೧೯೯೧-೯೨ ರಲ್ಲಿ ಪದವಿ ಕಾರ್ಯಕ್ರಮಕ್ಕೆ ಕೋರ್ಸ್ಗಳನ್ನು ಬೋಧನೆ ಮಾಡುವ ಉದ್ದೇಶದೊಂದಿಗೆ ಸಸ್ಯರೋಗಶಾಸ್ತ್ರ ವಿಭಾಗವನ್ನು ಪ್ರಾರಂಭಿಸಲಾಯಿತು. ವಿಭಾಗವು ಡಿಪ್ಲೊಮಾ(ಕೃಷಿ) ಮತ್ತು ಸ್ನಾತಕ ವಿದ್ಯಾರ್ಥಿಗಳಿಗೆ ಮೂಲ ಸಸ್ಯರೋಗಶಾಸ್ತ್ರ ಕೋರ್ಸ್ಗಳನ್ನು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನ್ವಯಿಕ ಕೋರ್ಸ್ಗಳ ಬೋಧನೆಯನ್ನು ನೀಡುತ್ತಿದೆ. ಇದಲ್ಲದೆ ಸಸ್ಯರೋಗಶಾಸ್ತ್ರವನ್ನು ಪ್ರಾಯೋಗಿಕವಾಗಿ ಮತ್ತು ಸೈದ್ಧಾಂತಿಕವಾಗಿ ಕಲಿಯಲು ವಿಭಾಗವು ಸಮಾನ ಅವಕಾಶವನ್ನು ಒದಗಿಸುತ್ತಿದೆ. ಪ್ರಾಯೋಗಿಕ ಕಲಿಕೆಗೆ ಅಗತ್ಯವಿರುವ ಉಪಕರಣಗಳೊಂದಿಗೆ ವಿಭಾಗವು ಸುಸಜ್ಜಿತವಾಗಿದೆ ಮತ್ತು ಸಸ್ಯರೋಗಶಾಸ್ತ್ರದ ವಿವಿಧ ಶಾಖೆಗಳಾದ ಮೈಕಾಲಜಿ, ಬ್ಯಾಕ್ಟೀರಿಯಾಲಜಿ, ವೈರಾಲಜಿ ಮತ್ತು ನೆಮಟಾಲಜಿಗಳಲ್ಲಿ ಜ್ಞಾನವನ್ನು ವಿಸ್ತರಿಸಲು ಪ್ರಯೋಗಾಲಯವನ್ನು ಬಲಪಡಿಸಲಾಗಿದೆ.
೫ನೇ ಡೀನ್ ಸಮಿತಿಯ ಶಿಪಾರಸ್ಸಿನ ಪ್ರಕಾರ ಸ್ನಾತಕಕಾರ್ಯಕ್ರಮಕ್ಕಾಗಿ ವಿಭಾಗವು ನೀಡುವ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆ ಅವಕಾಶವನ್ನು ವಿಸ್ತರಿಸುತ್ತವೆ ಮತ್ತು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕ್ಷೇತ್ರದಲ್ಲಿರುವ ಸಸ್ಯರೋಗಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡಲಾಗುವುದು. ೨೦೧೪ ರಲ್ಲಿ ಸಸ್ಯರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ವಿದ್ಯಾರ್ಥಿಗಳು ವಲಯದ ಅವಶ್ಯಕತೆಗಳ ನಿರ್ದಿಷ್ಟ ಬೆಳೆ ಸಮಸ್ಯೆಗಳನ್ನು ಅಧ್ಯಯನ ಮಾಡಲು ನೀಡಲಾಗುವುದು. ವಿಭಾಗದಲ್ಲಿ ಬೋಧನೆ ಮತ್ತು ಸಂಶೋಧನೆಯ ಹೊರತಾಗಿ ರೋಗನಿರ್ಣಯ ಕ್ಷೇತ್ರ ಭೇಟಿ, ರೈತರುಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿನ ಬೆಳೆಗಳ ವಿಸ್ತರಣೆ ಮತ್ತು ರೋಗನಿರ್ಣಯ ಸೇವೆಯನ್ನು ಒದಗಿಸುತ್ತಿದೆ.
ದೃಷ್ಟಿಕೋನ
ಸಸ್ಯರೋಗಶಾಸ್ತ್ರದ ಕೌಶಲ್ಯ ಮತ್ತು ಪ್ರಾಯೋಗಿಕ ತರಬೇತಿಯೊಂದಿಗೆ ಕೃಷಿ ಪದವೀಧರ ವಿದ್ಯಾರ್ಥಿಗಳನ್ನು ಬಲಪಡಿಸುವುದು ಮತ್ತು ಕೃಷಿ ಸಮುದಾಯಕ್ಕೆ ಬೆಳೆ ರಕ್ಷಣೆಯ ಅಗತ್ಯಗಳನ್ನು ಪೂರೈಸಲು ಗುಣಮಟ್ಟದ ಸಂಶೋಧನೆಯನ್ನು ಮುಂದುವರಿಸಲು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುವುದು ವಿಭಾಗದದೃಷ್ಟಿಕೋನವಾಗಿದೆ. ವಿಭಾಗವು ಕೃಷಿ ಇಲಾಖೆಗಳ ಕೃಷಿ ಕೀಟಶಾಸ್ತ್ರ, ಸಸ್ಯ ತಳಿ ಅಭಿವೃದ್ಧಿ, ಬೆಳೆ ಶರೀರಶಾಸ್ತ್ರ ಮತ್ತು ಸಸ್ಯಜೀವಿಕ ತಂತ್ರಜ್ಞಾನ ವಿಭಾಗಗಳ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ “ಸಸ್ಯರೋಗಶಾಸ್ತ್ರದ ಶ್ರೇಷ್ಠತೆಯಕೇಂದ್ರ” ವಾಗಿ ಉನ್ನತೀಕರಿಸಲು ಶ್ರಮಿಸುತ್ತಿದೆ.
ಸಿಬ್ಬಂದಿ
ವಿದ್ಯಾರ್ಹತೆ : ಎಂ.ಎಸ್ಸಿ. (ಕೃಷಿ), ಪಿಹೆಚ್.ಡಿ
ವಿಶೇಷತೆ : ಸಸ್ಯ ರೋಗಗಳ ಜೈವಿಕ ನಿಯಂತ್ರಣ, ಭತ್ತರೋಗ ಶಾಸ್ತ್ರ , ಸಸ್ಯ- ರೋಗಕಾರ ಪರಸ್ಪರ ಕ್ರಿಯೆಗಳು.
+91 9900013673
ವಿದ್ಯಾರ್ಹತೆ : ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ
ವಿಶೇಷತೆ : ಸಸ್ಯ ವೈರಾಲಜಿ, ಜೈವಿಕ ನಿಯಂತ್ರಣ
+91 9110273114
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು