ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ

ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಭಾಗದಲ್ಲಿ ಸ್ನಾತಕ ಪದವಿಗಾಗಿ ೫ ಕೋರ್ಸ್ಗಳು ಮತ್ತು ಸ್ನಾತಕೋತ್ತರ ಕಾರ್ಯಕ್ರಮದಲ್ಲಿ ೮ ಕೋರ್ಸ್ಗಳು ಹಾಗೂ ೨ ಸೆಮಿನಾರ್ಗಳು ಮತ್ತು ಡಿಪ್ಲೊಮಾ (ಕೃಷಿ)ಗೆ ಬೋಧನಾ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಈ ವಿಭಾಗವು ೨೦೧೩ ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಷಯದಲ್ಲಿ ೪೦ ವಿದ್ಯಾರ್ಥಿಗಳು ಎಂ.ಎಸ್ಸಿ (ಕೃಷಿ) ಪದವಿ ಪಡೆದಿರುತ್ತಾರೆ. ಇದಲ್ಲದೆ ವಿಭಾಗದ ಅಧ್ಯಾಪಕರು ವಿವಿಧರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಬೆಳೆಗಳಲ್ಲಿ ತಳಿಗಳ ಮತ್ತು ಹೈಬ್ರಿಡ್ಗಳ ಉದಾ: ಭತ್ತ, ಮೆಕ್ಕೆಜೋಳ, ಮೇವಿನ ಜೋಳ ಮತ್ತು ರಾಗಿಯಲ್ಲಿ ಅಭಿವೃದ್ಧಿಗೆ ಉತ್ತಮ ಕಾರ್ಯನಿರ್ವಹಿಸಿರುತ್ತಾರೆ.

ಶಿಕ್ಷಕರು

Dr. Shashidhara, K.S
Qualification: M.Sc. (Agri.), PhD.
Designation: Assistant Professor
9731827541

ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗ

ವಿಭಾಗದ ವಿವರ: ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯದಲ್ಲಿನ ಬೆಳೆ ಶರೀರಕ್ರಿಯಾಶಾಸ್ತ್ರ ವಿಭಾಗವು ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೊಮಾ (ಕೃಷಿ) ಕೋರ್ಸ್ಗಳಿಗೆ ಬೋಧನೆಯನ್ನು ಮಾಡುತ್ತಿದೆ. ಸಸ್ಯಗಳಲ್ಲಿ ನೀರಿನ ನಿರ್ವಹಣೆ, ಬಾಷ್ಪ ವಿಸರ್ಜನೆ, ದ್ಯುತಿ ಸಂಶ್ಲೇಷಣೆಕ್ರಿಯೆ, ಉಸಿರಾಟ, ಬೆಳವಣಿಗೆ ಮತ್ತು ಅಭಿವೃದ್ಧಿ ಮತ್ತು ಸಸ್ಯ ಪೋಷಣೆ ಹಾಗೂ ಇನ್ನಿತರ ಸಸ್ಯ ಶರೀರಶಾಸ್ತ್ರದ ಮೂಲಭೂತ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಶಿಕ್ಷಕರು

ಡಾ. ಕೆ.ವಿ. ಶಿವಕುಮಾರ್
ವಿದ್ಯಾರ್ಹತೆ : ಎಂ.ಎಸ್ಸಿ. (ಕೃಷಿ), ಪಿಹೆಚ್.ಡಿ
ಹುದ್ದೆ : ಪ್ರಾಧ್ಯಾಪಕರು, ಬೆಳೆ ಶರೀರಕ್ರಿಯಾ ಶಾಸ್ತ್ರ
ವಿಶೇಷತೆ : ಬೆಳೆ ಶರೀರಕ್ರಿಯಾ ಶಾಸ್ತ್ರ
+91-7975468949
+91-9448870810

ಬೀಜ ವಿಜ್ಞಾನ ಮತ್ತುತಾಂತ್ರಿಕತೆ ವಿಭಾಗ

ಬೀಜ ವಿಜ್ಞಾನ ಮತ್ತುತಾಂತ್ರಿಕತೆ ವಿಭಾಗದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತುಡಿಪ್ಲೊಮಾ (ಕೃಷಿ) ಕೋರ್ಸ್ಗಳನ್ನು ಬೋಧನೆ ಮಾಡಲಾಗುತ್ತಿದೆ. ಬೀಜೋತ್ಪಾದನೆ ತತ್ವಗಳು, ಬೀಜ ಸಂಸ್ಕರಣೆ, ಬೀಜ ಪ್ರಮಾಣೀಕರಣ, ಬೀಜ ಪರೀಕ್ಷೆ ಮತ್ತು ಬೀಜ ಶಾಸನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಶಿಕ್ಷಕರು

ಡಾ. ಶಶಿಭಾಸ್ಕರ್, ಎಂ.ಎಸ್.
ಹುದ್ದೆ: ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ : ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ
ವಿಶೇಷತೆ: ಬೀಜ ವಿಜ್ಞಾನ ಮತ್ತುತಾಂತ್ರಿಕತೆ
+91-9731097873
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು