ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗದಲ್ಲಿ ೨೦೧೩-೧೪ ರಿಂದ ಸ್ನಾತಕೋತ್ತರ ಪದವಿ ಹಾಗೂ ೨೦೨೧-೨೨ ರಿಂದ ಪಿ.ಹೆಚ್ಡಿ ಪದವಿಯನ್ನು ಪ್ರಾರಂಭಿಸಲಾಗಿದೆ. ಜೊತೆಗೆ ಸ್ನಾತಕ ಹಾಗೂ ಡಿಪ್ಲೊಮಾ (ಕೃಷಿ) ಸಂಬಂಧಿತ ಪಠ್ಯ ಕ್ರಮಗಳನ್ನು ಬೋಧಿಸಲಾಗುತ್ತಿದೆ. ಈ ವಿಭಾಗವು ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯ ಚಟುವಟಿಕೆಗಳಿಗೆ ಪೂರಕವಾದ ವಿಶೇಷ ಸೌಲಭ್ಯಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಮುಖವಾಗಿ ಸ್ನಾತಕ ವಿದ್ಯಾರ್ಥಿಗಳ ಬೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗೆ ಪ್ರತ್ಯೇಕ ಆಧುನಿಕ ಪ್ರಯೋಗಾಲಯ ಹೊಂದಿದ್ದು. ಜೊತೆಗೆ ಸುಸಜ್ಜಿತ ಕೇಂದ್ರೀಯ ಉಪಕರಣ ಪ್ರಯೋಗಾಲಯದ ಸೌಲಭ್ಯವಿದೆ. ಉತ್ತಮಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃಧ್ಧಿ, ಸಮಸ್ಯಾಧಾರಿತ ಸಂಶೋಧನೆ, ತಂತ್ರಜ್ಞಾನ ಅಭಿವೃಧ್ಧಿ, ರೈತರಿಗೆ ಮಣ್ಣು, ನೀರು ಮತ್ತು ಸಸ್ಯ ಪರೀಕ್ಷೆಆಧಾರಿತ ಸಲಹೆ ಹಾಗೂ ಶಿಫಾರಸ್ಸು ನೀಡುವ ನಿಟ್ಟಿನಲ್ಲಿ ವಿಭಾಗವುಕಾರ್ಯನಿರ್ವಹಿಸುತ್ತಿದ್ದು, ಕೆಳಗಿನ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿದೆ.
- ವಿದ್ಯಾರ್ಥಿಗಳಿಗೆ ಆಸಕ್ತಿ ಆಧಾರಿತ ಪಠ್ಯಕ್ರಮಗಳ ಬೋಧನೆ, ಸಮಸ್ಯಾಧಾರಿತ ಆಧುನಿಕ ಸಂಶೋಧನೆಗಳನ್ನು ಕೈಗೊಳ್ಳುವ ಅವಕಾಶ ಕಲ್ಪಿಸುವುದು
- ವಿದ್ಯಾರ್ಥಿಗಳಲ್ಲಿ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಕೌಶಲ್ಯಗಳನ್ನು ರೂಪಿಸುವುದು
- ಮಣ್ಣು ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಪರತೆ, ಹಾಗೂ ಉದ್ಯಮಶೀಲತೆಯ ಗುಣಮಟ್ಟವನ್ನು ವೃದ್ಧಿಸುವುದು
ಸಿಬ್ಬಂದಿ
ಡಾ. ಸುಮ, ಆರ್
ಹುದ್ದೆ:ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು
ಪರಿಣಿತಿ: ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ನಿರ್ವಹಣೆ, ಕೃಷಿ ಕೈಗಾರಿಕಾತ್ಯಾಜ್ಯ ನಿರ್ವಹಣೆ, ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ
ಪರಿಣಿತಿ: ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ನಿರ್ವಹಣೆ, ಕೃಷಿ ಕೈಗಾರಿಕಾತ್ಯಾಜ್ಯ ನಿರ್ವಹಣೆ, ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ
+91-9886652159
ಡಾ. ಅಶೋಕ, ಕೆ.ಆರ್
ಹುದ್ದೆ:ಸಹಾಯಕ ಪ್ರಾಧ್ಯಾಪಕರು
ಪರಿಣಿತಿ: ಮಣ್ಣಿನ ಫಲವತ್ತತೆ ನಿರ್ವಹಣೆ, ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ, ಕೀಟನಾಶಕಗಳ ಶೇಷ ವಿಶ್ಲೇಷಣೆ
ಪರಿಣಿತಿ: ಮಣ್ಣಿನ ಫಲವತ್ತತೆ ನಿರ್ವಹಣೆ, ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ, ಕೀಟನಾಶಕಗಳ ಶೇಷ ವಿಶ್ಲೇಷಣೆ
+91-9886690866
ಡಾ. ಭಾಗ್ಯಲಕ್ಷ್ಮೀ, ಟಿ
ಹುದ್ದೆ : ಸಹಾಯಕ ಪ್ರಾಧ್ಯಾಪಕರು
ಪರಿಣಿತಿ : ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ನಿರ್ವಹಣೆ, ದ್ರವ ಮತ್ತು ಲೇಪಿತ ರಸಗೊಬ್ಬರಗಳ ನಿರ್ವಹಣೆ
ಪರಿಣಿತಿ : ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ನಿರ್ವಹಣೆ, ದ್ರವ ಮತ್ತು ಲೇಪಿತ ರಸಗೊಬ್ಬರಗಳ ನಿರ್ವಹಣೆ
+91-9008164615
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು
© ಈ ವೆಬ್ಸೈಟ್ ಯುಎಎಸ್, ಬೆಂಗಳೂರು, ಸರ್ಕಾರಕ್ಕೆ ಸೇರಿದೆ. ಕರ್ನಾಟಕ, ಭಾರತ – 560 065