ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಮೊಟ್ಟ ಮೊದಲಬಾರಿಗೆ ಬಿ.ಎಸ್ಸಿ (ಕೃಷಿ ಮಾರಾಟ ಮತ್ತು ಸಹಕಾರ) ಪದವಿ ಕಾರ್ಯಕ್ರಮವನ್ನು ೧೯೭೬ ರಲ್ಲಿ ಹಾಗೂ ಕೃಷಿ ಮಾರಾಟ ಮತ್ತು ಸಹಕಾರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ೧೯೯೫ ರಲ್ಲಿ ಪ್ರಾರಂಭಿಸಲಾಯಿತು.

೨೦೦೭-೦೮ ರಲ್ಲಿ, ಇಲಾಖೆಯು ಎರಡು ವರ್ಷ ಪೂರ್ಣಾವಧಿಯ   ವಸತಿ ಸಹಿತ ಸ್ನಾತಕೋತ್ತರ ಪದವಿ ಎಂ.ಬಿ.ಎ (ಕೃಷಿ ವ್ಯವಹಾರ ನಿರ್ವಹಣೆ) ಪ್ರಾರಂಭಗೊಂಡಿದ್ದು ಹಾಗೂ೨೦೧೯-೨೦ ರಿಂದ ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ಪಿ.ಎಚ್.ಡಿ ಕೂಡ ಪ್ರಾರಂಭಿಸಲಾಗಿದೆಕೃಷಿ ಅನುಸಂಧಾನ ಪರಿಷತ್ (ಐ.ಸಿ.ಎ.ಆರ್)ಪಾಲು ಹೊರತುಪಡಿಸಿ ೪ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.

ಪ್ರಸ್ತುತ ಜಾಗತಿಕ ಕ್ಷೇತ್ರದಲ್ಲಿನ ಬದಲಾವಣೆಗನುಗುಣವಾಗಿ ನುರಿತ ಪದವೀದರರನ್ನು ಪೂರೈಸಲು ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ೪ ವರ್ಷ ಅವಧಿಯ ಬಿ. ಎಸ್ಸಿ (ಆರ್ಸ್) ಪದವಿಯನ್ನು ೨೦೨೦-೨೦೨೧ರ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಯಿತು.

ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಕೃಷಿ ವ್ಯವಹಾರ ಕೈಗಾರಿಕೆಗಳ ಬೇಡಿಕೆಯಿಂದಾಗಿ ಈ ಪದವಿಗೆ ವಿದ್ಯಾರ್ಥಿಗಳ ಪ್ರವೇಶವು ಗಣನೀಯವಾಗಿ ಹೆಚ್ಚಾಗಿದೆ. ಇತರೆ ವ್ಯವಹಾರ ನಿರ್ವಹಣಾ ಶಾಲೆಗಳು ನಡೆಸಿದಪಠ್ಯೇತರ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಉನ್ನತ ಪ್ರಶಸ್ತಿಗಳನ್ನು ಗೆದ್ದಿರುತ್ತಾರೆ.

ಹೆಚ್ಚಿನ ಪದವೀಧರ ವಿದ್ಯಾರ್ಥಿಗಳು ದೇಶದ ಅತ್ಯುತ್ತಮ ನಿರ್ವಹಣಾ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುತ್ತಾರೆ. ಎಂ.ಬಿ.ಎ (ಎ.ಬಿ.ಎಂ) ಸ್ನಾತಕೋತ್ತರ ಪದವೀಧರರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಕೃಷಿ ವ್ಯವಹಾರ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ.

ಕೃಷಿ ಮಾರಾಟ, ಕೃಷಿ ಹಣಕಾಸು, ಕೃಷಿ ಸಹಕಾರ, ಶ್ರೇಣೀಕರಣ, ಲೆಕ್ಕಶಾಸ್ತ್ರ, ಕೃಷಿ ವ್ಯವಹಾರ ಹಾಗು ಇತರೆ ಕ್ಷೇತ್ರಗಳಲ್ಲಿ ಭೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣದಲ್ಲಿ ವಿಭಾಗವು ತೊಡಗಿಸಿಕೊಂಡಿದೆ.

ಸುಸಜ್ಜಿತ ತರಗತಿ ಕೋಣೆಗಳನ್ನು ತರಬೇತಿ ಕೊಠಡಿ೧೫೦೦ ಪುಸ್ತಕಗಳ ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಸೌಲಭ್ಯಗಳನ್ನು ಈ ವಿಭಾಗ ಹೊಂದಿದೆ.

ಕೃಷಿ ಮಾರಾಟ ಮತ್ತು ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಸ್ನಾತಕ ಪದವೀಧರರುಅನೇಕ ಗ್ರಾಮೀಣಾಭಿವೃದ್ಧಿ ಮತ್ತು ಬಹುರಾಷ್ಟ್ರೀಯ ಖಾಸಗಿ ಸಂಸ್ಢೆಗಳ ಉದ್ಯೋಗಿಗಳಾಗಿದ್ದಾರೆ. ಅವರಲ್ಲಿ ಕೆಲವರು ಇತರೆ ರಾಷ್ಟçಗಳಲ್ಲಿ ಉದ್ಯೋಗಿಗಳಾಗಿದ್ದಾರೆ.

ರೈತರ ಕೃಷಿ ಮಾರಾಟಕ್ಕೆ ಸಂಬಧಿತ ಸಮಸ್ಯೆಗಳು, ತಂತ್ರಜ್ಞಾನ ವರ್ಗಾವಣೆ, ಉತ್ತಮ ಮಾರುಕಟ್ಟೆ ಅಭ್ಯಾಸಗಳು, ಮಾರುಕಟ್ಟೆ ಮಾಹಿತಿ ಜ್ಞಾನ ಆಯ್ದ ತೋಟಗಾರಿಕಾ ಉತ್ಪನ್ನಗಳನೇರ ಮಾರಾಟಕ್ಕೆ ಸಹಾಯ ಮಾಡುವ ಕ್ಷೇತ್ರ ಮಟ್ಟದಲ್ಲಿ,ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಅಧ್ಯಾಪಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

೨೦೧೮ ರ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾದಿನಾಚರಣೆಯ ಸಂದರ್ಭದಲ್ಲಿ ಡಾ.ಎಂ.ಆರ್.ಗಿರೀಶ್, ಸಹ ಪ್ರಾಧ್ಯಾಪಕರು, ಕೃಷಿ ಅನುಸಂದಾನ ಪರಿಷತ್ತಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕರ್ನಾಟಕ ಕೃಷಿ ಬೆಲೆ ಆಯೋಗವು ೨೦೧೬-೧೭ ರಿಂದ “ಕೃಷಿವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕ” ಎಂಬ ಸಂಶೋಧನಾ ಯೋಜನೆಯನ್ನು ನಮ್ಮ ಸಂಸ್ಥೆಗೆ ನೀಡಿದ್ದು, ಇದರ ಅಡಿಯಲ್ಲಿ ಸುಮಾರು ೨೦ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ವಾರ್ಷಿಕವಾಗಿ ೪ ಹಂತಗಳಲ್ಲಿ ಹಾಗೂ ಉತ್ಪಾದನಾ ವೆಚ್ಚವನ್ನು ಹಾಗೂ ಮಾರಾಟ ಪದ್ದತಿಗಳನ್ನು ರೈತರಿಂದ ಲೆಕ್ಕಹಾಕಲಾಗುತ್ತದೆ.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ಪ್ರಚಲಿತಗೊಳಿಸಿದ ಎಫ್.ಎ.ಒ ನ ಫಾರ್ಮರ್ಸ್ ಫೀಲ್ಢ್ ಸ್ಕೂಲ್ ಮಾದರಿಯಲ್ಲಿ “ಮೇಜ್ ಬಿಸಿನೆಸ್ ಸ್ಕೂಲ್” ಎಂಬ ಪ್ರಾಯೋಜನೆಯನ್ನು ಮೊದಲ ಬಾರಿಗೆ ೨೦೧೯-೨೦ರ ಅವಧಿಯಲ್ಲಿ ಎನ್.ಐ.ಎ.ಎಮ್ ಸಂಸ್ಥೆಯೊAದಿಗೆ ಕೈಗೊಳ್ಳಲಾಗಿದೆ.

ಸ್ಥಳೀಯ, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಹಾಗೂ ಬದಲಾಗುತ್ತಿರುವ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ಪ್ರತಿಕ್ರಿಯಿಸಲು, ಕೃಷಿ ಮಾರಾಟ, ಕೃಷಿ ಹಣಕಾಸು, ಕೃಷಿ ಸಹಕಾರ ಹಾಗೂ ಕೃಷಿ ವ್ಯಾಪಾರ ನಿರ್ವಹಣೆಯಲ್ಲಿ ಶಿಕ್ಷಣ ಸಂಶೋಧನೆ ವಿಸ್ತರಣೆಯನ್ನು ಪ್ರಗತಿಸಾದಿಸಲು.ಈ ವಿಭಾಗವು ರಾಜ್ಯ ಸರ್ಕಾರ, ಕೇಂದ್ರ ಹಾಗೂ ಇತರೇ ೨ ಅನಿದಾನಿತ ಸಂಸ್ಥೆಗಳ ಸಹಾಯಗಳಿಂದ ಕೃಷಿ ಮಾರಾಟ ಸಂಶೋದನೆಯನ್ನು ಪ್ರಾಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ, ಮಂಡಳಿಯ “ಮಾರ್ಕೆಟಿಂಗ್ ಚೇರ್” ಅಡಿಯಲ್ಲಿ ರೈತರಿಗೆ ತೋಟಗಾರಿಕಾ ಉತ್ಪನ್ನಗಳ ನೇರ ಮಾರಾಟವನ್ನು (ಮಾವು, ದ್ರಾಕ್ಷಿ, ದಾಳಿಂಬೆ) ಯನ್ನು ಕಲ್ಪಿಸಲಾಗಿದೆ. ಹಾಗೂ ರೈತರ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮಾರಾಟ ತರಬೇತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಡಾ|| ಎಂ. ಎಸ್. ಗಣಪತಿ ಅವರು ಜೂನ್ ೨೦೧೭ ರಲ್ಲಿ Nanyang Technological University, Singapore ನಲ್ಲಿ ನಡೆದ ೨ನೇ ಅಂತರರಾಷ್ಟ್ರೀಯ ಸಮ್ಮೇಳನ (ICIAAST) ದಲ್ಲಿ ಕೃಷಿ ಮಾರುಕಟ್ಟೆ ಸಹಕಾರ ಮತ್ತು ವ್ಯವಹಾರ ಕ್ಷೇತ್ರದಲ್ಲಿ SERS ಎಕ್ಸಲೆನ್ಸ್ ಇನ್ ಟೀಚಿಂಗ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೂ ಸೆಪ್ಟೆಂಬರ್ ೨೦೧೬ ರಲ್ಲಿ IIRR ತೆಲಂಗಾಣದಲ್ಲಿ ನಡೆದ ಕೃಷಿ, ಸಸ್ಯ, ಪರಿಸರ, ಸಹಾಕರ, ಮತ್ತು ತಂತ್ರಜ್ಙಾನ (ECOASPECT) ರಾಷ್ಟೀಯ ಸಮ್ಮೇಳನದಲ್ಲಿ ಕೃಷಿ ಮಾರುಕಟ್ಟೆ ಮತು ಕೃಷಿ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಪ್ರತಿಷ್ಟಿತ ವಿಜ್ಙಾನಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಡಾ|| ಎಂ. ಎಸ್. ಗಣಪತಿ ಅವರು, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ೨೦೨೨ರಲ್ಲಿ UASB ಸಂಸ್ಥಾಪನಾ ದಿನಾಚರಣೆಯಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದರು.

ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ–ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳು
ಭೋದನೆ / ಶಿಕ್ಷಣ

  • ೧೯೭೫-೭೬: ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಭಾಗ
  • ೧೯೭೬-೭೭: ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)
  • ೨೦೧೭-೧೮: ಬಿ.ಎಸ್ಸಿ (ಗೌರವ) ಕೃಷಿ ಮಾರುಕಟ್ಟೆ ಮತ್ತು ಸಹಕಾರ
  • ೧೯೯೪-೯೫: ಎಂ. ಎಸ್ಸಿ. ಕೃಷಿ ಮಾರುಕಟ್ಟೆ ಮತ್ತು ಸಹಕಾರ
  • ೨೦೦೭-೦೮: ಕೃಷಿ ವ್ಯವಹಾರ ನಿರ್ವಹಣೆಯಲ್ಲಿ ಎಂಬಿಎ
  • ೨೦೧೯-೨೦: ಪಿ.ಎಚ್.ಡಿ. ಕೃಷಿ ವ್ಯವಹಾರ ನಿರ್ವಹಣೆ
  • ೨೦೨೦-೨೧: ಬಿ.ಎಸ್ಸಿ. (ಗೌರವ.) ಕೃಷಿ ವ್ಯವಹಾರ ನಿರ್ವಹಣೆ ಇದನ್ನು ವಿಶ್ವವಿದ್ಯಾಲವು ಅಳವಡಿಸಿಕೊಂಡಿದೆ.
  • 2019-20: Ph.D. in Agribusiness Management

ಇದೇ ರೀತಿಯ ಪದವಿಗಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಸಾಮಾನ್ಯ ನಾಮಕರಣ ಮಾರ್ಗಸೂಚಿಗಳ ಅಡಿಯಲ್ಲಿ ದೇಶದಾದ್ಯಂತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುವ ಪದವಿ ಇದಾಗಿದೆ.

ಸಂಶೋಧನೆ/ ವಿಸ್ತರಣೆ/ತರಬೇತಿ/ಇತರ ಚಟುವಟಿಕೆಗಳು

  • ೨೦೧೧-೨೦೧೪: ಭಾರತ ಸರ್ಕಾರದಿಂದ ಪ್ರಾಯೀಜಿತ RKVY ಯೋಜನೆಯಡಿಯಲ್ಲಿ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಲಾಗಿದೆ.
    ೧. ಮಾರುಕಟ್ಟೆ ನೇತೃತ್ವದ ವಿಸ್ತರಣೆ
    ೨. ನೇರ ಮಾರುಕಟ್ಟೆ
    ೩. ರಫ್ತು ಪ್ರಚಾರ
    ೪. ಕೃಷಿ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆ
  • ೨೦೧೨-೧೩: ಬ್ರಾö್ಯಡಿಂಗ್, ಪ್ಯಾಕೇಜಿಂಗ್ಗಾಗಿ ರೈತರನ್ನು ಬೆಂಬಲಿಸುವ ಮೂಲಕ ನೆರ ಮಾರುಕಟ್ಟೆ ಉಪಕ್ರಮ ಮಾವು ಮತ್ತು ದ್ರಾಕ್ಷಿ- ರೈತರಿಂದ ಗ್ರಾಹಕರಿಗೆ ನೇರ ಮಾರಾಟ.
  • ೨೦೧೨-೧೩: ೭ ಮಾರುಕಟ್ಟೆಗಳಲ್ಲಿ ಎ.ಪಿ.ಎಂ.ಸಿ ಯಲ್ಲಿ ಗ್ರೇಡಿಂಗ್ ಉಪಕರಣಗಳ ಸ್ಥಾಪನೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ವರದಿ ಸಲ್ಲಿಸಲಾಗಿದೆ.
  • ೨೦೧೫-೧೬: ಕೃಷಿ ಮಾರುಕಟ್ಟೆಯ ಉದಯೋನ್ಮುಖ ಪ್ರವೃತ್ತಿಗಳು ಹಾಗೂ ಕೃಷಿ ವ್ಯವಹಾರ ಕುರಿತು ರಾಷ್ಟಿçÃಯ ಸಮ್ಮೇಳನ.
  • ೨೦೧೫-೧೬: ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಗುಪ್ತಚರ ಕೋಶದ ಸ್ಥಾಪನೆ.
  • ೨೦೧೬-೧೭: ಕೃಷಿ ಮಾರಾಟದಲ್ಲಿ ತಾಂತ್ರಿಕ ಮದ್ಯಸ್ಥಿಕೆಗಳ ರಾಷ್ಟ್ರೀಯ ಸಮ್ಮೇಳನ.
  • ೨೦೧೭-೧೮: ಫಲದಾಯಕ ಬೆಲೆಗಳನ್ನು ಖಾತರಿ ಪಡಿಸುವುದು ಹಾಗೂ ರೈತರಿಗೆ ಸ್ಥಿರ ಮಾರುಕಟ್ಟೆ ಕುರಿತು ರಾಷ್ಟ್ರೀಯ ಕಾರ್ಯಗಾರ.
  • ೨೦೧೭-೧೮: ಕರ್ನಾಟಕ ಕೃಷಿ ಬೆಲೆ ಆಯೋಗದ ಸಮನ್ವಯದಲ್ಲಿ ವರದಿ ಸಲ್ಲಿಸಲಾಗಿದೆ.
  • ೨೦೧೮-೧೯: “ಅಗ್ರಿಬಿಸಿನೆಸ್ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮ.
  • ೨೦೧೯-೨೦: ಅಸೇಯಿಂಗ್ ಬಳಕೆಗೆ ಸಂಬಧಿಸಿದತೆ ವಿಭಾಗದಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಮಂಜೂರಾದ ಸಲಕರಣೆಗಳ ಉಪಯುಕ್ತತೆ ಕುರಿತು ಸಮೀಕ್ಷೆಯನ್ನು ನಡೆಸಲಾಯಿತು.
  • ೨೦೨೧-೨೨: ಅಗ್ರಿಬಿಸಿನೆಸ್ನಲ್ಲಿ ಆಲ್ಟೆರಿಕ್ಸ್ ಮತ್ತು ಟೇಬಲ್ಯು ಅಪ್ಲಿಕೇಶನ್ನಲ್ಲಿ ತರಬೇತಿ ಕಾರ್ಯಕ್ರಮ.
  • ಶ್ರೀನಿವಾಸಪುರ ಮಾವು ರೈತರ ಉತ್ಪಾದಕರ ಕಂಪನಿಗೆ ವೆಬ್ಸೈಟ್ ಬಿಡುಗಡೆ.
  • ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ- ಕೃಷಿ ವಿಶ್ವವಿದ್ಯಾನಿಲಯ ಕೃಷಿ ಅರ್ಥಶಾಸ್ತ್ರ ಸಂಶೋಧನೆಯ ೨೮ ನೇ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ.
  • ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ- ಕೃಷಿ ವಿಶ್ವವಿದ್ಯಾನಿಲಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
  • ಕೃಷಿ ವಿಶ್ವವಿದ್ಯಾನಿಲಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ ಡ್ರ್ಯಾಗನ್ ಪ್ರೂಟ್ ನಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ಸಭೆಯನ್ನು ಆಯೋಜಿಸಿದೆ.
ಸಂಪರ್ಕ ವಿವರಗಳು    

ಡಾ.ಸಿದ್ದಯ್ಯ

ಎಂ.ಎಸ್ಸಿ. & PhD (ಅಗ್ರಿಲ್. ಅರ್ಥಶಾಸ್ತ್ರ), IARI, ನವದೆಹಲಿ
ಪ್ರೊಫೆಸರ್ ಮತ್ತು ಹೆಡ್ ಮತ್ತು ಪ್ರಿನ್ಸಿಪಾಲ್ ಕೋ-ಆರ್ಡಿನೇಟರ್, MBA (ABM)
ಇನ್ಸ್ಟಿಟ್ಯೂಟ್ ಆಫ್ ಅಗ್ರಿ-ಬಿಸಿನೆಸ್ ಮ್ಯಾನೇಜ್ಮೆಂಟ್
ಜಿಕೆವಿಕೆ, ಯುಎಎಸ್ ಬೆಂಗಳೂರು-560 065

+91-9640689311 / 9945831752

ಸಿಬ್ಬಂದಿ

ಡಾ|| ಸಿದ್ದಯ್ಯ
ಎಂ.ಎಸ್ಸಿ. & PhD (ಅಗ್ರಿಲ್. ಅರ್ಥಶಾಸ್ತ್ರ), IARI, ನವದೆಹಲಿ
ಪ್ರೊಫೆಸರ್ ಮತ್ತು ಹೆಡ್ ಮತ್ತು ಪ್ರಿನ್ಸಿಪಾಲ್ ಕೋ-ಆರ್ಡಿನೇಟರ್, MBA (ABM)
ಇನ್ಸ್ಟಿಟ್ಯೂಟ್ ಆಫ್ ಅಗ್ರಿ-ಬಿಸಿನೆಸ್ ಮ್ಯಾನೇಜ್ಮೆಂಟ್
ಜಿಕೆವಿಕೆ, ಯುಎಎಸ್ ಬೆಂಗಳೂರು-560 065
+91-80-2333 0153 to 58, Extn. 380
+91-9640689311
ಡಾ|| ಎಂ. ಎಸ್.ಗಣಪತಿ
ಪ್ರಾಧ್ಯಾಪಕರು ಮತ್ತು ಪ್ರಧಾನ ಸಂಯೋಜಕರು, ಕೃಷಿ ವಿಶ್ವವಿದ್ಯಾನಿಲಯಮುಖ್ಯಸ್ಥರು,ಮಾರ್ಕೆಟಿಂಗ್ಛೇರ್ (ಕ.ರಾ.ಕೃ.ಮಾ.ಮಂ)
ಎಂ.ಎಸ್ಸಿ (ಕೃಷಿ), ಎಂಬಿಎ, ಪಿ.ಹೆಚ್.ಡಿ ಪರಿಣಿತಿ: ಕೃಷಿ ಮಾರಾಟ, ಚಿಲ್ಲರೆ ವ್ಯಾಪಾರ ನಿರ್ವಹಣೆ, ಕೃಷಿ ವ್ಯವಹಾರ ನಿರ್ವಹಣೆ, ಮಾರಾಟ ನಿರ್ವಹಣೆ, ಆಹಾರ ಮತ್ತು ಕೃಷಿ ಸರಕುಗಳಲ್ಲಿ ಗುಣಮಟ್ಟದ
+91-80-2333 0153 Extn. 380
+91-94489 75304
08023627519
ಡಾ|| ಎಂ.ಆರ್. ಗಿರೀಶ್
ಪ್ರಾಧ್ಯಾಪಕರು ಮತ್ತು ಸ್ನಾತಕೊತ್ತರ ಸಂಯೋಜಕರು ಎಂ. ಎಸ್ಸಿ. (ಕೃಷಿ), ಪಿ.ಎಚ್.ಡಿ.
ಪರಿಣಿತಿ: ನೈಸರ್ಗಿಕ ಸಂಪನ್ಮೂಲ ಅರ್ಥಶಾಸ್ತ್ರ , ಅಂತರಾಷ್ಟಿಯ ವಾಣಿಜ್ಯ, ಕೃಷಿ ಯೋಜನಾ ನಿರ್ವಹಣೆ, ಕೃಷಿ ಹಣಕಾಸು ಶಾಸ್ತ್ರ ಮತ್ತು ಕೃಷಿ ಮಾರಾಟ ಹಾಗೂ ವ್ಯವಹಾರ ನಿರ್ವಹಣೆ
+91-80-2333 0153 to 58, Extn. 380
+91-94483 85190
ಡಾ|| ಮಮತಾ ಗಿರೀಶ್
ಸಹಾಯಕ ಪ್ರಾಧ್ಯಾಪಕರು (ಹಿರಿಯ ಶ್ರೇಣಿ),
ಎಂ. ಎಸ್ಸಿ. (ಕೃಷಿ), ಪಿ.ಎಚ್.ಡಿ.
ಪರಿಣಿತಿ: ಕೃಷಿ ಉತ್ಪಾದನಾಅರ್ಥಶಾಸ್ತ್, ನೈಸರ್ಗಿಕ ಸಂಪನ್ಮೂಲ ಅರ್ಥ ಶಾಸ್ತ್ರ , ಕೃಷಿ ಮತ್ತು ಕ್ಷೇತ್ರ ಹಣಕಾಸು ನಿರ್ವಹಣೆ,
ಕೃಷಿ ಮಾರಾಟ ಮತ್ತು ವ್ಯವಹಾರ ನಿರ್ವಹಣೆ ಹಾಗೂ ಅಂತರಾಷ್ಟಿಯ ವಾಣಿಜ್ಯ
+91-80-2333 0153 to 58, Extn. 380
+91-94823 94013
ಡಾ|| ಜಿ. ರಂಗನಾಥ್
ಸಹಾಯಕ ಪ್ರಾಧ್ಯಾಪಕರು
ಎಂ. ಎಸ್ಸಿ. (ಕೃಷಿ), ಪಿ.ಎಚ್.ಡಿ.
ಪರಿಣಿತಿ: ಕೃಷಿ ವ್ಯವಹಾರನಿರ್ವಹಣೆ, ಕೃಷಿ ಮಾರಾಟ, ಪೂರೈಕೆ ಸರಣಿ ನಿರ್ವಹಣೆ
+91-80-2333 0153 to 58, Extn. 380
+91-8754991511
ಶ್ರೀಮತಿ:ಅರ್ಜುಮನ್ ಬಾನು
ಶ್ರೀಮತಿ:ಅರ್ಜುಮನ್ ಬಾನು
ತಾಂತ್ರಿಕ ಅಧಿಕಾರಿಗಳು
ಎಂಬಿಎ (ಎ.ಬಿ.ಎಂ), ಪಿ.ಎಚ್.ಡಿ.
ಪರಿಣಿತಿ: ಕೃಷಿ ವ್ಯವಹಾರ ನಿವಹಣೆ, ಮೌಲ್ಯಸರಣಿ
8095785704

Hon’ble Vice Chancellor addressing Krishimela 2022

The B. Sc. Ag.Maco students participated in Management Fest (TEMPORA – 2019) organized by IIPM and clinched first place as Overall Champions (5th – 6th December, 2019)

IABM, UAS Bangalore won the overall championship in ‘PRABANDHAZ 2022’ organized by Tamil Nadu Agricultural University

IABM, UAS, Bangalore won the overall championship in ‘PRABANDHAZ 2022’ organized by Tamil Nadu Agricultural University

UG & PG students participated in ‘PRABANDHAZ 2020’ and won prizes in events organized by Tamil Nadu Agricultural University (6th – 7th March, 2020)

PRABANDHAZ 2020

Event-wise prizes won: Quiz – First, Best Manager – First, Marketing game – Third

Team representing IABM for PRABHANDAZ 2020

Workshop on “Recent Amendment to APMC Act 2020”

Library

Newspaper Section

MBA Classroom

ABID 2021

ABID 2022

Hands on Training for Final year B.Sc. Ag. Maco Students as part of HOT and AIA placed at Beegle Agritech

UG Students celebrating World Environment Day

ABID – AGRI BUSINESS INNOVATION DAY

Agri Business Innovation Day (ABID) is an Innovation Exhibition hosted by the Department of Agricultural Marketing, Co-operation and Business Management, University of Agricultural Sciences, GKVK, Bangalore, that lays a platform for students to exhibit their knowledge, skills and business acumen in areas of agri marketing, agritech, digital marketing etc.
The Event mainly aims at developing new age innovations pertaining to agribusiness in India, by solving some of the pressing problems in agriculture industry. Event also emphasizes on building and nurturing entrepreneurship skills and mindset among the student participants by involving the student community in variety of startup related events like pitching, mock startups, panel discussion and fireside chats with emerging entrepreneurs during the event.

ABID 2021 Highlights

ABID-2021 was conducted on 3rd of April 2021.
The event was lightened up with a brand launch of ‘Gruitables’ by Dr. Rajendra Prasad, Hon’ble Vice-Chancellor, University of Agricultural Sciences, Bangalore, Dr. L. Savithramma, Dean (Agri.), College of Agriculture, GKVK, Bangalore and Shri. C. M. Patil, CEO, Krishi Kalpa.
There were 8 innovations exhibited in the area of digitech, agritech, agri-marketing etc. Notable outcome of the event was launch of Gruitables brand, launch of newsletter, exhibition, panel discussion with agripreneurs and open mic challenge.

Students skills on digital marketing, Python, Advanced Excel, Alteryx and Tableau and entrepreneurship enhanced on account of Agro- Industrial Attachment and this event.

ABID 1.0

ABID – 2022
The Agri-Business Innovation Day was organized on 14th May 2022. The theme of the ABID 2022 was “Call To Action- Addressing Sustainable Development Goals”. ABID 2022 was organized mainly in order to raise awareness about the Sustainable Development Goals (SDGs) given by the United Nations (UN) that ought to be achieved by 2030. The students accomplished this by showcasing start-up innovations such as Green hydrogen, Industrial hemp, Farmer’s market, Terraponics, etc.

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು