ರೇಷ್ಮೆ ಕೃಷಿ ವಿಭಾಗದಲ್ಲಿ ಸುಮಾರು ೭೫ ರೇಷ್ಮೆ ಮೊಟ್ಟೆಗಳ ಹುಳು ಸಾಕಾಣಿಕೆಗೆ ಸೂಕ್ತವಾದ ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಇರುತ್ತದೆ. ಸುಮಾರು ೨೦ ಗುಂಟೆಯಷ್ಟು ವಿಸ್ತೀರ್ಣದಲ್ಲಿ ವಿ೧ ಹಿಪ್ಪನೇರಳೆ ತಳಿಯನ್ನು ಬೆಳೆಸಲಾಗಿದೆ ಹಾಗೂ ಸುಮಾರು ೨ ಗುಂಟೆ ಜಮೀನಿನಲ್ಲಿ ಹಿಪ್ಪನೇರಳೆಯ ವಿವಿಧ ತಳಿಗಳಾದ ಮೈಸೂರು ನಾಟಿ, ಸಹನ, ಎಸ್ ೩೬, ಡಿಡಿ, ಎಆರ್೧೨, ಜಿ-೨ ಮತ್ತು ಜಿ-೪ ತಳಿಗಳನ್ನು ಬೆಳೆಯಲಾಗಿರುತ್ತದೆ. ಈ ವಿಭಾಗದಲ್ಲಿ ಬಿ.ಎಸ್ಸಿ. (ಆನರ್ಸ್) ಕೃಷಿ ವಿದ್ಯಾರ್ಥಿಗಳಿಗೆ ೪ ವಿಷಯಗಳಲ್ಲಿ ಮತ್ತು ಡಿಪ್ಲೊಮಾ (ಕೃಷಿ) ವಿದ್ಯಾರ್ಥಿಗಳಿಗೆ ೨ ವಿಷಯಗಳಲ್ಲಿ ಬೋಧನೆ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ಮಂಡ್ಯ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೈತ ಸಮುದಾಯಕ್ಕೆ ರೇಷ್ಮೆಕೃಷಿಯ ವೈಜ್ಞಾನಿಕ ಹಿಪ್ಪನೇರಳೆ ಬೇಸಾಯ, ಹಿಪ್ಪನೇರಳೆ ನರ್ಸರಿ ಮತ್ತು ರೇಷ್ಮೆ ಹುಳು ಸಾಕಾಣಿಕೆಯ ಬಗ್ಗೆ ಅನೇಕ ವಿಸ್ತರಣಾ ಪದ್ಧತಿಗಳ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ.
ಸಿಬ್ಬಂದಿ
ಡಾ. ಎಂ. ರಾಜು
ಹುದ್ದೆ: ಪ್ರಾಧ್ಯಾಪಕರು
ವಿದ್ಯಾರ್ಹತೆ :ಎಂ.ಎಸ್ಸಿ. (ರೇಷ್ಮೆ ಕೃಷಿ), ಪಿಹೆಚ್.ಡಿ
ವಿಶೇಷತೆ : ಹಿಪ್ಪನೇರಳೆ ಬೇಸಾಯ, ರೇಷ್ಮೆ ಹುಳು ಸಾಕಾಣಿಕೆ ಮತ್ತುರೇಷ್ಮೆ ಕೃಷಿ ವಿಸ್ತರಣೆ
ವಿದ್ಯಾರ್ಹತೆ :ಎಂ.ಎಸ್ಸಿ. (ರೇಷ್ಮೆ ಕೃಷಿ), ಪಿಹೆಚ್.ಡಿ
ವಿಶೇಷತೆ : ಹಿಪ್ಪನೇರಳೆ ಬೇಸಾಯ, ರೇಷ್ಮೆ ಹುಳು ಸಾಕಾಣಿಕೆ ಮತ್ತುರೇಷ್ಮೆ ಕೃಷಿ ವಿಸ್ತರಣೆ
+91-9480197211
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು
© ಈ ವೆಬ್ಸೈಟ್ ಯುಎಎಸ್, ಬೆಂಗಳೂರು, ಸರ್ಕಾರಕ್ಕೆ ಸೇರಿದೆ. ಕರ್ನಾಟಕ, ಭಾರತ – 560 065