023 | ಅ.ಭಾ.ಸು.ಸೂ.ಪ್ರಾ,
ಜಿ.ಕೆ.ವಿ.ಕೆ., ಬೆಂಗಳೂರು |
4 | ಸೂರ್ಯಕಾಂತಿ ತಳಿಗಳ ಕ್ಷೇತ್ರೋತ್ಸವ | 17.10.2014 -18.10.2014 | ಅ.ಭಾ.ಸು.ಸೂ.ಪ್ರಾ,
ಜಿ.ಕೆ.ವಿ.ಕೆ., ಬೆಂಗಳೂರು |
ಮುಂಚೂಣಿ ಪ್ರಾತ್ಯಕ್ಷಿಕೆ :
ಕ್ರಮ ಸಂಖ್ಯೆ | ಮುಂಚೂಣಿ ಪ್ರಾತ್ಯಕ್ಷಿಕೆ | ಸ್ಥಳ | ವಿಸ್ತರಣೆ (ಎಕರೆ) | ಹಂಗಾಮು |
1 | ಕೆ.ಬಿ.ಎಸ್.ಎಚ್ -78 | ಗೌರಿಬಿದನೂರ್ ತಾ., ಚಿಕ್ಕಬಳ್ಳಪುರ ಜಿಲ್ಲೆ | 50 | ಹಿಂಗಾರು -2023 |
2 | ಕೆ.ಬಿ.ಎಸ್.ಎಚ್ -85 | ಚಳ್ಳಕೆರೆ ತಾ., ಚಿತ್ರದುರ್ಗ ಜಿಲ್ಲೆ | 50 | ಮುಂಗಾರು-2023 |
ಬಾಹ್ಯವಾಗಿ ಧನಸಹಾಯ ಪಡೆದು ಚಾಲಿಯಲ್ಲಿರುವ ಪ್ರಯೋಜನೆಗಳು :
ಕ್ರಮ ಸಂಖ್ಯೆ | ಹೆಸರು | ಯೋಜನೆಗಳು | ಹಣಕಾಸು ನೆರವು | ಅವಧಿ | |
1. | ಡಾ. ಎಂ. ಎಸ್. ಉಮಾ (ಪ್ರಧಾನ ಸಂಶೋಧಕರು) | ಸೂರ್ಯಕಾಂತಿ ಬೆಳೆಯ ಪುನರಜ್ಜೀವನ ಪ್ರಾಯೋಜನೆ | ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಅನ್ಮದಾನಿತ ಪ್ರಾಯೋಜನೆ, ಭಾರತ ಸರ್ಕಾರ | 57.34 ಲಕ್ಷ | 2022 ರಿಂದ
2025 |
2. | ಡಾ. ಕೆ. ಎಸ್. ಸೋಮಶೇಖರ್
(ಪ್ರಧಾನ ಸಂಶೋಧಕರು) |
ಫೈಟೊಟಾಕ್ಸಿಸಿಟಿ ಮತ್ತು ಕ್ಷೇತ್ರ ಬೆಳೆಗಳ ಆಯ್ಕೆಯ ಮೇಲೆ ಹೊಸ ಪೀಳಿಗೆಯ ಸಸ್ಯನಾಶಕ ಅಣುಗಳ ಪರಿಣಾಮಕಾರಿತ್ವದ ಅಧ್ಯಯನಗಳು | ಗಾದ್ರೇಜ್ ಅಗ್ರೋ ವೆಟ್ ಪ್ರೆವೆಟ್ ಲಿ ಮಿಟೆಡ್ | 4.38 ಲಕ್ಷ | 2023 ರಿಂದ
2024 |
3. | ಡಾ. ಕೆ. ಎಸ್. ಸೋಮಶೇಖರ್ (ಪ್ರಧಾನ ಸಂಶೋಧಕರು) |
ದಕ್ಷಿಣ ಕರ್ನಾಟಕದ ವಿವಿಧ ಕೃಷಿ ಹವಾಮಾನ ವಲಯಗಳಲ್ಲಿನ ರೈತರ ಪರಿಸರ ಸುಸ್ಥಿರ ಮತ್ತು ಜೀವನೋಪಾಯದ ಭದ್ರತೆಗಾಗಿ ಹೆಬ್ಬೇವು ಆಧಾರಿತ ಕೃಷಿ ಅರಣ್ಯ ಪ್ರಾಯೋಜನೆ | ಆರ್.ಕೆ.ವಿ.ವೈ., ಭಾರತ ಸರ್ಕಾರ | 32 ಲಕ್ಷ | 2019 ರಿಂದ
2022 |
Staff Profile
ಡಾ|| ಎಂ.ಎಸ್. ಉಮಾ
ಹುದ್ದೆ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ಅರ್ಹತೆ : ಪಿಎಚ್ಡಿ
ವಿಷಯ ಪರಿಣತೆ :: ಅನುವಂಶಿಯತೆ ಮತ್ತು ತಳಿಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 16.03.2006
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : :02.06.2017
umauas@uasbangalore.edu.in
umauas@gmail.com
9844638869
ಡಾ|| ಎಸ್.ಡಿ ನೆಹರು
ಹುದ್ದೆ : ಕಿರಿಯ ತಳಿಶಾಸ್ತ್ರಜ್ಞರು
ಶೈಕ್ಷಣಿಕ ಅರ್ಹತೆ : ಪಿಎಚ್ಡಿ
ವಿಷಯ ಪರಿಣತೆ : ಅನುವಂಶಿಯತೆ ಮತ್ತು ತಳಿಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :15.02.2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.04.2015
nehrusd@uasbangalore.edu.in
nehrusd@gmail.com
9480302554
ಡಾ|| ಕೆ.ಎಂ ಶ್ರೀನಿವಾಸ ರೆಡ್ಡಿ
ಹುದ್ದೆ : ಕಿರಿಯ ಕೀಟಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಕೀಟಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 15.07.2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.10.2013
kmsreddy@uasbangalore.edu.in
srinivasreddykm@gmail.com
9916196815
ಡಾ|| ಸಿ.ಪಿ. ಮಂಜುಳ
ಹುದ್ದೆ : ಕಿರಿಯ ಸಸ್ಯ ರೋಗಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಸಸ್ಯರೋಗಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 15.07.2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 08.03.2019
manjulapoovi@uasbangalore.edu.in
manjula.poovaiah@rediffmail.com
9916930120
ಡಾ|| ಕೆ.ಎಸ್ ಸೋಮಶೇಕರ್
ಹುದ್ದೆ : ಕಿರಿಯ ಬೇಸಾಯಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಬೇಸಾಯಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 30.01.2018
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 08.07.2019
kssomashekar@uasbangalore.edu.in
somashekar.ks18@gmail.com
9620475872
ಶ್ರೀ.ದತ್ತಾತ್ರೇಯ ಭಟ್
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಎಂಎಸ್ಸಿ
ವಿಷಯ ಪರಿಣತೆ : ಸಸ್ಯ ಜೈವಿಕ ತಂತ್ರಜ್ಞಾನ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 14.12.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 14.12.2013
dgbhatbio@uasbangalore.edu.in
dattagb@gmail.com
9449132968
ಡಾ. ಅರ್ಜುಮನ್ ಬಾನು
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಕೃಷಿ ವ್ಯವಹಾರ ನಿರ್ವಹಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 10.12.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 28.08.2022
anjuzoya05@gmail.com
8095785704
ಶ್ರೀ.ಎಸ್. ಜಗದೀಶ
ಹುದ್ದೆ : ಹಿರಿಯ ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ :10th
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 06.8.1993
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.05.1996
9449342662
ಎನ್. ಮಂಜುನಾಥ
ಹುದ್ದೆ : ಹಿರಿಯ ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : PUC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 01.07.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :16.02.2018
9341279975
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು